ಚಪಾತಿ ಮಿಕ್ಕಿದೆ ಅಂತ ಚಿಂತೆ ಮಾಡ್ಬೇಡಿ, ಹತ್ತೇ ನಿಮಿಷದಲ್ಲಿ ಸೂಪರ್ ಟೇಸ್ಟಿ ಉಪ್ಪಿಟ್ಟು ಮಾಡ್ಕೊಂಡು ತಿನ್ನಿ, ಇಲ್ಲಿದೆ ರೆಸಿಪಿ
ಪ್ರತಿದಿನ ರಾತ್ರಿ ಊಟಕ್ಕೆ ಚಪಾತಿ ತಯಾರಿಸಿ ತಿನ್ನೋದು ಹಲವರಿಗೆ ರೂಢಿ. ಆದರೆ ಕೆಲವೊಮ್ಮೆ ಚಪಾತಿ ಮಿಕ್ಕಬಹುದು. ಅದನ್ನ ಏನ್ ಮಾಡೋದು ಬೆಳಿಗ್ಗೆ ತಿನ್ನೋದು ಕಷ್ಟ, ಎಸಿಯೋಣ ಅಂದ್ರೆ ಆಹಾರ ವೇಸ್ಟ್ ಮಾಡೋಕು ಮನಸ್ಸಾಗೊಲ್ಲ ಅಂತಿದ್ರೆ, ಇಲ್ಲಿದೆ ಬೆಸ್ಟ್ ಐಡಿಯಾ. ಈ ಚಪಾತಿಯಲ್ಲಿ ರುಚಿ ರುಚಿಯಾದ ಉಪ್ಪಿಟ್ಟು ತಯಾರಿಸಬಹುದು. ಹೇಗೆ ಅಂತಿರಾ, ಮುಂದೆ ಓದಿ.
ತಿನ್ನುವ ಆಹಾರವನ್ನು ಎಸೆಯಬಾರದು ಎಂಬ ಮನೋಭಾವ ಎಲ್ಲರಲ್ಲೂ ಇರುತ್ತದೆ. ಆದರೆ ಏನು ಮಾಡೋದು ಕೆಲವೊಮ್ಮೆ ತಯಾರಿಸಿದ ಆಹಾರಗಳು ಉಳಿದು ಬಿಡುತ್ತವೆ. ರಾತ್ರಿ ಊಟಕ್ಕೆಂದು ತಯಾರಿಸಿದ ಚಪಾತಿ ಉಳಿದಿದೆ, ಅದನ್ನ ಬೆಳಿಗ್ಗೆ ತಿನ್ನೋಕೆ ಇಷ್ಟ ಆಗಲ್ಲ. ಮನೆಯಲ್ಲಿ ಯಾರೂ ಮಿಕ್ಕಿದ ಚಪಾತಿ ತಿನ್ನುವುದಿಲ್ಲ. ಹಾಗಂತ ಎಸೆಯೋಕು ಮನಸ್ಸು ಬರೊಲ್ಲ. ಖಂಡಿತ ಚಿಂತೆ ಮಾಡ್ಬೇಡಿ. ಈ ಚಪಾತಿಯಲ್ಲೇ ಬೆಳಿಗ್ಗೆ ಸೂಪರ್ ಬ್ರೇಕ್‌ಫಾಸ್ಟ್ ಮಾಡಬಹುದು. ಅದೇನು ಅಂತಿರಾ, ಮಿಕ್ಕಿದ ಚಪಾತಿಯಿಂದ ಸಖತ್ ಟೇಸ್ಟಿ ಉಪ್ಪಿಟ್ಟು ಮಾಡಬಹುದು. ಖಾಲಿ ಉಪ್ಪಿಟ್ಟು ತಿನ್ನೋಕೆ ಬೇಸರ ಆಗುತ್ತೆ ಅಂತಿದ್ರೆ ಅದರ ಜೊತೆ ಒಂದಿಷ್ಟು ತರಕಾರಿಯನ್ನು ಸೇರಿಸಬಹುದು. ಈರುಳ್ಳಿ, ಟೊಮೆಟೊ ಸೇರಿಸಿ ಚಪಾತಿ ಉಪ್ಮಾ ಮಾಡಿದ್ರೆ ವಾವ್ ಇದನ್ನು ಯಾರು ತಿನ್ನದೇ ಇರೋಲ್ಲ. ಬೇಕಿದ್ರೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಚಪಾತಿ - 4
ಈರುಳ್ಳಿ - 1
ಟೊಮೆಟೊ - 1
ಕ್ಯಾರೆಟ್ - 1
ಕ್ಯಾಪ್ಸಿಕಂ - ಅರ್ಧ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - ½ ಟೀ ಚಮಚ
ಕೊತ್ತಂಬರಿ ಪುಡಿ - ½ ಟೀಚಮಚ
ಗರಂ ಮಸಾಲಾ - ½ ಟೀಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಉಪ್ಪು ರುಚಿಗೆ
ಕರಿಬೇವು - ಒಗ್ಗರಣೆಗೆ
ಎಣ್ಣೆ - 2 ಚಮಚ
ಸಾಸಿವೆ - ½ ಟೀಚಮಚ
ಜೀರಿಗೆ - 1/2 ಚಮಚ
ತಯಾರಿಸುವ ವಿಧಾನ: ಮೊದಲು ಚಪಾತಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಕಡಾಯಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಮತ್ತು ಜೀರಿಗೆ ಹಾಕಿ ಇದು ಸಿಡಿದ ಮೇಲೆ ಹೆಚ್ಚಿಕೊಂಡ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ. ನಂತರ ಹೆಚ್ಚಿಕೊಂಡ ಟೊಮೆಟೊ ಸೇರಿಸಿ ಮುಚ್ಚಳ ಮುಚ್ಚಿ, ಟೊಮೆಟೊ ಚೆನ್ನಾಗಿ ಬೇಯುವವರೆಗೆ ಹಾಕಿ ಇಡಿ. ಈಗ ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ತುಂಡುಗಳನ್ನು ಸೇರಿಸಿ. ಅದಕ್ಕೆ ಅರಿಶಿನ, ಮೆಣಸಿನಕಾಯಿ, ಉಪ್ಪು ಮತ್ತು ಕೊತ್ತಂಬರಿ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಮತ್ತೆ ಮುಚ್ಚಳ ಮುಚ್ಚಿ ಎರಡು ನಿಮಿಷಗಳ ಕಾಲ ಬೇಯಿಸಿ. ಈಗ ಕತ್ತರಿಸಿದ ಚಪಾತಿ ತುಂಡುಗಳನ್ನು ಸೇರಿಸಿ. ಅಂತಿಮವಾಗಿ ಗರಂ ಮಸಾಲಾ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಚಪಾತಿ ಉಪ್ಪಿಟ್ಟು ಗಟ್ಟಿಯಾಗಿದ್ದರೆ ಚೆನ್ನಾಗಿರುತ್ತದೆ ಅಂದರೆ ಹಾಕಿ ತಿನ್ನಿ, ಸ್ವಲ್ಪ ಮೃದುವಾದರೆ ಚೆನ್ನಾಗಿರುತ್ತದೆ ಎನ್ನಿಸಿದರೆ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ನಂತರ ಚಪಾತಿ ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಚಪಾತಿ ಉಪ್ಪಿಟ್ಟು ತಿನ್ನಲು ಸಿದ್ಧ.
ಇದನ್ನೂ ಓದಿ
Onion Rava Dosa: ಸಂಜೆ ಕಾಫಿಗೆ ಬೆಸ್ಟ್ ಕಾಂಬಿನೇಷನ್ ಗರಿಗರಿ ಈರುಳ್ಳಿ ರವಾ ದೋಸೆ; ಇದನ್ನು ಮಾಡೋದು ಹೇಗೆ ನೋಡಿ
ಹೋಟೆಲ್‌ಗೆ ಹೋದಾಗ ಈರುಳ್ಳಿ ರವಾ ದೋಸೆ ತಿಂದು ವಾವ್, ಸಖತ್ ಆಗಿದೆ ಅಂದುಕೊಂಡಿರಬಹುದು. ಮತ್ತೆ ಮತ್ತೆ ಇಂತಹ ರುಚಿಯ ದೋಸೆಯನ್ನು ತಿನ್ನಬೇಕು ಎಂದು ನಾಲಿಗೆಯೂ ಆಸೆ ಪಡಬಹುದು. ಪ್ರತಿದಿನ ಉದ್ದಿನದೋಸೆ, ರಾಗಿ ದೋಸೆ, ನೀರ್ ದೋಸೆ ತಿಂದು ನಾಲಿಗೆ ಜಿಡ್ಡು ಹಿಡಿರಬಹುದು. ಹಾಗಿದ್ರೆ ನೀವು ಮನೆಯಲ್ಲೇ ಈರುಳ್ಳಿ ರವಾ ದೋಸೆ ಮಾಡಿ ತಿನ್ನಬಹುದು. ಈ ದೋಸೆ ಮಾಡೋದು ಸುಲಭ ಹಾಗೂ ಇದಕ್ಕೆ ಟೈಮ್ ಕೂಡ ಹೆಚ್ಚು ಬೇಡ. ಮನೆಹೆ ಅತಿಥಿಗಳು ಬಂದಾಗ, ಧಿಡೀರ್ ಆಗಿ ದೋಸೆ ತಿನ್ನಬೇಕು ಅನ್ನಿಸಿದಾಗ ಈರುಳ್ಳಿ ರವಾ ದೋಸೆ ಮಾಡಿ ಸವಿಯಬಹುದು. ಹಾಗಾದ್ರೆ ಈ ದೋಸೆ ಮಾಡೋದು ಹೇಗೆ ನೋಡಿ.
ವಿಭಾಗ