ಬದನೆಕಾಯಿ ಅಂದ್ರೆ ಮೂಗುಮುರಿಯುವವರೇ ಹೆಚ್ಚು: ಈ ರೀತಿ ಗ್ರೇವಿ ಮಾಡಿ ನೋಡಿ, ಖಂಡಿತ ಇಷ್ಟವಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಬದನೆಕಾಯಿ ಅಂದ್ರೆ ಮೂಗುಮುರಿಯುವವರೇ ಹೆಚ್ಚು: ಈ ರೀತಿ ಗ್ರೇವಿ ಮಾಡಿ ನೋಡಿ, ಖಂಡಿತ ಇಷ್ಟವಾಗುತ್ತೆ

ಬದನೆಕಾಯಿ ಅಂದ್ರೆ ಮೂಗುಮುರಿಯುವವರೇ ಹೆಚ್ಚು: ಈ ರೀತಿ ಗ್ರೇವಿ ಮಾಡಿ ನೋಡಿ, ಖಂಡಿತ ಇಷ್ಟವಾಗುತ್ತೆ

ಬದನೆಕಾಯಿ-ಮೆಂತ್ಯ ಸೊಪ್ಪು ಮಿಶ್ರಣ ಮಾಡಿರುಚಿಕರವಾದ ಖಾದ್ಯ ತಯಾರಿಸಬಹುದು. ಬದನೆಕಾಯಿ ಇಷ್ಟವಿಲ್ಲದಿದ್ದವರು ಈ ರೀತಿಯ ಗ್ರೇವಿ ಮಾಡಿ ಸವಿಯಬಹುದು. ಅನ್ನದ ಜತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಬದನೆಕಾಯಿ-ಮೆಂತ್ಯ ಕರಿ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬದನೆಕಾಯಿ ಅಂದ್ರೆ ಮೂಗುಮುರಿಯುವವರೇ ಹೆಚ್ಚು: ಈ ರೀತಿ ಗ್ರೇವಿ ಮಾಡಿ ನೋಡಿ, ಖಂಡಿತ ಇಷ್ಟವಾಗುತ್ತೆ
ಬದನೆಕಾಯಿ ಅಂದ್ರೆ ಮೂಗುಮುರಿಯುವವರೇ ಹೆಚ್ಚು: ಈ ರೀತಿ ಗ್ರೇವಿ ಮಾಡಿ ನೋಡಿ, ಖಂಡಿತ ಇಷ್ಟವಾಗುತ್ತೆ

ಬದನೆಕಾಯಿ ಇಷ್ಟಪಡುವವರು ಬಹಳ ಕಡಿಮೆ. ಬದನೆಕಾಯಿಯಿಂದ ಹಲವು ರೀತಿಯ ರೆಸಿಪಿಯನ್ನು ಮಾಡಲಾಗುತ್ತದೆ. ಇದು ತುಂಬಾ ರುಚಿಕರವಾಗಿರುತ್ತದೆ. ಇಲ್ಲಿ ತಿಳಿಸಿರುವಂತೆ ಪಾಕವಿಧಾನವನ್ನು ಪ್ರಯತ್ನಿಸಿದರೆ ಖಂಡಿತಾ ನಿಮಗೂ ಈ ಕರಿ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಬದನೆಕಾಯಿ-ಮೆಂತ್ಯ ಕರಿ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಈ ರೀತಿ ಕರಿ ತಯಾರಿಸಿದರೆ ಮನೆಮಂದಿಯೆಲ್ಲಾ ಇಷ್ಟಪಟ್ಟು ತಿಂತಾರೆ.

ಬದನೆಕಾಯಿ-ಮೆಂತ್ಯ ಕರಿ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಬದನೆ- ಅರ್ಧ ಕೆಜಿ, ಮೆಂತ್ಯ ಸೊಪ್ಪು- ಎರಡು ಕಪ್, ಟೊಮೆಟೋ- ಎರಡು, ಎಣ್ಣೆ- ಬೇಕಾಗುವಷ್ಟು, ಸಾಸಿವೆ- ಒಂದು ಚಮಚ, ಈರುಳ್ಳಿ- ಎರಡು, ಶುಂಠಿ ಪೇಸ್ಟ್- ಒಂದು ಟೀ ಚಮಚ, ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಅರಿಶಿನ- ಅರ್ಧ ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಆಮ್ಚೂರ್ ಪುಡಿ- ಎರಡು ಟೀ ಚಮಚ, ನಿಂಬೆ ರಸ- ಒಂದು ಟೀ ಚಮಚ, ಕರಿಮೆಣಸು- ಆರು, ಕೊತ್ತಂಬರಿ- ಎರಡು ಟೀ ಚಮಚ, ಹೆಸರು ಬೇಳೆ- ಎರಡು ಟೀ ಚಮಚ, ಗಸಗಸೆ- ಎರಡು ಟೀ ಚಮಚ, ಎಳ್ಳು ಬೀಜಗಳು- ಒಂದು ಟೀ ಚಮಚ.

ರೆಸಿಪಿ ಮಾಡುವ ವಿಧಾನ: ಬದನೆ ಕಾಯಿಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ತುಂಡುಗಳಾಗಿ ಕತ್ತರಿಸಿ. ಬದನೆಯನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ, ತುಂಬಾ ಚಿಕ್ಕದಾಗಿಯೂ ಅಲ್ಲ, ತುಂಬಾ ದೊಡ್ಡದಾಗಿಯೂ ಅಲ್ಲ. ಹಾಗೆಯೇ ಮೆಂತ್ಯದ ಎಲೆಗಳನ್ನು ಸಾಧ್ಯವಾದಷ್ಟು ತೆಳುವಾಗಿ ಕತ್ತರಿಸಿ. ನಂತರ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಕರಿಮೆಣಸು, ಕೊತ್ತಂಬರಿ ಸೊಪ್ಪು, ಹೆಸರು ಬೇಳೆ, ಗಸಗಸೆ ಮತ್ತು ಎಳ್ಳನ್ನು ಹುರಿಯಿರಿ. ನಂತರ ಇವುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

ಈಗ ಕಡಾಯಿಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಹಾಕಿ. ಇದಕ್ಕೆ ಸಾಸಿವೆ, ಕರಿಬೇವು ಸೊಪ್ಪು ಸೇರಿಸಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈರುಳ್ಳಿ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ, ನಂತರ ಶುಂಠಿ ಪೇಸ್ಟ್ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈಗ ಸಣ್ಣಗೆ ಕತ್ತರಿಸಿದ ಟೊಮೆಟೊ ಸೇರಿಸಿ, ಅವು ಮೃದುವಾಗುವವರೆಗೆ ಬೇಯಿಸಿ. ಟೊಮೆಟೊ ಮೃದುವಾದಾಗ, ಕತ್ತರಿಸಿದ ಬದನೆ ಮತ್ತು ಮೆಂತ್ಯವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅವುಗಳನ್ನು ಐದು ನಿಮಿಷ ಬೇಯಿಸಲು ಬಿಡಿ.

ನಂತರ ಮುಚ್ಚಳವನ್ನು ತೆಗೆದು ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅವುಗಳನ್ನು ಕುದಿಸಲು ಅರ್ಧ ಕಪ್ ನೀರು ಸೇರಿಸಿ. ಹತ್ತು ನಿಮಿಷಗಳ ಕಾಲ ಮುಚ್ಚಿಡಿ. ಬದನೆಕಾಯಿಗಳು ಚೆನ್ನಾಗಿ ಬೆಂದ ನಂತರ ಮುಚ್ಚಳವನ್ನು ತೆಗೆದು ಸಿದ್ಧಪಡಿಸಿದ ಮಸಾಲೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಮ್ಚುರ್ ಪುಡಿಯನ್ನು ಕೂಡ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕಡಿಮೆ ಉರಿಯಲ್ಲಿ ಬೇಯಿಸಿ. ನೀರೆಲ್ಲಾ ಆವಿಯಾಗುವವರೆಗೆ ಬೇಯಿಸಿ. ಬಡಿಸುವ ಮೊದಲು ಗ್ರೇವಿಗೆ ನಿಂಬೆ ರಸವನ್ನು ಹಾಕಿದರೆ ರುಚಿಯಾದ ಬದನೆ-ಮೆಂತ್ಯ ಕರಿ ಸಿದ್ಧ.

ಬದನೆಕಾಯಿ ಕರಿ ಇಷ್ಟವಿಲ್ಲದವರೂ ಈ ಬದನೆ-ಮೆಂತ್ಯ ಗ್ರೇವಿಯನ್ನು ಖಂಡಿತಾ ಇಷ್ಟಪಡುತ್ತಾರೆ. ಅನ್ನದ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಚಪಾತಿ, ರೊಟ್ಟಿಯಲ್ಲಿ ಸಹ ತಿನ್ನಬಹುದು. ಇಡ್ಲಿ, ದೋಸೆಯೊಂದಿಗೂ ತಿನ್ನಬಹುದು.

Whats_app_banner