Weight Loss Story: ದೇಹ ಫಿಟ್ ಆಗಿರಲು ವಿರಾಟ್ ಕೊಹ್ಲಿಯೇ ಪ್ರೇರಣೆ: 40 ಕೆ.ಜಿಗಿಂತ ಹೆಚ್ಚು ತೂಕ ಕಳೆದುಕೊಂಡ ಈ ವ್ಯಕ್ತಿ-fitness inspiration real life weight loss story virat kohli s fitness regime inspired prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Story: ದೇಹ ಫಿಟ್ ಆಗಿರಲು ವಿರಾಟ್ ಕೊಹ್ಲಿಯೇ ಪ್ರೇರಣೆ: 40 ಕೆ.ಜಿಗಿಂತ ಹೆಚ್ಚು ತೂಕ ಕಳೆದುಕೊಂಡ ಈ ವ್ಯಕ್ತಿ

Weight Loss Story: ದೇಹ ಫಿಟ್ ಆಗಿರಲು ವಿರಾಟ್ ಕೊಹ್ಲಿಯೇ ಪ್ರೇರಣೆ: 40 ಕೆ.ಜಿಗಿಂತ ಹೆಚ್ಚು ತೂಕ ಕಳೆದುಕೊಂಡ ಈ ವ್ಯಕ್ತಿ

120 ಕೆಜಿಗಿಂತ ಹೆಚ್ಚು ತೂಕವಿದ್ದ ಹೇಮಂತ್ ಎಂಬುವವರು2015ರಲ್ಲಿ ತನ್ನ ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸಿದರು. ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ತೆರಳಲು ಸಾಧ್ಯವಾಗದ ಕಾರಣ ತೂಕ ಇಳಿಕೆಗೆ ನಿರ್ಧರಿಸಿದ ಅವರು, ಆಹಾರ ಕ್ರಮವನ್ನು ಬದಲಾಯಿಸಿದ್ರು. ಜೊತೆಗೆ ದೇಹದ ಫಿಟ್‍ನೆಸ್‍ನತ್ತ ಗಮನಹರಿಸಿದ್ರು.

ಈ ವ್ಯಕ್ತಿಗೆ ತೂಕ ಇಳಿಕೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿಯೇ ಪ್ರೇರಣೆ.
ಈ ವ್ಯಕ್ತಿಗೆ ತೂಕ ಇಳಿಕೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿಯೇ ಪ್ರೇರಣೆ. (freepik)

ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯನ್ನು ಇಂದು ಬಹುತೇಕರು ಎದುರಿಸುತ್ತಿದ್ದಾರೆ. ಅದರಲ್ಲೂ ಆಹಾರ ಪ್ರಿಯರಿಗಂತೂ ತಮ್ಮ ತೂಕವನ್ನು ನಿರ್ವಹಿಸುವುದು ತುಂಬಾನೇ ಕಷ್ಟ. ಇಷ್ಟಪಟ್ಟಿದ್ದೆಲ್ಲಾ ಬೇಕಾಬಿಟ್ಟಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಆದರೆ, ಅದನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಇದೇ ರೀತಿ 35 ವರ್ಷದ ಹೇಮಂತ್ ರಾವ್ ಎಂಬುವವರು ತಿಂದು, ತಿಂದು ಅವರ ದೇಹದ ತೂಕ 120 ಕೆಜಿಗಳಷ್ಟಾಗಿತ್ತು. ಆಹಾರ ಪ್ರಿಯ ಆಗಿದ್ದರಿಂದ ಹಾಗೂ ಅತಿಯಾಗಿ ತಿನ್ನುತ್ತಿದ್ದರಿಂದ ಅವರ ತೂಕ ಹೆಚ್ಚುತ್ತಾ ಹೋಯ್ತು. ಒಂದು ದಿನ ಸ್ನೇಹಿತರ ಜೊತೆ ಚಾರಣಕ್ಕೆ ತೆರಳಬೇಕು ಎಂದು ಯೋಜಿಸಿದ್ದ ಅವರಿಗೆ ದೇಹದ ತೂಕವೇ ಮುಳುವಾಯಿತು. ಹೀಗಾಗಿ ತೂಕ ಇಳಿಕೆಯತ್ತ ಗಮನಹರಿಸಬೇಕಾಯ್ತು.

120 ಕೆಜಿಗಿಂತ ಹೆಚ್ಚು ತೂಕವಿದ್ದ ಹೇಮಂತ್ 2015ರಲ್ಲಿ ತನ್ನ ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸಿದರು. ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ತೆರಳಲು ಸಾಧ್ಯವಾಗದ ಕಾರಣ ಬದಲಾಗಲು ನಿರ್ಧರಿಸಿದ ಅವರು, ಆಹಾರ ಕ್ರಮವನ್ನು ಬದಲಾಯಿಸಿದ್ರು. ಜೊತೆಗೆ ದೇಹದ ಫಿಟ್‍ನೆಸ್‍ನತ್ತ ಗಮನಹರಿಸಿದ್ರು. ಪ್ರತಿದಿನ ವ್ಯಾಯಾಮ ಮಾಡುತ್ತಿದ್ದ ಹೇಮಂತ್, ವಾಕಿಂಗ್ ಮಾಡಲು ಪ್ರಾರಂಭಿಸಿದರು. ಕ್ರಮೇಣ ವಾಕಿಂಗ್ ಸಮಯವನ್ನು ಹೆಚ್ಚಿಸಿದರು. ಈ ರೀತಿ ಮಾಡುತ್ತಾ 15 ತಿಂಗಳಲ್ಲಿ ಬರೋಬ್ಬರಿ 42 ಕೆ.ಜಿ ತೂಕ ಇಳಿಸಿಕೊಂಡರಂತೆ. ನಂತರ ದೇಹದಾರ್ಢ್ಯದತ್ತ ಗಮನಹರಿಸಿದ ಅವರು 15 ಕೆಜಿ ತೂಕವನ್ನು ಹೆಚ್ಚಿಸಿಕೊಂಡರು. ಅಲ್ಲದೆ ದೇಹದಾರ್ಢ್ಯ ಸ್ಪರ್ಧೆಯಲ್ಲೂ ಭಾಗವಹಿಸಿದರು.

ವಿರಾಟ್ ಕೊಹ್ಲಿ ಪ್ರೇರಣೆ

ತೂಕ ಇಳಿಕೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿಯೇ ಪ್ರೇರಣೆ ಎಂದಿರುವ ಹೇಮಂತ್, ಕೊಹ್ಲಿಯ ದೃಢತೆ ಹಾಗೂ ಶಿಸ್ತು ತನ್ನ ಫಿಟ್ನೆಸ್ ಅನ್ನು ಪ್ರೇರೇಪಿಸಲು ಸಹಕಾರಿಯಾಯ್ತು ಎಂದಿದ್ದಾರೆ. ಫಿಟ್‌ನೆಸ್ ಎಂದರೆ ಕೇವಲ ದೈಹಿಕ ನೋಟ ಮಾತ್ರವಲ್ಲ, ಮಾನಸಿಕ ಗಟ್ಟಿತನ ಮತ್ತು ಶಿಸ್ತು ಕೂಡ ಎಂಬುದನ್ನು ಅರಿತಿದ್ದಾಗಿ ತಿಳಿಸಿದ್ದಾರೆ.

120 ಕೆಜಿ ತೂಕ ಹೊಂದಿದ್ದ ಹೇಮಂತ್ 15 ತಿಂಗಳುಗಳಲ್ಲಿ 78 ಕೆಜಿ ತೂಕಕ್ಕೆ ತಲುಪಿದ್ರು. ಹಾಗಂತ ತೂಕ ಇಳಿಕೆ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಅರ್ಹ ತರಬೇತುದಾರರನ್ನು ಹುಡುಕುವುದು, ಕೆಲಸ ಮತ್ತು ಕುಟುಂಬದ ಬದ್ಧತೆಗಳನ್ನು ಸಮತೋಲನಗೊಳಿಸುವುದು ಗಮನಾರ್ಹ ಸವಾಲಾಗಿತ್ತು. ಸ್ನೇಹಿತರು ಹಾಗೂ ಕುಟುಂಬಸ್ಥರು ತೂಕ ಇಳಿಕೆಯ ಪ್ರಯಾಣಕ್ಕೆ ಬೆಂಬಲವಾಗಿ ನಿಂತಿದ್ದರು. ದೇಹದ ಫಿಟ್ನೆಸ್ ಅನ್ನು ಕಾಪಾಡಲೇ ಬೇಕು ಎಂದು ದೃಢ ನಿರ್ಧಾರ ಮಾಡಿದ್ರು.

ತೂಕ ಇಳಿಕೆ ಪ್ರಯಾಣದಲ್ಲಿ ಅನುಸರಿಸಿದ ಆಹಾರ ಕ್ರಮ ಮತ್ತು ವ್ಯಾಯಾಮದ ನಿಯಮಗಳು

ಆಮ್ಲೆಟ್‌, ಬಿರಿಯಾನಿ, ಪನ್ನೀರ್, ಹಣ್ಣುಗಳು ಮತ್ತು ಸೊಪ್ಪು ತರಕಾರಿಗಳನ್ನು ಒಳಗೊಂಡಂತೆ ಸರಳವಾದ ಆಹಾರವನ್ನು ಸೇವಿಸುತ್ತಿದ್ದರು. ಡೈರಿ ಉತ್ಪನ್ನಗಳು, ಪ್ರೊಟೀನ್‍ಗಾಗಿ ಕೋಳಿ, ಮೀನು, ಮೊಟ್ಟೆ ಹಾಗೂ ಕಾರ್ಬೋಹೈಡ್ರೇಟ್‌ಗಳಿಗಾಗಿ ಧಾನ್ಯಗಳು ಮತ್ತು ಹಣ್ಣುಗಳನ್ನು ಸೇವಿಸುತ್ತಿದ್ದರು. ಜೊತೆಗೆ ವ್ಯಾಯಾಮವನ್ನು ಕೂಡ ಮಾಡುತ್ತಿದ್ದರು.

ತೂಕ ನಷ್ಟದ ವೇಳೆ ಹಿನ್ನಡೆಯುಂಟಾಗುವುದು ಸಹಜ. ಹೀಗಾಗಿ ತಾಳ್ಮೆಯಿಂದ ತನ್ನ ಹೆಜ್ಜೆಯನ್ನು ಮುಂದಿಡುತ್ತಿದ್ದೆ ಎಂದು ಹೇಳಿರುವ ಹೇಮಂತ್, ಮೊದಲಿಗೆ ಚಿಕ್ಕದಾಗಿ ಪ್ರಾರಂಭಿಸಿ ಗುರಿಯತ್ತ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದ್ರು. ದೇಹಕ್ಕೆ ವಿಶ್ರಾಂತಿ ಅಗತ್ಯವಿರುವುದರಿಂದ ಸಾಕಷ್ಟು ನಿದ್ದೆ ಮಾಡಬೇಕು ಹಾಗೂ ಜೀವನಶೈಲಿಯ ಬದಲಾವಣೆಗಳ ಮೇಲೆ ಕೇಂದ್ರೀಕರಿಸಬೇಕು. ಸರಿಯಾದ ಮಾರ್ಗದಲ್ಲಿ ನಡೆಯಲು ತರಬೇತುದಾರರನ್ನು ಆಯ್ದುಕೊಳ್ಳಬಹುದು ಎಂದು ಹೇಮಂತ್ ಸಲಹೆ ನೀಡಿದ್ದಾರೆ.

ಇದೀಗ ಆನ್‌ಲೈನ್ ಫಿಟ್‌ನೆಸ್ ತರಬೇತುದಾರರಾಗಿರುವ ಹೇಮಂತ್, ಫಿಟ್ನೆಸ್‍ನತ್ತ ಗಮನಹರಿಸಿರುವ 2000ಕ್ಕೂ ಹೆಚ್ಚು ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಟ್ರೆಕ್ಕಿಂಗ್‍ಗಳು, ಹೊರಾಂಗಣ ಚಟುವಟಿಕೆಯನ್ನು ಆನಂದಿಸುತ್ತಿರುವ ಅವರು, ಸುಧಾರಿತ ಆರೋಗ್ಯವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.