ಒಂದೇ ತಿಂಗಳಲ್ಲಿ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ, ತೂಕ ಇಳಿಕೆಯಾಗ್ಬೇಕಾ? ಈ ಮೂರು ತಂತ್ರಗಳನ್ನು ಪಾಲಿಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದೇ ತಿಂಗಳಲ್ಲಿ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ, ತೂಕ ಇಳಿಕೆಯಾಗ್ಬೇಕಾ? ಈ ಮೂರು ತಂತ್ರಗಳನ್ನು ಪಾಲಿಸಿ ನೋಡಿ

ಒಂದೇ ತಿಂಗಳಲ್ಲಿ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ, ತೂಕ ಇಳಿಕೆಯಾಗ್ಬೇಕಾ? ಈ ಮೂರು ತಂತ್ರಗಳನ್ನು ಪಾಲಿಸಿ ನೋಡಿ

ದೇಹದ ಕೊಬ್ಬನ್ನು ನಿಯಂತ್ರಿಸುವುದು, ಕಡಿಮೆ ಮಾಡುವುದು ಕಷ್ಟದ ಕೆಲಸ ಎನ್ನುವುದು ಹಲವರ ಭಾವನೆ. ಆದರೆ ನಮ್ಮ ಜೀವನಶೈಲಿಯಲ್ಲಿ ಈ ಮೂರು ಮುಖ್ಯ ಬದಲಾವಣೆಗಳನ್ನು ಮಾಡಿಕೊಂಡಲ್ಲಿ 1 ತಿಂಗಳಲ್ಲಿ ನೀವು 6 ಪ್ರತಿಶತ ದೇಹದ ಕೊಬ್ಬನ್ನು ಕರಗಿಸಲು ಸಾಧ್ಯವಿದೆ, ಪ್ರಯತ್ನಿಸಿ ನೋಡಿ.

ಒಂದೇ ತಿಂಗಳಲ್ಲಿ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ, ತೂಕ ಇಳಿಕೆಯಾಗ್ಬೇಕಾ? ಈ ಮೂರು ತಂತ್ರಗಳನ್ನು ಪಾಲಿಸಿ
ಒಂದೇ ತಿಂಗಳಲ್ಲಿ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ, ತೂಕ ಇಳಿಕೆಯಾಗ್ಬೇಕಾ? ಈ ಮೂರು ತಂತ್ರಗಳನ್ನು ಪಾಲಿಸಿ

ಈಗಿನ ಜಂಕ್‌ ಫುಡ್‌ ಯುಗದಲ್ಲಿ ಫಿಟ್ನೆಸ್ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಆದರೆ ಕೆಲವರು ಮಾತ್ರ ತಮ್ಮ ದೇಹವನ್ನು ಹೇಗೆ ಕಾಪಾಡಿಕೊಂಡಿರುತ್ತಾರೆ ಎಂದರೆ ಅವರನ್ನು ನೋಡಿದಾಗೆಲ್ಲ ನಾವೂ ಅವರಂತೆ ಆಗಬೇಕು ಎನ್ನುವ ಸ್ಫೂರ್ತಿ ಪದೇ ಪದೇ ಹುಟ್ಟಿಕೊಳ್ಳುತ್ತದೆ. ದೇಹದಲ್ಲಿರುವ ಕೊಬ್ಬನ್ನು ಕರಗಿಸಿದರೆ ನಮ್ಮ ದೇಹ ಕೂಡ ಫಿಟ್ ಆಗುತ್ತದೆ. ಆದರೆ ಈ ರೀತಿ ಮಾಡಲು ನಾವು ಕೆಲವು ಸರಳ ಸೂತ್ರಗಳನ್ನು ಅನುಸರಿಸಬೇಕು.

ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವುದು ಬಹಳ ಕಷ್ಟ ಎನ್ನುವುದು ಅನೇಕರ ಅಭಿಪ್ರಾಯ. ಆದರೆ ನೀವು ಯೋಚನೆ ಮಾಡಿದಷ್ಟು ಕೊಬ್ಬನ್ನು ಕರಗಿಸುವುದು ಕಷ್ಟದ ಕೆಲಸ ಏನಲ್ಲ. ನಿಮ್ಮ ಬಳಿ ದೃಢ ನಿರ್ಧಾರವೊಂದಿದ್ದರೆ ನಿಮ್ಮ ತೂಕ ಇಳಿಕೆಯ ಪ್ರಯಾಣವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೆಲವೊಂದು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿದರೆ ಖಂಡಿತವಾಗಿಯೂ ನೀವು ಕೂಡ ಫಿಟ್ನೆಸ್ ಹೊಂದಲು ಸಾಧ್ಯವಿದೆ.

ದೇಹದ ಕೊಬ್ಬು ಎಂದರೇನು?

ದೇಹದ ಕೊಬ್ಬನ್ನು ಅಡಿಪಸ್‌ ಎಂದು ಕರೆಯಲಾಗುತ್ತದೆ. ಇದು ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಸಂಗ್ರಹವಾಗುತ್ತದೆ. ಹಾರ್ಮೋನ್ ನಿಯಂತ್ರಣದಲ್ಲಿ ಕೂಡ ಇದು ಪಾತ್ರ ವಹಿಸುತ್ತದೆ. ದೇಹದ ಆರೋಗ್ಯಕ್ಕೆ ಕೆಲವು ಕೊಬ್ಬು ಅತ್ಯಗತ್ಯವಾಗಿದ್ದರೂ ಸಹ ಹೆಚ್ಚುವರಿ ಕೊಬ್ಬು ಹೃದಯರಕ್ತನಾಳದ ಕಾಯಿಲೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳನ್ನು ಹೊಂದಿರುತ್ತದೆ.

ದೇಹದ ಕೊಬ್ಬು ಕರಗಿಸುವ 3 ಅಂಶಗಳು

ಆರೋಗ್ಯಕರವಾದ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮೂಲಕ ನಾವು ಖಂಡಿತವಾಗಿಯೂ ದೇಹದಲ್ಲಿರುವ ಹೆಚ್ಚುವರಿ ಕೊಬ್ಬುಗಳನ್ನು ನಷ್ಟ ಮಾಡಬಹುದಾಗಿದೆ. ಇವುಗಳನ್ನು ಮಾಡುವ ದೃಢಸಂಕಲ್ಪ ನಮ್ಮಲ್ಲಿದ್ದರೆ ಖಂಡಿತವಾಗಿಯೂ ನಾವು ನಮ್ಮ ಫಿಟ್ನೆಸ್ ಗುರಿಯನ್ನು ಮುಟ್ಟಲು ಸಾಧ್ಯವಿದೆ.

ನಿಯಮಿತ ವ್ಯಾಯಾಮ, ಏರೋಬಿಕ್ (ಕಾರ್ಡಿಯೋ) ಹಾಗೂ ಯೋಗ-ವಾಕಿಂಗ್‌ನಂತಹ ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಅತ್ಯಗತ್ಯ. ಓಟ ಅಥವಾ ಸೈಕ್ಲಿಂಗ್‌ನತಹ ಕಾರ್ಡಿಯೋ ವ್ಯಾಯಾಮಗಳು ಒಟ್ಟಾರೆ ಕ್ಯಾಲೋರಿ ನಷ್ಟಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡುತ್ತವೆ. ಶಕ್ತಿ ತರಬೇತಿಯು ಸ್ನಾಯುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳನ್ನು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಚಯಾಪಚಯದ ವೇಗವನ್ನು ಹೆಚ್ಚಿಸುತ್ತದೆ. ಇವುಗಳೆಲ್ಲವೂ ಕೊಬ್ಬಿನ ನಷ್ಟಕ್ಕೆ ಪ್ರಮುಖ ಕೊಡುಗೆಗಳನ್ನು ನೀಡುತ್ತದೆ.

ಆಹಾರದಲ್ಲಿ ಬದಲಾವಣೆ: ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಪೌಷ್ಠಿಕಾಂಶದಿಂದ ದಟ್ಟವಾದ ಆಹಾರಗಳನ್ನು ಸೇವಿಸಿವುದು ದೇಹದ ಕೊಬ್ಬಿನ ಮೇಲೆ ಗಮನಾರ್ಹ ಕೊಡುಗೆಯನ್ನು ನೀಡುತ್ತದೆ. ಸಂಸ್ಕರಿಸಿದ ಆಹಾರಗಳು, ಸಕ್ಕರೆಯಂಶಯುಕ್ತ ಪಾನೀಯಗಳು ಹಾಗೂ ಅತಿಯಾದ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ ಈ ಜಾಗದಲ್ಲಿ ವಿವಿಧ ತರಕಾರಿಗಳು, ಪ್ರೊಟೀನ್‌ಗಳು, ಧಾನ್ಯಗಳು ಹಾಗೂ ಆರೋಗ್ಯಕರ ಕೊಬ್ಬನ್ನು ಹೊಂದಿರುವ ಆಹಾರವನ್ನು ಸೇವನೆ ಮಾಡುವುದರಿಂದ ಕೊಬ್ಬನ್ನು ಕಡಿಮೆ ಮಾಡಲು ಸಾಧ್ಯವಿದೆ.

ಜೀವನಶೈಲಿಯ ಮಾರ್ಪಾಡು: ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಒತ್ತಡದ ಮಟ್ಟವನ್ನು ನಿರ್ವಹಿಸುವುದು ಅತ್ಯಗತ್ಯ ಎಂಬುದನ್ನು ಅನೇಕರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಕೊಬ್ಬನ್ನು ನಿಯಂತ್ರಣಕ್ಕೆ ತರಬೇಕು ಎಂದರೆ ನೀವು ಈ ಮಾರ್ಗಗಳನ್ನು ಅನುಸರಿಸುವುದು ಅತ್ಯಮೂಲ್ಯವಾಗಿದೆ. ಕಳಪೆ ನಿದ್ರೆ ಹಾಗೂ ಒತ್ತಡ ನಿರ್ವಹಣೆಯಲ್ಲಿ ವಿಫಲರಾಗುವುದರಿಂದ ದೇಹದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆ ಆಗುತ್ತದೆ. ಹೀಗಾಗಿ ಪ್ರತಿ ದಿನ ರಾತ್ರಿ ಕನಿಷ್ಠ 7-8 ಗಂಟೆಗಳ ನಿದ್ರೆ ಅನಿವಾರ್ಯ. ಧ್ಯಾನ ಹಾಗೂ ಯೋಗಾಸನದ ಮೂಲಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸಬೇಕು.

ತೂಕ ಇಳಿಕೆ ಎಂದರೆ ಕೇವಲ ಕಡಿಮೆ ತಿನ್ನುವುದು ಎಂದರ್ಥವಲ್ಲ. ಈ ಪ್ರಯಾಣದಲ್ಲಿ ನೀವು ಕ್ಯಾಲೋರಿಗಳನ್ನು ಕಡಿಮೆ ಮಾಡಿ ದೇಹಕ್ಕೆ ಹೆಚ್ಚು ಪ್ರೊಟೀನ್ ಸಿಗುವಂತೆ ಮಾಡಿದಾಗ ಮಾತ್ರ ಫಿಟ್ನೆಸ್ ನಿಮ್ಮದಾಗಲು ಸಾಧ್ಯ. ಸ್ನಾಯುವಿನ ಸಮರ್ಥನೀಯ ನಿರ್ವಹಣೆಗೆ ಪ್ರೊಟೀನ್‌ಗಳ ಸೇವನೆಗೆ ಹೆಚ್ಚು ಆದ್ಯತೆ ನೀಡಬೇಕು. ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಉತ್ತಮ ಜೀವನಶೈಲಿಯನ್ನು ನಿಮ್ಮದಾಗಿಸಬೇಕು. ಆಗ ಮಾತ್ರ ಫಿಟ್ನೆಸ್ ಪ್ರಯಾಣ ಸುಗಮವಾಗಿರಲು ಸಾಧ್ಯವಿದೆ.

Whats_app_banner