ಒಂದೇ ರುಚಿಯ ಚಟ್ನಿ ತಿಂದು ನಾಲಿಗೆಗೆ ಬೇಸರ ಬಂದಿದ್ರೆ ಮಧುರೈ ಸ್ಪೆಷಲ್ ಚಟ್ನಿ ಒಮ್ಮೆ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದೇ ರುಚಿಯ ಚಟ್ನಿ ತಿಂದು ನಾಲಿಗೆಗೆ ಬೇಸರ ಬಂದಿದ್ರೆ ಮಧುರೈ ಸ್ಪೆಷಲ್ ಚಟ್ನಿ ಒಮ್ಮೆ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಒಂದೇ ರುಚಿಯ ಚಟ್ನಿ ತಿಂದು ನಾಲಿಗೆಗೆ ಬೇಸರ ಬಂದಿದ್ರೆ ಮಧುರೈ ಸ್ಪೆಷಲ್ ಚಟ್ನಿ ಒಮ್ಮೆ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಮಧುರೈನಲ್ಲಿ ಇಡ್ಲಿ, ದೋಸೆ ಜೊತೆ ನೆಂಜಿಕೊಳ್ಳಲು ವಿಶೇಷವಾದ ಚಟ್ನಿಯೊಂದನ್ನು ಕೊಡುತ್ತಾರೆ. ಇದಕ್ಕೆ ಥಣ್ಣಿ ಚಟ್ನಿ ಎಂಬ ಹೆಸರಿದೆ. ಏನಿದು ಥಣ್ಣಿ ಚಟ್ನಿ, ಇದನ್ನು ಮಾಡೋದು ಹೇಗೆ ಅಂತ ನೋಡಿ.

ಒಂದೇ ರುಚಿಯ ಚಟ್ನಿ ತಿಂದು ನಾಲಿಗೆಗೆ ಬೇಸರ ಬಂದಿದ್ರೆ ಮಧುರೈ ಸ್ಪೆಷಲ್ ಚಟ್ನಿ ಟ್ರೈ ಮಾಡಿ
ಒಂದೇ ರುಚಿಯ ಚಟ್ನಿ ತಿಂದು ನಾಲಿಗೆಗೆ ಬೇಸರ ಬಂದಿದ್ರೆ ಮಧುರೈ ಸ್ಪೆಷಲ್ ಚಟ್ನಿ ಟ್ರೈ ಮಾಡಿ

ಇಡ್ಲಿ ಮಧುರೈನ ವಿಶೇಷ ಖಾದ್ಯಗಳಲ್ಲಿ ಒಂದಾಗಿದೆ. ಇಡ್ಲಿ ಜೊತೆ ಚಟ್ನಿ ಸೂಪರ್ ಕಾಂಬಿನೇಷನ್‌. ಮಧುರೈನಲ್ಲಿ ಇಡ್ಲಿ ಜೊತೆ ನೆಂಜಿಕೊಳ್ಳಲು ವಾಟರ್ ಚಟ್ನಿ ಅಥವಾ ಥಣ್ಣಿ ಚಟ್ನಿ ಕೊಡುತ್ತಾರೆ. ಈ ಚಟ್ನಿ ಹೆಸರು ವಿಚಿತ್ರವಾಗಿದ್ರೂ ರುಚಿ ಮಾತ್ರ ಸೂಪರ್ ಆಗಿದೆ. ವಿಶೇಷವಾಗಿ ಮಕ್ಕಳಿಗೆ ಈ ಚಟ್ನಿ ತುಂಬಾನೇ ಇಷ್ಟವಾಗುತ್ತದೆ. ಇಡ್ಲಿ ಮಾತ್ರವಲ್ಲ ದೋಸೆ, ವಡಾ ಜೊತೆ ಕೂಡ ಇದನ್ನು ನೆಂಜಿಕೊಂಡು ತಿನ್ನಬಹುದು. ಹಾಗಾದರೆ ಮಧುರೈ ಸ್ಪೆಷಲ್ ಥಣ್ಣಿ ಚಟ್ನಿ ಮಾಡೋದು ಹೇಗೆ ನೋಡಿ.

ಮಧುರೈ ಸ್ಪೆಷಲ್‌ ಚಟ್ನಿಗೆ ಬೇಕಾಗುವ ಪದಾರ್ಥಗಳು

ಶುಂಠಿ - ಒಂದು ಸಣ್ಣ ತುಂಡು, ಬೆಳ್ಳುಳ್ಳಿ ಎಸಳು - ನಾಲ್ಕು, ಸಾಸಿವೆ - ಒಂದು ಚಮಚ, ಜೀರಿಗೆ - ಒಂದು ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಪುಟಾಣಿ – ಅರ್ಧ ಕಪ್, ನೀರು - ಅಗತ್ಯ ಇರುವಷ್ಟು, ಉದ್ದಿನಬೇಳೆ - ಒಂದು ಚಮಚ, ಕರಿಬೇವು - ಒಂದು ಹಿಡಿ, ಒಣ ಮೆಣಸಿನಕಾಯಿ - ಎರಡು, ಈರುಳ್ಳಿ - ಎರಡು, ಹಸಿ ಮೆಣಸಿನಕಾಯಿ - ನಾಲ್ಕು

ಥಣ್ಣಿ ಚಟ್ನಿ ಪಾಕವಿಧಾನ

ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಶುಂಠಿ, ಬೆಳ್ಳುಳ್ಳಿ ಎಸಳು ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಅದರ ಜೊತೆ ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ ಸೇರಿಸಿ ಹುರಿಯಿರಿ. ಈರುಳ್ಳಿ ಬೆಂದ ನಂತರ, ಸ್ಟೌ ಆಫ್ ಮಾಡಿ. ಹುರಿದ ಪದಾರ್ಥಗಳನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಈರುಳ್ಳಿ ಮಿಶ್ರಣ ಮತ್ತು ಪುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಸೇರಿಸಿ. ನೀರು ಸೇರಿಸಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹಾಕಿ ಒಂದೂವರೆ ಲೋಟ ನೀರು ಸೇರಿಸಿ. ಈಗ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕರಿಬೇವು ಮತ್ತು ಒಣ ಮೆಣಸಿನಕಾಯಿಗಳನ್ನು ಸೇರಿಸಿ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿ. ಅಷ್ಟೇ, ರುಚಿಕರವಾದ ನೀರಿನ ಚಟ್ನಿ ಸಿದ್ಧ. ಈ ಚಟ್ನಿಯನ್ನು ಇಡ್ಲಿ ಜೊತೆ ತಿಂದರೆ ಅದ್ಭುತ ರುಚಿ. ನೀವು ಅದನ್ನು ಒಮ್ಮೆ ತಿಂದರೆ, ನೀವು ಅದನ್ನು ಎಂದಿಗೂ ಮರೆಯುವುದಿಲ್ಲ.

ಮಧುರೈನಲ್ಲಿ ಈ ಚಟ್ನಿಯನ್ನು ಥಣ್ಣಿ ಚಟ್ನಿ ಎಂದು ಕರೆಯಲಾಗುತ್ತದೆ. ಈ ಚಟ್ನಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಇಡ್ಲಿಗಳನ್ನು ಅದ್ದಿ ತಿಂದರೆ ರುಚಿ ಅದ್ಭುತವಾಗಿರುತ್ತದೆ. ಇದರ ರುಚಿಯನ್ನು ನೀವು ಸುಲಭವಾಗಿ ಮರೆಯುವುದಿಲ್ಲ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.