Weight Loss: ಪ್ರತಿದಿನ ವ್ಯಾಯಾಮ, ಡಯೆಟ್‌ ಮಾಡಿದ್ರೂ ತೂಕ ಇಳಿತಾ ಇಲ್ವಾ, ಹಾಗಾದ್ರೆ ಖಂಡಿತ ನೀವು ಈ ತಪ್ಪುಗಳನ್ನು ಮಾಡ್ತಾ ಇರ್ತೀರಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಪ್ರತಿದಿನ ವ್ಯಾಯಾಮ, ಡಯೆಟ್‌ ಮಾಡಿದ್ರೂ ತೂಕ ಇಳಿತಾ ಇಲ್ವಾ, ಹಾಗಾದ್ರೆ ಖಂಡಿತ ನೀವು ಈ ತಪ್ಪುಗಳನ್ನು ಮಾಡ್ತಾ ಇರ್ತೀರಿ

Weight Loss: ಪ್ರತಿದಿನ ವ್ಯಾಯಾಮ, ಡಯೆಟ್‌ ಮಾಡಿದ್ರೂ ತೂಕ ಇಳಿತಾ ಇಲ್ವಾ, ಹಾಗಾದ್ರೆ ಖಂಡಿತ ನೀವು ಈ ತಪ್ಪುಗಳನ್ನು ಮಾಡ್ತಾ ಇರ್ತೀರಿ

ತೂಕ ಇಳಿಬೇಕು ಅಂತಾ ಪ್ರತಿದಿನ ವ್ಯಾಯಾಮ ಮಾಡೋದು, ಜಿಮ್‌ನಲ್ಲಿ ಬೆವರಿಳಿಸೋದು, ತಿನ್ನೋದು ಕಡಿಮೆ ಮಾಡೋದು ಹೀಗೆ ಏನೇನೋ ಸರ್ಕಸ್‌ ಮಾಡ್ತೀವಿ. ಆದ್ರೂ ತೂಕ ಇಳಿತಿಲ್ಲ ಅಂದ್ರೆ ಖಂಡಿತ ನೀವು ಈ ತಪ್ಪುಗಳನ್ನು ಮಾಡ್ತಾ ಇದೀರಿ ಅಂತ ಅರ್ಥ. ಅತಿಯಾದ ದೈಹಿಕ ಚಟುವಟಿಕೆಯ ನಂತರವೂ ತೂಕ ಇಳಿತಿಲ್ಲ ಅಂದ್ರೆ ಅದಕ್ಕೆ 6 ಪ್ರಮುಖ ಕಾರಣಗಳಿವು.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ತೂಕ ಇಳಿಸೋದು ಇತ್ತೀಚಿನ ಜನರಿಗೆ ಬಹುದೊಡ್ಡ ಸವಾಲಾಗಿರುವುದು ಸುಳ್ಳಲ್ಲ. ಒತ್ತಡ, ಜೀವನಶೈಲಿಯ ಕಾರಣದಿಂದ ತೂಕದ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ. ಹಲವರಿಗೆ ತೂಕ ಕಡಿಮೆ ಮಾಡೋದು ಸವಾಲಾಗಿ ಪರಿಣಮಿಸಿರುವುದು ಸುಳ್ಳಲ್ಲ. ಕೆಲವರು ತೂಕ ಇಳಿಸುವ ಸಲುವಾಗಿ ಆಹಾರ ಕ್ರಮದಲ್ಲಿ ಬದಲಾವಣೆ, ಜಿಮ್‌, ವಾಕಿಂಗ್‌, ಜಾಗಿಂಗ್‌ ಮಾಡುವುದು ಹೀಗೆ ಹಲವು ಕ್ರಮಗಳನ್ನು ಅನುಸರಿಸುತ್ತಿರುತ್ತಾರೆ. ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ರೂ ಕೂಡ ತೂಕ ಕಡಿಮೆ ಆಗಿರೋದಿಲ್ಲ. ಅಲ್ಲದೆ ಅದಕ್ಕಾಗಿ ಸಾಕಷ್ಟು ತಲೆ ಕೆಡಿಸಿಕೊಂಡಿರುತ್ತಾರೆ. ಸಾಕಷ್ಟು ಶ್ರಮದ ದೈಹಿಕ ಚಟುವಟಿಕೆಯ ನಂತರವೂ ತೂಕ ಇಳಿತಿಲ್ಲ ಅಂದ್ರೆ ನೀವು ಈ ತಪ್ಪುಗಳನ್ನು ಮಾಡ್ತಾ ಇರ್ತೀರಿ ಅಂತ ಅರ್ಥ.

ತೂಕ ಇಳಿಕೆ ನಿಂತಿರುವುದು ಆರೋಗ್ಯ ಜೀವನಶೈಲಿಯ ಆಯ್ಕೆ, ಡಯೆಟ್‌ ಕ್ರಮ ಈ ಎಲ್ಲದರ ಮೇಲೆ. ತೂಕ ಇಳಿಕೆ ಅನ್ನೋದು ತಕ್ಷಣಕ್ಕೆ ಆಗುವ ಪ್ರಕ್ರಿಯೆ ಅಲ್ಲ. ಅದಕ್ಕೆ ಸಮಾಧಾನದಿಂದ ಸಂಪೂರ್ಣ ಆರೋಗ್ಯದ ಕ್ರಮಗಳ ಮೇಲೆ ಗಮನ ಹರಿಸುವುದು ಮುಖ್ಯವಾಗುತ್ತದೆ.

ಸರಿ ಹಾಗಾದ್ರೆ ತೂಕ ಇಳಿಕೆ ಮೇಲೆ ಪರಿಣಾಮ ಬೀರುವ ಕೆಲವು ಅಪಾಯಕಾರಿ ಅಂಶಗಳ ಮೇಲೆ ಇಂದು ಗಮನ ಹರಿಸೋಣ.

ಇದನ್ನೂ ಓದಿ: Weight Control: ಚಳಿಗಾಲದಲ್ಲಿ ನಾಲಿಗೆ ಚಪಲವನ್ನೂ ತಣಿಸಿ, ತೂಕ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾ, ಹಾಗಿದ್ರೆ ಇವುಗಳನ್ನು ಸೇವಿಸಿ

ತೂಕ ಇಳಿಕೆಯ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಕ್ಯಾಲೊರಿ ಅಂಶದ ಸೇವನೆ: ಅತಿಯಾದ ಕ್ಯಾಲೊರಿ ಅಂಶಗಳಿರುವ ಆಹಾರ ಸೇವಿಸಿ ದೇಹ ದಣಿಯುವಷ್ಟು ವ್ಯಾಯಾಮ ಮಾಡುವುದರಿಂದ ಪ್ರಯೋಜನವಿಲ್ಲ. ಇದು ಕ್ಯಾಲೊರಿ ಕರಗಿಸುತ್ತದೆ ಹೊರತು ತೂಕ ಇಳಿಕೆಗೆ ಸಹಾಯ ಮಾಡುವುದಿಲ್ಲ. ನಿಮ್ಮ ಆಹಾರಕ್ರಮವು ಫಿಟ್‌ನೆಸ್‌ ಗುರಿಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಹಾಗಾಗಿ ವ್ಯಾಯಾಮದ ಜೊತೆಗೆ ನಾವು ಸೇವಿಸುವ ಆಹಾರ ಮೇಲೂ ನಿಗಾ ವಹಿಸಬೇಕು.

ಎಕ್ಸ್‌ಸೈಜ್‌ ಮುಗಿದ ನಂತರ ತಿನ್ನುವ ಕ್ರಮ: ವ್ಯಾಯಾಮ ಮಾಡಿದ ನಂತರ ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ವ್ಯಾಯಾಮ ಮುಗಿದ ನಂತರ ಯಾವುದೇ ಕಾರಣಕ್ಕೂ ಅತಿಯಾಗಿ ತಿನ್ನುವುದು ಹಾಗೂ ಅನಾರೋಗ್ಯಕರ ಆಹಾರ ಸೇವಿಸುವುದನ್ನು ಮಾಡಬಾರದು. ಇದರಿಂದ ಈಗಾಗಲೇ ವ್ಯಾಯಾಮದಿಂದ ಕಳೆದುಕೊಂಡ ಕ್ಯಾಲೊರಿ ಅಂಶ ಮತ್ತೆ ದೇಹ ಸೇರುತ್ತದೆ. ಸಮತೋಲಿತ ಆಹಾರ ಸೇವನೆಗೆ ಒತ್ತು ನೀಡಿ. ಮನಸ್ಫೂರ್ತಿಯಾಗಿ ದೇಹಕ್ಕೆ ಒಗ್ಗುವುದನ್ನಷ್ಟೇ ತಿನ್ನಿ.

ಭಿನ್ನ ವ್ಯಾಯಾಮಗಳನ್ನು ಪ್ರಯತ್ನಿಸಿ: ಒಟ್ಟಾರೆ ಫಿಟ್‌ನೆಟ್‌ಗೆ ಕಾರ್ಡಿಯೋ ಹಾಗೂ ಸ್ಟ್ರೆಂಥನ್‌ ಟ್ರೈನಿಂಗ್‌ ಎಕ್ಸ್‌ಸೈಜ್‌ಗಳು ಬಹಳ ಮುಖ್ಯವಾಗುತ್ತದೆ. ಸ್ಟ್ರೆಂಥ್‌ ಟ್ರೈನಿಂಗ್‌ ವ್ಯಾಯಾಮಗಳು ಚಯಾಪಚಯವನ್ನು ಹೆಚ್ಚಿಸಲು ನೆರವಾಗುತ್ತದೆ. ಭಿನ್ನ ವ್ಯಾಯಾಮಗಳನ್ನು ಪ್ರಯತ್ನಿಸುವ ಮೂಲಕ ಕ್ಯಾಲೊರಿ ಬರ್ನ್‌ ಮಾಡಬಹುದು.

ಇದನ್ನೂ ಓದಿ: ಜಿಮ್‌, ಡಯೆಟ್‌ ಏನೇ ಮಾಡಿದ್ರೂ ತೂಕ ಇಳಿತಾ ಇಲ್ವಾ, ಈ ಸಮಸ್ಯೆ ಇರಬಹುದು; ಪರೀಕ್ಷೆ ಮಾಡ್ಸೋದು ಮರಿಬೇಡಿ

ನಿದ್ದೆಯ ಗುಣಮಟ್ಟ: ಅಸಮರ್ಪಕ ನಿದ್ದೆಯು ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ. ಇದು ಹಸಿವು ಹಾಗೂ ಆಹಾರದ ಕಡುಬಯಕೆ ಹೆಚ್ಚಲು ಕಾರಣವಾಗುತ್ತದೆ. ಒಟ್ಟಾರೆ ಆರೋಗ್ಯ ಹಾಗೂ ತೂಕ ಇಳಿಕೆಗೆ ಉತ್ತಮ ನಿದ್ದೆಯ ಮೇಲೆ ಗಮನ ನೀಡಿ. ಇದು ತೂಕ ಇಳಿಕೆಗೂ ಸಹಕಾರಿ.

ಒತ್ತಡ ನಿರ್ವಹಣೆ: ಒತ್ತಡದ ಪ್ರಮಾಣ ಹೆಚ್ಚಿದಂತೆ ದೇಹದಲ್ಲಿ ಕಾರ್ಟಿಸೋಲ್‌ ಮಟ್ಟವೂ ಹೆಚ್ಚುತ್ತದೆ. ಇದು ತೂಕ ಹೆಚ್ಚಿಸುವ ಹಾರ್ಮೋನ್‌ ಆಗಿದೆ. ಆ ಕಾರಣಕ್ಕೆ ಧ್ಯಾನ, ದೀರ್ಘ ಉಸಿರಾಟ, ಯೋಗದಂತಹ ಚಟುವಟಿಕೆಗಳಿಂದ ದೇಹತೂಕ ಇಳಿಸಿಕೊಳ್ಳುವತ್ತ ಗಮನ ನೀಡಿ. ಇದು ಕೂಡ ಇಳಿಕೆ ಇಳಿಸುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ.

ದ್ರವಾಹಾರ ಸೇವನೆ: ಕೆಲವೊಮ್ಮೆ ಬಾಯಾರಿಕೆ ಕೂಡ ಹಸಿವು ಹಾಗೂ ಅನಗತ್ಯ ಕ್ಯಾಲೊರಿ ಅಂಶಗಳನ್ನು ಸೇವಿಸುವಂತೆ ಮಾಡಬಹುದು. ಆ ಕಾರಣಕ್ಕೆ ಪ್ರತಿದಿನ ಸಾಕಷ್ಟು ನೀರು ಕುಡಿಯವುದು ಸೇರಿದಂತೆ ದ್ರವಾಹಾರದ ಸೇವನೆ ಬಹಳ ಮುಖ್ಯವಾಗುತ್ತದೆ. ಸಾಕಷ್ಟು ನೀರು ಕುಡಿಯುವುದು ಕೂಡ ತೂಕ ಇಳಿಕೆಗೆ ಬಹಳ ಮುಖ್ಯ.

Whats_app_banner