ಕನ್ನಡ ಸುದ್ದಿ  /  Lifestyle  /  Follow These Tips For Long Lasting Of Lipstick

Lipstick Hacks: ತುಟಿಯಲ್ಲಿ ಲಿಪ್‌ಸ್ಟಿಕ್‌ ಹೆಚ್ಚು ಕಾಲ ಉಳಿಯಬೇಕಂದ್ರೆ ಈ ಸುಲಭವಾದ ಟಿಪ್ಸ್‌ ಅನುಸರಿಸಿ ನೋಡಿ

ಲಿಪ್‌ಸ್ಟಿಕ್‌ ವಿಷಯಕ್ಕೆ ಬಂದರೆ ಅವುಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಪ್ರತಿ ರಾತ್ರಿ ನಿಮ್ಮ ತುಟಿಗಳನ್ನು ಸ್ಕ್ರಬ್‌ನಿಂದ ಎಕ್ಸ್ಫೋಲಿಯೇಟ್‌ ಮಾಡಿ. ನಿಮ್ಮ ತುಟಿಗಳ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ನೀವು ತುಂಬಾ ಸೌಮ್ಯವಾದ ಎಕ್ಸ್ಫೋಲಿಯೇಟರ್ ಬಳಸಬೇಕು.

ಲಿಪ್‌ ಸ್ಟಿಕ್‌ ಹಚ್ಚುವ ವಿಧಾನ
ಲಿಪ್‌ ಸ್ಟಿಕ್‌ ಹಚ್ಚುವ ವಿಧಾನ (PC: unsplash.com)

ಮಹಿಳೆಯರಿಗೂ ಲಿಪ್‌ಸ್ಟಿಕ್‌ಗೂ ಅವಿನಾಭಾವ ಸಂಬಂಧ. ಅವರ ತುಟಿಯನ್ನು ಮತ್ತಷ್ಟು ಸುಂದರವಾಗಿರಿಸುವಲ್ಲಿ ಲಿಪ್‌ಸ್ಟಿಕ್‌ ಪ್ರಮಖ ಪಾತ್ರ ವಹಿಸುತ್ತದೆ. ಅನೇಕ ಮಹಿಳೆಯರು ಕೆಲಸ, ಕಾಲೇಜು ಮತ್ತು ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ ಲಿಪ್‌ಸ್ಟಿಕ್‌ ಬಳಸುತ್ತಾರೆ. ಆದರೆ ಕೆಲವರಿಗೆ ಅವು ಹೆಚ್ಚು ಕಾಲ ಉಳಿಯುವುದಿಲ್ಲ. ಸ್ವಲ್ಪ ಸಮಯದ ನಂತರ, ತುಟಿಗಳು ಒಣಗುತ್ತವೆ. ಲಿಪ್‌ಸ್ಟಿಕ್‌ ಅಳಿಸುತ್ತದೆ. ತುಡಿಯಲ್ಲಿ ಲಿಪ್‌ಸ್ಟಿಕ್‌ ಹೆಚ್ಚು ಕಾಲ ಉಳಿಯಲು ಇಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ತಿಳಿಸಲಾಗಿದೆ.

ಎಕ್ಸ್ಫೋಲಿಯೇಟ್‌

ಲಿಪ್‌ಸ್ಟಿಕ್‌ ವಿಷಯಕ್ಕೆ ಬಂದರೆ ಅವುಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಪ್ರತಿ ರಾತ್ರಿ ನಿಮ್ಮ ತುಟಿಗಳನ್ನು ಸ್ಕ್ರಬ್‌ನಿಂದ ಎಕ್ಸ್ಫೋಲಿಯೇಟ್‌ ಮಾಡಿ. ನಿಮ್ಮ ತುಟಿಗಳ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ನೀವು ತುಂಬಾ ಸೌಮ್ಯವಾದ ಎಕ್ಸ್ಫೋಲಿಯೇಟರ್ ಬಳಸಬೇಕು. ಮಾರುಕಟ್ಟೆಯಲ್ಲಿ ನಾನಾ ರೀತಿಯ ಲಿಪ್ ಸ್ಕ್ರಬ್‌ಗಳು ಲಭ್ಯವಿದೆ. ನಿಮಗೆ ಯಾವುದು ಉತ್ತಮ ಎನಿಸುತ್ತದೋ ಅದನ್ನು ಆರಿಸಿ. ಪ್ರತಿದಿನ ಅದನ್ನು ಮೃದುವಾಗಿ ಸ್ಕ್ರಬ್‌ ಮಾಡಿ.

ಮಾಶ್ಚರೈಸರ್‌

ತುಟಿಗಳನ್ನು ಸ್ಕ್ರಬ್‌ ಮಾಡಿದ ನಂತರ ಮಾಶ್ಚರೈಸರ್‌ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ತುಟಿಯಲ್ಲಿ ಲಿಪ್‌ ಸ್ಟಿಕ್‌ ಮರುದಿನ ಬೆಳಗ್ಗೆ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ. ಲಿಪ್ ಬಾಮ್ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ತುಟಿಗೆ ಹಚ್ಚಿ ರಾತ್ರಿಯಿಡೀ ಬಿಡಿ. ಒಂದು ವೇಳೆ ರಾತ್ರಿ ತುಟಿಗಳನ್ನು ಸ್ಕ್ರಬ್‌ ಮಾಡುವುದನ್ನು ಮರೆತರೆ ಲಿಪ್‌ಸ್ಟಿಕ್‌ ಹಚ್ಚುವ ಮುನ್ನ ಮಾಡಿ.

ಲಿಪ್ ಪ್ರೈಮರ್ ಆಗಿ ಕನ್ಸೀಲರ್ ಬಳಸಿ

ಕನ್ಸೀಲರ್ ಲಿಪ್ ಪ್ರೈಮರ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ನಿಮ್ಮ ತುಟಿಗಳ ಅಂಚಿನಿಂದ ಲಿಪ್‌ ಸ್ಟಿಕ್‌ ಕೆದರುವುದನ್ನು ಇದು ತಡೆಯುತ್ತದೆ.

ಲಿಪ್‌ಸ್ಟಿಕ್‌ ಹಚ್ಚಲು ಬ್ರಷ್‌ ಬಳಸಿ

ಬ್ರಷ್‌ನಿಂದ ಲಿಪ್ ಸ್ಟಿಕ್ ಹಚ್ಚಿದರೆ ಅದು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಒಂದು ಅಥವಾ ಎರಡು ಸ್ಟ್ರೋಕ್‌ಗಳಲ್ಲಿ ಲಿಪ್‌ಸ್ಟಿಕ್ ಅನ್ನು ನೇರವಾಗಿ ನಿಮ್ಮ ತುಟಿಗಳ ಮೇಲೆ ಗ್ಲೈಡ್ ಮಾಡಬೇಡಿ. ಲಿಪ್ ಬ್ರಷ್‌ನೊಂದಿಗೆ ನಿಮ್ಮ ಮೇಲಿನ ಮತ್ತು ಕೆಳಗಿನ ತುಟಿಗಳ ಮಧ್ಯದಲ್ಲಿ ಮೊದಲು ಬಣ್ಣವನ್ನುಹಚ್ಚಿ. ನಂತರ ಅಂಚುಗಳಿಂದ ಪ್ರಾರಂಭಿಸಿ. ಇದು ತುಟಿಯಲ್ಲಿ ಲಿಪ್ ಸ್ಟಿಕ್ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ.

ಪಫ್, ಟಿಶ್ಯೂ ಟ್ರಿಕ್

ಲಿಪ್ ಸ್ಟಿಕ್ ಹಚ್ಚಿದ ನಂತರ ಟಿಶ್ಯೂವನ್ನು ನಿಮ್ಮ ತುಟಿಗಳ ನಡುವೆ ಇಟ್ಟು ಮೃದುವಾಗಿ ಒತ್ತಿ. ಈ ತಂತ್ರವು ನಿಮ್ಮ ತುಟಿಗಳನ್ನು ಹೆಚ್ಚುವರಿ ಲಿಪ್‌ಸ್ಟಿಕ್‌ನಿಂದ ಮುಕ್ತಗೊಳಿಸುತ್ತದೆ. ಮತ್ತೊಮ್ಮೆ ಲಿಪ್‌ ಸ್ಟಿಕ್‌ ಹಚ್ಚಿ ಎರಡನೇ ಬಾರಿ ಕೂಡಾ ಹಾಗೇ ಟಿಶ್ಯೂನಿಂದ ಲಿಪ್‌ಸ್ಟಿಕ್‌ ಹಚ್ಚಿ. ಹೀಗೆ ಮಾಡುವುದರಿಂದ ತುಟಿಯಲ್ಲಿ ಲಿಪ್ ಸ್ಟಿಕ್ ಹೆಚ್ಚು ಕಾಲ ಉಳಿಯುತ್ತದೆ.

ಪೆನ್ಸಿಲ್ ಲೈನರ್

ನೀವು ಲಿಪ್ ಸ್ಟಿಕ್ ಹಚ್ಚಿದ ನಂತರ ಅಂತಿಮವಾಗಿ ತುಟಿಗಳನ್ನು ಪೆನ್ಸಿಲ್ ಲೈನರ್‌ನಿಂದ ಫೈನಲ್‌ ಟಚ್‌ ನೀಡಿ. ಇದು ನಿಮ್ಮ ತುಟಿಗಳನ್ನು ಹೈಲೈಟ್ ಮಾಡುತ್ತದೆ.

ವಿಭಾಗ