ಕನ್ನಡ ಸುದ್ದಿ  /  ಜೀವನಶೈಲಿ  /  Fathers Day 2024: ಅಪ್ಪಂದಿರ ದಿನದಂದು ನಿಮ್ಮ ಬದುಕಿನ ಸೂಪರ್‌ ಹೀರೊಗೆ ಹೀಗೆ ವಿಶ್‌ ಮಾಡಿ, ಆ ದಿನವನ್ನು ಅವಿಸ್ಮರಣೀಯವನ್ನಾಗಿಸಿ

Fathers Day 2024: ಅಪ್ಪಂದಿರ ದಿನದಂದು ನಿಮ್ಮ ಬದುಕಿನ ಸೂಪರ್‌ ಹೀರೊಗೆ ಹೀಗೆ ವಿಶ್‌ ಮಾಡಿ, ಆ ದಿನವನ್ನು ಅವಿಸ್ಮರಣೀಯವನ್ನಾಗಿಸಿ

ಅಪ್ಪ ನಮ್ಮೆಲ್ಲರ ಪಾಲಿನ ಆಲದ ಮರ. ಇಡೀ ಕುಟುಂಬಕ್ಕೆ ನೆರಳು ಕೊಟ್ಟು ಸಲಹುವ ಜೀವವದು. ಹಲವರ ಜೀವನದಲ್ಲಿ ಅಪ್ಪನೇ ಸೂಪರ್‌ ಹೀರೋ. ಇಂತಹ ಅದ್ಭುತ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್‌ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಅಪ್ಪನಿಗೆ ವಿಶೇಷವಾಗಿ ವಿಶ್‌ ಮಾಡಬೇಕು ಅಂತಿದ್ರೆ ಇಲ್ಲಿದೆ ಐಡಿಯಾ.

 ಅಪ್ಪಂದಿರ ದಿನದಂದು ನಿಮ್ಮ ಬದುಕಿನ ಸೂಪರ್‌ ಹೀರೊಗೆ ಹೀಗೆ ವಿಶ್‌ ಮಾಡಿ, ಆ ದಿನವನ್ನು ಅವಿಸ್ಮರಣೀಯವನ್ನಾಗಿಸಿ
ಅಪ್ಪಂದಿರ ದಿನದಂದು ನಿಮ್ಮ ಬದುಕಿನ ಸೂಪರ್‌ ಹೀರೊಗೆ ಹೀಗೆ ವಿಶ್‌ ಮಾಡಿ, ಆ ದಿನವನ್ನು ಅವಿಸ್ಮರಣೀಯವನ್ನಾಗಿಸಿ

ಪ್ರತಿ ವರ್ಷ ಜೂನ್‌ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಜೂನ್‌ 16 (ಭಾನುವಾರ) ಅಪ್ಪಂದಿರ ದಿನಾಚರಣೆ ಇದೆ. ಇಡೀ ಕುಟುಂಬ ಹಾಗೂ ಸಮಾಜದಲ್ಲಿ ತಂದೆಯು ವಹಿಸುವ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಹಾಗೂ ತಂದೆಯನ್ನು ಪ್ರಶಂಸಿಸುವ ಸಲುವಾಗಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರ ದಿನಾಚರಣೆಗೆ ಪೂರಕವಾಗಿ 1909ರಲ್ಲಿ ಅಮೆರಿಕದಲ್ಲಿ ತಂದೆಯ ದಿನವನ್ನು ಸ್ಥಾಪಿಸಲಾಯಿತು. 1910 ಜೂನ್‌ 16ರಂದು ಮೊದಲ ಬಾರಿ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಹಲವು ದೇಶಗಳಲ್ಲಿ ಬೇರೆ ಬೇರೆ ದಿನಾಂಕಗಳಂದು ಅಪ್ಪಂದಿರ ದಿನವನ್ನ ಆಚರಿಸಲಾಗುತ್ತಿದೆ.

ಅಪ್ಪಂದಿರ ದಿನವನ್ನು ಅವಿಸ್ಮರಣೀಯವನ್ನಾಗಿಸಬೇಕು ಅಂದ್ರೆ ಅಪ್ಪನಿಗೆ ಗಿಫ್ಟ್‌ ಕೊಡಬೇಕು ಅಂತೇನಿಲ್ಲ ವಿಶೇಷವಾಗಿ ವಿಶ್‌ ಮಾಡುವ ಮೂಲಕವೂ ಅಪ್ಪ ಖುಷಿಯಾಗುವಂತೆ ಮಾಡಬಹುದು. ಅಪ್ಪಂದಿರ ದಿನದಂದು ವಿಶೇಷ ವಿಶ್‌ ಮಾಡಲು ಬಯಸಿದರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.

ಟ್ರೆಂಡಿಂಗ್​ ಸುದ್ದಿ

ಅಪ್ಪಂದಿರ ದಿನಕ್ಕೆ ಶುಭಾಶಯ ಕೋರಲು ಐಡಿಯಾಗಳು

* ಜೀವನ, ಪ್ರೀತಿ, ದಯೆ, ಕರುಣೆ ಎಲ್ಲವನ್ನೂ ಕಲಿಸಿದ ವ್ಯಕ್ತಿಗೆ ತಂದೆಯ ದಿನದ ಶುಭಾಶಯಗಳು. ನೀವು ನನ್ನ ತಂದೆಯಾಗಿರುವುದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ/ನಾಗಿದ್ದೇನೆ.

* ತಂದೆಯ ದಿನಾಚರಣೆಯ ಶುಭಾಶಯಗಳು! ನಿಮ್ಮ ದಿನವು ನಗು, ಪ್ರೀತಿ ಮತ್ತು ಸುಂದರ ಕ್ಷಣಗಳಿಂದ ತುಂಬಿರಲಿ. ಅದ್ಭುತ ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು!

* ಈ ವಿಶೇಷ ದಿನದಂದು, ನಾನು ನಿಮಗೆ ಪ್ರಪಂಚದ ಎಲ್ಲಾ ಸಂತೋಷ ಮತ್ತು ಪ್ರೀತಿ ಸಿಗಲಿ ಎಂದು ಬಯಸುತ್ತೇನೆ. ಜಗತ್ತಿನ ಬೆಸ್ಟ್‌ ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು!

* ನಿಮ್ಮ ತಂದೆಯ ದಿನವು ನಿಮ್ಮಂತೆಯೇ ಅದ್ಭುತವಾಗಿರಲಿ, ಅಪ್ಪಾ! ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ನೀವು ನಿಜಕ್ಕೂ ಗ್ರೇಟ್‌

* ವಿಶ್ವದ ಬೆಸ್ಟ್‌ ಅಪ್ಪ; ನಿಮ್ಮ ಪ್ರೀತಿ ಮತ್ತು ಮಾರ್ಗದರ್ಶನ ನನ್ನನ್ನು ಇಂದು ಅತ್ಯುತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ. ನೀವು ಬದುಕಿನಲ್ಲಿ ನೀಡಿದ ಎಲ್ಲದ್ದಕ್ಕೂ ಧನ್ಯವಾದ. ಅಪ್ಪಂದಿರ ದಿನದ ಶುಭಾಯಗಳು.

* ಅಪ್ಪಂದಿರ ದಿನದ ಶುಭಾಶಯಗಳು. ನೀವು ಮಾಡಿದ ಎಲ್ಲಾ ತ್ಯಾಗಗಳಿಗೆ ಮತ್ತು ನೀಡಿದ ಪ್ರೀತಿಗೆ ಧನ್ಯವಾದ. ಇಂದು ಎಂದೂ ನೀವು ನನ್ನ ಹೀರೋ.

* ಅಪ್ಪ ನೀವು ರಾಕ್‌ಸ್ಟಾರ್‌, ನನ್ನ ಬದುಕಿನ ಸ್ಫೂರ್ತಿ. ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದ. ಅಪ್ಪಂದಿನ ದಿನದ ಶುಭಾಶಯಗಳು.

* ವಿಶ್ವ ಅತ್ಯಂತ ಅದ್ಭುತ ತಂದೆಗೆ ಅಪ್ಪಂದಿರ ದಿನದ ಶುಭಾಶಯ. ನಿಮ್ಮ ಪ್ರೀತಿ ಮತ್ತು ಬುದ್ಧಿವಂತಿಕೆ ನಿಜವಾಗಿಯೂ ಅಮೂಲ್ಯವಾದುದು.

* ನನ್ನ ಬದುಕಿನ ಬಹುದೊಡ್ಡ ಬೆಂಬಲ ಮತ್ತು ಶ್ರೇಷ್ಠ ರೋಲ್ ಮಾಡೆಲ್ ಆಗಿರುವ ವ್ಯಕ್ತಿಗೆ ತಂದೆಯ ದಿನದ ಶುಭಾಶಯಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ, ಅಪ್ಪಾ!

* ನಿಮ್ಮ ಅಂತ್ಯವಿಲ್ಲದ ಪ್ರೀತಿ, ತಾಳ್ಮೆ ಮತ್ತು ತಿಳುವಳಿಕೆಗೆ ಧನ್ಯವಾದಗಳು. ನೀವು ಅದ್ಭುತ ತಂದೆಯ ದಿನವನ್ನು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ! ಹ್ಯಾಪಿ ಫಾದರ್ಸ್‌ ಡೇ

* ತಂದೆಯ ದಿನಾಚರಣೆಯ ಶುಭಾಶಯಗಳು! ನಿಮ್ಮ ಶಕ್ತಿ, ಪ್ರೀತಿ ಮತ್ತು ಬುದ್ಧಿವಂತಿಕೆಯು ನನ್ನ ಜೀವನದಲ್ಲಿ ಮಾರ್ಗದರ್ಶಿ ಬೆಳಕಾಗಿದೆ. ನಿಮ್ಮ ಮಗುವಾಗಲು ನಾನು ತುಂಬಾ ಅದೃಷ್ಟ ಮಾಡಿದ್ದೇನೆ.

* ಅಪ್ಪಾ, ನೀನು ನನ್ನ ಮೊದಲ ನಾಯಕ ಮತ್ತು ನನ್ನ ಶಾಶ್ವತ ಸ್ನೇಹಿತ. ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು. ತಂದೆಯ ದಿನಾಚರಣೆಯ ಶುಭಾಶಯಗಳು!

* ಈ ವಿಶೇಷ ದಿನದಂದು, ಅತ್ಯುತ್ತಮ ತಂದೆಯಾಗಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿನ್ನ ಪ್ರೀತಿ ಎಂದರೆ ನನಗೆ ಜಗತ್ತು. ತಂದೆಯ ದಿನಾಚರಣೆಯ ಶುಭಾಶಯಗಳು!

* ಅತ್ಯಂತ ಪ್ರೀತಿಯ, ಕಾಳಜಿಯುಳ್ಳ ಮತ್ತು ಅದ್ಭುತ ತಂದೆಗೆ ತಂದೆಯ ದಿನದ ಶುಭಾಶಯಗಳು! ನೀವು ನನ್ನ ಬದುಕಿನ ಬಹುದೊಡ್ಡ ಆಶೀರ್ವಾದ.

* ನನಗೆ ತುಂಬಾ ಪ್ರೀತಿ ಮತ್ತು ಬೆಂಬಲ ನೀಡಿದ ವ್ಯಕ್ತಿಗೆ ತಂದೆಯ ದಿನದ ಶುಭಾಶಯಗಳು. ನಿಮ್ಮ ಪ್ರೀತಿ, ಅದರ ರೀತಿಗೆ ಸಾಟಿಯಿಲ್ಲ ಅಪ್ಪ

* ಜಗತ್ತಿನ ಅತ್ಯುತ್ತಮ ತಂದೆಗೆ ಅಪ್ಪಂದಿರ ದಿನದ ಶುಭಾಶಯ. ನನ್ನ ಬದುಕಿಗೆ ಮಾರ್ಗದರ್ಶಿ ಬೆಳಕು ನೀವು, ನನ್ನ ಬದುಕಿಗೆ ನೀವು ನೀಡಿದ ಅತ್ಯುತ್ತಮ ಬೆಂಬಲಕ್ಕೆ ಧನ್ಯವಾದಗಳು.