Holi Wishes: ಬಣ್ಣಗಳ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಆಪ್ತರಿಗೆ ಈ ರೀತಿ ವಿಶ್ ಮಾಡಿ; ಹೋಳಿಯನ್ನು ಅರ್ಥಪೂರ್ಣವಾಗಿ ಆಚರಿಸಿ
ಬಣ್ಣಗಳ ಹಬ್ಬದ ರಂಗು ದೇಶದಾದ್ಯಂತ ಹರಡಿದೆ. ಎಲ್ಲೆಲ್ಲೂ ಹೋಳಿ ಸಂಭ್ರಮ ಜೋರಾಗಿದೆ. ನೀವು ಈ ಹೋಳಿ ಹಬ್ಬಕ್ಕೆ ನಿಮ್ಮ ಸ್ನೇಹಿತರು ಬಂಧುಗಳು ಹಾಗೂ ಆಪ್ತರಿಗೆ ವಿಶ್ ಮಾಡಬೇಕು ಅಂತಿದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾ.
ಬಣ್ಣಗಳ ಹಬ್ಬ ಎಂದೇ ಕರೆಸಿಕೊಳ್ಳುವ ಹೋಳಿ ಬಂದೇ ಬಿಟ್ಟಿದೆ. ಹಿಂದೂ ಸಂಪ್ರದಾಯದಲ್ಲಿ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ವರ್ಷ ಮಾರ್ಚ್ 25 ಅಂದರೆ ನಾಳೆ ಹೋಳಿ ಹಬ್ಬವಿದೆ. ವರ್ಷಕ್ಕೊಮ್ಮೆ ಆಚರಿಸುವ ಈ ಹಬ್ಬಕ್ಕೆ ರಾಧಾ ಕೃಷ್ಣರ ನಂಟೂ ಇದೆ. ದುಷ್ಟಶಕ್ತಿಗಳ ವಿರುದ್ಧ ವಿಜಯ ಸಂಕೇತವೂ ಹೌದು. ಫಾಲ್ಗುಣ ಮಾಸದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.
ಈ ವರ್ಷ ನಿಮ್ಮ ಆತ್ಮೀಯರೊಂದಿಗೆ ಹೋಳಿ ಆಚರಿಸಲು ನೀವು ಸಿದ್ಧರಾಗಿರಬಹುದು. ಹೋಳಿ ಹಬ್ಬಕ್ಕೆ ವಿಶ್ ಮಾಡಲು ಐಡಿಯಾಕ್ಕಾಗಿ ನೀವು ಎದುರು ನೋಡುತ್ತಿರಬಹುದು. ವಾಟ್ಸ್‌ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನ, ಸ್ಟೇಟಸ್ ಹಾಕಿಕೊಳ್ಳಲು ಇಲ್ಲಿದೆ ನಿಮಗಾಗಿ ವಿಶಷ್ ಐಡಿಯಾಗಳು.
* ಹೋಳಿ ಹಬ್ಬದ ಶುಭಾಶಯಗಳು. ಈ ಹೋಳಿ ನಿಮ್ಮ ಬದುಕಿನ ಬಣ್ಣವನ್ನು ಹೆಚ್ಚಿಸಲಿ. ಹೋಳಿ ಹಬ್ಬವೂ ನಿಮಗೂ, ನಿಮ್ಮ ಕುಟುಂಬದವರಿಗೂ ಸದಾ ಖುಷಿಯನ್ನೇ ತರಲಿ.
* ಈ ಹೋಳಿ ನಿಮ್ಮ ಬದುಕಿನಲ್ಲಿ ಸದಾ ಸಂತೋಷದ ಛಾಯೆ ಹರಡಿರುವಂತೆ ಮಾಡಲಿ. ಬದುಕಿನ ಕಷ್ಟಗಳೆಲ್ಲಾ ದೂರಾಗಿ, ಎಲ್ಲವೂ ಒಳಿತೇ ಆಗಲಿ. ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು.
* ನಿಮ್ಮ ಪ್ರೀತಿಪಾತ್ರರ ಮುಖಕ್ಕೆ ಬಣ್ಣ ಬಳಿದು, ನೀವೂ ಬಣ್ಣ ಹಚ್ಚಿಸಿಕೊಂಡು ಬದುಕನ್ನು ಬಣ್ಣಮಯವಾಗಿಸಿಕೊಳ್ಳಿ. ಹೋಳಿ ಹಬ್ಬದ ಶುಭಾಶಯಗಳು.
* ಬಣ್ಣಗಳ ಹಬ್ಬವು ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರ ನಡುವೆ ಹಿಂದೆಂದಿಗಿಂತಲೂ ಬಲವಾದ ಬಂಧವನ್ನು ನಿರ್ಮಿಸಲಿ. ಹೋಳಿ ಹಬ್ಬದ ಶುಭಾಶಯಗಳು.
* ಕೆಂಪು ಬಣ್ಣವು ಪ್ರೀತಿಯನ್ನು ಸೂಚಿಸುತ್ತದೆ, ಹಳದಿ ಬಣ್ಣವು ಸಮೃದ್ಧಿಯನ್ನು ಸೂಚಿಸುತ್ತದೆ ಮತ್ತು ಹಸಿರು ಬಣ್ಣವು ಸಾಮರಸ್ಯವನ್ನು ಸೂಚಿಸುತ್ತದೆ. ಈ ಎಲ್ಲವೂ ನಿಮ್ಮ ಬದುಕಿನಲ್ಲಿ ತುಂಬಿರಲಿ. ಹೋಳಿ ಹಬ್ಬದ ಶುಭಾಶಯಗಳು.
* ಹೋಳಿಯ ಬಣ್ಣಗಳು ಯಶಸ್ಸು ಹಾಗೂ ಸಮೃದ್ಧಿಯಲ್ಲಿ ಹಾದಿಯನ್ನು ಬೆಳಗಿಸಲು ನೆರವಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಒಳಿತು ಮಾಡಲಿ. ಹೋಳಿ ಹಬ್ಬದ ಶುಭಕಾಮನೆಗಳು.
* 2024ರಲ್ಲಿ ನಿಮ್ಮ ಜೀವನದ ಕ್ಯಾನ್ಯಾಸ್‌ನಲ್ಲಿ ಸಂತೋಷ, ಪ್ರೀತಿ, ಯಶಸ್ಸು ತುಂಬಿರಲಿ. ಹೋಳಿಯು ನಿಮ್ಮ ಬದುಕಿಗೆ ಹೊಸ ಬಣ್ಣವನ್ನು ತುಂಬುವ ಮೂಲಕ ಒಳಿತಾಗುವಂತೆ ಮಾಡಲಿ. ಹೋಳಿ ಹಬ್ಬದ ಶುಭಾಶಯಗಳು.
* ಹೋಳಿ ಹಬ್ಬವು ನಿಮ್ಮ ಬದುಕಿನಲ್ಲಿ ಪ್ರೀತಿ, ಸಂತಸ, ನಲಿವನ್ನೇ ತುಂಬುವಂತೆ ಮಾಡಲಿ. ಹೋಲಿ ದಹನವು ನಿಮ್ಮೆಲ್ಲಾ ನೋವುಗಳನ್ನು ಸುಟ್ಟು ಹಾಕಲಿ, ಸಂತೋಷದ ಅಲೆ ಮೂಡುವಂತೆ ಮಾಡಲಿ. ಹೋಳಿ ಹಬ್ಬದ ಶುಭಾಶಯಗಳು.
* ಈ ವರ್ಷ ಹೋಳಿಯು ನಿಮ್ಮ ಬದುಕಿನಲ್ಲಿ ನೀವು ಅಂದುಕೊಂಡಿದ್ದೆಲ್ಲವೂ ನಿಮಗೆ ಸಿಗುವಂತೆ ಮಾಡಲಿ. ನೀವು ಕಂಡ ಕನಸುಗಳೆಲ್ಲಾ ನೆರವೇರಲಿ. ಬದುಕಿನಲ್ಲಿ ರಂಗು ತುಂಬಿರಲಿ. ಬಣ್ಣಗಳ ಹಬ್ಬದ ಶುಭಕಾಮನೆಗಳು.
* ಬದುಕೆಂಬ ಚಿತ್ರಕ್ಕೆ ಹಲವು ಬಣ್ಣಗಳು ಸೇರಿ ಖುಷಿ ಹೆಚ್ಚುವಂತಾಗಲಿ. ಹೋಳಿ ಹಬ್ಬದ ಶುಭಾಶಯಗಳು.
ಹೋಳಿ ಹಬ್ಬಕ್ಕೆ ಸಂಬಂಧಿಸಿದ ಈ ಸ್ಟೋರಿಗಳನ್ನೂ ಓದಿ
Holi 2024: 700 ವರ್ಷಗಳ ನಂತರ ಹೋಳಿ ದಹನದಂದು ಜೊತೆಯಾಗಲಿವೆ 9 ಶುಭಯೋಗಗಳು; ಇದರಿಂದಾಗುವ ಪರಿಣಾಮ ತಿಳಿಯಿರಿ
ವಿಭಾಗ