Weight loss story: ತೂಕ ಇಳಿಸಲು ಪ್ರಯತ್ನಿಸುತ್ತಿದ್ರೂ ಸಾಧ್ಯವಾಗುತ್ತಿಲ್ವಾ: ಈ ಉದ್ಯಮಿಯ ಸ್ಫೂರ್ತಿಯ ಕಥೆ ಕೇಳಿದ್ರೆ ಅಚ್ಚರಿ ಪಡುವಿರಿ-fitness tips for weight loss weight loss story man loses 60 kg in haryana weight loss diet plan prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Story: ತೂಕ ಇಳಿಸಲು ಪ್ರಯತ್ನಿಸುತ್ತಿದ್ರೂ ಸಾಧ್ಯವಾಗುತ್ತಿಲ್ವಾ: ಈ ಉದ್ಯಮಿಯ ಸ್ಫೂರ್ತಿಯ ಕಥೆ ಕೇಳಿದ್ರೆ ಅಚ್ಚರಿ ಪಡುವಿರಿ

Weight loss story: ತೂಕ ಇಳಿಸಲು ಪ್ರಯತ್ನಿಸುತ್ತಿದ್ರೂ ಸಾಧ್ಯವಾಗುತ್ತಿಲ್ವಾ: ಈ ಉದ್ಯಮಿಯ ಸ್ಫೂರ್ತಿಯ ಕಥೆ ಕೇಳಿದ್ರೆ ಅಚ್ಚರಿ ಪಡುವಿರಿ

46 ವರ್ಷದ ಆಶಿಶ್ ಸಚ್‍ದೇವ್ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಅಧಿಕ ರಕ್ತದೊತ್ತಡ, ಕೀಲು ನೋವು, ಮರೆವಿನ ಕಾಯಿಲೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಯ್ತು.ತೂಕ ಇಳಿಸಲು ದೃಢನಿರ್ಧಾರ ಕೈಗೊಂಡ ಅವರು ಬರೋಬ್ಬರಿ 60 ಕೆಜಿಗೆ ತೂಕ ಇಳಿಸಿಕೊಂಡಿದ್ದಾರೆ. ಇವರ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ:

ತೂಕ ಇಳಿಸಲು ಮುಂದಾದ ಆಶಿಶ್ ಬರೋಬ್ಬರಿ 60 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇವರ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ:
ತೂಕ ಇಳಿಸಲು ಮುಂದಾದ ಆಶಿಶ್ ಬರೋಬ್ಬರಿ 60 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇವರ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ:

ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಇಂದು ಅನೇಕ ಮಂದಿ ಬಳಲುತ್ತಿದ್ದಾರೆ. ಆಹಾರ ಕ್ರಮ, ಫಿಟ್ನೆಸ್ ಮುಖಾಂತರ ತಮ್ಮ ತೂಕವನ್ನು ಇಳಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇದರಲ್ಲಿ ಹರಿಯಾಣ ಮೂಲದ ಉದ್ಯಮಿ ಆಶಿಶ್ ಸಚ್‍ದೇವ್ ಅವರೂ ಕೂಡ ಒಬ್ಬರು. 46 ವರ್ಷದ ಆಶಿಶ್ ಸಚ್‍ದೇವ್ ಸುಮಾರು 140 ಕೆಜಿ ತೂಕವನ್ನು ಹೊಂದಿದ್ದರು. ಇದರಿಂದ ಅಪಾರ ಸಂಕಷ್ಟ ಅನುಭವಿಸಿದ್ದ ಅವರು, ಅಧಿಕ ರಕ್ತದೊತ್ತಡ, ಕೀಲು ನೋವು, ಮರೆವಿನ ಕಾಯಿಲೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಯ್ತು. ಅಷ್ಟೇ ಅಲ್ಲ, ತನ್ನ ಸೈಝ್‍ಗೆ ಸರಿಯಾಗಿ ಬಟ್ಟೆಗಳು ಸಿಗದ ಕಾರಣ ಹರಿಯಾಣದಿಂದ ದೆಹಲಿಗೆ ಉಡುಗಳನ್ನು ಖರೀದಿಸಲೆಂದೇ ಪ್ರಯಾಣಿಸಬೇಕಾಗಿತ್ತು. ಇದರಿಂದ ದೃಢನಿರ್ಧಾರ ಮಾಡಿದ ಆಶಿಶ್ ತೂಕ ಇಳಿಸಲು ಮುಂದಾದ್ರು. ಬರೋಬ್ಬರಿ ಎರಡೂವರೆ ವರ್ಷದ ಬಳಿಕ 60 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇವರ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ:

ಹೇಗಿತ್ತು ಆಶಿಶ್ ಸಚ್‍ದೇವ್‍ರ ತೂಕ ಇಳಿಕೆ ಪ್ರಯಾಣ

ಆರ್ಟ್ ಆಫ್ ಲಿವಿಂಗ್ ಮೂಲಕ ಆಧ್ಯಾತ್ಮಿಕತೆಯತ್ತ ಆಶಿಶ್ ಚಿತ್ತ ಹರಿಸಿದ್ರು. ಇದು ಅವರ ದೃಷ್ಟಿಕೋನ, ಮೌಲ್ಯಗಳು ಮತ್ತು ಜೀವನದ ವಿಧಾನವನ್ನು ಬದಲಾಯಿಸುವಲ್ಲಿ ಸಹಕಾರಿಯಾಯಿತು. ಧ್ಯಾನ ಮಾಡಲು ಪ್ರಾರಂಭಿಸಿದ ಅವರು ತನ್ನ ದೌರ್ಬಲ್ಯಗಳ ಬಗ್ಗೆ ಅರಿತುಕೊಂಡರಂತೆ. ತೂಕ ಇಳಿಸುವ ಪ್ರಯಾಣದಲ್ಲಿ ಆಧ್ಯಾತ್ಮಿಕತೆಯು ಮುನ್ನುಡಿಯಾಯಿತು ಎಂಬುದಾಗಿ ಹೇಳಿದ್ದಾರೆ.

ಆಶಿಶ್ ಸಚ್‍ದೇವ್ ಅವರ ತೂಕ ಇಳಿಕೆಯ ಪ್ರಯಾಣವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ತನ್ನ ಕಠಿಣ ಅಭ್ಯಾಸಗಳ ಹೊರತಾಗಿಯೂ 10 ತಿಂಗಳಲ್ಲಿ ಅವರು ಕಳೆದುಕೊಂಡಿದ್ದು ಕೇವಲ 1 ಕೆಜಿ ತೂಕ ಅಂದ್ರೆ ನೀವು ನಂಬಲೇಬೇಕು. ಆದರೆ, ಮರಳಿ ಯತ್ನವ ಮಾಡು ಎಂಬ ಗಾದೆ ಮಾತಿನಂತೆ ತನ್ನ ಪ್ರಯತ್ನವನ್ನು ಬಿಡದ ಅವರು ಸತತ ಕಠಿಣ ಪರಿಶ್ರಮದಿಂದ ನಂಬಲಾಗದ ಫಲಿತಾಂಶವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.

ಆಶಿಶ್ ಮಾಡಿದ ಜೀವನಶೈಲಿಯ ಬದಲಾವಣೆಗಳು

ತೂಕ ಇಳಿಕೆ ಪ್ರಯಾಣದ ವೇಳೆ ತನ್ನ ಜೀವನಶೈಲಿಯಲ್ಲಿ ಅವರು ಕೇಂದ್ರೀಕರಿಸಿದ್ದು ಮುಖ್ಯವಾಗಿ ಎರಡು ವಿಷಯಗಳು ಏನು ಹಾಗೂ ಆಹಾರ ಕ್ರಮ ಹೇಗಿತ್ತು ಎಂಬುದು ಇಲ್ಲಿದೆ:

1. ರಾತ್ರಿ ಬೇಗ ನಿದ್ದೆಗೆ ಜಾರುವುದು, ಬೆಳಗ್ಗೆ ಬೇಗನೇ ಎದ್ದೇಳುವುದು.

2. ಜಂಕ್ ಫುಡ್ ಮತ್ತು ಸಕ್ಕರೆ ತಿನ್ನದಿರುವುದು.

ಉಪಹಾರ: 4 ಮೊಟ್ಟೆಯ ಬಿಳಿಭಾಗ ಮತ್ತು 2 ಸಂಪೂರ್ಣ ಮೊಟ್ಟೆ, ಓಟ್ಸ್ ಅಥವಾ ಅವಲಕ್ಕಿ.

ಮಧ್ಯಾಹ್ನದ ಊಟ: ಸಲಾಡ್ ಮತ್ತು ಹಣ್ಣುಗಳು ಜೊತೆಗೆ 1 ಬೌಲ್ ತರಕಾರಿಗಳು ಹಾಗೂ 1 ಬೌಲ್ ಮೊಸರು

ರಾತ್ರಿ ಭೋಜನ: 4 ಮೊಟ್ಟೆಯ ಬಿಳಿಭಾಗ ಮತ್ತು 2 ಸಂಪೂರ್ಣ ಮೊಟ್ಟೆಗಳು, 1 ಬೌಲ್ ತರಕಾರಿಗಳು ಅಥವಾ ದಾಲ್ ಹಾಗೂ ಸಲಾಡ್‌ಗಳೊಂದಿಗೆ 2 ಮಲ್ಟಿಗ್ರೇನ್ ರೊಟ್ಟಿ (ಸಂಜೆ 7 ಗಂಟೆಗೆ ರಾತ್ರಿ ಊಟ ಮಾಡುತ್ತಿದ್ದರು).

ತಾಲೀಮು ಪೂರ್ವ ಊಟ: ರೈಸ್ ಕೇಕ್ ಮತ್ತು ಪೀನಟ್ ಬಟರ್

ತಾಲೀಮು ನಂತರದ ಊಟ: ಪ್ರೊಟೀನ್ ಶೇಕ್ ಮತ್ತು ಒಣ ಹಣ್ಣುಗಳು.

ಕಠಿಣ ಆಹಾರ ಕ್ರಮ ಹೊರತುಪಡಿಸಿ ಕೆಲವೊಮ್ಮೆ ಏನಾದರೂ ತಿನ್ನಬೇಕು ಅನಿಸಿದಾಗ ಸಕ್ಕರೆ ಅಂಶ ಇರುವ ಆಹಾರ ಬಿಟ್ಟು ಉಳಿದಿದ್ದೆಲ್ಲವನ್ನು ತಿನ್ನುತ್ತಿದ್ದೆ ಎಂದು ಆಶಿಶ್ ವಿವರಿಸಿದ್ದಾರೆ.

ತಾಲೀಮು ದಿನಚರಿ

ಸಚ್‌ದೇವ ಅವರು ಕಠಿಣ ತಾಲೀಮನ್ನು ಅಭ್ಯಾಸ ಮಾಡುತ್ತಿದ್ದರು. ವ್ಯಾಯಾಮ ದಿನಚರಿಯಲ್ಲಿ 3-4 ದಿನಗಳ ಶಕ್ತಿ ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, 1-2 ದಿನ ಸೈಕ್ಲಿಂಗ್ ಮತ್ತು ಓಟ ಹಾಗೂ ಯೋಗಕ್ಕಾಗಿ ಒಂದು ದಿನವನ್ನು ಮೀಸಲಿಡುತ್ತಿದ್ದರು.

ನಿಯಮಿತವಾಗಿ ವ್ಯಾಯಾಮ ಮಾಡುವುದರ ಹೊರತಾಗಿ, ದೇಹಕ್ಕೆ ವಿಶ್ರಾಂತಿ, ಚೇತರಿಕೆ ಮತ್ತು ನಿದ್ದೆಯ ಪ್ರಾಮುಖ್ಯತೆಯನ್ನು ಸಚ್‍ದೇವ್ ಅವರು ಒತ್ತಿ ಹೇಳಿದ್ದಾರೆ. ದಿನವಿಡೀ ಉಲ್ಲಾಸದಿಂದಿರಲು ಹಾಗೂ ತೂಕ ಇಳಿಕೆಯ ಪ್ರಯಾಣಕ್ಕೆ ನಿದ್ದೆಯ ಅವಶ್ಯಕತೆಯೂ ಬಹಳ ಮುಖ್ಯ ಎಂದು ತಿಳಿಸಿದ್ದಾರೆ.

ದೃಢ ನಿರ್ಧಾರ ಹೊಂದಿದ್ದರೆ ಎಲ್ಲವನ್ನೂ ಸಾಧಿಸಬಹುದು. ಜೀವನದಲ್ಲಿ ಎಲ್ಲದರ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸುವ ಮೂಲಕ ತಾನು ಪ್ರೇರಿತನಾಗಿರುತ್ತೇನೆ ಎಂದು ಆಶಿಶ್ ತಿಳಿಸಿದ್ದಾರೆ. ನಮ್ಮ ಸುತ್ತಲಿನ ಪ್ರತಿಯೊಬ್ಬ ವ್ಯಕ್ತಿಯ ಸಕಾರಾತ್ಮಕ ಅಂಶಗಳನ್ನು ಕಲಿಯಬೇಕು. ಈ ರೀತಿ ಮಾಡುವುದರಿಂದ ಪ್ರತಿದಿನ ಹೊಸ ಅಭ್ಯಾಸಗಳನ್ನು ಮಾಡಲು ಸಹಾಯಕವಾಗುತ್ತದೆ ಎಂಬುಗು ಸಚ್ದೇವ್ ಅವರ ಮಾತು. ಒಟ್ಟಿನಲ್ಲಿ ಸಮರ್ಪಣೆ ಮತ್ತು ಕಠಿಣ ಪರಿಶ್ರಮವಿದ್ದರೆ ಏನೂ ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಸಚ್ದೇವ್ ಉತ್ತಮ ಉದಾಹರಣೆಯಾಗಿದ್ದಾರೆ.