Food and Immunity Booster: ಹೆಚ್ಚಿದ ವೈರಸ್‌ ಹಾವಳಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಹಾರಗಳ ಸೇವನೆಗೆ ಒತ್ತು ನೀಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Food And Immunity Booster: ಹೆಚ್ಚಿದ ವೈರಸ್‌ ಹಾವಳಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಹಾರಗಳ ಸೇವನೆಗೆ ಒತ್ತು ನೀಡಿ

Food and Immunity Booster: ಹೆಚ್ಚಿದ ವೈರಸ್‌ ಹಾವಳಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಹಾರಗಳ ಸೇವನೆಗೆ ಒತ್ತು ನೀಡಿ

Food and Immunity Booster: ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ದೇಹದಲ್ಲಿ ಪ್ರತಿರಕ್ಷಣ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸೋಂಕು ಹಾಗೂ ಕಾಯಿಲೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು
ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು

ಕೊರೊನಾ ಸೋಂಕು ಆವರಿಸಿದಾಗಿನಿಂದ ಜನರಲ್ಲಿ ಜ್ವರ, ಕೆಮ್ಮು, ನೆಗಡಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿದೆ. ಅದರಲ್ಲೂ ಈಗ ದಿನಕ್ಕೊಂದು ವೈರಸ್‌ಗಳ ಹಾವಳಿಯಿಂದ ಜ್ವರ, ನೆಗಡಿ ಪ್ರಮಾಣವೂ ಹೆಚ್ಚಾಗಿದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸೋಂಕು ಹಾಗೂ ಕಾಯಿಲೆಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ರೋಗನಿರೋಧಕ ಶಕ್ತಿ ಹೆಚ್ಚುವಲ್ಲಿ ನಮ್ಮ ಆಹಾರಕ್ರಮ ಹಾಗೂ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮರ್ಪಕ ಆಹಾರ ಸೇವನೆ, ನಿರಂತರ ವ್ಯಾಯಾಮ, ಸರಿಯಾದ ನಿದ್ದೆ, ಮದ್ಯಪಾಮ, ಧೂಮಪಾನ ತ್ಯಜಿಸುವುದು ಈ ಮೂಲಕ ನೈಸರ್ಗಿಕವಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಇನ್ನು ಆಹಾರಕ್ರಮಗಳ ವಿಚಾರಕ್ಕೆ ಸಂಬಂಧಿಸಿದ ಕೆಲವೊಂದು ಪೋಷಕಾಂಶ ಸಮೃದ್ಧ ಆಹಾರಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತವೆ. ಅಂತಹ ಕೆಲವು ಆಹಾರ ಪದಾರ್ಥಗಳು ಹೀಗಿವೆ;

ಸಿಟ್ರಸ್‌ ಅಂಶವಿರುವ ಆಹಾರಗಳು

ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿ, ಕಿವಿಯಂತಹ ಸಿಟ್ರಸ್‌ ಅಂಶ ಅಧಿಕವಿರುವ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‌ ಹಾಗೂ ವಿಟಮಿನ್‌ ಸಿ ಅಂಶ ಅಧಿಕವಾಗಿರುತ್ತದೆ. ಇವು ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತವೆ.

ಬಾದಾಮಿ

ಬಾದಾಮಿ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಬಾದಾಮಿಯ ಸೇವನೆಯು ಹೃದಯ ಆರೋಗ್ಯಕ್ಕೆ ಬಹಳ ಉತ್ತಮ. ರೋಗ ನಿರೋಧನ ಶಕ್ತಿ ಹೆಚ್ಚಳಕ್ಕೂ ಇದು ಸಹಕಾರಿ. ಬಾದಾಮಿಯಲ್ಲಿ ವಿಟಮಿನ್‌ ಇ, ಸತು, ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ಅಂಶ ಅಧಿಕವಾಗಿದೆ.

ಅರಿಸಿನ

ಅರಿಸಿನವು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅದ್ಭುತ ಮಸಾಲೆ ಪದಾರ್ಥವಾಗಿದೆ. ಇದನ್ನು ಪ್ರತಿದಿನದ ಆಹಾರದಲ್ಲಿ ಬಳಸುವುದು ಉತ್ತಮ. ಇದರಲ್ಲಿ ಕರ್ಕ್ಯುಮಿನ್‌ ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುವ ಉತ್ಕರ್ಷಣ ವಿರೋಧಿ ಗುಣವಿದೆ. ಪ್ರತಿದಿನ ಹಾಲಿನೊಂದಿಗೆ ಅರಿಸಿನವನ್ನು ಸೇರಿಸಿ ಕುಡಿಯಬಹುದು ಅಥವಾ ನಮ್ಮ ದೈನಂದಿನ ಆಹಾರ ಪದಾರ್ಥಗಳೊಂದಿಗೆ ಸೇರಿಸಬಹುದು.

ಗ್ರೀನ್‌ ಟೀ

ಗ್ರೀನ್‌ ಟೀ ಸೇವನೆಯಿಂದ ದೇಹತೂಕ ಇಳಿಕೆಗೆ ನೆರವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರೊಂದಿಗೆ ಗ್ರೀನ್‌ ಟೀನಲ್ಲಿ ಹಲವು ರೀತಿಯ ಆರೋಗ್ಯಗುಣಗಳಿವೆ. ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಎಂಬ ಅಂಶವಿದ್ದು, ರೋಗಗಳ ವಿರುದ್ಧ ಹೋರಾಡುತ್ತದೆ.

ಮಜ್ಜಿಗೆ

ಮಜ್ಜಿಗೆ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿರುತ್ತದೆ. ಬೇಸಿಗೆಯಲ್ಲಿ ದೇಹ ತಾಪ ತಣಿಸಲು ಮಜ್ಜಿಗೆ ಸಹಕಾರಿ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್‌ ಆಮ್ಲ ದೇಹದ ಪ್ರತಿರಕ್ಷಣಾ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಕ್ಕೆ ಕಲ್ಲುಪ್ಪು, ಕಾಳುಮೆಣಸಿನ ಪುಡಿ, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿಯುವುದರಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ನಾವು ಸಾಮಾನ್ಯವಾಗಿ ಎಲ್ಲಾ ರೀತಿಯ ಆಹಾರ ಪದಾರ್ಥಗಳ ತಯಾರಿಯಲ್ಲಿ ಬಳಸುತ್ತೇವೆ. ಇದು ಸೋಂಕಿನ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಬೆಳ್ಳುಳ್ಳಿಯಲ್ಲಿ ಪ್ರತಿರಕ್ಷಣಾ ಕಾರ್ಯಕ್ಕೆ ನೆರವಾಗುವ ಆಸಿಲಿನ್‌ ಅಂಶವಿದೆ.

ಶುಂಠಿ

ಜ್ವರ, ಕೆಮ್ಮ, ನೆಗಡಿ ಉಂಟಾದಾಗ ಶುಂಠಿಯಿಂದ ತಯಾರಿಸಿದ ಕಷಾಯ ಕುಡಿಯುವುದು ವಾಡಿಕೆ. ಶುಂಠಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

ಪಪ್ಪಾಯ

ಪಪ್ಪಾಯ ಹಣ್ಣಿನಲ್ಲಿ ವಿಟಮಿನ್‌ ಸಿ ಅಂಶ ಅಧಿಕವಾಗಿದೆ. ಇದರಲ್ಲಿ ಉತ್ಕರ್ಷಣ ವಿರೋಧಿ ಗುಣ ಅಧಿಕವಾಗಿದ್ದು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಇದರಲ್ಲಿ ಪೊಟ್ಯಾಶಿಯಂ, ಮೆಗ್ನಿಶಿಯಂ ಹಾಗೂ ಫೋಲೆಟ್‌ ಅಂಶ ಹೆಚ್ಚಿದ್ದು, ಒಟ್ಟಾರೆ ದೈಹಿಕ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ.

Whats_app_banner