ಕನ್ನಡ ಸುದ್ದಿ  /  ಜೀವನಶೈಲಿ  /  Fathers Day: ಅಪ್ಪಂದಿರ ದಿನದಂದು ಪ್ರೀತಿಯ ತಂದೆಗೆ ಕೊನೆಕ್ಷಣದಲ್ಲಿ ಸರ್ಪ್ರೈಸ್‌ ನೀಡಬೇಕು ಅಂತಿದ್ರೆ ಇಲ್ಲಿದೆ ನಿಮಗಾಗಿ ಬೆಸ್ಟ್‌ ಐಡಿಯಾಗಳು

Fathers Day: ಅಪ್ಪಂದಿರ ದಿನದಂದು ಪ್ರೀತಿಯ ತಂದೆಗೆ ಕೊನೆಕ್ಷಣದಲ್ಲಿ ಸರ್ಪ್ರೈಸ್‌ ನೀಡಬೇಕು ಅಂತಿದ್ರೆ ಇಲ್ಲಿದೆ ನಿಮಗಾಗಿ ಬೆಸ್ಟ್‌ ಐಡಿಯಾಗಳು

ಪ್ರಪಂಚದ ಹಲವು ದೇಶಗಳಲ್ಲಿ ಇಂದು (ಜೂನ್‌ 16) ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಅಪ್ಪನಿಗೆ ಏನಾದ್ರೂ ಸ್ಪೆಷಲ್‌ ಗಿಫ್ಟ್‌ ಕೊಡಬೇಕು ಅಂತ ಕೊನೇ ಕ್ಷಣದಲ್ಲಿ ಯೋಚಿಸುವವರಿಗಾಗಿ ಇಲ್ಲಿದೆ ಒಂದಿಷ್ಟು ಸೂಪರ್‌ ಐಡಿಯಾಗಳು. ಈ ಐಡಿಯಾಗಳ ಮೂಲಕ ಅಪ್ಪನಿಗೆ ಸರ್ಪ್ರೈಸ್‌ ನೀಡಿ.

ಅಪ್ಪಂದಿರ ದಿನದಂದು ಕೊನೆಕ್ಷಣದಲ್ಲಿ ಸರ್ಪ್ರೈಸ್‌ ನೀಡಲು ಇಲ್ಲಿದೆ ನಿಮಗಾಗಿ ಬೆಸ್ಟ್‌ ಐಡಿಯಾಗಳು
ಅಪ್ಪಂದಿರ ದಿನದಂದು ಕೊನೆಕ್ಷಣದಲ್ಲಿ ಸರ್ಪ್ರೈಸ್‌ ನೀಡಲು ಇಲ್ಲಿದೆ ನಿಮಗಾಗಿ ಬೆಸ್ಟ್‌ ಐಡಿಯಾಗಳು

Father's Day 2024 Gifting Guide: ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರವನ್ನು ಅಪ್ಪಂದಿರ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷ ಜೂನ್‌ 16 ಅಂದರೆ ಇಂದು ಅಪ್ಪಂದಿರ ದಿನಾಚರಣೆ ಇದೆ. ಅಪ್ಪಂದಿರ ದಿನದಂದು ಪ್ರೀತಿ ತಂದೆಗೆ ವಿಶೇಷ ಉಡುಗೊರೆ ನೀಡಬೇಕು ಎಂದು ಎಲ್ಲರೂ ಅಂದುಕೊಳ್ಳುವುದು ಸಹಜ. ನಿಮಗೆ ಇವತ್ತು ಅಪ್ಪಂದಿರ ದಿನ ಎಂದು ತಿಳಿದಿರದೇ ಇದ್ದರೆ ಅಥವಾ ಅಪ್ಪನಿಗೆ ಸರ್ಪ್ರೈಸ್‌ ಕೊಡಲು ಪ್ಲಾನ್‌ ಮಾಡಲು ಸಾಧ್ಯವಾಗದೇ ಇದ್ದರೆ ಕೊನೆ ಕ್ಷಣದಲ್ಲಿ ಅಪ್ಪನಿಗೆ ಸರ್ಪ್ರೈಸ್‌ ಕೊಡಲು ಇಲ್ಲಿದೆ ಐಡಿಯಾ. ಹಾಗಾದರೆ ಕೊನೆ ಕ್ಷಣದಲ್ಲಿ ಅಪ್ಪಂದಿರ ದಿನವನ್ನು ವಿಶೇಷವನ್ನಾಗಿಸಲು ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಒಂದಿಷ್ಟು ಐಡಿಯಾಗಳ ಪಟ್ಟಿ.

ಅವರ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಿ

ಪ್ರತಿ ಮನೆಯಲ್ಲೂ ಇಡೀ ಮನೆಯ ಸಂಪೂರ್ಣ ಜವಾಬ್ದಾರಿ ಅಪ್ಪ ವಹಿಸಿಕೊಂಡಿರುತ್ತಾರೆ. ಆದರೆ ವಯಸ್ಸಾಗುತ್ತಿದ್ದಂತೆ ಅಪ್ಪನಿಗೆ ತನ್ನ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಹಾಗೂ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಿಭಾಯಿಸಲು ಕಷ್ಟವಾಗಬಹುದು. ಹಾಗಾಗಿ ಅವರ ಕೋಣೆಯನ್ನು ಸ್ವಚ್ಛ ಮಾಡುವುದು, ಅವರ ಕಬೋರ್ಡ್‌ ಕ್ಲೀನ್‌ ಮಾಡುವುದು, ಬಟ್ಟೆಗಳನ್ನು ಐರನ್‌ ಮಾಡಿ ಕೊಡುವುದು, ಕನ್ನಡಕ ಕ್ಲೀನ್‌ ಮಾಡುವುದು, ಅವರ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ರಿಪೇರಿ, ಅವರ ಕೈದೋಟ ರಿಪೇರಿ ಮಾಡುವುದು ಮುಂತಾದ ಕೆಲಸಗಳನ್ನು ಮಾಡಿಕೊಡುವ ಮೂಲಕ ಅಪ್ಪಂದಿರ ದಿನವನ್ನು ಆಚರಿಸಬಹುದು.

ಟ್ರೆಂಡಿಂಗ್​ ಸುದ್ದಿ

ಯೋಗ ತರಗತಿಗೆ ಸೇರಿಸಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಕಾಪಾಡಿಕೊಳ್ಳುವುದೇ ಸವಾಲು, ಯೋಗ ಹಲವು ಸಮಸ್ಯೆಗಳಿಗೆ ಮದ್ದು. ನೀವು ನಿಮ್ಮ ಅಪ್ಪನನ್ನ ಅಪ್ಪಂದಿರ ದಿನದಂದು ಯೋಗ ಕ್ಲಾಸ್‌ಗೆ ಜಾಯಿನ್‌ ಮಾಡಿಸಬಹುದು. ಆ ಮೂಲಕ ಅವರಿಗೆ ಖುಷಿ ನೀಡಬಹುದು, ಮಾತ್ರವಲ್ಲ ಅವರ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮ ವೃದ್ಧಿಗೆ ಗಮನ ನೀಡಬಹುದು.

ತಂದೆಯ ಇಷ್ಟದ ಹವ್ಯಾಸಕ್ಕೆ ಜೊತೆಯಾಗಿ

ನಿಮ್ಮ ತಂದೆಗೆ ಪೇಟಿಂಗ್‌, ಡ್ರಾಯಿಂಗ್‌, ಗಾರ್ಡನಿಂಗ್‌, ಕ್ಲೀನಿಂಗ್‌ ಯಾವ ಹವ್ಯಾಸವಿದೆ ತಿಳಿದು ನೀವು ಅವರ ಜೊತೆ ಕೈಜೋಡಿಸಿ. ಎಂದೂ ನನ್ನ ಜೊತೆಯಾದಾಗ ಮಗ/ಮಗಳು ನನ್ನ ಹವ್ಯಾಸಕ್ಕೆ ಇಂದು ಜೊತೆಯಾಗಿರುವುದನ್ನು ನೋಡಿ ಅಪ್ಪ ಸರ್ಪ್ರೈಸ್‌ ಆಗುವುದರಲ್ಲಿ ಅನುಮಾನವಿಲ್ಲ.

ಅಪ್ಪನ ಫೆವರಿಟ್‌ ಅಡುಗೆ ಮಾಡಿ

ಅಪ್ಪನಿಗೆ ಏನಿಷ್ಟ ಎಂಬುದನ್ನು ತಿಳಿದು ಅದನ್ನು ಮಾಡಿಕೊಡಿ. ಇವತ್ತು ಹೇಗೋ ಭಾನುವಾರ ಎಲ್ಲರೂ ಮನೆಯಲ್ಲಿ ಇರುತ್ತಾರೆ. ನೀವು ನಿಮ್ಮ ಕೈಯಾರೆ ಅಪ್ಪ ಇಷ್ಟಪಡುವ ಅಡುಗೆಗಳನ್ನು ಮಾಡಿ ಅಪ್ಪನಿಗೆ ಉಣಬಡಿಸಿ, ಇದು ನಿಮ್ಮ ತಂದೆಗೆ ಪೆಸ್ಲೆಂಟ್‌ ಸರ್ಪ್ರೈಸ್‌ ಆಗುವುದರಲ್ಲಿ ಅನುಮಾನವಿಲ್ಲ.

ಅಪ್ಪನನ್ನು ಲಂಚ್‌ ಅಥವಾ ಡಿನ್ನರ್‌ಗೆ ಕರೆದುಕೊಂಡು ಹೋಗಿ

ಅಪ್ಪಂದಿರ ದಿನದಂದು ಅಪ್ಪನಿಗೆ ಕೊನೆಯ ಕ್ಷಣದಲ್ಲಿ ಸರ್ಪ್ರೈಸ್‌ ನೀಡಲು ಇದಕ್ಕಿಂತ ಬೆಸ್ಟ್‌ ಐಡಿಯಾ ಇನ್ನೊಂದಿಲ್ಲ. ನಿಮ್ಮೂರಿನ ಬೆಸ್ಟ್‌ ರೆಸ್ಟೊರೆಂಟ್‌ಗೆ ಅಪ್ಪನನ್ನು ಕರೆದುಕೊಂಡು ಹೋಗಿ. ಅಲ್ಲಿ ಕೇಕ್‌ ಕತ್ತರಿಸಿ ಬೆಸ್ಟ್‌ ಡಿನ್ನರ್‌ ಅಥವಾ ಲಂಚ್‌ ಪಾರ್ಟಿ ಮಾಡಿ. ಇಂತಹ ಸಣ್ಣ ಖುಷಿ ಅಪ್ಪಂದಿರಿಗೆ ಸಂತಸ ನೀಡುವುದರಲ್ಲಿ ಎರಡು ಮಾತಿಲ್ಲ.

ಅಪ್ಪಂದಿರ ದಿನದಂದು ನೀವು ಕೊನೆ ಕ್ಷಣದಲ್ಲಿ ನೀವು ಏನಾದ್ರೂ ಸರ್ಪ್ರೈಸ್‌ ನೀಡಬೇಕು ಅಂದುಕೊಂಡಿದ್ದರೆ ಈ ಐಡಿಯಾಗಳಿಗಿಂತ ಬೆಸ್ಟ್‌ ಐಡಿಯಾ ಇಲ್ಲ. ಈ ಪ್ಲಾನ್‌ಗಳಲ್ಲಿ ನಿಮಗಿಷ್ಟವಾಗಿದ್ದನ್ನು ಆಯ್ಕೆ ಮಾಡಿಕೊಳ್ಳಿ, ಅಪ್ಪಂದಿರ ದಿನವನ್ನು ವಿಶೇಷವನ್ನಾಗಿಸಿ.