ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ತೂಕ ಇಳಿತಿಲ್ಲ ಅನ್ನೋ ಚಿಂತೆ ಬಿಡಿ, ದಿನಕ್ಕೆರಡು ಬಾರಿ ಈ ವ್ಯಾಯಾಮ ಮಾಡಿ

Weight Loss: ತೂಕ ಇಳಿತಿಲ್ಲ ಅನ್ನೋ ಚಿಂತೆ ಬಿಡಿ, ದಿನಕ್ಕೆರಡು ಬಾರಿ ಈ ವ್ಯಾಯಾಮ ಮಾಡಿ

ಎಷ್ಟೇ ಪ್ರಯತ್ನಪಟ್ರೂ ತೂಕ ಇಳಿತಿಲ್ಲ, ವ್ಯಾಯಾಮ ಎಲ್ಲಾ ವೇಸ್ಟ್‌ ಎನ್ನುವವರು ದಿನಕ್ಕೆರಡು ಬಾರಿ ಈ ವ್ಯಾಯಾಮಗಳನ್ನು ಮಾಡಿ. ಇದರಿಂದ ನೀವೇ ಆಶ್ಚರ್ಯ ಪಡುವ ರೀತಿಯಲ್ಲಿ ನಿಮ್ಮ ದೇಹತೂಕ ಕಡಿಮೆಯಾಗುವುದನ್ನು ನೀವು ಗಮನಿಸುತ್ತೀರಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Healthshots )

ತೂಕ ಇಳಿಸೋದು ಇತ್ತೀಚಿನ ಜನರ ಅದರಲ್ಲೂ ಯುವಜನರ ಮುಂದಿರುವ ಬಹು ದೊಡ್ಡ ಸವಾಲು. ತೂಕ ಇಳಿಸುವ ಸಲುವಾಗಿ ಡಯೆಟ್‌, ಅತಿಯಾಗಿ ವರ್ಕೌಟ್‌ ಮಾಡಿದ್ರು ಕೆಲವೊಮ್ಮೆ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಂತ ನಮ್ಮ ಪ್ರಯತ್ನ ನಾವು ಬಿಡುವುದೂ ಇಲ್ಲ. ಆದರೆ ಎಷ್ಟೇ ಪ್ರಯತ್ನ ಮಾಡಿದ್ರೂ ತೂಕ ಕಡಿಮೆ ಆಗೊಲ್ಲ, ಆದ್ರೂ ಕೂಡ ಚೂರು ಪಾರು ಕಡಿಮೆ ಆಗುತ್ತೆ. ಇದು ಬಹಳಷ್ಟು ಜನರ ಬೇಸರಕ್ಕೆ ಕಾರಣ. ಹಾಗಂತ ಇದು ಚಿಂತಿಸುವ ವಿಷಯ ಖಂಡಿತ ಅಲ್ಲ. ದಿನದಲ್ಲಿ 2 ಬಾರಿ ಈ ಕೆಳಗೆ ಸೂಚಿಸಿರುವ ವ್ಯಾಯಾಮ ಮಾಡಿ. ನೀವು ಅಂದುಕೊಂಡಿದ್ದಕ್ಕಿಂತ ಬೇಗ ತೂಕ ಇಳಿಯೋದು ಪಕ್ಕಾ. ದೇಹತೂಕ ಇಳಿಸೋಕೆ ನೆರವಾಗುವ 5 ವ್ಯಾಯಾಮಗಳು ಹೀಗಿವೆ.

ಟ್ರೆಂಡಿಂಗ್​ ಸುದ್ದಿ

ಬರ್ಪೀಸ್‌

ಬರ್ಪೀಸ್‌ ಎನ್ನುವುದು ಇಡೀ ದೇಹಕ್ಕೆ ವ್ಯಾಯಾಮ ನೀಡುತ್ತದೆ. ಇದು ಕಾರ್ಡಿಯೊ ಹಾಗೂ ಸ್ಟ್ರೆಂಥ್‌ ಟ್ರೈನಿಂಗ್‌ ಎರಡನ್ನೂ ಒಳಗೊಂಡಿರುತ್ತದೆ. ಇದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಅತಿಯಾದ ಕೊಬ್ಬನ್ನು ಕರಗಿಸಲು ಈ ವ್ಯಾಯಾಮ ಉತ್ತಮ. ಬರ್ಪಿಸ್‌ ವ್ಯಾಯಾಮದಲ್ಲಿ ಎಲ್ಲಾ ಸ್ನಾಯುಗಲೂ ಒಳಗೊಂಡಿರುತ್ತವೆ. ಇದು ದೇಹದಲ್ಲಿ ಚಯಾಪಚಯ ಹೆಚ್ಚಿಸಿ, ಕ್ಯಾಲೊರಿ ಬರ್ನ್‌ ಮಾಡಲು ಸಹಾಯ ಮಾಡುತ್ತದೆ.

ಮಾಡುವ ವಿಧಾನ: ನೇರವಾಗಿ ನಿಂತುಕೊಳ್ಳಿ

* ನೆಲಕ್ಕೆ ಬಾಗಿ ಕೈಗಳನ್ನು ನೆಲಕ್ಕೆ ಊರಿ.

* ನಂತರ ಪುಶ್‌ ಅಪ್‌ ಭಂಗಿಯಲ್ಲಿ ಕಾಲುಗಳನ್ನು ಹಿಂದಕ್ಕೆ ಚಾಚಿ.

* ಇದೇ ಭಂಗಿಯಲ್ಲಿ ಒಮ್ಮೆ ಮೇಲಕ್ಕೆ ಜಿಗಿಯಿರಿ. ಹೀಗೆ ಪುನರಾವರ್ತನೆ ಮಾಡಿ.

ಡೆಡ್‌ಲಿಫ್ಟ್‌

ಡೆಡ್‌ಲಿಫ್ಟ್‌ಗಳು ಹೆಚ್ಚು ಶಕ್ತಿಯುತ ವ್ಯಾಯಾಮವಾಗಿದೆ. ಇದು ಬೆನ್ನಿನ ಕೆಳಭಾಗ, ಗ್ಲುಟ್ಸ್‌ ಹಾಗೂ ಮಂಡಿರಜ್ಜುಗಳ ಮೇಲೆ ಗುರಿಯಾಗಿಸುತ್ತದೆ. ಇದು ಕೂಡ ಪೂರ್ಣ ದೇಹದ ವ್ಯಾಯಾಮ. ಇದು ಸ್ನಾಯುವಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಇದರಿಂದ ಚಯಾಪಚಯವೂ ವೃದ್ಧಿಯಾಗುತ್ತದೆ. ಡೆಡ್‌ಲಿಫ್ಟ್‌ ವ್ಯಾಯಾಮದಲ್ಲಿ ಕೋರ್‌ ಹಾಗೂ ಅಪ್ಪರ್‌ ಬಾಡಿ ಕೂಡ ಸೇರಿಕೊಳ್ಳುವುದರಿಂದ ಕೊಬ್ಬು ಕರಗಲು ಇದು ಉತ್ತಮ ವ್ಯಾಯಾಮವಾಗುತ್ತದೆ.

ಸ್ಕ್ವಾಟ್ಸ್‌

ಸ್ಕ್ವಾಟ್‌ ವ್ಯಾಯಾಮವು ದೇಹದ ಕೆಳಭಾಗದ ದೊಡ್ಡ ಸ್ನಾಯುಗಳಾದ ಕ್ವಾಡ್ರೈಸ್ಪ್ಸ್, ಹ್ಯಾಮ್ಸ್ಟ್ರಿಂಗ್ಸ್ ಮತ್ತು ಗ್ಲುಟ್ಸ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸ್ನಾಯುಗಳಿಗೆ ಸ್ಕ್ವಾಟ್‌ ವ್ಯಾಯಾಮ ನಿರ್ವಹಿಸಲು ಅವರಿಗೆ ಗಮನಾರ್ಹ ಪ್ರಮಾಣದ ಶಕ್ತಿಯ ಅಗತ್ಯವಿರುತ್ತದೆ. ಇದು ಕ್ಯಾಲೊರಿ ಕಡಿಮೆಯಾಗಲು ಸಹಾಯ ಮಾಡುತ್ತದೆ. ಇದು ಕೊಬ್ಬನ್ನು ಕಡಿಮೆ ಮಾಡುವ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

ಪುಷ್‌ ಅಪ್‌

ತೂಕ ಇಳಿಸಲೇಬೇಕು ಎಂದು ಶತಾಯಗತಾಯ ಪ್ರಯತ್ನ ಮಾಡುತ್ತಿರುವವರಿಗೆ ಫುಷ್‌ ಅಪ್‌ ವ್ಯಾಯಾಮಗಳು ಹೇಳಿ ಮಾಡಿಸಿದ್ದು. ಈ ವ್ಯಾಯಾಮವು ಎದೆಭಾಗ, ಭುಜಗಳು, ಟ್ರೈಸ್ಟ್‌ ಹಾಗೂ ಕೋರ್‌ ಅನ್ನು ಗುರಿಯಾಗಿಸುವ ಮೂಲಕ ದೇಹ ತೂಕ ಇಳಿಕೆಗೆ ನೆರವಾಗುತ್ತದೆ. ಈ ವ್ಯಾಯಾಮವು ಅಪ್ಪರ್‌ ಬಾಡಿ ಶಕ್ತಿ ಹಾಗೂ ಸ್ನಾಯುವಿನ ಸಹಿಷ್ಣುತೆ ಸುಧಾರಣೆಗೆ ಸಹಾಯ ಮಾಡುತ್ತದೆ. ನಿಮ್ಮ ದಿನಚರಿಯಲ್ಲಿ ಪುಷ್‌ಅಪ್‌ಗಳನ್ನು ಸೇರಿಸುವುದರಿಂದ ದೇಹವನ್ನು ಟೋನ್‌ ಮಾಡಲು ಮತ್ತು ಕೊಬ್ಬು ಕಡಿಮೆ ಮಾಡಲು ನೆರವಾಗುತ್ತದೆ.

ಲೆಗ್‌ ರೈಸಸ್‌

ಲೈಗ್‌ ರೈಸಸ್‌ ವ್ಯಾಯಾಮವು ಕೆಳ ಹೊಟ್ಟೆಯ ಸ್ನಾಯುಗಳನ್ನು ಗುರಿಯಾಗಿಸುತ್ತದೆ. ಕೋರ್‌ ಶಕ್ತಿ ಹಾಗೂ ಸ್ಥಿರತೆಯನ್ನು ಸುಧಾರಿಸುತ್ತದೆ. ಒಟ್ಟಾರೆ ವ್ಯಾಯಾಮದ ಕಾರ್ಯಕ್ಷಮತೆ ಸುಧಾರಣೆಗೆ ಕೋರ್‌ ವ್ಯಾಯಾಮ ನಿರ್ಣಾಯಕ. ಲೆಗ್‌ ರೈಸ್‌ ವ್ಯಾಯಾಮವು ನೇರವಾಗಿ ಹೆಚ್ಚು ಕ್ಯಾಲೊರಿ ಸುಡುವುದಿಲ್ಲವಾದರೂ ಉತ್ತಮ ಭಂಗಿ ಮತ್ತು ರೂಪವನ್ನು ಬೆಂಬಲಿಸುವ ಮೂಲಕ ಇತರ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮಗಳಿಗೆ ಪೂರಕವಾಗಿರುತ್ತದೆ.

ಈ ಮೇಲೆ ತಿಳಿಸಿದ ವ್ಯಾಯಾಮದ ಭಂಗಿಗಳನ್ನು ನಿಮ್ಮ ಫಿಟ್‌ನೆಸ್‌ ದಿನಚರಿಯಲ್ಲಿ ಅಳವುಡಿಸಿಕೊಳ್ಳುವುದರಿಂದ ಕೊಬ್ಬು ಕಡಿಮೆ ಮಾಡಿಕೊಳ್ಳುವುದು ಸುಲಭವಾಗುತ್ತದೆ.

ವ್ಯಾಯಾಮಕ್ಕೂ ಮುನ್ನ ಈ ಟಿಪ್ಸ್‌ ಗಮನಿಸಿ

  • ಈ ವ್ಯಾಯಾಮಕ್ಕೂ ಹಾಗೂ ಊಟಕ್ಕೂ ನಡುವೆ 3 ರಿಂದ 4 ಗಂಟೆ ಅಂತರ ಇರುವುದು ಗಮನಿಸಿ.
  • ಈ ವ್ಯಾಯಾಮಕ್ಕೂ ಮೊದಲು ವಾರ್ಮ್‌ಅಪ್‌ ಮಾಡಲು ಮರೆಯದಿರಿ.
  • ವ್ಯಾಯಾಮ ಮಾಡುವಾಗ ಬೆನ್ನು ನೇರವಾಗಿರಲಿ. ಬೆನ್ನು ಕಾಮಾನಿನಂತೆ ಬಾಗಿಸಬೇಡಿ. ಇದರಿಂದ ಬೆನ್ನು ನೋವು ಕಾಣಿಸಬಹುದು.
  • ವ್ಯಾಯಾಮದ ಬಳಿಕ ದೇಹವನ್ನು ಕೂಲ್‌ಡೌನ್‌ ಮಾಡಲು ಮರೆಯದಿರಿ
  • ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಬಾರಿ ವ್ಯಾಯಾಮ ಮಾಡಲು ಮರೆಯದಿರಿ.
  • ಆರೋಗ್ಯಕರ ಆಹಾರ ಸೇವಿಸಿ