Brain Teaser: ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ ಒಟ್ಟು ಎಷ್ಟು ತ್ರಿಕೋನಗಳಿವೆ ಕಂಡು ಹಿಡಿಯಿರಿ, ನಿಮ್ಮ ಮೆದುಳಿನ ಸಾಮರ್ಥ್ಯಕ್ಕೆ ಇದೊಂದು ಸವಾಲ್
Triangle Puzzle: ಬ್ರೇನ್ ಟೀಸರ್ ನಮ್ಮ ಮೆದುಳಿಗೆ ಉತ್ತಮ ವ್ಯಾಯಾಮವಿದ್ದಂತೆ. ನೀವು ನಾವಿಲ್ಲಿ ಕೊಟ್ಟಿರುವ ಚಿತ್ರದಲ್ಲಿ ಒಟ್ಟು ಎಷ್ಟು ತ್ರಿಕೋನಗಳಿವೆ ಕಂಡು ಹಿಡಿಯಿರಿ. ಇದಕ್ಕೆ ಆದಷ್ಟು ಕಡಿಮೆ ಸಯದಲ್ಲಿ ಸರಿಯಾದ ಉತ್ತರ ನೀಡಿದರೆ ನಿಮ್ಮ ಮೆದುಳು ತುಂಬಾ ಚುರುಕಾಗಿದೆ ಎಂದು ಅರ್ಥ. ಮತ್ಯಾಕೆ ತಡ ಈಗಲೇ ನಿಮ್ಮ ಸಾಮರ್ಥ್ಯದ ಪರೀಕ್ಷೆ ಮಾಡಿಕೊಳ್ಳಿ.

ಬ್ರೇನ್ ಟೀಸರ್ ನಮ್ಮ ಮೆದುಳಿಗೆ ಉತ್ತಮ ವ್ಯಾಯಾಮವಿದ್ದಂತೆ. ತರ್ಕ, ಗಣಿತ, ಪದ, ದೃಶ್ಯ ಹೀಗೆ ಹಲವು ರೀತಿಯ ಮೆದುಳಿನ ಕಸರತ್ತುಗಳು ನಿಮಗೆ ಮಾಡಲು ಸಿಗುತ್ತದೆ. ಈ ಆಟಗಳನ್ನು ಆಡುವ ಮೂಲಕ ಸಮಸ್ಯೆ-ಪರಿಹರಿಸುವ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವ ಕೌಶಲ್ಯವನ್ನು ನಿಮ್ಮಲ್ಲಿ ನೀವು ಬೆಳೆಸಿಕೊಳ್ಳಬಹುದು. ಕೆಲವು ಒಗಟುಗಳು ಮತ್ತು ಗಣಿತ, ವೀಕ್ಷಣಾ ಕೌಶಲ್ಯ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಏಕಕಾಲದಲ್ಲಿ ಪರೀಕ್ಷಿಸುತ್ತವೆ. ಇವುಗಳನ್ನು ಪರಿಹರಿಸುವುದು ತುಂಬಾ ಕಷ್ಟ. ನೀವು ಅವುಗಳನ್ನು ಸರಿಯಾಗಿ ಮತ್ತು ಏಕಾಗ್ರತೆಯಿಂದ ಗಮನಿಸಿ. ಉತ್ತರ ಹುಡುಕಲು ಪ್ರಯತ್ನ ಮಾಡಬೇಕು. ಇಲ್ಲವಾದರೆ ನೀವು ಕೊಡುವ ಉತ್ತರ ಯಾವಾಗಲೂ ತಪ್ಪೇ ಆಗುತ್ತದೆ.
ಇದು ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ಸವಾಲು ಕೂಡ ಆಗಿದೆ. ನೀವು ಮೇಲ್ನೋಟಕ್ಕೆ ಇದರಲ್ಲಿ ಎಷ್ಟು ತ್ರಿಭುಜ ಇದೆ ಎಂದು ಹೇಳುವಿರಿ. ಆದರೆ ನೀವು ಅಂದುಕೊಂಡದ್ದು ಖಂಡಿತ ತಪ್ಪಾಗುತ್ತದೆ. ಮತ್ತೊಮ್ಮೆ ಆಲೋಚಿಸಿ ಸರಿಯಾದ ಉತ್ತರ ನೀಡಲು ಪ್ರಯತ್ನ ಮಾಡಿ. ನಾವು ಈ ಕೆಳಗಡೆ ಸರಿಯಾದ ಉತ್ತರವನ್ನೂ ನೀಡಿದ್ದೇವೆ ಗಮನಿಸಿ. ಪರಿಹರಿಸಿದರೆ ಮೆದುಳಿನ ಶಕ್ತಿಯು ಬಹಳಷ್ಟು ಸುಧಾರಿಸುತ್ತದೆ.
ಎಷ್ಟು ತ್ರಿಕೋನಗಳಿವೆ?
ಈ ಒಗಟು ಚಿತ್ರದಲ್ಲಿ ದೊಡ್ಡ ತ್ರಿಕೋನವಿದೆ. ಅದನ್ನು ಭಾಗಿಸಿದಾಗ, ಒಳಗೆ ಹೆಚ್ಚು ತ್ರಿಕೋನಗಳಿವೆ. ನೀಡಿರುವ ಫೋಟೋದಲ್ಲಿ ಒಟ್ಟು ತ್ರಿಕೋನಗಳ ಸಂಖ್ಯೆಯನ್ನು ಕಂಡುಹಿಡಿಯುವುದು ಈಗ ನಿಮಗೆ ಇರುವ ಟಾಸ್ಕ್ ಆಗಿರುತ್ತದೆ.
ಈ ಒಗಟಿಗೆ ಉತ್ತರ ಹುಡುಕಲು ತಾರ್ಕಿಕ ಚಿಂತನೆ ಹಾಗೂ ಸೃಜನಶೀಲತೆಯನ್ನು ಬಳಸಬೇಕು. ಚಿತ್ರವನ್ನು ಸಣ್ಣ ವಿಭಾಗಗಳಾಗಿ ವಿಂಗಡಿಸಿ ತ್ರಿಕೋನಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿ. ಪ್ರತಿಯೊಂದು ಮೂಲೆಯನ್ನು ಪರೀಕ್ಷಿಸಬೇಕು. ತಾರ್ಕಿಕ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅನ್ವಯಿಸಬೇಕು. ಇದು ಕ್ರಮೇಣ ವಿಭಿನ್ನ ಸನ್ನಿವೇಶಗಳನ್ನು ಊಹಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಸರಿಯಾದ ಉತ್ತರ ಏನು?
ಈ ಕಷ್ಟಕರವಾದ ಒಗಟು ಪರಿಹರಿಸಲು ಕೇವಲ 3 ಸೆಕೆಂಡುಗಳ ಕಾಲಾವಕಾಶವಿದೆ. ಎಷ್ಟು ತ್ರಿಕೋನಗಳಿವೆ ಎಂದು ಬೇಗ ಹೇಳಿ.
ಎ) 13, ಬಿ) 7, ಸಿ) 24, ಡಿ) 14 ಎಂಬ ನಾಲ್ಕು ಆಯ್ಕೆಗಳನ್ನು ನಾವು ನೀಡಿದ್ದೇವೆ.
ಅವುಗಳಲ್ಲಿ ಒಂದು ಸರಿಯಾದ ಉತ್ತರ ಇದೆ. ನೀವು ಸರಿಯಾದ ಉತ್ತರವನ್ನು ಕಂಡುಕೊಂಡಿದ್ದೀರಾ? ಹಾಗಾದರೆ ನಾವೀಗ ನೀಡಿದ ಉತ್ತರದಲ್ಲಿ ಅದು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ. ನೆನಪಿಡಿ ಈ ರೀತಿಯ ಒಗಟುಗಳು ಮೆದುಳನ್ನು ತುಂಬಾ ಮೋಸಗೊಳಿಸುತ್ತವ. ಆ ಕಾರಣ ಮತ್ತೊಮ್ಮೆ ಪರಿಶೀಲಿಸಿ ನೋಡಿ.
ಇಲ್ಲಿದೆ ಉತ್ತರ
ಈ ಒಗಟಿಗೆ ಸರಿಯಾದ ಉತ್ತರ 24. ನೀವು ದೊಡ್ಡ ತ್ರಿಕೋನದೊಳಗಿನ ವಿವಿಧ ಬದಿಗಳನ್ನು ಗುರುತಿಸಿದ್ದೀರಾ. ಇದು ಸರಿಯಾದ ಉತ್ತರ. ಆದರೆ ಹಲವರಿಗೆ ಇದಕ್ಕೆ ಉತ್ತರ ಸಿಗುವುದಿಲ್ಲ. ಒಬ್ಬಂಟಿಯಾಗಿ ಅದನ್ನು ಪರಿಹರಿಸಲು ನಿಮಗೆ ಕಷ್ಟವಾಗಿದ್ದರೆ, ನೀವು ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬಹುದು. ನೀವು ಇದನ್ನು ಆನಂದಿಸಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಅವರಿಗೆ ಸವಾಲು ಹಾಕಿ. ಇನ್ನಷ್ಟು ಇದೇ ರೀತಿ ಒಗಟಿಗಾಗಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.

ವಿಭಾಗ