125 kg to 75 kg: ಅದ್ಹೇಗೆ ಇಷ್ಟೊಂದು ತೂಕ ಇಳಿಸಿದ್ರಿ ಸ್ವಾಮಿ? 6 ತಿಂಗಳಲ್ಲಿ ತೆಳ್ಳಗಾಗಿ ಸುದ್ದಿಯಾದ್ರು ಈ ಉದ್ಯಮಿ
ಕನ್ನಡ ಸುದ್ದಿ  /  ಜೀವನಶೈಲಿ  /  125 Kg To 75 Kg: ಅದ್ಹೇಗೆ ಇಷ್ಟೊಂದು ತೂಕ ಇಳಿಸಿದ್ರಿ ಸ್ವಾಮಿ? 6 ತಿಂಗಳಲ್ಲಿ ತೆಳ್ಳಗಾಗಿ ಸುದ್ದಿಯಾದ್ರು ಈ ಉದ್ಯಮಿ

125 kg to 75 kg: ಅದ್ಹೇಗೆ ಇಷ್ಟೊಂದು ತೂಕ ಇಳಿಸಿದ್ರಿ ಸ್ವಾಮಿ? 6 ತಿಂಗಳಲ್ಲಿ ತೆಳ್ಳಗಾಗಿ ಸುದ್ದಿಯಾದ್ರು ಈ ಉದ್ಯಮಿ

Weight Loss Tips: ಜಡ ಜೀವನಶೈಲಿ ಮತ್ತು ಕಳಪೆ ಆಹಾರವು ಬೊಜ್ಜು ಮತ್ತು ಅತಿಯಾದ ತೂಕಕ್ಕೆ ಕಾರಣವಾಗಿದೆ. ನಿಮ್ಮ ಫಿಟ್‌ನೆಸ್ ಗುರಿಯನ್ನು ಸಾಧಿಸಲು ನೀವು ಈ ಉದ್ಯಮಿಯ ತೂಕ ನಷ್ಟದ ಕಥೆಯನ್ನ ಸ್ಪೂರ್ತಿಯಾಗಿ ತೆಗೆದುಕೊಳ್ಳಬಹುದು.

ಉದ್ಯಮಿ ಸಾಹಿಲ್ ಕುಮಾರ್ ಜೈನ್ (PC: quora.com)
ಉದ್ಯಮಿ ಸಾಹಿಲ್ ಕುಮಾರ್ ಜೈನ್ (PC: quora.com)

ಗೂಗಲ್​ನಲ್ಲಿ ಜನರು ಅತಿಹೆಚ್ಚು ಹುಡುಕಾಡಿದ ಕೀವರ್ಡ್‌ಗಳಲ್ಲಿ ತೂಕ ಇಳಿಕೆಗೆ ಟಿಪ್ಸ್​ ಅನ್ನೋದು ಕೂಡ ಒಂದು. . ಜಡ ಜೀವನಶೈಲಿ ಮತ್ತು ಕಳಪೆ ಆಹಾರವು ಬೊಜ್ಜು ಮತ್ತು ಅತಿಯಾದ ತೂಕಕ್ಕೆ ಕಾರಣವಾಗಿದೆ. ನಿಮ್ಮ ಫಿಟ್‌ನೆಸ್ ಗುರಿಯನ್ನು ಸಾಧಿಸಲು ಅನೇಕರನ್ನು ನೀವು ಸ್ಪೂರ್ತಿಯಾಗಿ ತೆಗೆದುಕೊಳ್ಳಬಹುದು. ಆ ಪೈಕಿ ಉದ್ಯಮಿ ಸಾಹಿಲ್ ಕುಮಾರ್ ಜೈನ್ ಕೂಡ ಒಬ್ಬರು. ನಾವಿಲ್ಲಿ ನಿಮಗೆ ಸಾಹಿಲ್ ಕುಮಾರ್ ಜೈನ್​​ರ ತೂಕ ನಷ್ಟದ ಕಥೆಯನ್ನ ಹೇಳ್ತೀವಿ ಕೇಳಿ.

ಪಂಜಾಬ್​​ ಮೂಲದ ಉದ್ಯಮಿಯಾದ ಸಾಹಿಲ್ ಕುಮಾರ್ ಜೈನ್ ಅವರು 2018 ರ ಮಾರ್ಚ್ ತಿಂಗಳಲ್ಲಿ 125 ಕೆಜಿ ತೂಕವನ್ನು ಹೊಂದಿದ್ದರು. ಇವರು ತಮ್ಮ ಆಹಾರ ಪದ್ಧತಿಯ ಮೇಲೆ ಯಾವುದೇ ನಿಯಂತ್ರಣ ಹೊಂದಿರಲಿಲ್ಲ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದರು.

ಸಾಹಿಲ್​ರ ಅನಾರೋಗ್ಯಕರ ಜೀವನಶೈಲಿ ಹೀಗಿತ್ತು

- ಕೋಕಾಕೋಲಾದಂತಹ ಏರಿಯೇಟೆಡ್ ಡ್ರಿಂಕ್ಸ್ ಅನ್ನು ಹೆಚ್ಚು ಸೇವನೆ ಮಾಡುತ್ತಿದ್ದರು.

- ಬರ್ಗರ್‌, ಚೈನೀಸ್ ಫುಡ್​, ಕರಿದ ಆಹಾರ ಸೇರಿದಂತೆ ಅನಾರೋಗ್ಯಕರ ಆಹಾರ ಪದ್ಧತಿಯನ್ನು ಹೊಂದಿದ್ದರು.

- ಕುಳಿತಲ್ಲೇ ಕೆಲಸ ಮಾಡುತ್ತಿದ್ದ ಇವರು ದೈಹಿಕ ಚಟುವಟಿಕೆಗಳನ್ನು ಮಾಡುತ್ತಿರಲಿಲ್ಲ.

- ಹೆಚ್ಚು ಪರೋಠಾ ಮತ್ತು ತುಪ್ಪವನ್ನು ಸೇವಿಸುತ್ತಿದ್ದರು.

ಸಾಹಿಲ್​ರ ತೂಕ ನಷ್ಟದ ಜರ್ನಿ

2018 ರ ಜೂನ್​ನಲ್ಲಿ ತೂಕ ಇಳಿಕೆಯ ಜರ್ನಿಯನ್ನ ಆರಂಭಿಸಿದರು. ಕೇವಲ 6 ತಿಂಗಳಿನಲ್ಲಿ 125 ಕೆಜಿಯಿಂದ 75 ಕೆಜಿಗೆ ಇಳಿದರು. ಸ್ವಿಮ್ಮಿಂಗ್​​ಗೆ ಸೇರಿಕೊಂಡ್ರು. ಒಂದು ತಿಂಗಳೊಳಗೆ 8 ಕೆಜಿ ತೂಕ ಇಳಿಸಿದ್ರು. ಈಜಿನಿಂದ ಪ್ರೇರೇಪಿತರಾದ ಸಾಹಿಲ್​ ಸ್ವಿಮ್ಮಿಂಗ್ ಅವಧಿ ಹೆಚ್ಚಿಸುವ ಜೊತೆಗೆ ಇತರ ಓಟ ಸೇರಿದಂತೆ ದೈಹಿಕ ವ್ಯಾಯಾಮಗಳನ್ನು ಶುರು ಮಾಡಿದ್ರು. ತಮ್ಮ ಆಹಾರದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಿದರು. ಜಂಕ್​ ಫುಡ್​​ಗಳ ಬದಲಾಗಿ ಪ್ರೋಟೀನ್ ಹಾಗೂ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಲು ಶುರು ಮಾಡಿದ್ರು. ಸಾಕಷ್ಟು ನೀರು ಕುಡಿಯಲು ಪ್ರಾರಂಭಿಸಿದರು. ಕಡಿಮೆ ಕೊಬ್ಬಿನಾಂಶ ಇರುವ ಆಹಾರ ಮತ್ತು ಹಾಲು ಸೇವನೆ ಶುರು ಮಾಡಿದ್ರು. ಪರೋಠಾ ಬದಲಿಗೆ ಕಾಳುಗಳು ಮತ್ತು ಸಲಾಡ್​ ತಿನ್ನೋಕೆ ಪ್ರಾರಂಭಿಸಿದ್ರು.

ದಿನದಿನಕ್ಕೂ ತೂಕ ಕಡಿಮೆ ಆಗ್ತಾ ಇದೆ ಅಂತ ಗೊತ್ತಾದಾಗ ಸಾಹಿಲ್​ ಮೇಲಿನ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸದರು. ಓಟವನ್ನು ದಿನಕ್ಕೆ 12 ಕಿಮೀಗಳಿಗೆ ಹೆಚ್ಚಿಸಿದರು. ಜಿಮ್​​ಗೆ ಹೋದರು. ಬೇಯಿಸಿದ ತರಕಾರಿ, ಹಸಿ ತರಕಾರಿಗಳ ಸಲಾಡ್​, ಫ್ರೂಟ್​ ಸಲಾಡ್​​, ಕಾಳುಗಳು ಇವುಗಳನ್ನು ಊಟಕ್ಕೆ ಬಳಸಿದರು. ಗ್ರೀನ್​ ಟೀ, ಬಾದಾಮಿ, ಬ್ರೌನ್​ ಬ್ರೆಡ್​, ಸೇಬು, ಪನೀರ್ ಅನ್ನು ತಮ್ಮ ಆಹಾರಾದ ಭಾಗವಾಗಿಸಿದರು. ಹೀಗೆ ಕಟ್ಟುನಿಟ್ಟಾದ ಆಹಾರಕ್ರಮವನ್ನು ನಿರ್ವಹಿಸಿದರು. ಇಷ್ಟೆಲ್ಲ ಆಹಾರಕ್ರಮ ಮತ್ತು ದೈಹಿಕ ಚಟುವಟಿಕೆಗಳಿಂದಾಗಿ ಸಾಹಿಲ್​ ಕೇವಲ 6 ತಿಂಗಳಿನಲ್ಲಿ 125 ಕೆಜಿಯಿಂದ 75 ಕೆಜಿಗೆ ಇಳಿದರು.

Whats_app_banner