ಕನ್ನಡ ಸುದ್ದಿ  /  ಜೀವನಶೈಲಿ  /  Rama Navami 2024: ಶ್ರೀರಾಮ ನವಮಿಯಂದು ಸ್ನೇಹಿತರು, ಕುಟುಂಬದವರು, ಆತ್ಮೀಯರಿಗೆ ಹೀಗೆ ಶುಭಾಶಯ ಕೋರಿ; ರಾಮನ ಕೃಪೆಗೆ ಪಾತ್ರರಾಗಿ

Rama Navami 2024: ಶ್ರೀರಾಮ ನವಮಿಯಂದು ಸ್ನೇಹಿತರು, ಕುಟುಂಬದವರು, ಆತ್ಮೀಯರಿಗೆ ಹೀಗೆ ಶುಭಾಶಯ ಕೋರಿ; ರಾಮನ ಕೃಪೆಗೆ ಪಾತ್ರರಾಗಿ

ಮರ್ಯಾದಾ ಪುರುಷೋತ್ತಮ ಎಂದರೆ ಕರೆಸಿಕೊಳ್ಳುವ ಶ್ರೀರಾಮಚಂದ್ರ ಚೈತ್ರಮಾಸ ಶುಕ್ಲಪಕ್ಷದ 9ನೇ ದಿನ ಅಯೋಧ್ಯೆಯಲ್ಲಿ ಜನಿಸುತ್ತಾರೆ. ಶ್ರೀರಾಮಚಂದ್ರ ಜನಿಸಿದ ದಿನವನ್ನು ರಾಮ ನವಮಿ ಎಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್‌ 17 ರಂದು ರಾಮ ನವಮಿ ಇದ್ದು, ನಿಮ್ಮ ಆತ್ಮೀಯರಿಗೆ ವಿಶ್‌ ಮಾಡಲು ಇಲ್ಲಿದೆ ಒಂದಿಷ್ಟು ಐಡಿಯಾಗಳು.

ಶ್ರೀರಾಮ ನವಮಿ
ಶ್ರೀರಾಮ ನವಮಿ

ಹಿಂದೂ ಸಂವತ್ಸರದಲ್ಲಿ ಬರುವ ಮೊದಲ ಹಬ್ಬ ರಾಮ ನವಮಿ. ರಾಮನವಮಿಯನ್ನು ಹಿಂದೂಗಳು ಬಹಳ ಭಕ್ತಿ ಭಾವದಿಂದ ಆಚರಿಸುತ್ತಾರೆ. ಈ ವರ್ಷ ಏಪ್ರಿಲ್‌ 17 ಬುಧವಾರ ರಾಮನವಮಿ ಇದೆ. ಭಗವಾನ್‌ ವಿಷ್ಣುವು ತನ್ನ 7ನೇ ಅವತಾರದಲ್ಲಿ ಶ್ರೀರಾಮನಾಗಿ ಜನಿಸಿದ ಎಂದು ಹೇಳುತ್ತಾರೆ. ಚೈತ್ರನವರಾತ್ರಿಯ ಕೊನೆಯ ದಿನ ಅಂದರೆ ಚೈತ್ರಮಾಸ ಶುಕ್ಲಪಕ್ಷದ 9ನೇ ದಿನ ಶ್ರೀರಾಮ ದಶರಥ ಮಹಾರಾಜ ಹಾಗೂ ಕೌಸಲ್ಯೆಯ ಪುತ್ರನಾಗಿ ಜನಿಸುತ್ತಾನೆ. ಈ ವರ್ಷ ಹಿಂದೂಗಳಿಗೆ ರಾಮ ನವಮಿ ಬಲು ವಿಶೇಷ. ಅದಕ್ಕೆ ಕಾರಣ ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡ ರಾಮಮಂದಿರ. 500 ವರ್ಷಗಳ ಹಿಂದೂಗಳ ಕನಸು ಈ ವರ್ಷ ನನಸಾಗಿದ್ದು, ರಾಮ ನವಮಿ ಸಡಗರ ತುಸು ಜೋರೇ ಇದೆ ಎನ್ನಬಹುದು. ನೀವು ರಾಮನವಮಿಗೆ ನಿಮ್ಮ ಸ್ನೇಹಿತರು, ಆತ್ಮೀಯರು, ಬಂಧುಗಳಿಗೆ ಶುಭಾಶಯ ಕೋರಲು ಬಯಸಿದರೆ ಇಲ್ಲಿದೆ ಒಂದಿಷ್ಟು ಐಡಿಯಾಗಳು.

ಟ್ರೆಂಡಿಂಗ್​ ಸುದ್ದಿ

* ಶ್ರೀರಾಮ ದಿವ್ಯ ಕೃಪೆ ಸದಾ ನಿಮ್ಮ ಮೇಲಿರಲಿ. ನಿಮ್ಮ ಬದುಕು ಅತ್ಯಂತ ಸಂತೋಷ, ಸಮೃದ್ಧಿಯಿಂದ ಕೂಡಿರಲಿ. ರಾಮ ನವಮಿಯ ಶುಭಾಶಯಗಳು.

* ರಾಮ ನವಮಿಯ ಶುಭ ಸಂದರ್ಭದಲ್ಲಿ ಭಗವಾನ್‌ ರಾಮನು ನಿಮಗೆ ಯಶಸ್ಸು, ಸಂತೋಷ ಮತ್ತು ಸುಖ-ಶಾಂತಿಯನ್ನು ನೀಡಲಿ. ನಿಮಗೂ ಹಾಗೂ ನಿಮ್ಮ ಆಪ್ತರಿಗೂ ರಾಮ ನವಮಿ ಶುಭ ಹಾರೈಕೆಗಳು.

* ರಾಮ ನವಮಿಯ ಈ ಪವಿತ್ರ ಸಂದರ್ಭದಲ್ಲಿ ಭಗವಾನ್‌ ರಾಮನ ಆಶೀರ್ವಾದವು ನಿಮ್ಮ ಹಾಗೂ ನಿಮ್ಮ ಕುಟುಂಬದೊಂದಿಗೆ ಇರಲಿ ಎಂದು ನಾನು ಬಯಸುತ್ತೇನೆ. ನಿಮ್ಮ ಹೃದಯ ಹಾಗೂ ಮನೆಯಲ್ಲಿ ಸದಾ ಸಂತೋಷ ತುಂಬಿರಲಿ. ರಾಮ ನವಮಿಯ ಶುಭಾಶಯಗಳು.

ದೀಪದ ಹೊಳಪು, ರಾಮನಾಮ ಜಪದ ಪ್ರತಿಧ್ವನಿಗಳೊಂದಿಗೆ ನಿಮ್ಮ ಜೀವನದಲ್ಲಿ ಸದಾ ಸಂತೋಷ, ತೃಪ್ತಿ, ನೆಮ್ಮದಿ ತುಂಬಿರಲಿ. ನಿಮಗೆ ರಾಮ ನವಮಿಯ ಶುಭಾಶಯಗಳು.
ದೀಪದ ಹೊಳಪು, ರಾಮನಾಮ ಜಪದ ಪ್ರತಿಧ್ವನಿಗಳೊಂದಿಗೆ ನಿಮ್ಮ ಜೀವನದಲ್ಲಿ ಸದಾ ಸಂತೋಷ, ತೃಪ್ತಿ, ನೆಮ್ಮದಿ ತುಂಬಿರಲಿ. ನಿಮಗೆ ರಾಮ ನವಮಿಯ ಶುಭಾಶಯಗಳು.

* ಭಗವಾನ್‌ ರಾಮನ ಆಶೀರ್ವಾದದೊಂದಿಗೆ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ಸು ಗಳಿಸಿ. ನಿಮಗೂ ನಿಮ್ಮ ಕುಟುಂಬ ಶುಭ ರಾಮ ನವಮಿ.

* ದೀಪದ ಹೊಳಪು, ರಾಮನಾಮ ಜಪದ ಪ್ರತಿಧ್ವನಿಗಳೊಂದಿಗೆ ನಿಮ್ಮ ಜೀವನದಲ್ಲಿ ಸದಾ ಸಂತೋಷ, ತೃಪ್ತಿ, ನೆಮ್ಮದಿ ತುಂಬಿರಲಿ. ನಿಮಗೆ ರಾಮ ನವಮಿಯ ಶುಭಾಶಯಗಳು

* ಈ ವರ್ಷ ಹಬ್ಬವು ನಿಮ್ಮಲ್ಲಿ ಧನಾತ್ಮಕ ಭಾವ, ಭರವಸೆ ಹುಟ್ಟುವಂತೆ ಮಾಡಲಿ. ಸದಾ ಒಳಿತೇ ಆಗಲಿ. ರಾಮ ನವಮಿಯ ಶುಭಾಶಯಗಳು.

* ರಾಮನು ಹುಟ್ಟಿದ ಈ ಶುಭ ದಿನದಂದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲು ನಾನು ಬಯಸುತ್ತೇನೆ. ರಾಮ ನವಮಿಯ ಶುಭಾಶಯಗಳು.

* ಶ್ರೀರಾಮನು ನಿಮ್ಮೆಲ್ಲಾ ಕನಸುಗಳನ್ನು ನನಸಾಗುವಂತೆ ಮಾಡಲಿ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ, ರಾಮ ನವಮಿಯ ಶುಭಾಶಯಗಳು.

* ಈ ರಾಮ ನವಮಿಯಿಂದ ನಿಮ್ಮ ಬದುಕಿನಲ್ಲಿ ಪ್ರೀತಿ, ಶಾಂತಿ, ಸಮೃದ್ಧಿ ತುಂಬಿರುವಂತೆ ರಾಮನು ಅನುಗ್ರಹಿಸಲಿ. ಭಗವಾನ್‌ ಶ್ರೀರಾಮನು ಸದಾ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಲು ಶುಭ ರಾಮ ನವಮಿ.

ಶ್ರೀರಾಮನು ನಿಮ್ಮೆಲ್ಲಾ ಕನಸುಗಳನ್ನು ನನಸಾಗುವಂತೆ ಮಾಡಲಿ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ, ರಾಮ ನವಮಿಯ ಶುಭಾಶಯಗಳು.
ಶ್ರೀರಾಮನು ನಿಮ್ಮೆಲ್ಲಾ ಕನಸುಗಳನ್ನು ನನಸಾಗುವಂತೆ ಮಾಡಲಿ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ, ರಾಮ ನವಮಿಯ ಶುಭಾಶಯಗಳು.

* 'ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ' ಪ್ರಭು ಶ್ರೀರಾಮನ ಕೃಪಾ ಕಟಾಕ್ಷ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲಿರಲಿ. ಎಂದಿಗೂ ನಿಮಗೆ ಒಳಿತೇ ಆಗಲಿ. ರಾಮ ನವಮಿಯ ಶುಭಾಶಯಗಳು.

* ರಾಮಾಯ ರಾಮ ಭದ್ರಾಯ, ರಾಮ ಚಂದ್ರಾಯ ವೇದಸೇ, ರಘುನಾಥಾಯ ನಾಥಾಯ, ಸೀತಾಯ ಪತಯೇ ನಮಃ'' ಸೀತಾರಾಮನು ನಿಮ್ಮ ಬದುಕಿನಲ್ಲಿ ಎಲ್ಲಾ ಒಳಿತೇ ಮಾಡಲಿ. ರಾಮ ನವಮಿಯ ಶುಭ ಹಾರೈಕೆಗಳು.

* ಪ್ರತಿ ಮನೆ ಮನದಲ್ಲೂ ನೆಲೆಸಿರುವ ಪ್ರಭು ಶ್ರೀರಾಮನ ಆದರ್ಶಗುಣಗಳನ್ನು ನೀವು ಅಳವಡಿಸಿಕೊಳ್ಳಿ. ಬದುಕಿನಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಶ್ರೀರಾಮನಂತೆ ಸ್ವೀಕರಿಸಿ, ಗೆಲುವು ಸಾಧಿಸಿ. ನಿಮಗೂ ನಿಮ್ಮ ಬಂಧು ವರ್ಗಕ್ಕೂ ಶ್ರೀ ರಾಮ ನಮವಿ ಹಬ್ಬದ ಶುಭಾಶಯಗಳು.