Fashion: ದಪ್ಪ ಇರೋ ಕಾರಣಕ್ಕೆ ಸ್ಟೈಲ್‌ ಮಾಡೋಕೆ ಆಗ್ತಿಲ್ಲ ಅಂತ ಬೇಸರ ಮಾಡ್ಬೇಡಿ; ಪ್ಲಸ್‌ಸೈಜ್‌ನವರಾಗಿ ಇಲ್ಲಿದೆ 10 ಸ್ಟೈಲಿಂಗ್‌ ಟಿಪ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  Fashion: ದಪ್ಪ ಇರೋ ಕಾರಣಕ್ಕೆ ಸ್ಟೈಲ್‌ ಮಾಡೋಕೆ ಆಗ್ತಿಲ್ಲ ಅಂತ ಬೇಸರ ಮಾಡ್ಬೇಡಿ; ಪ್ಲಸ್‌ಸೈಜ್‌ನವರಾಗಿ ಇಲ್ಲಿದೆ 10 ಸ್ಟೈಲಿಂಗ್‌ ಟಿಪ್ಸ್‌

Fashion: ದಪ್ಪ ಇರೋ ಕಾರಣಕ್ಕೆ ಸ್ಟೈಲ್‌ ಮಾಡೋಕೆ ಆಗ್ತಿಲ್ಲ ಅಂತ ಬೇಸರ ಮಾಡ್ಬೇಡಿ; ಪ್ಲಸ್‌ಸೈಜ್‌ನವರಾಗಿ ಇಲ್ಲಿದೆ 10 ಸ್ಟೈಲಿಂಗ್‌ ಟಿಪ್ಸ್‌

ಪ್ಲಸ್‌ ಸೈಜ್‌ ಇರೋರಿಗೆ ತಾವು ಸ್ಟೈಲಿಶ್‌ ಆಗಿ ಕಾಣಲು ಸಾಧ್ಯವಿಲ್ಲ ಎಂದು ಬೇಸರ, ಆದ್ರೆ ಖಂಡಿತ ಇದಕ್ಕೆ ಬೇಸರಿಸುವ ಅಗತ್ಯವಿಲ್ಲ. ಇಲ್ಲಿರುವ ಟಿಪ್ಸ್‌ ಅನುಸರಿಸುವ ಮೂಲಕ ನೀವು ಅಂದವಾಗಿ, ಮೋಹಕವಾಗಿ ಕಾಣಿಸಬಹುದು.

ಪ್ಲಸ್‌ಸೈಜ್‌ನವರಾಗಿ ಇಲ್ಲಿದೆ 10 ಸ್ಟೈಲಿಂಗ್‌ ಟಿಪ್ಸ್‌
ಪ್ಲಸ್‌ಸೈಜ್‌ನವರಾಗಿ ಇಲ್ಲಿದೆ 10 ಸ್ಟೈಲಿಂಗ್‌ ಟಿಪ್ಸ್‌

ಫ್ಯಾಷನ್‌ ಎಂಬುದು ಒಂದು ಕಲಾ ಪ್ರಕಾರ. ಫ್ಯಾಷನ್‌ ನಿಂತ ನೀರಲ್ಲ. ಇದು ಸದಾ ಬದಲಾಗುತ್ತಿರುತ್ತದೆ. ಕಳೆದ ವಾರ ನೀವು ಗಮನಿಸಿದ ಟ್ರೆಂಡ್‌ ಈ ವಾರ ಇಲ್ಲದೇ ಇರಬಹುದು. ಫ್ಯಾಷನ್‌ ಮಾರುಕಟ್ಟೆಯಲ್ಲಿ ಹೊಸ ಹೊಸ ಅನ್ವೇಷಣೆಗಳು ನಿರಂತರವಾಗಿರುತ್ತದೆ. ಅದೇನೇ ಇದ್ರು ಪ್ಲಸ್‌ ಸೈಜ್‌ ಇರುವವರಿಗೆ ತಾವು ಸ್ಟೈಲಿಶ್‌ ಆಗಿ ರೆಡಿ ಆಗಲು ಸಾಧ್ಯವಿಲ್ಲ ಎಂಬ ಬೇಸರ ಕಾಡುವುದು ಸಹಜ. ಹಾಗಂತ ಖಂಡಿತ ಚಿಂತಿಸುವ ಅಗತ್ಯವಿಲ್ಲ. ಇದೀಗ ಫ್ಯಾಷನ್‌ ಕ್ಷೇತ್ರವು ಪ್ಲಸ್‌ ಸೈಜ್‌ನವರಿಗಾಗಿಯೇ ಭಿನ್ನ ಉಡುಪುಗಳನ್ನು ಪರಿಚಯಿಸಿದೆ. ಇದರೊಂದಿಗೆ ಅವರಿಗಾಗಿಯೇ ಒಂದಿಷ್ಟು ಫ್ಯಾಷನ್‌ ಟಿಪ್ಸ್‌ಗಳಿವೆ.

2000ರ ದಶಕದಲ್ಲಿ ಹೆಣ್ಣುಮಕ್ಕಳಿಗೆ ದಪ್ಪ ಆಗುವುದೇ ಶಾಪ ಎಂಬಂತಿತ್ತು, ದಪ್ಪವಾದರೆ ಇಷ್ಟದ ಉಡುಪು ಧರಿಸುವಂತಿಲ್ಲ, ಎಲ್ಲರಂತೆ ಮೋಹಕವಾಗಿ ಕಾಣಿಸಲು ಸಾಧ್ಯವಿಲ್ಲ ಎಂಬೆಲ್ಲ ಬೇಸರ ಕಾಡಿರುತ್ತದೆ. ಆದರೆ ಕಾಲ ಬದಲಾದಂತೆ ಫ್ಯಾಷನ್‌ ಕ್ಷೇತ್ರವೂ ಬದಲಾಗಿದೆ. ಪ್ಲಸ್‌ ಸೈಜ್‌ನವರಿಗಾಗಿಯೇ ಒಂದಿಷ್ಟು ಸ್ಟೈಲಿಶ್‌ ಉಡುಪುಗಳು ಮಾರುಕಟ್ಟೆಯನ್ನು ಅಲಂಕರಿಸಿವೆ.

ಪ್ಲಸ್‌ ಸೈಜ್‌ನ ಇನ್ಫೂರೆಯನ್ಸರ್‌ಗಳು ಹಾಗೂ ಮಾಡೆಲ್‌ಗಳು ದಪ್ಪ ಎನ್ನುವುದು ಅನುಮಾನ, ಇವರಿಗೆ ಸ್ಟೈಲ್‌ ಆಗಿ ಕಾಣಲು ಸಾಧ್ಯವಿಲ್ಲ ಎಂಬ ಮಾತನ್ನು ಹುಸಿಗೊಳಿಸಿದ್ದಾರೆ. ಅದೆಲ್ಲಾ ಬಿಡಿ ಪ್ಲಸ್‌ ಸೈಜಿನವರಿಗಾಗಿ ಇರುವ 10 ಸ್ಟೈಲ್‌ ಐಡಿಯಾಗಳನ್ನು ನೀವು ನೋಡಿ.

ಅನುಪಾತ ತಿಳಿಯಿರಿ: ನಿಮ್ಮ ದೇಹ ಪ್ರಕಾರ ಮತ್ತು ಅನುಪಾತಕ್ಕೆ ತಕ್ಕಂತೆ ಉಡುಗೆ ಧರಿಸುವುದು ಮುಖ್ಯವಾಗುತ್ತದೆ. ಹಲವು ದೊಡ್ಡ ದೊಡ್ಡ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಗಾತ್ರ, ಅನುಪಾತಕ್ಕೆ ತಕ್ಕಂತೆ ಉಡುಪುಗಳನ್ನ ವಿನ್ಯಾಸ ಮಾಡಿರುತ್ತಾರೆ. ಯಾವಾಗಲೂ ಡ್ರೆಸ್‌ ಟ್ರಯಲ್‌ ನೋಡಿ ನಂತರ ಖರೀದಿಸಿ. ನಿಮಗೆ ಒಪ್ಪುತ್ತದೋ ಇಲ್ಲವೋ ಎಂಬುದನ್ನು ಪರಿಶೀಲಿಸಿ.

ಉತ್ತಮ ಶೇಪ್‌ವೇರ್‌ ಧರಿಸುವುದು ಮುಖ್ಯವಾಗುತ್ತದೆ: ದೇಹಕ್ಕೆ ಪರಿಪೂರ್ಣ ಎನ್ನಿಸುವ ಶೇಪ್‌ವೇರ್‌ಗಳು ನಿಮ್ಮ ಅಂದವನ್ನು ಉನ್ನತ ಸ್ಥಾನಕ್ಕೆ ಏರಿಸಬಹುದು. ಉನ್ನತ ಗುಣಮಟ್ಟ ಹಾಗೂ ಬ್ರ್ಯಾಂಡ್‌ನ ಶೇಪ್‌ವೇರ್‌ಗಳನ್ನು ಆಯ್ಕೆ ಮಾಡಿ. ಇದು ನಿಮ್ಮ ದೇಹ ಭಾಗಗಳನ್ನು ಫಿಟ್‌ ಆಗಿಸಿ ನಿಮ್ಮ ಗಾತ್ರವನ್ನು ಮರೆಮಾಚುತ್ತದೆ.

ಚಾಲೆಂಜ್‌ ಆಗಿ ಸ್ವೀಕರಿಸಿ: ಇತ್ತೀಚಿನ ಕೆಲವು ವರ್ಷಗಳವರೆಗೂ ಪ್ಲಸ್‌ ಸೈಜ್‌ನವರಿಗೆ ಸಡಿಲವಾದ ಬಟ್ಟೆ ತೊಡಿಸುವ ಅಥವಾ ಧರಿಸುವ ಮೂಲಕ ದಪ್ಪ ಎಂದು ಕಾಣಿಸಿದಂತೆ ಮರೆ ಮಾಚಲಾಗುತ್ತಿತ್ತು. ಆದರೆ ಈ ದೋಗಲೆ ಉಡುಪುಗಳನ್ನು ಹೆಣ್ಣುಮಕ್ಕಳನ್ನು ವಯಸ್ಸಾದವರಂತೆ ಕಾಣುವಂತೆ ಮಾಡುತ್ತಿದ್ದವು. ಆದರೆ ಇದು ದೇಹಕ್ಕೆ ಹೊಂದುವ ಬಟ್ಟೆಯನ್ನು ಧೈರ್ಯವಾಗಿ ಧರಿಸುತ್ತಿದ್ದಾರೆ. ದೇಹವನ್ನಪ್ಪುವ ಔಟ್‌ಫಿಟ್‌ಗಳು ಅಂದ ಹೆಚ್ಚಿಸುವುದು ಮಾತ್ರವಲ್ಲ, ನಿಮ್ಮಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ.

ಸೊಂಟದ ಬಳಿ ಫಿಟ್‌ ಇರುವ ಉಡುಪು: ಸೊಂಟ ಎದ್ದು ಕಾಣುವಂತೆ ಮಾಡುವ ಉಡುಪುಗಳು ಅಥವಾ ಟಾಪ್‌ಗಳು ಪ್ಲಸ್‌ ಸೈಜ್‌ ಇರುವ ಹೆಣ್ಣುಮಕ್ಕಳಿಗೆ ಹೇಳಿ ಮಾಡಿಸಿದ್ದಾಗಿದೆ. ಇದು ಅವರ ಅಂದವನ್ನು ಇಮ್ಮಡಿಗೊಳಿಸುತ್ತದೆ. ಈ ರೀತಿಯ ಉಡುಪುಗಳು ನಿಮ್ಮ ದೇಹಕ್ಕೆ ಹಿಂದೆ ನೋಡಿರದ ಆಯಾಮ ನೀಡುವುದರಲ್ಲಿ ಎರಡು ಮಾತಿಲ್ಲ.

ಎತ್ತರವಾಗಿ ಕಾಣುವಂತೆ ಮಾಡುವ ಉಡುಪುಗಳು: ದಪ್ಪ ಇರುವವರು ಎತ್ತರವಾಗಿ ಕಾಣಿಸುವುದರಿಂದ ಅಂದ ಹೆಚ್ಚಿಸಿಕೊಳ್ಳಬಹುದು. ಆ ಕಾರಣಕ್ಕೆ ಸಿಲೂಯೆಟ್‌ಗಳನ್ನು ಆಯ್ಕೆ ಮಾಡಿ. ತೊಡೆಯಿಂದ ಕಾಲಿನವರೆಗೆ ಹರಿದಿರುವ ಸಿಲೂಯೆಟ್‌ಗಳು ನಿಮ್ಮ ಅಂದವನ್ನು ಎತ್ತರಕ್ಕೇರಿಸುವುದು ಅನುಮಾನವಿಲ್ಲ. ಮಿಡಿ, ಮ್ಯಾಕ್ಸಿ ಸ್ಕರ್ಟ್‌ಗಳು, ವೈಡ್‌ ಲೆಗ್‌ ಟ್ರೋಸರ್‌ಗಳು ಈ ಎಲ್ಲವೂ ನಿಮಗೆ ಹೇಳಿ ಮಾಡಿಸಿದಂತವು.

ಹೈ ವೇಸ್ಟೆಡ್‌ ಪ್ಯಾಂಟ್‌ಗಳು: 2010ರಲ್ಲಿ ವೋಗ್‌ ಹೈ ವೇಸ್ಟೆಡ್‌ ಪ್ಯಾಂಟ್‌ಗಳನ್ನು ಪರಿಚಯಿಸಿತು. ಇವು ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದವು. ಡೆನಿಮ್‌, ಕಾರ್ಗೋ, ಟ್ವಿಲ್‌, ಲೆನಿನ್‌ ಯಾವುದೇ ಆಗಿರಲಿ ಹೈ ವೇಸ್ಟ್‌ ಪ್ಯಾಂಟ್‌ ಧರಿಸುವುದರಿಂದ ಪ್ಲಸ್‌ ಸೈಜ್‌ ಇರುವವರ ಅಂದ ಹೆಚ್ಚುತ್ತದೆ. ಪಾದದ ಬಳಿ ಅಗಲವಾಗಿ ತೆರೆದುಕೊಂಡಿರುವ ಪ್ಯಾಂಟ್‌ ಪ್ಲಸ್‌ ಸೈಜ್‌ನವರ ಅಂದ ಹೆಚ್ಚುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.

ನೈಕ್‌ಲೈನ್‌ ಕೂಡ ಮುಖ್ಯವಾಗುತ್ತದೆ: ಪ್ಲಸ್‌ಸೈಜ್‌ನವರಿಗೆ ನೆಕ್‌ಲೈನ್‌ ಕೂಡ ಮುಖ್ಯವಾಗುತ್ತದೆ. ಸ್ವ್ಕೇರ್ಡ್‌, ಆಫ್‌ ಶೋಲ್ಡರ್‌, ಸ್ಕೂಪ್ಡ್‌ ನೆಕ್‌ ಇವು ನಿಮಗೆ ಬೆಸ್ಟ್‌.

ಗಾಢ ಬಣ್ಣ ಹಾಗೂ ಪ್ರಿಂಟ್‌ಗಳು: ಪ್ಲಸ್‌ಸೈಜ್‌ ಗಾತ್ರದ ಮಹಿಳೆಯರು ಗಾಢ ಬಣ್ಣ ಅಂದರೆ ಬ್ರೈಟ್‌ ಕಲರ್‌ ಡ್ರೆಸ್‌ ಧರಿಸುವುದರಿಂದ ಅಂದ ಹೆಚ್ಚುತ್ತದೆ. ಇದರೊಂದಿಗೆ ಪ್ರಿಂಟ್‌ ಇರುವ ಉಡುಪನ್ನೂ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು.

ಪರಿಪೂರ್ಣ ಭಂಗಿ: ದಪ್ಪ ಇದ್ದೇವೆ ಎಂದ ಮಾತ್ರಕ್ಕೆ ಬೆನ್ನು ಬಾಗಿಸುವುದು, ಮುಜುಗರರಿಂದ ದೇಹವನ್ನು ಮುದುಡಿಕೊಳ್ಳುವುದು ಇದರಿಂದ ದೇಹ ಸೌಂದರ್ಯ ಕೆಡಬಹುದು. ನೇರವಾಗಿ ಇರುವುದು ಸೌಂದರ್ಯ ಹೆಚ್ಚಲು ಸಹಕಾರಿ.

ಆತ್ಮವಿಶ್ವಾಸವೇ ಒಡವೆ: ದಪ್ಪ ಇರುವವರಿಗೆ ಆತ್ಮವಿಶ್ವಾಸ ಬಹಳ ಮುಖ್ಯ. ಇದು ಅವರಿಗೆ ಒಡವೆ ಇದ್ದಂತೆ. ಆತ್ಮವಿಶ್ವಾಸದೊಂದಿಗೆ ನೀವು ಧರಿಸಿದ ಬಟ್ಟೆ ನಿಮ್ಮ ಅಂದವನ್ನು ಇಮ್ಮಡಿಗೊಳಿಸುವ ಜೊತೆಗೆ ಸ್ಟೈಲಿಶ್‌ ಆಗಿ ಕಾಣುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.

Whats_app_banner