Fire Crackers: ಪಟಾಕಿಗಳ ಒಳಗೆ ಏನಿರುತ್ತೆ? ಹೇಗೆ ಕೆಲಸ ಮಾಡುತ್ವೆ?
ಪಟಾಕಿ, ಸುಡುಮದ್ದು ಪ್ರದರ್ಶನ ಬಹಳ ಆಕರ್ಷಣೀಯ. ಆಗಸದಲ್ಲಿ ಹತ್ತು ಹಲವು ವಿನ್ಯಾಸದ ಚಿತ್ತಾರ ನೋಡುವುದೇ ಒಂದು ಖುಷಿ. ಆದರೆ ಈ ರೀತಿ ಸುಡುಮದ್ದಿನ ಮೂಲಕ ದೃಶ್ಯ ವೈವಿಧ್ಯ ಸೃಷ್ಟಿಸುವುದು ಹೇಗೆ, ಇದರ ಹಿಂದಿನ ವಿಜ್ಞಾನ ಏನು, ಪಟಾಕಿಗಳ ಒಳಗೆ ಏನಿರುತ್ತೆ, ಅವು ಹೇಗೆ ಕೆಲಸ ಮಾಡುತ್ತವೆ ಎಂಬುದರ ವಿವರ ಇಲ್ಲಿದೆ.
ದೀಪಾವಳಿ ಹಬ್ಬವು ಬೆಳಕಿನ ಹಬ್ಬವಷ್ಟೇ ಅಲ್ಲ. ಪಟಾಕಿ ಹಬ್ಬ ಕೂಡ ಹೌದು. ಪಟಾಕಿ ಸುಡುವುದು, ಅದು ಸೃಷ್ಟಿಸುವ ಬೆಳಕನ್ನು ನೋಡುವುದೇ ಒಂದು ಆಕರ್ಷಣೆ. ಪಟಾಕಿ ಅಥವಾ ಸುಡುಮದ್ದು ಪ್ರದರ್ಶನ ಚಿತ್ತಾಕರ್ಷಕ ನೋಟವನ್ನು ನೀಡುತ್ತದೆ. ಪಟಾಕಿ ವೈವಿಧ್ಯ ಈ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಅಂದ ಹಾಗೆ, ಪಟಾಕಿ ಅಥವಾ ಸುಡುಮದ್ದು ಸುಟ್ಟಾಗ ಆಗಸದಲ್ಲಿ ಎಷ್ಟೊಂದು ವೈವಿಧ್ಯಮಯ ಆಕಾರಗಳು ಸೃಷ್ಟಿಯಾಗುತ್ತವೆ. ಇದು ಹೇಗೆ ಸಾಧ್ಯವಾಗುತ್ತದೆ. ನವಿಲಿನ ಗರಿ ಮಾದರಿಯದ್ದು, ವರ್ಣವಯ ಬೆಳಕುಗಳ ಸೃಷ್ಟಿ, ಗೋಧಿ ಕಾಳುಗಳ ಮಳೆ, ಹಸಿರು ಹುಳಗಳ ಹಾರಾಟದಂತಹ ದೃಶ್ಯ, ತಾಳೆ ಮರ ಹೀಗೆ ಹಲವು ರೀತಿಯ ದೃಶ್ಯಗಳನ್ನು ಉಂಟುಮಾಡುತ್ತವೆ ಈ ಸುಡುಮದ್ದುಗಳು. ಆಗಸದಲ್ಲಿ ಇಷ್ಟೆಲ್ಲ ಚಿತ್ತಾರ ಮೂಡಿಸುವ ಪಟಾಕಿ, ನೆಲದ ಮೇಲೂ ಆಕರ್ಷಕ ವಿನ್ಯಾಸ ಒದಗಿಸುತ್ತವೆ. ನೆಲಚಕ್ರ, ನಕ್ಷತ್ರ ಕಡ್ಡಿ ಹೀಗೆ ಇನ್ನೂ ಹಲವು ಪಟಾಕಿಗಳಿವೆ. ಈ ಪಟಾಕಿಯ ಹಿಂದಿನ ವಿಜ್ಞಾನ ಕೂಡ ಅವುಗಳ ಅಷ್ಟೇ ಕುತೂಹಲ ಕೆರಳಿಸುವಂಥದ್ದು.
ಪಟಾಕಿ ಒಳಗೆ ಏನೇನಿರುತ್ತವೆ
ವಿವರಣೆಗೋಸ್ಕರ ಆರು ಇಂಚಿನ ಕೊಳವೆ ಆಕಾರದ ಪಟಾಕಿಯನ್ನು ತೆಗೆದುಕೊಳ್ಳೋಣ. ಅದರಲ್ಲಿ ಸಮಯ ವಿಳಂಬ ಫ್ಯೂಸ್ (ವಿಳಂಬಿತ ಫ್ಯೂಸ್), ಚದರ ನಕ್ಷತ್ರಗಳು, ಸಿಡಿಯುವ ಚಾರ್ಜ್ ಫ್ಯೂಸ್ (ಮುಖ್ಯ ಫ್ಯೂಸ್) ನಿಂದ ಮೇಲಕ್ಕೆ ಕಪ್ಪು ಲಿಫ್ಟ್ ಪೌಡರ್ ಇರುತ್ತದೆ. ಬೆಂಕಿ ಅದಕ್ಕೆ ವಿಸ್ತರಿಸುತ್ತದೆ.
ಪಟಾಕಿಗಳಿಗೆ ಬಣ್ಣ ಕೊಡುವುದು ಯಾವುದು
ಪಟಾಕಿಗಳಲ್ಲಿ ಅಥವಾ ಸುಡುಮದ್ದುಗಳಲ್ಲಿ ಇರುವುದ ಗನ್‌ಪೌಡರ್ ಮಾತ್ರವೇ ಆಗಿದ್ದರೆ, ಅವುಗಳು ಈ ರೀತಿ ಆಕರ್ಷಕ ವಿನ್ಯಾಸ ಹೊಂದುವುದು ಅಸಾಧ್ಯ. ಅವೆಲ್ಲವೂ ಗಾಳಿಯಲ್ಲಿ ಬೆಂಕಿ ಚೆಂಡಿನಂತೆ ಕಾಣುತ್ತಿದ್ದವು.
ಪಟಾಕಿ ಸ್ಫೋಟವಾಗುವಾಘ ಲವಣಗಳು ಮತ್ತು ಇತರ ಲೋಹದ ಸಂಯುಕ್ತಗಳು ಪ್ರಕಾಶಮಾನವಾದ ನೀಲಿ ಅಥವಾ ಕಡು ಕೆಂಪು ಬಣ್ಣವನ್ನು ಹೊಂದುವುದಕ್ಕೆ ನೆರವಾಗುತ್ತವೆ. ಪಟಾಕಿ ಸಿಡಿದಾಗ ಕೆಂಪು ಬಣ್ಣ ಪಡೆದುಕೊಳ್ಳುವುದಕ್ಕೆ ಸ್ಟ್ರಾಂಷಿಯಂ ಲವಣ ಮತ್ತು/ಅಥವಾ ಲಿಥಿಯಂ ಲವಣಗಳನ್ನು ಸೇರಿಸಲಾಗುತ್ತದೆ. ಸ್ಟ್ರಾಂಷಿಯಂ ಪ್ರಕಾಶಮಾನ ಕೆಂಪು ಬಣ್ಣ ನೀಡಿದರೆ, ಹಸಿರು ಬೇರಿಯಮ್ ಕ್ಲೋರೈಡ್ ಸಂಯುಕ್ತದಿಂದ ಬರುತ್ತದೆ. ನೀಲಿ ತಾಮ್ರದ ಕ್ಲೋರೈಡ್‌ನಿಂದ ಉಂಟಾಗುತ್ತದೆ. ಕ್ಯಾಲ್ಸಿಯಂ ಲವಣ ಕಿತ್ತಳೆ ಬಣ್ಣ, ಸೋಡಿಯಂ ಲವಣ (ಟೇಬಲ್ ಉಪ್ಪಿನಂತೆ) ಹಳದಿ ಬಣ್ಣದಲ್ಲಿ ಸ್ಫೋಟಗೊಳ್ಳುತ್ತವೆ.
ಬೆಳ್ಳಿ ಅಥವಾ ಬಿಳಿ ಬಣ್ಣಗಳನ್ನು ಅಲ್ಯೂಮಿನಿಯಂ ಅಥವಾ ಮೆಗ್ನೀಸಿಯಂ ಸೇರಿಸುವ ಮೂಲಕ ತಯಾರಿಸಲಾಗುತ್ತದೆ. ಕೆನ್ನೇರಳೆ ಬಣ್ಣ ಬರಬೇಕಾದರೆ, ಕೆಂಪು ಮತ್ತು ತಾಮ್ರದ ಕ್ಲೋರೈಡ್ ಅನ್ನು ನೀಲಿ ಬಣ್ಣಕ್ಕೆ ಸ್ಟ್ರಾಂಷಿಯಂ ಲವಣಗಳನ್ನು ಸಂಯೋಜಿಸಬೇಕಾಗುತ್ತದೆ.
ಪಟಾಕಿ ಶೆಲ್ ಒಳಗೆ ಹೇಗಿರುತ್ತದೆ
ಆಗಸದಲ್ಲಿ ನಕ್ಷತ್ರ ಮಾದರಿಯ ಚಿತ್ತಾರ ರೂಪಿಸಬೇಕಾದರೆ ಅದಕ್ಕೆ ಬೇಕಾದ ರೀತಿಯಲ್ಲಿ ಪಟಾಕಿಯ ಒಳಭಾಗದಲ್ಲಿ ಸುಡುಮದ್ದನ್ನು ತುಂಬಿಸಬೇಕಾಗುತ್ತದೆ. ಈ ಈ ನಕ್ಷತ್ರ ಮಾದರಿ ಸೃಷ್ಟಿಸುವ ಪಟಾಕಿಯ ಒಳಭಾಗದ ವಿನ್ಯಾಸ ಹೀಗಿದೆ ನೋಡಿ.
ನಕ್ಷತ್ರ ಕಡ್ಡಿ ಅಥವಾ ಸ್ಪಾರ್ಕ್ಲರ್‌ಗಳು
ಪಟಾಕಿಗಳಂತೆಯೇ ಅದೇ ವಿಜ್ಞಾನದ ಪ್ರಕಾರವೇ ನಕ್ಷತ್ರ ಕಡ್ಡಿ ಅಥವಾ ಸ್ಪಾರ್ಕ್ಲರ್‌ಗಳು ಕೆಲಸ ಮಾಡುತ್ತವೆ. ಬಣ್ಣ ಹೊರಸೂಸುವುದಕ್ಕೆ ಅಗತ್ಯವಾದ ಲೇಪನವು ನಕ್ಷತ್ರ ಕಡ್ಡಿ ಹೊರಸೂಸುವ ಪ್ರಕಾಶಮಾನ ಬೆಳಕನ್ನು ಉಂಟುಮಾಡುತ್ತದೆ. ಇದಕ್ಕೆ ಅಗತ್ಯ ಇಂಧನ ಮತ್ತು ಆಕ್ಸಿಡೈಸರ್ ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಲಾಗುತ್ತದೆ ಆದ್ದರಿಂದ ಸ್ಪಾರ್ಕ್ಲರ್ ಸಾಂಪ್ರದಾಯಿಕ ಪಟಾಕಿಯಂತೆ ಸ್ಫೋಟಿಸುವುದಿಲ್ಲ, ಬದಲಿಗೆ ಹೆಚ್ಚು ನಿಧಾನವಾಗಿ ಮತ್ತು ಸುರಕ್ಷಿತವಾಗಿ ಸುಡುತ್ತದೆ.