Varalakshmi Festival: ವರಮಹಾಲಕ್ಷ್ಮೀ ಪೂಜೆ ಆರಂಭಕ್ಕೂ ಮುನ್ನ ಪೂಜಾ ಸಾಮಗ್ರಿಗಳು, ನೈವೇದ್ಯ, ಬಾಗಿನಕ್ಕೆ ಏನೇನು ಬೇಕು ತಿಳಿಯಿರಿ
ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಕೂಡ ಒಂದು. ನಾಳೆ (ಆಗಸ್ಟ್ 25) ವರಮಹಾಲಕ್ಷ್ಮೀ ಹಬ್ಬದ ಆಚರಣೆ ಇದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಬೇಕಾಗುವ ಪೂಜಾ ಸಾಮಗ್ರಿಗಳು, ನೈವೇದ್ಯಕ್ಕೆ ಬೇಕಾಗುವ ಪದಾರ್ಥಗಳ ಪಟ್ಟಿ ಇಲ್ಲಿದೆ.
ದೇಶದಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಭಕ್ತಿ, ಭಾವದೊಂದಿಗೆ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ವರಲಕ್ಷ್ಮಿ ವ್ರತವನ್ನು ಮಾಡುವುದರಿಂದ ಸಕಲ ಸಂಪತ್ತು ಸಿದ್ಧಿಯಾಗುತ್ತದೆ ಎಂಬುದು ನಂಬಿಕೆ. ಆದುದರಿಂದಲೇ ಶ್ರಾವಣ ಮಾಸದಲ್ಲಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಮಹಿಳೆಯರು ಭಕ್ತಿಯಿಂದ ವ್ರತ ಮಾಡುತ್ತಾರೆ. ನಾಳೆ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಇದ್ದು, ಈ ವತ್ರಕ್ಕೆ ಯಾವೆಲ್ಲಾ ರೀತಿಯ ಪೂಜಾ ಸಾಮಗ್ರಿಗಳು ಬೇಕು ಎನ್ನುವ ವಿವರ ಇಲ್ಲಿದೆ.
ಶ್ರಾವಣ ಮಾಸದ ಪ್ರತಿ ಶುಕ್ರವಾರವನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಹಲವರು ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ವಿಶೇಷವಾಗಿ ಹುಣ್ಣಿಮೆಯ ಹಿಂದಿನ ಶುಕ್ರವಾರ, ಉಪವಾಸ ಆಚರಿಸುವುದು ವಾಡಿಕೆ.
ಹಾಗಾದರೆ ಉಪವಾಸದ ದಿನದಂದು ಏನು ಮಾಡಬೇಕು? ಪೂಜೆಗೆ ಬೇಕಾಗುವ ಸಾಮಗ್ರಿಗಳು ಯಾವುವು? ಕಂಕಣ ಮಾಡುವುದು ಹೇಗೆ? ನೈವೇದ್ಯಕ್ಕೆ ಏನನ್ನು ಇಡಬೇಕು ಎಂಬ ಮಾಹಿತಿ ಇಲ್ಲಿದೆ.
ವರಮಹಾಲಕ್ಷ್ಮೀ ವ್ರತದ ವಿಧಾನ
ಬೆಳಿಗ್ಗೆ ಬೇಗ ಎದ್ದು ದೇವಿಯನ್ನು ಕೂರಿಸುವ ಸ್ಥಳ ಹಾಗೂ ದೇವರ ಕೋಣೆಯನ್ನು ಸ್ವಚ್ಛ ಮಾಡಬೇಕು. ಬಳಿಕ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಬೇಕು.
ವ್ರತಕ್ಕೆ ಬೇಕಾಗುವ ಪೂಜಾ ಸಾಮಗ್ರಿಗಳು
- ಅರಿಸಿನ
- ಕುಂಕುಮ
- ತೆಂಗಿನಕಾಯಿ
- ದೀಪ
- ಆರತಿ
- ಐದು ದೀಪಗಳಿಂತ ಆರತಿಯನ್ನು ಬೆಳಗಲು ಬೇಕಾದ ತಟ್ಟೆ
- ದೀಪ ಉರಿಸಲು ತುಪ್ಪ
- ಕರ್ಪೂರ
- ಬೆಳ್ತಿಗೆ ಅಕ್ಕಿ
- ಅವರೆಕಾಳು
- ದಾರ,
- ವೀಳ್ಯದೆಲೆ
- ವಿವಿಧ ಹೂಗಳು
- ಕಂಕಣ ತಯಾರಿ
ಐದು ಅಥವಾ ಒಂಬತ್ತು ರಾಶಿಯ ದಾರವನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಹಚ್ಚಿ. ಆ ದಾರಕ್ಕೆ ಐದು ಅಥವಾ ಒಂಬತ್ತು ಎಲೆಗಳನ್ನು ಕಟ್ಟಿ ಗಂಟು ಹಾಕಬೇಕು. ಪೀಠದಲ್ಲಿ ಇಟ್ಟು ಹೂವು, ಅರಿಸಿನ, ಕುಂಕುಮ, ಅಭೀತಗಳನ್ನು ಇಟ್ಟು ಕಂಕನಿಗೆ ಪೂಜೆ ಮಾಡಬೇಕು. ಮೊದಲೇ ಬಳೆಯನ್ನು ತಯಾರಿ ಮಾಡಿಕೊಂಡರೆ ಉತ್ತಮ.
ಬಾಗಿನ ಕೊಡಲು ಅಗತ್ಯ ವಸ್ತುಗಳು
- ಕೆಂಪು ಬಣ್ಣದ ರವಿಕೆ ಕಣ (ಬೇರೆ ಬಣ್ಣದ್ದು ಕೊಡಬಹುದು)
- ಶ್ರೀಗಂಧದ ತುಂಡು
- ಹೂಗಳು
- ಹಣ್ಣುಗಳು
- ವೀಳ್ಯದೆಲೆ
ನೈವೇದ್ಯ
ವರಲಕ್ಷ್ಮಿ ವ್ರತದ ದಿನ ವಿಶೇಷವಾಗಿ ತಯಾರಿಸಿದ ರೊಟ್ಟಿಯನ್ನು ದೇವಿಗೆ ನೈವೇದ್ಯ ಮಾಡಬೇಕು. ಪಾಯಸ, ಪಾನಕ, ಕರ್ಜಿಕಾಯಿ, ಹೋಳಿಗೆ, ತುಪ್ಪದಂತಹ ಭಕ್ಷ್ಯಗಳನ್ನು ತಯಾರಿಸಿ ಲಕ್ಷ್ಮೀ ದೇವಿಗೆ ನೈವೇದ್ಯ ಮಾಡಬೇಕು.
ವರಮಹಾಲಕ್ಷ್ಮೀ ಹಬ್ಬಕ್ಕೆ ಸಂಬಂಧಿಸಿದ ಈ ಸ್ಟೋರಿಗಳನ್ನೂ ಓದಿ
ವರಮಹಾಲಕ್ಷ್ಮೀ ಪೀಠವನ್ನು ಹೇಗೆ ಅಲಂಕಾರ ಮಾಡಬೇಕೆಂದುಕೊಂಡಿದ್ದೀರಿ? ಇಲ್ಲಿವೆ ನೋಡಿ ಐಡಿಯಾಗಳು
Varalakshmi Vratham 2023: ವರಮಹಾಲಕ್ಷ್ಮೀ ವ್ರತದ ಆಚರಣೆ, ಮುಹೂರ್ತ, ಮಹತ್ವದ ಕುರಿತು ವಿವರ ಇಲ್ಲಿದೆ