ಮಧ್ಯಾಹ್ನ ಊಟ ಮಾಡಿದ ಕೂಡಲೇ ನಿದ್ದೆ ಆವರಿಸುತ್ತಾ: ಯಾವ ಆಹಾರ ಸೇವಿಸಿದ್ರೆ ನಿದ್ದೆ ಬರಬಹುದು, ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  ಮಧ್ಯಾಹ್ನ ಊಟ ಮಾಡಿದ ಕೂಡಲೇ ನಿದ್ದೆ ಆವರಿಸುತ್ತಾ: ಯಾವ ಆಹಾರ ಸೇವಿಸಿದ್ರೆ ನಿದ್ದೆ ಬರಬಹುದು, ಇಲ್ಲಿದೆ ಉತ್ತರ

ಮಧ್ಯಾಹ್ನ ಊಟ ಮಾಡಿದ ಕೂಡಲೇ ನಿದ್ದೆ ಆವರಿಸುತ್ತಾ: ಯಾವ ಆಹಾರ ಸೇವಿಸಿದ್ರೆ ನಿದ್ದೆ ಬರಬಹುದು, ಇಲ್ಲಿದೆ ಉತ್ತರ

ಕೆಲವರು ಮಧ್ಯಾಹ್ನ ಊಟವಾದ ತಕ್ಷಣ ನಿದ್ದೆಗೆ ಜಾರುತ್ತಾರೆ. ಮಧ್ಯಾಹ್ನ ಮಲಗುವ ಅಭ್ಯಾಸವಿಲ್ಲದಿದ್ದರೂ ಒಮ್ಮೊಮ್ಮೆ ಆಕಳಿಕೆ ಬರುತ್ತಿರುತ್ತದೆ. ಎಷ್ಟೇ ಸಕ್ರಿಯವಾಗಿದ್ದರೂ,ಊಟ ಮಾಡಿದ ನಂತರ ನಿದ್ದೆ ಬರುತ್ತೆ. ಇದಕ್ಕೆ ಆಹಾರಗಳೂ ಕಾರಣವಿರಬಹುದು. ಮಧ್ಯಾಹ್ನ ಊಟದ ನಂತ್ರ ಯಾವ ಆಹಾರ ಸೇವಿಸಿದ್ರೆ ನಿದ್ದೆ ಬರುತ್ತೆ, ಇದಕ್ಕೆ ಕಾರಣವೇನು ಎಂಬ ವಿವರ ಇಲ್ಲಿದೆ.

ಮಧ್ಯಾಹ್ನ ಊಟವಾದ ಕೂಡಲೇ ನಿದ್ದೆ ಬರುತ್ತಾ: ಯಾವ ಆಹಾರಗಳನ್ನು ಸೇವಿಸಿದ ಕೂಡಲೇ ನಿದ್ದೆ ಬರಬಹುದು, ಇಲ್ಲಿದೆ ಕಾರಣ
ಮಧ್ಯಾಹ್ನ ಊಟವಾದ ಕೂಡಲೇ ನಿದ್ದೆ ಬರುತ್ತಾ: ಯಾವ ಆಹಾರಗಳನ್ನು ಸೇವಿಸಿದ ಕೂಡಲೇ ನಿದ್ದೆ ಬರಬಹುದು, ಇಲ್ಲಿದೆ ಕಾರಣ (PC: Canva)

ಕೆಲವರು ಮಧ್ಯಾಹ್ನ ಊಟವಾದ ತಕ್ಷಣ ನಿದ್ದೆಗೆ ಜಾರುತ್ತಾರೆ. ಮಧ್ಯಾಹ್ನ ಮಲಗುವ ಅಭ್ಯಾಸವಿಲ್ಲದಿದ್ದರೂ, ಆಕಳಿಕೆ ಬರುತ್ತಿರುತ್ತದೆ. ಕಚೇರಿಯಲ್ಲೂ ಊಟ ಮಾಡಿದ ಬಳಿಕೆ ಕೆಲವರು ತೂಕಡಿಸುತ್ತಾರೆ. ಉದ್ಯೋಗಿಗಳು ಮಾತ್ರವಲ್ಲ ವಿದ್ಯಾರ್ಥಿಗಳು ಕೂಡ ಶಾಲೆ-ಕಾಲೇಜುಗಳಲ್ಲಿ ಮಧ್ಯಾಹ್ನ ಊಟದ ಬಳಿಕ ತೂಕಡಿಸುತ್ತಿರುತ್ತಾರೆ. ಮಧ್ಯಾಹ್ನದವರೆಗೆ ಸಕ್ರಿಯರಾಗಿರುವವರು ಊಟ ಮಾಡಿದ ಕೂಡಲೇ ಏಕೆ ಮಲಗುತ್ತಾರೆ ಎಂಬುದಕ್ಕೆ ಕೆಲವು ಕಾರಣಗಳಿವೆ. ಕೆಲವು ರೀತಿಯ ಆಹಾರಗಳು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಮಟ್ಟವನ್ನು ಹೆಚ್ಚಿಸುತ್ತವೆ. ಈ ಹಾರ್ಮೋನುಗಳು ನಿದ್ದೆಯ ಹಾರ್ಮೋನುಗಳಾಗಿವೆ. ಅವುಗಳ ಉತ್ಪಾದನೆ ಹೆಚ್ಚಾದರೆ, ನಿದ್ದೆಗೆ ಜಾರುತ್ತಾರೆ.

ಊಟದ ನಂತರ ನಿದ್ದೆ ಬರಲು ಕಾರಣವೆಂದರೆ ಅಕ್ಕಿಯಲ್ಲಿರುವ ಗ್ಲೂಕೋಸ್ ರಕ್ತಕ್ಕೆ ಸೇರುವುದು. ಇದು ದೇಹಕ್ಕೆ ವಿಶ್ರಾಂತಿ ಮನಸ್ಥಿತಿಯನ್ನು ನೀಡುತ್ತದೆ. ದೇಹದಲ್ಲಿ ಬಿಡುಗಡೆಯಾಗುವ ಮೆಲಟೋನಿನ್ ಮತ್ತು ಸಿರೊಟೋನಿನ್‍ನಂತಹ ಹಾರ್ಮೋನುಗಳು ಮಾದಕತೆಯ ಭಾವನೆಯನ್ನು ನೀಡುತ್ತವೆ. ಅದಕ್ಕಾಗಿಯೇ ಊಟದ ನಂತರ ನಿದ್ದೆ ಬರುತ್ತದೆ. ಈ ಆಹಾರವನ್ನು ಸೇವಿಸಿದ ನಂತರ ನಿದ್ದೆ ಬರುತ್ತವೆ. ಅವು ಯಾವ್ಯಾವು ಎಂಬುದು ಇಲ್ಲಿದೆ.

ಈ ಆಹಾರ ಸೇವಿಸಿದ ಬಳಿಕ ಮಧ್ಯಾಹ್ನ ನಿದ್ದೆಗೆ ಜಾರಬಹುದು

ಚಪಾತಿ, ಪಲಾವ್: ಮಧ್ಯಾಹ್ನದ ಊಟಕ್ಕೆ ಚಪಾತಿ, ಅನ್ನ ಅಥವಾ ಪಲಾವ್ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಟ್ರಿಪ್ಟೋಫಾನ್ ಎಂಬ ಹಾರ್ಮೋನ್ ಅನ್ನು ಮೆದುಳಿಗೆ ಕಳುಹಿಸಲು ಸಹಾಯ ಮಾಡುತ್ತದೆ. ಟ್ರಿಪ್ಟೋಫಾನ್ ಅನ್ನು ಮೆಲಟೋನಿನ್ ಹಾರ್ಮೋನ್ ಆಗಿ ಪರಿವರ್ತಿಸಲಾಗುತ್ತದೆ. ಇದು ನಿದ್ದೆಯನ್ನು ಉತ್ತೇಜಿಸುತ್ತದೆ. ಬ್ರೆಡ್ ಮತ್ತು ನೂಡಲ್ಸ್ ಸಹ ನಿದ್ದೆಯನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಪ್ರೋಟೀನ್ ಎಂದು ಕರೆಯಲ್ಪಡುವ ಪನೀರ್ ಮತ್ತು ತರಕಾರಿ ಸಲಾಡ್ ದೇಹದಲ್ಲಿ ನಿದ್ದೆಯ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ.

ಹಾಲು ಅಥವಾ ಮೊಸರು: ಮಧ್ಯಾಹ್ನ ಹಾಲು ಅಥವಾ ಮೊಸರು ಸೇವಿಸುವುದರಿಂದ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಟ್ರಿಪ್ಟೋಫಾನ್ ಮತ್ತು ಕ್ಯಾಲ್ಸಿಯಂ ನಿದ್ದೆಗೆ ಜಾರುವಂತೆ ಮಾಡುತ್ತದೆ. ಮೊಸರು ಅಥವಾ ಮಜ್ಜಿಗೆ ದೇಹಕ್ಕೆ ತಂಪನ್ನು ನೀಡುತ್ತದೆ. ಮಧ್ಯಾಹ್ನದ ಊಟದಲ್ಲಿ ಅನ್ನದೊಂದಿಗೆ ಮಜ್ಜಿಗೆ ಸೇವಿಸುವ ಅಭ್ಯಾಸ ಕೆಲವರಿಗಿದೆ. ಇನ್ನೂ ಕೆಲವರು ಮೊಸರು ಸೇವಿಸುತ್ತಾರೆ. ಇದರಿಂದ ನಿದ್ದೆ ಬರಲು ಕಾರಣವಾಗುತ್ತದೆ.

ಸಿಹಿ-ತಿಂಡಿಗಳು: ಮಧ್ಯಾಹ್ನದ ಊಟವಾದ ನಂತರ ಸಿಹಿತಿಂಡಿಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ. ಇದು ನಿದ್ದೆಗೆ ಜಾರುವಂತೆ ಮಾಡುತ್ತದೆ. ತುಳಸಿ ಚಹಾವನ್ನು ಕುಡಿದರೂ ನಿದ್ದೆಗೆ ಜಾರುವಂತೆ ಮಾಡುತ್ತದೆ.

ಜೇನುತುಪ್ಪ: ಜೇನುತುಪ್ಪವನ್ನು ಸೇವಿಸುವುದರಿಂದ ನಿದ್ದೆ ಬರುತ್ತದೆ. ಜೇನುತುಪ್ಪದಲ್ಲಿರುವ ಗ್ಲೂಕೋಸ್ ಅಂಶವು ದೇಹದಲ್ಲಿ ಒರೆಕ್ಸಿನ್ ಎಂಬ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ನಿದ್ದೆಯನ್ನು ಉತ್ತೇಜಿಸುತ್ತದೆ. ಮಧ್ಯಾಹ್ನ ಬಿಸಿ ಹಾಲು ಅಥವಾ ಜೇನುತುಪ್ಪದೊಂದಿಗೆ ಗ್ರೀನ್ ಟೀ ಕುಡಿಯುವುದರಿಂದ ನಿಮಗೆ ತಿಳಿಯದಂತೆ ನಿದ್ದೆ ಬರಬಹುದು. ಕಂದು ಅಕ್ಕಿ ಮತ್ತು ಗೋಧಿ ಬ್ರೆಡ್ ಕಾರ್ಬೋಹೈಡ್ರೇಟ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದು ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸಿದ ನಂತರವೂ ನಿದ್ದೆ ಬರಬಹುದು.

ಮಾಂಸಾಹಾರಿ ಖಾದ್ಯಗಳು: ಚಿಕನ್ ಅಥವಾ ಏಡಿಗಳಂತಹ ಪ್ರೋಟೀನ್ ಆಹಾರಗಳನ್ನು ಸೇವಿಸುವುದರಿಂದ ನಿದ್ದೆಯ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ. 

ಚೆರ್ರಿ ಪಾನೀಯ: ಚೆರ್ರಿ ರಸದಂತಹ ಹಣ್ಣಿನ ರಸಗಳು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದು ನಿದ್ದೆಯನ್ನು ಉತ್ತೇಜಿಸುತ್ತದೆ. ಮಧ್ಯಾಹ್ನ ಚೆರ್ರಿ ಜ್ಯೂಸ್ ಕುಡಿಯುವುದರಿಂದಲೂ ನಿದ್ದೆ ಬರಬಹುದು. ಊಟದ ನಂತರ 10 ರಿಂದ 15 ನಿಮಿಷಗಳ ಕಾಲ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು. ನಂತರ ಮಲಗಬಹುದು. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)

Whats_app_banner