Fitness Tips: ನೀವು ಫಿಟ್ನೆಸ್‌ಪ್ರಿಯರಾ? ಹಾಗಿದ್ರೆ ವಯಸ್ಸು 40 ದಾಟಿದ ನಂತರ ಈ ವ್ಯಾಯಾಮಗಳಿಂದ ಆದಷ್ಟು ದೂರ ಇದ್ದುಬಿಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Fitness Tips: ನೀವು ಫಿಟ್ನೆಸ್‌ಪ್ರಿಯರಾ? ಹಾಗಿದ್ರೆ ವಯಸ್ಸು 40 ದಾಟಿದ ನಂತರ ಈ ವ್ಯಾಯಾಮಗಳಿಂದ ಆದಷ್ಟು ದೂರ ಇದ್ದುಬಿಡಿ

Fitness Tips: ನೀವು ಫಿಟ್ನೆಸ್‌ಪ್ರಿಯರಾ? ಹಾಗಿದ್ರೆ ವಯಸ್ಸು 40 ದಾಟಿದ ನಂತರ ಈ ವ್ಯಾಯಾಮಗಳಿಂದ ಆದಷ್ಟು ದೂರ ಇದ್ದುಬಿಡಿ

Fitness Tips: ನಾವು ಫಿಟ್‌ ಆಗಿರಬೇಕೆಂದರೆ ಆಹಾರದ ಜೊತೆ ವರ್ಕೌಟ್‌ ಕೂಡಾ ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಮಾಡುವ ನಾವು ವಯಸ್ಸು 40 ದಾಟುತ್ತಿದ್ದಂತೆ ಕೆಲವೊಂದು ವ್ಯಾಯಾಮಗಳಿಂದ ದೂರ ಉಳಿಯಬೇಕು. ಇದನ್ನು ಪಾಲಿಸಿದರೆ ಮುಂದೆ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು.

40ರ ನಂತರ ಕೆಲವೊಂದು ವ್ಯಾಯಾಮಗಳಿಂದ ದೂರ ಇದ್ದರೆ ಆರೋಗ್ಯಕ್ಕೆ ಒಳಿತು
40ರ ನಂತರ ಕೆಲವೊಂದು ವ್ಯಾಯಾಮಗಳಿಂದ ದೂರ ಇದ್ದರೆ ಆರೋಗ್ಯಕ್ಕೆ ಒಳಿತು (PC: Unsplash)

Workout after 40 : ಕೆಲವು ರೀತಿಯ ವ್ಯಾಯಾಮಗಳನ್ನು 40 ವರ್ಷಗಳ ನಂತರ ಮಾಡಬಾರದು. ಹಾಗೆ ಮಾಡಿದರೆ ಹಲವು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಲವತ್ತು ವರ್ಷಗಳ ನಂತರ ಯಾವ ವ್ಯಾಯಾಮಗಳನ್ನು ಮಾಡಬಾರದು ಎಂಬುದನ್ನು ಪರಿಶೀಲಿಸಿ.

ಫಿಟ್ ಆಗಿರಲು ನಾವು ಪ್ರತಿದಿನ ವ್ಯಾಯಾಮ ಮಾಡುತ್ತೇವೆ. ಅನೇಕ ಜನರು ಜಿಮ್‌ಗೆ ಹೋಗಿ ಅಲ್ಲಿರುವ ವ್ಯಾಯಾಮ ಉಪಕರಣಗಳ ಮೂಲಕ ವ್ಯಾಯಾಮ ಮಾಡಿದರೆ ಇನ್ನೂ ಕೆಲವರು ವಾಕಿಂಗ್‌, ಜಾಗಿಂಗ್‌, ಮನೆಯಲ್ಲೇ ವ್ಯಾಯಾಮ ಮಾಡುತ್ತಾರೆ. ಆದರೆ ಒಂದು ವಿಚಾರ ಗಮನದಲ್ಲಿಡಿ. 40 ವರ್ಷ ದಾಟಿದ ನಂತರ ನೀವು ಕೆಲವೊಂದು ವ್ಯಾಯಾಮಗಳನ್ನು ಮಾಡಬಾರದು. ಆ ವ್ಯಾಯಾಮಗಳನ್ನು ದೀರ್ಘಕಾಲದವರೆಗೆ ಮಾಡಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಯಸ್ಸಾದಂತೆ, ನಮ್ಮ ದೇಹವು ಬದಲಾವಣೆಗಳಿಗೆ ಒಳಗಾಗುತ್ತದೆ. ಆದ್ದರಿಂದ ನಮ್ಮ ವಯಸ್ಸಿಗೆ ತಕ್ಕಂತೆ ಜೀವನಶೈಲಿ ಮತ್ತು ದೈನಂದಿನ ಅಭ್ಯಾಸಗಳನ್ನು ಕೂಡಾ ಬದಲಾವಣೆ ಮಾಡಿಕೊಳ್ಳಬೇಕು.

ನಿರ್ದಿಷ್ಟ ವಯಸ್ಸನ್ನು ಮೀರಿ ಕೆಲವು ವ್ಯಾಯಾಮಗಳನ್ನು ಮಾಡುವುದರಿಂದ ಗಂಭೀರವಾದ ಗಾಯಗಳಿಗೆ ಕಾರಣವಾಗಬಹುದು. ಪ್ರತಿಯೊಬ್ಬರೂ ವಯಸ್ಸಿಗೆ ಸೂಕ್ತವಾದ ವ್ಯಾಯಾಮಗಳನ್ನು ಮಾಡಬೇಕು. 40 ವರ್ಷಗಳ ನಂತರ ಯಾವ ವ್ಯಾಯಾಮಗಳನ್ನು ಮಾಡಬಾರದು ಎಂಬುದನ್ನು ತಿಳಿಯೋಣ.

ಈ ವ್ಯಾಯಾಮಗಳನ್ನು ನಿಲ್ಲಿಸಿ

  • ಕ್ರಂಚಸ್ ಮತ್ತು ಇತರ ವ್ಯಾಯಾಮಗಳು ದೇಹವನ್ನು ರೂಪಿಸಲು ಮತ್ತು ಅನಗತ್ಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ನೀವು 40 ದಾಟಿದ ನಂತರ ಈ ವ್ಯಾಯಾಮ ಮಾಡುವುದು ಸುರಕ್ಷಿತವಲ್ಲ. ಇದರಿಂದ ಬೆನ್ನುನೋವಿನ ಸಮಸ್ಯೆಗಳು ಉಂಟಾಗಬಹುದು. ಕ್ರಂಚಸ್ ಮಾಡಿದ ನಂತರ ಅನೇಕ ಜನರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲ ಕುತ್ತಿಗೆಯ ಸೆಳೆತಕ್ಕೂ ಕಾರಣವಾಗುತ್ತದೆ.
  • ಕಾರ್ಡಿಯೋ ಆರೋಗ್ಯಕ್ಕೆ ಒಳ್ಳೆಯದು. ಆದರೆ ತೀವ್ರವಾದ ಕಾರ್ಡಿಯೋ ವ್ಯಾಯಾಮಗಳು ಯಾರಿಗೂ ಒಳ್ಳೆಯದಲ್ಲ. ಅದರಲ್ಲೂ 40 ನೇ ವಯಸ್ಸಿನಲ್ಲಿ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಹುರುಪಿನ ವ್ಯಾಯಾಮ ಕಷ್ಟವಾಗಬಹುದು. 40 ವರ್ಷ ಮೇಲ್ಪಟ್ಟವರು ಹೆಚ್ಚು ಕಾರ್ಡಿಯೋ ಮಾಡಬಾರದು.

ಇದನ್ನೂ ಓದಿ: ಅಯ್ಯೋ, ಹೊಟ್ಟೆ ಬೊಜ್ಜು ಕರಗ್ತಾನೇ ಇಲ್ಲ ಅನ್ನೋರು ಈ 7 ವ್ಯಾಯಾಮಗಳನ್ನು ಮಾಡಿ ನೋಡಿ

  • ನಮಗೆ ವಯಸ್ಸಾದಂತೆ, ಕಾಲುಗಳಿಗೆ ತೊಂದರೆ ಉಂಟಾಗುತ್ತವೆ. ಹೆಚ್ಚು ತೂಕವನ್ನು ಎತ್ತುವಾಗ, ಮೊಣಕಾಲುಗಳು ಮತ್ತು ಮೊಣಕೈಗೆ ತೊಂದರೆ ಆಗಬಹುದು. ಆದ್ದರಿಂದ ಆ ರೀತಿಯ ವ್ಯಾಯಾಮಗಳಿಂದ ದೂರವಿರಿ.
  • 40 ವರ್ಷ ದಾಟಿದ ನಂತರ ನೀವು ಮಾಡಬಾರದ ವ್ಯಾಯಾಮಗಳಲ್ಲಿ ಸ್ಕ್ವಾಟ್‌ ಕೂಡಾ ಒಂದು. ಈ ವ್ಯಾಯಾಮ ಮಾಡುವುದು ಬಹಳ ಉಪಯುಕ್ತ. ಆದರೆ 40 ರ ನಂತರ ಸ್ಕ್ವಾಟ್ ಮಾಡುವುದು ಸ್ನಾಯು ಹಾನಿ ಮತ್ತು ಗಾಯಗಳಿಗೆ ಕಾರಣವಾಗಬಹುದು.
  • ಜಿಮ್‌ನಲ್ಲಿ ನೀವು ಮಾಡಬಹುದಾದ ಕೆಲವು ಗಂಭೀರ ವ್ಯಾಯಾಮಗಳಲ್ಲಿ ಡೆಡ್‌ಲಿಫ್ಟ್ ಒಂದಾಗಿದೆ. ಈ ವ್ಯಾಯಾಮವನ್ನು ಫಿಟ್ನೆಸ್ ತರಬೇತುದಾರರಿಂದ ಟ್ರೈನಿಂಗ್‌ ಪಡೆದೇ ಮಾಡಬೇಕು. ಈ ವ್ಯಾಯಾಮ ಮಾಡಲು ಬಹಳ ಚೆನ್ನಾಗಿರುತ್ತದೆ. ಆದರೆ ವಯಸ್ಸು ಏರುತ್ತಿದ್ದಂತೆ ಅದಕ್ಕೆ ಗುಡ್ ಬೈ ಹೇಳಲೇಬೇಕು. ಇದು ಕೇವಲ ಬೆನ್ನಿನ ಮೇಲೆ ಪರಿಣಾಮ ಬೀರುವುದಿಲ್ಲ. ಕಾಲುಗಳಿಗೂ ಸಮಸ್ಯೆ ಆಗುತ್ತದೆ.

ಇದನ್ನೂ ಓದಿ: ಜಿಮ್‌ಗೆ ಹೋಗದೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ

Whats_app_banner