Bank Account for Women: ಮಹಿಳೆಯರಿಗೆ ಬ್ಯಾಂಕ್ ಅಕೌಂಟ್ ಏಕೆ ಇರಬೇಕು, ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು-financial guide why women should have bank account important points you need to know rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Bank Account For Women: ಮಹಿಳೆಯರಿಗೆ ಬ್ಯಾಂಕ್ ಅಕೌಂಟ್ ಏಕೆ ಇರಬೇಕು, ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು

Bank Account for Women: ಮಹಿಳೆಯರಿಗೆ ಬ್ಯಾಂಕ್ ಅಕೌಂಟ್ ಏಕೆ ಇರಬೇಕು, ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು

Bank Account for Women: ಮದುವೆಯ ನಂತರ ಪತ್ನಿ ತನ್ನ ಪತಿಯೊಂದಿಗೆ ಜಂಟಿ ಖಾತೆ ತೆರೆಯುವುದು ತಪ್ಪಲ್ಲ. ಆದರೆ ಪ್ರತಿಯೊಬ್ಬ ಮಹಿಳೆ ವೈಯಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಇದರಿಂದಾಗಿ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರ ಬಗ್ಗೆ ಇನ್ನಷ್ಟು ತಿಳಿಯಿರಿ.

Bank Account for Women: ಮಹಿಳೆಯರಿಗೆ ಬ್ಯಾಂಕ್ ಅಕೌಂಟ್ ಏಕೆ ಇರಬೇಕು, ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು
Bank Account for Women: ಮಹಿಳೆಯರಿಗೆ ಬ್ಯಾಂಕ್ ಅಕೌಂಟ್ ಏಕೆ ಇರಬೇಕು, ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು

Bank Account for Women: ಸಾಮಾನ್ಯವಾಗಿ ಮಹಿಳೆಯರು ಮನೆಯ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ. ಹಣವನ್ನು ಹೇಗೆ ಹೊಂದಿಸುವುದು, ಖರ್ಚು-ವೆಚ್ಚಗಳ ಬಗ್ಗೆ ಪುರುಷರಿಗಿಂತ ಮಹಿಳೆಯರೇ ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬುದು ಹಲವರ ವಾದವಾಗಿದೆ. ಇದಕ್ಕೆ ಕಾರಣವೂ ಇದೆ. ಕೊಟ್ಟ ಸಾಲವನ್ನು ಪುರುಷನು ಸರಿಯಾಗಿ ಪಾವತಿ ಮಾಡುವುದಿಲ್ಲ. ನಿರ್ಲಕ್ಷ್ಯ ತೋರುತ್ತಾನೆ. ಆದರೆ ಮಹಿಳೆ ಆಗಲ್ಲ ಹಣಕಾಸಿನ ವ್ಯವಹಾರನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಇದರ ಜೊತೆಗೆ ಬ್ಯಾಂಕ್ ವ್ಯವಹಾರವನ್ನು ಮಾಡುತ್ತಾರೆ. ಮಹಿಳೆಯರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನ ತಿಳಿಯೋಣ.

ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ, ದೇಶದಲ್ಲಿ ಶೇ.35ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿವೆ. ಈ ಅಂಕಿ ಅಂಶವು ಮಹಿಳೆಯರು ಸಂಪೂರ್ಣವಾಗಿ ಆರ್ಥಿಕವಾಗಿ ಸ್ವತಂತ್ರರಾಗುವ ಕನಸು ಎಂದು ತೋರಿಸುತ್ತದೆ. ಅನೇಕ ಮಹಿಳೆಯರು ವಿವಿಧ ಕಾರಣಗಳಿಂದ ಕೆಲಸ ಕಳೆದುಕೊಳ್ಳುತ್ತಾರೆ. ಕೆಲವರು ಮಕ್ಕಳಾದ ನಂತರ ಕೆಲಸ ಮುಂದುವರಿಸಲು ಸಾಧ್ಯವಿಲ್ಲ. ಅಂತಹ ಜನರು ತಮ್ಮ ವೈಯಕ್ತಿಕ ಖಾತೆಗಳನ್ನು ಬಳಸುವುದನ್ನು ನಿಲ್ಲಿಸುತ್ತಾರೆ. ಇದು ಆರ್ಥಿಕ ಸ್ವಾತಂತ್ರ್ಯ ಕಳೆದುಕೊಂಡಂತೆ. ನಿಮ್ಮ ಬಳಿ ಯಾವುದೇ ಹಣವಿದ್ದರೂ ಅದನ್ನು ನಿಮ್ಮ ವೈಯಕ್ತಿಕ ಖಾತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ನೀವು 20, 30, 40 ಅಥವಾ 50 ವರ್ಷ ವಯಸ್ಸಿನವರಾಗಿರಲಿ, ವೈಯಕ್ತಿಕ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ನಿಮ್ಮ ಸ್ವಂತ ಹಣವನ್ನು ಉಳಿಸಲು ಮತ್ತು ಬಳಸಲು ನೀವು ಬಳಸಿಕೊಳ್ಳಬೇಕು.

ಪ್ರತ್ಯೇಕ ಉಳಿತಾಯ ಖಾತೆ ಏಕೆ ಅಗತ್ಯ?

ವೈಯಕ್ತಿಕ ಉಳಿತಾಯ ಖಾತೆಯು ಮಹಿಳೆಯರಿಗೆ ಆರ್ಥಿಕ ಭದ್ರತೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಪ್ರತ್ಯೇಕ ಉಳಿತಾಯ ಖಾತೆಯನ್ನು ಹೊಂದಿರುವುದು ಮಹಿಳೆಯರಿಗೆ ತಮ್ಮ ಹಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು, ಅವರ ಖರ್ಚನ್ನು ಮೇಲ್ವಿಚಾರಣೆ ಮಾಡಲು, ಅವರ ಉಳಿತಾಯ ಮತ್ತು ಹೂಡಿಕೆಗಳನ್ನು ಯೋಜಿಸಲು ಅನುವು ಮಾಡಿಕೊಡುತ್ತದೆ. ಇದು ಹಣಕಾಸಿನ ಗುರಿಗಳನ್ನು ಹೊಂದಿಸಲು ಮತ್ತು ಅವುಗಳನ್ನು ಸಾಧಿಸಲು ಶ್ರಮಿಸಲು ಸಹಾಯ ಮಾಡುತ್ತದೆ. ಮಹಿಳೆಯರ ಉಳಿತಾಯ ಖಾತೆಗಳಿಂದ ಅನೇಕ ಪ್ರಯೋಜನಗಳಿವೆ.

  • ಸರ್ಕಾರದ ಯೋಜನೆಗಳು ಮತ್ತು ಸಬ್ಸಿಡಿಗಳು

ಸರ್ಕಾರ ನೀಡುವ ಅನೇಕ ಯೋಜನೆಗಳಿಗೆ ಹಣ, ಸಬ್ಸಿಡಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ವೈಯಕ್ತಿಕ ಖಾತೆಯನ್ನು ಹೊಂದಿರುವ ಮಹಿಳೆಯರು ನೇರವಾಗಿ ಈ ಪ್ರಯೋಜನಗಳನ್ನು ಪಡೆಯಲು ಅನುಕೂಲವಾಗುತ್ತದೆ. ಇದು ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡುತ್ತದೆ.

  • ಸುರಕ್ಷಿತ ಉಳಿತಾಯ

ಮಹಿಳೆಯರಿಗೆ ತಮ್ಮ ಹಣವನ್ನು ಉಳಿಸಲು ವೈಯಕ್ತಿಕ ಬ್ಯಾಂಕ್ ಖಾತೆ ಸುರಕ್ಷಿತ ಮಾರ್ಗವಾಗಿದೆ. ತಮ್ಮ ಭವಿಷ್ಯಕ್ಕಾಗಿ ಉಳಿಸಬಹುದು. ತುರ್ತು ಸಂದರ್ಭದಲ್ಲಿ ಅವರು ಈ ಹಣವನ್ನು ಸುಲಭವಾಗಿ ಬಳಸಲು ಅವಕಾಶ ಇರುತ್ತದೆ.

  • ಹಣಕಾಸು ಯೋಜನೆ, ಹೂಡಿಕೆಗಳು

ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಆರಂಭಿಸಿರುವ ಹಲವು ಯೋಜನೆಗಳ ಲಾಭ ಪಡೆಯಲು ಬ್ಯಾಂಕ್ ಖಾತೆಯನ್ನು ಹೊಂದುವುದು ಅವಶ್ಯಕತವಾಗಿದೆ. ಮಹಿಳೆಯರು ತಮ್ಮಲ್ಲಿರುವ ಹಣವನ್ನು ಉಳಿಸಲು ಮತ್ತು ಅರ್ಹರಾಗಿರುವ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಹೊಂದಿರುತ್ತಾರೆ.

  • ಸ್ವಾತಂತ್ರ್ಯ, ಆತ್ಮವಿಶ್ವಾಸ

ಮಹಿಳೆಯರ ಸ್ವಂತ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಂಡಾಗ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಬ್ಯಾಂಕ್ ಖಾತೆಯನ್ನು ಹೊಂದಿರುವುದು ಅವರ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರನ್ನು ಸ್ವತಂತ್ರಗೊಳಿಸುತ್ತದೆ. ಇದು ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗುತ್ತದೆ.

  • ಮಹಿಳಾ ಉಳಿತಾಯ ಖಾತೆಗಳು

ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಮಹಿಳಾ ಉಳಿತಾಯ ಖಾತೆಗಳು ಉತ್ತಮವಾಗಿವೆ. ಮಹಿಳೆಯರ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇಡುವ ಅವಶ್ಯಕತೆಯೂ ಇಲ್ಲ. ಕೆಲವು ಬ್ಯಾಂಕ್‌ಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಅಲ್ಲದೆ, ಕೆಲವು ಬ್ಯಾಂಕ್‌ಗಳು ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಹೆಚ್ಚಿನ ಬಡ್ಡಿದರದೊಂದಿಗೆ ವಿಶೇಷ ಮಹಿಳಾ ಉಳಿತಾಯ ಖಾತೆಗಳನ್ನು ನೀಡುತ್ತವೆ.

ಹೆಚ್ಚಿನ ಬಡ್ಡಿ ದರಗಳು: ಸಾಮಾನ್ಯ ಉಳಿತಾಯ ಖಾತೆಗಳಿಗಿಂತ ಮಹಿಳಾ ಉಳಿತಾಯ ಖಾತೆಗಳು ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಇದು ಅವರ ಉಳಿತಾಯದ ಮೇಲೆ ಹೆಚ್ಚಿನ ಹಣವನ್ನು ಗಳಿಸಲು ಮತ್ತು ಅವರ ಆರ್ಥಿಕ ಗುರಿಗಳನ್ನು ವೇಗವಾಗಿ ತಲುಪಲು ಸಹಾಯ ಮಾಡುತ್ತದೆ.

ವೈಯಕ್ತಿಕ ಸೇವೆಗಳು: ಮಹಿಳೆಯರ ಉಳಿತಾಯ ಖಾತೆಗಳು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಸ್‌ಎಂಎಸ್‌ ಬ್ಯಾಂಕಿಂಗ್‌ನಂತಹ ಹೆಚ್ಚಿನ ವೈಯಕ್ತಿಕ ಸೇವೆಗಳನ್ನು ಹೊಂದಿವೆ. ಈ ಸೇವೆಗಳು ಖಾತೆಯ ಬಳಕೆಯನ್ನು ಸುಗಮಗೊಳಿಸುತ್ತದೆ.

ಕ್ಯಾಶ್ ಬ್ಯಾಕ್ ಆಫರ್‌ಗಳು: ಮಹಿಳೆಯರ ಉಳಿತಾಯ ಖಾತೆಗಳು ದಿನಸಿ, ಪೆಟ್ರೋಲ್, ಪ್ರಯಾಣ ಮುಂತಾದ ವಿವಿಧ ಖರೀದಿಗಳ ಮೇಲೆ ಕ್ಯಾಶ್ ಬ್ಯಾಕ್ ಕೊಡುಗೆಗಳನ್ನು ಹೊಂದಿವೆ. ದೈನಂದಿನ ಖರ್ಚುಗಳಿಗೆ ಹಣವನ್ನು ಉಳಿಸಲು ಇದು ಅವರಿಗೆ ಸಹಾಯ ಮಾಡುತ್ತದೆ.

ವಿಮಾ ಪ್ರಯೋಜನಗಳು: ಮಹಿಳಾ ಉಳಿತಾಯ ಖಾತೆಗಳು ಸಾಮಾನ್ಯವಾಗಿ ಆಕಸ್ಮಿಕ ಸಾವು ಮತ್ತು ಗಂಭೀರ ಅನಾರೋಗ್ಯಕ್ಕೆ ಸಹ-ವಿಮಾ ಪ್ರಯೋಜನಗಳನ್ನು ಹೊಂದಿವೆ. ಅಪಘಾತಗಳು ಅಥವಾ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಆರ್ಥಿಕ ರಕ್ಷಣೆಯನ್ನು ಪಡೆಯಲು ಸಹಾಯವಾಗುತ್ತವೆ.

mysore-dasara_Entry_Point