ಕನ್ನಡ ಸುದ್ದಿ  /  Lifestyle  /  Fitness Tips Health News Tips For Yoga Learners Started Learning Yoga Then Practice These 8 Postures First Rst

Yoga Practice: ಯೋಗ ಕಲಿಯೋಕೆ ಆರಂಭ ಮಾಡಿದ್ದೀರಾ; ಹಾಗಿದ್ರೆ ಈ 8 ಭಂಗಿಗಳನ್ನು ಮೊದಲು ಅಭ್ಯಾಸ ಮಾಡಿ

ಫಿಟ್‌ನೆಸ್‌ ಕಾಯ್ದುಕೊಂಡು, ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಯೋಗವು ಎಲ್ಲಾ ವಯಸ್ಸಿನವರಿಗೂ ಯೋಗ್ಯವಾದದ್ದು, ನೀವು ಇದೇ ಮೊದಲ ಬಾರಿಗೆ ಯೋಗಾಭ್ಯಾಸ ಆರಂಭಿಸಿದ್ದರೆ, ಈ 8 ಭಂಗಿಗಳನ್ನು ಮೊದಲು ಅಭ್ಯಾಸ ಮಾಡಿ.

ಯೋಗ ಕಲಿಯೋರಿಗೆ ಟಿಪ್ಸ್‌
ಯೋಗ ಕಲಿಯೋರಿಗೆ ಟಿಪ್ಸ್‌

ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಇತ್ತೀಚಿನ ಜನರ ಮುಂದಿರುವ ಬಹುದೊಡ್ಡ ಸವಾಲು. ಬೇಡವೆಂದರೂ ದೇಹತೂಕ ಹೆಚ್ಚಿದಾಗ ಫಿಟ್ನೆಸ್‌ ಪಯಣವನ್ನು ಆರಂಭಿಸಲೇಬೇಕಾಗುತ್ತದೆ. ಫಿಟ್‌ನೆಸ್‌ ಜರ್ನಿಯ ಆರಂಭದಲ್ಲಿ ಯಾವ ರೀತಿಯ ವ್ಯಾಯಾಮಗಳನ್ನ ಆಯ್ಕೆ ಮಾಡಿಕೊಳ್ಳಬೇಕು, ಯೋಗ ಬೆಸ್ಟೋ, ವ್ಯಾಯಾಮ ಬೆಸ್ಟೋ, ಇಂತಹ ಗೊಂದಲಗಳು ಕಾಡುವುದು ಸಹಜ. ಫಿಟ್‌ನೆಸ್‌ ಕಾಯ್ದುಕೊಳ್ಳುವವರಿಗೆ ಹಲವು ಮಾರ್ಗಗಳಿದ್ದರೂ ಯೋಗ ಅದರಲ್ಲಿ ಅತ್ಯುತ್ತಮ ಎಂಬುದು ಸುಳ್ಳಲ್ಲ. ಇದರಿಂದ ದೇಹ ಹಾಗೂ ಮನಸ್ಸು ಎರಡೂ ಆರೋಗ್ಯದಿಂದಿರುತ್ತದೆ. ದೇಹ ಹಾಗೂ ಮನಸ್ಸಿನ ನಡುವೆ ಸಮತೋಲನ ಸಾಧಿಸಲು ಯೋಗ ಉತ್ತಮ. ಯೋಗದ ಆಸನಗಳು, ಪ್ರಾಣಾಯಾಮ, ಧಾನ್ಯ ಈ ಎಲ್ಲವೂ ನಮ್ಮ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುವುದರಲ್ಲಿ ಅನುಮಾನವಿಲ್ಲ. ನೀವು ಮೊದಲ ಬಾರಿ ಯೋಗಾಭ್ಯಾಸ ಮಾಡುತ್ತಿದ್ದರೆ ಈ 8 ಭಂಗಿಗಳಿಂದ ಆರಂಭಿಸಿ.

ಪರ್ವತ ಭಂಗಿ

ಇದನ್ನು ತಡಾಸನ ಎಂದೂ ಕರೆಯುತ್ತಾರೆ. ಇದು ಯೋಗ ಭಂಗಿಯ ಬಗ್ಗೆ ಅರಿವು ಮೂಡಿಸುತ್ತದೆ. ಭಂಗಿಯ ಸಮತೋಲನವನ್ನು ಕಾಪಾಡುತ್ತದೆ. ಇದು ತುದಿಗಾಲಿನಲ್ಲಿ ನಿಂತು ಎರಡೂ ಕೈಗಳನ್ನು ಮೇಲಕೆತ್ತಿ ನಿಲ್ಲುವ ವಿಧಾನವಾಗಿದೆ.

ಮಗುವಿನ ಭಂಗಿ

ಇದನ್ನು ಬಾಲಾಸನ ಎಂದೂ ಕರೆಯುತ್ತಾರೆ. ಇದು ವಿಶ್ರಾಂತಿಯ ಭಂಗಿ ಕೂಡ ಆಗಿದೆ. ಎರಡೂ ಕಾಲುಗಳನ್ನು ಹಿಂದಕ್ಕೆ ಮಡಿಸಿ, ಕಾಲಿನ ಮೇಲೆ ಕೂತು ದೇಹವನ್ನು ಮುಂದಕ್ಕೆ ಬಾಗಿಸುವ ಭಂಗಿ ಇದಾಗಿದೆ. ಇದು ಬೆನ್ನುಮೂಳೆಗಳು ಸದೃಢವಾಗಲು ಸಹಾಯ ಮಾಡುತ್ತದೆ.

ಅಧೋ ಮುಖ ಸ್ವನಾಸನ

ಇದು ಇಡೀ ದೇಹಕ್ಕೆ ನಮತ್ಯೆಯನ್ನು ಒದಗಿಸುವ ಭಂಗಿಯಾಗಿದೆ. ಇದು ದೇಹವನ್ನು ಬಾಗಿಸಿ ಕೈಗಳನ್ನು ಮುಂದೆ ಚಾಚಿ ನಿಲ್ಲುವುದು.

ವೀರಭದ್ರಾಸನ

ಇದು ಆತಂರಿಕ ಶಕ್ತಿ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವ ಯೋಗಭಂಗಿಯಾಗಿದೆ. ಯೋಗಾಭ್ಯಾಸ ಆರಂಭಿಕ ಹಂತದಲ್ಲಿರುವವರಿಗೆ ಇದು ಉತ್ತಮ ಭಂಗಿ. ನಿಂತಿರುವ ಭಂಗಿಯಲ್ಲಿ ಒಂದು ಕಾಲನ್ನು 45 ಡಿಗ್ರಿ ಹಿಂದಕ್ಕೆ ಸರಿಸಿ ಕೈಗಳನ್ನು ಮೇಲಕ್ಕೆ ಚಾಚುವುದು ಈ ಆಸನದ ಕ್ರಮ.

ವೃಕ್ಷಾಸನ

ಇದು ಅತ್ಯಂತ ಸುಲಭದ ಆಸನವಾಗಿದ್ದು, ಆರಂಭದಲ್ಲಿ ಈ ಆಸನವನ್ನು ಅಭ್ಯಾಸ ಮಾಡುವುದು ಉತ್ತಮ. ನೇರವಾಗಿ ನಿಂತು ಒಂದು ಕಾಲನ್ನು ಮಡಿಚಿ ತೊಡೆ ಆನಿಸಿ ಕೈ ಮುಗಿದು ನಿಲ್ಲುವ ಭಂಗಿ ಇದಾಗಿದೆ.

ಬಿಟಿಲಾಸನ

ಇದನ್ನೂ ಮರ್ಜರ್ಯಾಸನ ಎಂದೂ ಕರೆಯುತ್ತಾರೆ. ಇದು ಬೆಕ್ಕು-ಹಸುವಿನ ಭಂಗಿಯಾಗಿದೆ. ಇದು ಮೊಣಕಾಲಿನ್ನು ನೆಲಕ್ಕೆ ಊರಿ ಕೈಗಳನ್ನು ಮುಂದೆ ಚಾಚಿ ನೆಲಕ್ಕೆ ಊರುವ ಕ್ರಮ.

ಸೇತು ಬಂದಾಸನ

ಇದು ಇಡೀ ದೇಹಕ್ಕೆ ಶಕ್ತಿ ಒದಗಿಸುವ ಭಂಗಿ. ತಲೆ ಹಾಗೂ ಕಾಲುಗಳನ್ನು ನೆಲಕ್ಕೆ ಊರಿ ದೇಹದ ಭಾಗವನ್ನು ಮೇಲಕ್ಕೆ ಎತ್ತುವ ಭಂಗಿ ಇದಾಗಿದೆ.

ಶವಾಸನ

ಇದು ನೇರವಾಗಿ ನೆಲದ ಮೇಲೆ ಮಲಗಿ ಮಾಡುವ ಸುಲಭ ಆಸನವಾಗಿದೆ.

ನೀವು ಯೋಗ ಕಲಿಯುತ್ತಿರುವ ಈ ಕೆಲವು ಭಂಗಿಗಳಿಂದ ಆರಂಭಿಸಿ, ನಂತರ ಕಷ್ಟದ ಭಂಗಿಗಳಿಗೆ ನಿಮ್ಮ ದೇಹವು ಹೊಂದಿಕೊಳ್ಳುತ್ತದೆ.