ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆಮನೆಯಲ್ಲಿರುವ ಈ ಒಂದು ಪದಾರ್ಥದಿಂದ ಹಲವು ಆರೋಗ್ಯ ಪ್ರಯೋಜನ; ನೀರಲ್ಲಿ ನೆನೆಸಿ ಕುಡಿದರೆ ಅದೇ ಅಮೃತ

ಅಡುಗೆಮನೆಯಲ್ಲಿರುವ ಈ ಒಂದು ಪದಾರ್ಥದಿಂದ ಹಲವು ಆರೋಗ್ಯ ಪ್ರಯೋಜನ; ನೀರಲ್ಲಿ ನೆನೆಸಿ ಕುಡಿದರೆ ಅದೇ ಅಮೃತ

ಕೊತ್ತಂಬರಿ ನೀರು ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನ ನಿಮ್ಮದಾಗುತ್ತದೆ. ಅಡುಗೆ ಮನೆಯಲ್ಲಿ ನಿತ್ಯವೂ ಬಳಸುವ ಈ ಪದಾರ್ಥದಿಂದ ಆರೋಗ್ಯಕರ ದೇಹವನ್ನು ಪಡೆಯಬಹುದು. ನಿತ್ಯ ಕಾಡುವ ಹೊಟ್ಟೆಯುಬ್ಬರ, ಗ್ಯಾಸ್ಟಿಕ್‌ನಂಥ ಸಮಸ್ಯೆ ಪರಿಹಾರವಾಗುತ್ತವೆ.

ಅಡುಗೆಮನೆಯಲ್ಲಿರುವ ಈ ಒಂದು ಪದಾರ್ಥದಿಂದ ಹಲವು ಆರೋಗ್ಯ ಪ್ರಯೋಜನ
ಅಡುಗೆಮನೆಯಲ್ಲಿರುವ ಈ ಒಂದು ಪದಾರ್ಥದಿಂದ ಹಲವು ಆರೋಗ್ಯ ಪ್ರಯೋಜನ (Pixabay, Meta AI)

ನಿತ್ಯ ಜೀವನ ಆರೋಗ್ಯವಾಗಿರಲು ಅಡುಗೆ ಮನೆಯಲ್ಲೇ ಸಾಕಷ್ಟು ಆರೋಗ್ಯಕರ ಆಹಾರಗಳಿವೆ. ಪ್ರತಿ ಮನೆಗೂ ಅಡುಗೆಮನೆಯೇ ಔಷಧಾಲಯ. ಹಾಗಂತಾ ಅನಾರೋಗ್ಯ ಕಾಡಿದಾಗ ಔಷಧ ಹುಡುಕೋ ಬದಲಿಗೆ, ನಿತ್ಯವೂ ಆಹಾರಕ್ರಮ ಪಾಲಿಸುವ ಮೂಲಕ ದೇಹವನ್ನು ಆರೋಗ್ಯಕರವಾಗಿ ಕಾಪಾಡಬಹುದು. ಇದಕ್ಕೆ ನಾವೊಂದು ಸರಳ ಕ್ರಮ ಹೇಳಿಕೊಡುತ್ತೇವೆ. ಮನೆಯಲ್ಲಿ ಪ್ರತಿನಿತ್ಯ ಕೊತ್ತಂಬರಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಮ್ಯಾಜಿಕ್ ಮಾಡಬಹುದು. ಕೊತ್ತಂಬರಿ ಬೀಜಗಳನ್ನು ನಿತ್ಯ ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ನಿಮ್ಮ ದೇಹಕ್ಕೆ ರಿಫ್ರೆಶ್ ಆಗುತ್ತದೆ. ಅಂದರೆ ಹೊಸಚೇತನ ನಿಮ್ಮಲ್ಲಿ ತುಂಬುತ್ತದೆ. ಅಡುಗೆಯ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸಲು ಬಳಸಲಾಗುವ ಕೊತ್ತಂಬರಿ ಬೀಜವನ್ನು ನೀರಿನ ರೂಪದಲ್ಲಿ ಸೇವಿಸಿದರೆ ಹಲವಾರು ಸಂಭಾವ್ಯ ಆರೋಗ್ಯ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಕೊತ್ತಂಬರಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಲು ನೆರವಾಗುತ್ತದೆ. ಇದೇ ವೇಳೆ ಹೊಟ್ಟೆಯುಬ್ಬರ ಮತ್ತು ಅಸ್ವಸ್ಥತೆ ಕಡಿಮೆಯಾಗುತ್ತದೆ. ಈ ಪಾನೀಯವು ದೇಹದ ಚಯಾಪಚಯ ಕ್ರಿಯೆ ಬಲಪಡಿಸಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟ ಉತ್ತೇಜಿಸಲು ಸಹಾಯ ಮಾಡುತ್ತದೆ.

ಕೊತ್ತಂಬರಿ ನೀರನ್ನು ನಿತ್ಯ ದಿನಚರಿಯಲ್ಲಿ ಒಂದು ರಿಫ್ರೆಶಿಂಗ್‌ ಪಾನೀಯವಾಗಿ ಕುಡಿಯಬಹುದು. ಇದು ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಲು ನೆರವಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಕೊತ್ತಂಬರಿ ನೀರನ್ನು ತಯಾರಿಸಲು 1 ಕಪ್ ಕುಡಿಯುವ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜಗಳನ್ನು ಹಾಕಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಗ್ಗೆ ಆ ಬೀಜಗಳನ್ನು ಸೋಸಿಕೊಂಡು ನೀರನ್ನು ಕುಡಿಯಬಹುದು. ಕೊತ್ತಂಬರಿ ಬೀಜಗಳನ್ನು ಕೂಡಾ ತಿನ್ನಬಹುದು.

ಕೊತ್ತಂಬರಿ ನೀರಿನ ಐದು ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಗೆ ಸಹಕಾರಿ

ಕೊತ್ತಂಬರಿಯು ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಜೀರ್ಣಕಾರಿ ಕಿಣ್ವಗಳ ಉತ್ಪಾದನೆ ಉತ್ತೇಜಿಸುವ ಮೂಲಕ ಅಜೀರ್ಣ, ಹೊಟ್ಟೆಯುಬ್ಬರ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳ ಸಮೃದ್ಧಿ

ಕೊತ್ತಂಬರಿಯು ವಿಟಮಿನ್ ಸಿ ಮತ್ತು ಇತರ ಸಂಯುಕ್ತಗಳನ್ನು ಒಳಗೊಂಡಂತೆ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ಈ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುವ ಜೊತೆಗೆ ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದ ಸಕ್ಕರೆ ಮಟ್ಟ ನಿಯಂತ್ರಣ

ಕೆಲವು ಅಧ್ಯಯನಗಳ ಪ್ರಕಾರ, ಕೊತ್ತಂಬರಿಯು ರಕ್ತದಲ್ಲಿರುವ ಸಕ್ಕರೆ ಮಟ್ಟದ ನಿಯಂತ್ರಣದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಇದು ಉತ್ತಮ. ಇದೇ ವೇಳೆ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ ಸುಧಾರಿಸುತ್ತದೆ

ಕೊತ್ತಂಬರಿಯು ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ಒಟ್ಟಾರೆ ಹೃದಯರಕ್ತನಾಳದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಉರಿಯೂತದ ಗುಣಲಕ್ಷಣಗಳು

ಕೊತ್ತಂಬರಿಯು ಅದರ ಜೈವಿಕ ಸಕ್ರಿಯ ಸಂಯುಕ್ತಗಳಿಂದ ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಕೊತ್ತಂಬರಿ ನೀರಿನ ನಿಯಮಿತ ಸೇವನೆಯು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.