Muscle growth: ಸ್ನಾಯುಗಳು ಬೆಳವಣಿಗೆಯಾಗದೆ ಮುಜುಗರ ಕಾಡ್ತಾ ಇದ್ಯಾ; ಮಸಲ್ಸ್‌ ಫಿಟ್‌ ಆಗಿರಲು ಹೀಗೆ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Muscle Growth: ಸ್ನಾಯುಗಳು ಬೆಳವಣಿಗೆಯಾಗದೆ ಮುಜುಗರ ಕಾಡ್ತಾ ಇದ್ಯಾ; ಮಸಲ್ಸ್‌ ಫಿಟ್‌ ಆಗಿರಲು ಹೀಗೆ ಮಾಡಿ

Muscle growth: ಸ್ನಾಯುಗಳು ಬೆಳವಣಿಗೆಯಾಗದೆ ಮುಜುಗರ ಕಾಡ್ತಾ ಇದ್ಯಾ; ಮಸಲ್ಸ್‌ ಫಿಟ್‌ ಆಗಿರಲು ಹೀಗೆ ಮಾಡಿ

ಗಂಡಸರಿಗೆ ಮಸಲ್ಸ್‌ ಫಿಟ್‌ ಆಗಿಲ್ಲ ಅಂದ್ರೆ ಏನೋ ಒಂಥರಾ ಕೀಳರಿಮೆ ಕಾಡುವುದು ಸಹಜ. ಆದರೆ ಇದಕ್ಕಾಗಿ ಸೂಕ್ತ ವರ್ಕೌಟ್‌, ಪೋಷಕಾಂಶಗಳು, ಕೆಲವು ತಂತ್ರಗಳು ಅವಶ್ಯ. ಸ್ನಾಯುಗಳು ಸದೃಢವಾಗಿರಬೇಕು ಅಂದ್ರೆ ಈ ಟಿಪ್ಸ್‌ ಪಾಲಿಸಿ.

ಮಸಲ್ಸ್‌ ಫಿಟ್‌ ಆಗಿರಲು ಹೀಗೆ ಮಾಡಿ
ಮಸಲ್ಸ್‌ ಫಿಟ್‌ ಆಗಿರಲು ಹೀಗೆ ಮಾಡಿ (Freepik)

ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಬೇಕು ಎಂಬ ಬಯಕೆ ಎಲ್ಲರಲ್ಲೂ ಇರುವುದು ಸಹಜ. ಅದರಲ್ಲೂ ಫಿಟ್ನೆಸ್‌ ಫ್ರೀಕ್‌ ಗಂಡುಮಕ್ಕಳಿಗೆ ತಮ್ಮ ಸ್ನಾಯುಗಳನ್ನು ಸದೃಢವಾಗಿ ಇರಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಇತ್ತೀಚೆಗೆ ಹೆಣ್ಣುಮಕ್ಕಳು ಕೂಡ ಮಸಲ್ಸ್‌ ಫಿಟ್ನೆಸ್‌ ಬಗ್ಗೆ ಗಮನ ನೀಡುತ್ತಾರೆ. ಅಂತಹದರಲ್ಲಿ ಗಂಡಮಕ್ಕಳು ಮಸಲ್ಸ್‌ ಫಿಟ್‌ ಆಗಿಲ್ಲ ಅಂದ್ರೆ ಒಂಥರಾ ಮುಜುಗರ ಕಾಡುವುದು ಸಹಜ. ಕೆಲವರು ಸ್ನಾಯುಗಳನ್ನು ಸದೃಢವಾಗಿಸಿಕೊಳ್ಳಲು ಸಾಕಷ್ಟು ವರ್ಕೌಟ್‌ ಮಾಡುತ್ತಾರೆ. ಆದರೂ ಕೂಡ ಮಸಲ್‌ ವೀಕ್‌ ಆಗಿಯೇ ಕಾಣುತ್ತದೆ. ಅಂತಹವರು ಈ ಅಂಶಗಳನ್ನು ತಪ್ಪದೇ ಗಮನಿಸಬೇಕು.

ನೀವು ಸೇವಿಸುವ ಪೋಷಕಾಂಶವನ್ನು ಗಮನಿಸಿ

ಸ್ನಾಯುಗಳ ಬೆಳವಣಿಗೆಗೆ ಕೇವಲ ಜಿಮ್‌ನಲ್ಲಿ ವರ್ಕೌಟ್‌ ಮಾಡಿದ್ರೆ ಮಾತ್ರ ಸಾಲುವುದಿಲ್ಲ. ಅದಕ್ಕಾಗಿ ನೀವು ಸೂಕ್ತ ಆಹಾರಕ್ರಮವನ್ನೂ ರೂಢಿಸಿಕೊಳ್ಳಬೇಕು. ಸ್ನಾಯುಗಳಿಗೆ ಸೂಕ್ತ ಪ್ರೊಟೀನ್‌ ಸಿಗುತ್ತಿಲ್ಲ ಎಂದರೂ ಇದರ ಬೆಳವಣಿಗೆ ಕುಂಠಿತವಾಗುತ್ತದೆ. ಮಸಲ್ಸ್‌ ಶಕ್ತಿ ಆಗಿರಲು ದೈಹಿಕ ಶಕ್ತಿಯೂ ಮುಖ್ಯವಾಗುತ್ತದೆ. ಸ್ನಾಯುಗಳ ಬೆಳವಣಿಗೆಗೆ ಕ್ಯಾಲೊರಿ ಅಂಶವುಳ್ಳ ಆಹಾರ ಸೇವನೆಯೂ ಮುಖ್ಯವಾಗುತ್ತದೆ. ಪೋಷಕಾಂಶ ಸಮೃದ್ಧ ಆಹಾರ ಸೇವನೆಯನ್ನು ತಪ್ಪಿಸಬೇಡಿ.

ಆಂಪ್‌ ಅಪ್‌ ಟ್ರೈನಿಂಗ್‌

ಆಂಪ್‌ ಅಪ್‌ ತರಬೇತಿಯಲ್ಲಿ ನೀವು ನಿಮ್ಮ ಸ್ನಾಯುಗಳ ಬಗ್ಗೆಯೂ ಗಮನ ನೀಡಬೇಕು. ನೀವು ಸಾಕಷ್ಟು ಪ್ರಯತ್ನ ಮಾಡದೇ ಇದ್ದರೆ ಮಸಲ್ಸ್‌ ಬೆಳವಣಿಗೆಯಾಗುವುದಿಲ್ಲ. ಬೇರೆ ಬೇರೆ ರೀತಿಯ ವರ್ಕೌಟ್‌ ಮೂಲಕ ಸ್ನಾಯು ಬೆಳವಣಿಗೆಗೆ ಗಮನ ನೀಡಬೇಕು.

ಸ್ಕ್ವಾಟ್‌ಗಳು ಮತ್ತು ಡೆಡ್‌ಲಿಫ್ಟ್‌ಗಳಂತಹ ವ್ಯಾಯಾಮಗಳು ಮಸ್ಸಲ್‌ ಫಿಟ್‌ ಆಗಲು ಸಹಕಾರಿ.

ವಿಶ್ರಾಂತಿ ಹಾಗೂ ಚೇತರಿಸಿಕೊಳ್ಳುವುದು

ಮನುಷ್ಯನ ದೇಹಕ್ಕೆ ವಿಶ್ರಾಂತಿ ಹಾಗೂ ಆರೋಗ್ಯ ಸರಿಯಿಲ್ಲದೇ ಇದ್ದಾಗ ಚೇತರಿಕೆಯೂ ಬಹಳ ಮುಖ್ಯ. ಕೆಲವೊಮ್ಮೆ ಅತಿಯಾದ ವರ್ಕೌಟ್‌ನಿಂದ ರೆಸ್ಟ್‌ ಇಲ್ಲದಂತಾಗಬಹುದು. ಇದು ಸ್ನಾಯುವಿನ ಬಳಲಿಕೆಗೆ ಕಾರಣವಾಗಬಹುದು. ವರ್ಕೌಟ್‌ ನಡುವೆ ವಿಶ್ರಾಂತಿ ಕೂಡ ಮುಖ್ಯ. ಪ್ರತಿದಿನ 7 ರಿಂದ 9 ಗಂಟೆ ನಿದ್ದೆ ಮಾಡಬೇಕು.

ಹೊಸ ವ್ಯಾಯಾಮಗಳನ್ನು ಕಲಿಯಿರಿ

ಒಂದೇ ರೀತಿಯ ವ್ಯಾಯಾಮಗಳಿಗೆ ಹೊಂದಿಕೊಳ್ಳುವ ಸ್ನಾಯುಗಳು ಅದರಿಂದಲೂ ಬಲ ಕಳೆದುಕೊಂಡಂತೆ ಕಾಣಬಹುದು. ಹಾಗಾಗಿ ಆಗಾಗ ವ್ಯಾಯಾಮ ಭಂಗಿಯನ್ನು ಬದಲಿಸಬೇಕು. ಹೊಸ ಹೊಸ ಎಕ್ಸ್‌ಸೈಸ್‌ ಮೂಲಕ ಸ್ನಾಯುಗಳನ್ನು ಫಿಟ್‌ ಆಗಿರಿಸಲು ಟ್ರೈ ಮಾಡಬೇಕು.

ಹೈಡ್ರೇಟ್‌ ಆಗಿರಿ, ಸಮಯಕ್ಕೆ ಸರಿಯಾಗಿ ಪೋಷಕಾಂಶ ಸೇವಿಸಿ

ಯಾವುದೇ ಕಾಲವಿರಲಿ ದೇಹಕ್ಕೆ ನೀರು ತುಂಬಾ ಅವಶ್ಯಕ. ನಾವು ತಿನ್ನುವ ಆಹಾರ, ಕುಡಿಯುವ ನೀರು ತಮ್ಮ ಸ್ನಾಯುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ನಿರೀಕ್ಷೆ ವಾಸ್ತವವಾಗಿರಲಿ

ಕೆಲವೊಮ್ಮೆ ಸ್ನಾಯುಗಳ ಬೆಳವಣಿಗೆಯ ವಿಚಾರದಲ್ಲಿ ಜನರು ಅವಾಸ್ತವಿಕ ನಿರೀಕ್ಷೆಗಳನ್ನು ಇರಿಸಿಕೊಳ್ಳುತ್ತಾರೆ. ಇದರಿಂದ ಕೂಡ ನಿಮ್ಮ ಸ್ನಾಯುಗಳ ಬಲ ಕಳೆದುಕೊಂಡಂತೆ ನಿಮಗೆ ಅನ್ನಿಸಬಹುದು. ನಿರೀಕ್ಷೆ ಇರಿಸಿಕೊಳ್ಳಿ ಹಾಗೂ ಅದಕ್ಕೆ ತಕ್ಕಂತೆ ವರ್ಕೌಟ್‌ ಮಾಡಿ ಸ್ನಾಯು ಸದೃಢವಾಗಿರಲು ಪ್ರಯತ್ನಿಸಿ.

ನೀವು ಮಸಲ್ಸ್‌ ಫಿಟ್‌ ಇಲ್ಲದೇ ಮುಜುಗರ ಅನುಭವಿಸ್ತಾ ಇದ್ರೆ, ಈ ಮೇಲೆ ಹೇಳಿರುವ ಕ್ರಮಗಳನ್ನು ಪಾಲಿಸಿ. ಇದರಿಂದ ನಿಮ್ಮ ಸ್ನಾಯುಗಳು ಸದೃಢವಾಗಿ, ನೀವು ಫಿಟ್‌ ಅಂಡ್‌ ಫೈನ್‌ ಕಾಣಿಸುತ್ತೀರಿ.

Whats_app_banner