ಕನ್ನಡ ಸುದ್ದಿ  /  ಜೀವನಶೈಲಿ  /  Upi Payment: ಜನವರಿಯಲ್ಲಿ ಬದಲಾಗಲಿದೆ ಯುಪಿಐ ಪಾವತಿಯ 5 ನಿಯಮಗಳು; ಇಲ್ಲಿದೆ ಮಾಹಿತಿ

UPI Payment: ಜನವರಿಯಲ್ಲಿ ಬದಲಾಗಲಿದೆ ಯುಪಿಐ ಪಾವತಿಯ 5 ನಿಯಮಗಳು; ಇಲ್ಲಿದೆ ಮಾಹಿತಿ

UPI payment new rules: ಕಳೆದ ಕೆಲವು ತಿಂಗಳುಗಳಲ್ಲಿ NPCI, ಯುಪಿಐ ಪಾವತಿಗಳಲ್ಲಿ ಹಲವಾರು ಬದಲಾವಣೆಗಳನ್ನು ಪ್ರಕಟಿಸಿದೆ. ಜನವರಿಯಲ್ಲಿ ಜಾರಿಗೆ ಬರುವ ಹಾಗೂ ಮುಂದಿನ ದಿನಗಳಲ್ಲಿ ಜಾರಿಗೆ ಬರುವ ಕೆಲವು ಬದಲಾವಣೆಗಳು ಇಲ್ಲಿವೆ.

ಯುಪಿಐ ಪಾವತಿ
ಯುಪಿಐ ಪಾವತಿ

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದಲ್ಲಿ ಅತ್ಯಂತ ಜನಪ್ರಿಯ ಪಾವತಿ ವಿಧಾನಗಳಲ್ಲಿ ಒಂದಾಗಿದೆ. ಇದನ್ನು 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ. ಇದು ಭಾರತೀಯರು ಹಣವನ್ನು ಪಾವತಿಸುವ ಮತ್ತು ಸ್ವೀಕರಿಸುವ ವಿಧಾನವನ್ನು ಸರಳೀಕರಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ NPCI ಯುಪಿಐ ಪಾವತಿಗಳಲ್ಲಿ ಹಲವಾರು ಬದಲಾವಣೆಗಳನ್ನು ಪ್ರಕಟಿಸಿದೆ. ಜನವರಿಯಲ್ಲಿ ಜಾರಿಗೆ ಬರುವ ಹಾಗೂ ಮುಂದಿನ ದಿನಗಳಲ್ಲಿ ಜಾರಿಗೆ ಬರುವ ಕೆಲವು ಬದಲಾವಣೆಗಳು ಇಲ್ಲಿವೆ.

ಟ್ರೆಂಡಿಂಗ್​ ಸುದ್ದಿ

ಯುಪಿಐ ವಹಿವಾಟು ಮಿತಿ ಹೆಚ್ಚಳ

ಡಿಸೆಂಬರ್‌ನಲ್ಲಿ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಯುಪಿಐ ಪಾವತಿಗಳ ವಹಿವಾಟಿನ ಮಿತಿಯನ್ನು ಹಿಂದಿನ 1 ಲಕ್ಷದಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಘೋಷಿಸಿದರು. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪಾವತಿಗಳನ್ನು ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಬಳಕೆಯಲ್ಲಿಲ್ಲದ ಯುಪಿಐ ಐಡಿಗಳು ನಿಷ್ಕ್ರಿಯ

ಕಳೆದ ವರ್ಷ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾವೂ ಪೇಟಿಎಂ, ಗೂಗಲ್​​ ಪೇ. ಫೋನ್​ಪೇ ನಂತಹ ಪಾವತಿ ಅಪ್ಲಿಕೇಶನ್‌ಗಳಿಗೆ ಸೂಚನೆಯೊಂದನ್ನು ನೀಡಿತ್ತು. ಇದರನ್ವಯ 2023ರ ಡಿಸೆಂಬರ್ 31ರೊಳಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿರದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸಲು ಸೂಚನೆ ನೀಡಿತ್ತು. ಹೀಗಾಗಿ ನೀವು ಕಳೆದೊಂದು ವರ್ಷದಿಂದ ಯುಪಿಐ ವಹಿವಾಟು ನಡೆಸಿಲ್ಲವಾದರೂ ನಿಮ್ಮ ಯುಪಿಐ ಐಡಿ ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿದೆ.

1 ಲಕ್ಷದವರೆಗಿನ ಯುಪಿಐ ಪಾವತಿಗಳಿಗೆ ದೃಢೀಕರಣದ ಅಗತ್ಯವಿಲ್ಲ

ಇನ್ನು ಮುಂದೆ 1 ಲಕ್ಷದವರೆಗಿನ ಯುಪಿಐ ಪಾವತಿಗಳಿಗೆ ಅಡಿಷನಲ್​ ಫ್ಯಾಕ್ಟರ್​ ಅಥೆಂಟಿಫಿಕೇಶ್​(AFA) ಅಗತ್ಯವಿರುವುದಿಲ್ಲ ಎಂದು ಆರ್​ಬಿಐ ಇತ್ತೀಚೆಗೆ ಘೋಷಿಸಿತ್ತು. ಕ್ರೆಡಿಟ್ ಕಾರ್ಡ್ ಮರುಪಾವತಿಗಳು, ಮ್ಯೂಚುವಲ್ ಫಂಡ್ ಚಂದಾದಾರಿಕೆಗಳು, ವಿಮಾ ಪ್ರೀಮಿಯಂಗಳನ್ನು ಕಟ್ಟಲು ದೃಢೀಕರಣದ ಅಗತ್ಯವಿಲ್ಲ. ಈ ಮೊದಲು, ಎಎಫ್‌ಎ ಇಲ್ಲದೆ ವರ್ಗಾವಣೆ ಮಾಡಬಹುದಾದ ಹಣದ ಮಿತಿ 15,000 ರೂ. ಮಾತ್ರ ಆಗಿತ್ತು.

ಯುಪಿಐ ಲೈಟ್ ವ್ಯಾಲೆಟ್ ವಹಿವಾಟಿನ ಮಿತಿಯಲ್ಲಿ ಹೆಚ್ಚಳ

ಆಫ್‌ಲೈನ್‌ನಲ್ಲಿ ಮಾಡಿದ ಯುಪಿಐ ಲೈಟ್ ವ್ಯಾಲೆಟ್‌ಗಳ ವಹಿವಾಟಿನ ಮಿತಿಯನ್ನು ರೂ. 200 ರಿಂದ ರೂ. 500 ಕ್ಕೆ ಹೆಚ್ಚಿಸಲಾಗಿದೆ. ವರ್ಗಾವಣೆ ಮಾಡಬಹುದಾದ ಗರಿಷ್ಠ ಮೊತ್ತ ರೂ. 2,000 ಆಗಿದೆ. ಕಡಿಮೆ ಇಂಟರ್ನೆಟ್ ಸಂಪರ್ಕಗಳನ್ನು ಹೊಂದಿರುವ ಸ್ಥಳಗಳಲ್ಲಿ UPI-ಲೈಟ್ ವ್ಯಾಲೆಟ್‌ಗಳ ಬಳಕೆಯನ್ನು ಉತ್ತೇಜಿಸಲು ಈ ಹೆಚ್ಚಳವನ್ನು ಮಾಡಲಾಗಿದೆ.

ಪ್ರಸ್ತಾವಿತ ಬದಲಾವಣೆ: ಕೆಲವು ಪಾವತಿಗಳಿಗೆ 4-ಗಂಟೆಗಳ ಮಿತಿ

ಆನ್‌ಲೈನ್ ಪಾವತಿ ವಂಚನೆಯ ಹೆಚ್ಚುತ್ತಿರುವ ನಿದರ್ಶನಗಳನ್ನು ತಡೆಯಲು, RBI ಹೊಸ ಸ್ವೀಕೃತದಾರರಿಗೆ 2,000 ರೂ.ಗಿಂತ ಹೆಚ್ಚಿನ ಮೊದಲ ಪಾವತಿ ಮಾಡಲು ಬಳಕೆದಾರರಿಗೆ 4-ಗಂಟೆಗಳ ಸಮಯದ ಮಿತಿಯನ್ನು ಪ್ರಸ್ತಾಪಿಸಿದೆ. ಬಳಕೆದಾರರು ಈ ಹಿಂದೆ ವಹಿವಾಟು ನಡೆಸದಿರುವ ಇನ್ನೊಬ್ಬ ಬಳಕೆದಾರರಿಗೆ ರೂ 2,000 ಮೀರಿದ ಮೊದಲ ಪಾವತಿಯನ್ನು ಮಾಡುವಾಗ ಈ ಹೊಸ ಮಿತಿಯು ಅನ್ವಯವಾಗುತ್ತದೆ.