Makar Sankranti Wishes: ಹ್ಯಾಪಿ ಮಕರ ಸಂಕ್ರಾಂತಿ ಎಂದರೆ ಸಾಕೇ? ಹಬ್ಬದ ಸಂಭ್ರಮ ಹೆಚ್ಚುವಂತೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ವಿಶ್‌ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Makar Sankranti Wishes: ಹ್ಯಾಪಿ ಮಕರ ಸಂಕ್ರಾಂತಿ ಎಂದರೆ ಸಾಕೇ? ಹಬ್ಬದ ಸಂಭ್ರಮ ಹೆಚ್ಚುವಂತೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ವಿಶ್‌ ಮಾಡಿ

Makar Sankranti Wishes: ಹ್ಯಾಪಿ ಮಕರ ಸಂಕ್ರಾಂತಿ ಎಂದರೆ ಸಾಕೇ? ಹಬ್ಬದ ಸಂಭ್ರಮ ಹೆಚ್ಚುವಂತೆ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ವಿಶ್‌ ಮಾಡಿ

Makar Sankranti Wishes: ಹಬ್ಬದ ದಿನಗಳಲ್ಲಿ ನಮ್ಮ ಪ್ರೀತಿಪಾತ್ರರಿಗೆ ವಿಶೇಷವಾಗಿ ವಿಶ್ ಮಾಡಬೇಕು ಅನ್ನಿಸೋದು ಸಹಜ. ಈ ಬಾರಿ ಮಕರ ಸಂಕ್ರಾಂತಿಗೆ ನಿಮ್ಮ ಸ್ನೇಹಿತರು, ಆತ್ಮೀಯರು ಹಾಗೂ ಕುಟುಂಬದವರಿಗೆ ಶುಭಾಶಯ ಕೋರಲು ಸಂದೇಶಗಳನ್ನು ಹುಡುಕುತ್ತಿದ್ದರೆ ಇಲ್ಲಿ ಕನ್ನಡದಲ್ಲಿ ಒಂದಿಷ್ಟು ಶುಭಾಶಯ ಸಂದೇಶಗಳನ್ನು ನೀಡಲಾಗಿದೆ.

ಮಕರ ಸಂಕ್ರಾಂತಿ ವಿಶಸ್‌ ಐಡಿಯಾಗಳು
ಮಕರ ಸಂಕ್ರಾಂತಿ ವಿಶಸ್‌ ಐಡಿಯಾಗಳು (PC: Canva)

Makar Sankranti Wishes: ಭಾರತದಾದ್ಯಂತ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡುವ” ಮಕರ ಸಂಕ್ರಾಂತಿ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಹಬ್ಬದ ಕಳೆ ತುಂಬಿದೆ. ಪ್ರತಿ ವರ್ಷ ಜನವರಿ 14ಕ್ಕೆ ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಇದು ಸೂರ್ಯನ ತನ್ನ ಪಥವನ್ನು ದಕ್ಷಿಣದಿಂದ ಉತ್ತರಕ್ಕೆ ಬದಲಿಸುವ ಸಮಯ. ಸಂಕ್ರಾಂತಿ ದಕ್ಷಿಣ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಈ ಹಬ್ಬದ ಆಚರಣೆ ಬಲು ಜೋರು. ಮಾಗಿಯ ಚಳಿಯ ನಡುವೆ ಸಂಕ್ರಾಂತಿಯನ್ನ ಸಂಭ್ರಮಿಸಲು ನಾವೆಲ್ಲರೂ ಸಜ್ಜಾಗಿದ್ದೇವೆ.

ಸಂಕ್ರಾಂತಿ ಹಬ್ಬಕ್ಕೆ ಎಳ್ಳು–ಬೆಲ್ಲ ಬೀರಿ, ಪೊಂಗಲ್ ಸವಿದು, ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಈ ಹಬ್ಬ ಆಚರಿಸುತ್ತೇವೆ. ಯಾವುದೇ ಹಬ್ಬಗಳು ಬರಲಿ ನಮ್ಮ ಆತ್ಮೀಯರು, ಸ್ನೇಹಿತರು, ಬಂಧುಗಳಿಗೆ ಹಬ್ಬದ ಶುಭಾಶಯ ಕೋರುವ ಪದ್ಧತಿ ಇದೆ. ಮಕರ ಸಂಕ್ರಾಂತಿಗೂ ನಿಮ್ಮ ಪ್ರೀತಿಪಾತ್ರರಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ರೆ ಇಲ್ಲಿವೆ ನಿಮಗಾಗಿ ಒಂದಿಷ್ಟು ಶುಭಾಶಯ ಸಂದೇಶಗಳು. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಆತ್ಮೀಯರಿಗೆ ಶುಭಾಶಯ ಕೋರಲು ಈ ಸಂದೇಶಗಳನ್ನ ಆಯ್ಕೆ ಮಾಡಿಕೊಳ್ಳಿ.

ಮಕರ ಸಂಕ್ರಾಂತಿ ಶುಭಾಶಯ ಸಂದೇಶಗಳು

  • ಈ ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಬಾಳಿನಲ್ಲಿ ಸಂತೋಷ ತರಲಿ. ಸುಗ್ಗಿಯ ಹಬ್ಬವು ನಿಮಗೆ ಸಮೃದ್ಧಿ ಮತ್ತು ಖುಷಿಯನ್ನು ನೀಡಲಿ. ನಿಮಗೂ, ನಿಮ್ಮ ಮನೆಯವರೆಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯಗಳು
  • ಮಕರ ಸಂಕ್ರಾಂತಿ ಶುಭಾಶಯಗಳು. ಈ ಹಬ್ಬವು ನಿಮ್ಮ ಬಾಳು ಬೆಳಗಿಸಲಿ. ಸಂತೋಷ ಮತ್ತು ಯಶಸ್ಸಿನ ಮಾಧುರ್ಯ ನಿಮ್ಮ ಜೀವನದಲ್ಲಿ ತುಂಬಿರಲಿ
  • ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ. ಈ ಹಬ್ಬವು ನಿಮಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರಲಿ.
  • ಸಂಕ್ರಾಂತಿ ರಂಗೋಲಿಯ ಬಣ್ಣಗಳಂತೆ ನಿಮ್ಮ ಬದುಕು ರಂಗಾಗಲಿ. ಜೀವನದಲ್ಲಿ ಸದಾ ಸಂತೋಷ, ಸಮೃದ್ಧಿ ತುಂಬಿರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.
  • ಮಕರ ಸಂಕ್ರಾಂತಿಯ ಚೈತನ್ಯವು ನಿಮ್ಮ ಜೀವನಕ್ಕೆ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು
  • ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವ ಈ ಹೊತ್ತಿನಲ್ಲಿ ನಿಮ್ಮ ಬಾಳಿನಲ್ಲಿ ಎಲ್ಲವೂ ಒಳಿತೇ ಆಗಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು.

    ಇದನ್ನೂ ಓದಿ: ಮಕರ ಸಂಕ್ರಾಂತಿ ವಿಶೇಷ; ಸಂಪ್ರದಾಯದ ಭಾಗವಷ್ಟೇ ಅಲ್ಲ, ಎಳ್ಳು–ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೂ ಇದೆ ಹತ್ತಾರು ಪ್ರಯೋಜನ
  • ಮಕರ ಸಂಕ್ರಾಂತಿಯು ನಿಮ್ಮ ಬದುಕಿನಲ್ಲಿ ಹೊಸ ಆರಂಭಗಳಿಗೆ ಸಾಕ್ಷಿಯಾಗಲಿ. ನಿಮ್ಮ ಬದುಕಿನಲ್ಲಿ ನೀವು ಕಂಡ ಕನಸುಗಳೆಲ್ಲಾ ನೆರವೇರಲಿ. ಸಂಕ್ರಾಂತಿಯ ಶುಭಕಾಮನೆಗಳು
  • ಈ ಮಕರ ಸಂಕ್ರಾಂತಿಯು ನಿಮ್ಮ ಜೀವನವನ್ನು ಸಕಾರಾತ್ಮಕತೆ ಮತ್ತು ಅದೃಷ್ಟದಿಂದ ತುಂಬಲಿ. ನಿಮಗೂ ನಿಮ್ಮ ಆತ್ಮೀಯರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
  • ನಿಮ್ಮ ಮುಂದಿನ ದಿನಗಳು ಸೂರ್ಯನ ಬೆಳಕಿನಂತೆ ಪ್ರಜ್ವಲಿಸಲಿ ಮತ್ತು ಬದುಕು ಆಶೀರ್ವಾದಗಳಿಂದ ತುಂಬಿರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು
  • ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು!
  • ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ಭರವಸೆ ಮತ್ತು ಹೊಸ ಆರಂಭಗಳನ್ನು ತರಲಿ. ಹಬ್ಬದ ಶುಭಾಶಯಗಳು
  • ಮಕರ ಸಂಕ್ರಾಂತಿಯ ದೈವಿಕ ಆಶೀರ್ವಾದವು ನಿಮ್ಮ ಮನೆಗೆ ಸಮೃದ್ಧಿ ಮತ್ತು ಸಂತೋಷವನ್ನು ತರಲಿ, ಎಲ್ಲರಿಗೂ ಎಲ್ಲವೂ ಒಳಿತೇ ಆಗಲಿ. ಮಕರ ಸಂಕ್ರಾಂತಿಯ ಶುಭಾಶಯಗಳು
  • ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡುತ್ತಾ ಮಕರ ಸಂಕ್ರಾಂತಿಯನ್ನ ಬರ ಮಾಡಿಕೊಳ್ಳಿ. ನಿಮ್ಮ ಮುಂದಿನ ದಿನಗಳಲ್ಲಿ ಎಲ್ಲವೂ ಒಳಿತೇ ಆಗಲಿ. ಮಕರ ಸಂಕ್ರಾಂತಿ ಶುಭಾಶಯಗಳು
  • ಮಕರ ಸಂಕ್ರಾಂತಿಯಂದು ನಿಮಗೆ ಸಂತೋಷ, ಅದೃಷ್ಟ ಹಾಗೂ ಕೌಟುಂಬದಲ್ಲಿ ಶಾಂತಿ, ಖುಷಿ ನೆಲೆಸುವಂತೆ ಮಾಡಲಿ. ನಿಮಗೆಲ್ಲರಿಗೂ ಸಂಕ್ರಾಂತಿ ಶುಭಾಶಯಗಳು
  • ಈ ಮಕರ ಸಂಕ್ರಾಂತಿಯ ಮೊದಲ ಸೂರ್ಯನ ಕಿರಣಗಳೊಂದಿಗೆ, ನಿಮ್ಮ ಜೀವನವು ಸುವರ್ಣ ಅವಕಾಶಗಳಿಂದ ತುಂಬಿರಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

    ಇದನ್ನೂ ಓದಿ: Makar Sankranti: ಮಕರ ಸಂಕ್ರಾಂತಿ ಸಮಯದಲ್ಲಿ ರಂಗೋಲಿಗೆ ವಿಶೇಷ ಮಹತ್ವ ನೀಡುವುದೇಕೆ, ಈ ಹಬ್ಬದಲ್ಲಿ ರಂಗೋಲಿ ಬಿಡಿಸುವ ಉದ್ದೇಶವಿದು

Whats_app_banner