ತೊಗರಿಬೇಳೆಯಿಂದ ಮಾಡಬಹುದು ಸಖತ್ ಟೇಸ್ಟಿ ಚಟ್ನಿ; ಅಜ್ಜಿ ಕಾಲದ ಈ ರೆಸಿಪಿ ನಿಮ್ಮನೇಲಿ ಎಲ್ರಿಗೂ ಖಂಡಿತ ಇಷ್ಟವಾಗುತ್ತೆ, ಮಾಡಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ತೊಗರಿಬೇಳೆಯಿಂದ ಮಾಡಬಹುದು ಸಖತ್ ಟೇಸ್ಟಿ ಚಟ್ನಿ; ಅಜ್ಜಿ ಕಾಲದ ಈ ರೆಸಿಪಿ ನಿಮ್ಮನೇಲಿ ಎಲ್ರಿಗೂ ಖಂಡಿತ ಇಷ್ಟವಾಗುತ್ತೆ, ಮಾಡಿ ನೋಡಿ

ತೊಗರಿಬೇಳೆಯಿಂದ ಮಾಡಬಹುದು ಸಖತ್ ಟೇಸ್ಟಿ ಚಟ್ನಿ; ಅಜ್ಜಿ ಕಾಲದ ಈ ರೆಸಿಪಿ ನಿಮ್ಮನೇಲಿ ಎಲ್ರಿಗೂ ಖಂಡಿತ ಇಷ್ಟವಾಗುತ್ತೆ, ಮಾಡಿ ನೋಡಿ

ಸಾರು, ಸಾಂಬಾರು ಮಾಡುವಾಗ ತೊಗರಿಬೇಳೆ ಸೇರಿಸಿದ್ರೆ ಅದರ ರುಚಿಯೇ ಬದಲಾಗುತ್ತೆ. ಆದರೆ ನೀವು ತೊಗರಿಬೇಳೆಯಿಂದ ಚಟ್ನಿ ಕೂಡ ಮಾಡಬಹುದು. ಇದಕ್ಕೆ ಅನ್ನ, ಇಡ್ಲಿಗೆ ಮಸ್ತ್ ಕಾಂಬಿನೇಷನ್ ಆಗುತ್ತೆ.

ತೊಗರಿಬೇಳೆ ಚಟ್ನಿ
ತೊಗರಿಬೇಳೆ ಚಟ್ನಿ

ಬೇಳೆಯಿಂದ ಚಟ್ನಿ ಮಾಡಬಹುದು ಅಂದ್ರೆ ನಂಬ್ತೀರಾ. ಬೇಳೆ ಚಟ್ನಿಯ ರುಚಿ ಹಳೆಯ ಪೀಳಿಗೆಗೆ ಪರಿಚಿತ. ಹೊಸ ಪೀಳಿಗೆಯಲ್ಲಿ ಚಟ್ನಿ ತಿನ್ನುವವರ ಸಂಖ್ಯೆಯೂ ಕಡಿಮೆ, ಅದರಲ್ಲೂ ಬೇಳೆ ಚಟ್ನಿ ಬಗ್ಗೆ ಇತ್ತೀಚಿನವರೂ ಕೇಳಿಯೂ ಇರುವುದಿಲ್ಲ. ಆದರೆ ತೊಗರಿಬೇಳೆಯಿಂದ ತುಂಬಾನೇ ರುಚಿಯಾಗಿರುವ ಚಟ್ನಿ ಮಾಡಬಹುದು.

ತೊಗರಿಬೇಳೆಯನ್ನು ಸಾಂಬಾರ್ ಮತ್ತು ದಾಲ್, ರಸಂಗೆ ಬಳಸುವುದನ್ನು ನೀವು ನೋಡಿರಬಹುದು. ಆದರೆ ಇದರಿಂದ ತಯಾರಿಸುವ ಚಟ್ನಿಯು ಸೂಪರ್ ಆಗಿರುತ್ತೆ. ಹಸಿಮೆಣಸು ಅಥವಾ ಒಣ ಮೆಣಸು ಸೇರಿಸಿ ಈ ಚಟ್ನಿ ತಯಾರಿಸಬಹುದು. ಅನ್ನದ ಜೊತೆ ತಿನ್ನಲು ಸೂಪರ್ ಆಗಿರುತ್ತೆ ಈ ರೆಸಿಪಿ. ಬಿಸಿ ಅನ್ನ, ತುಪ್ಪ ಹಾಗೂ ತೊಗರಿಬೇಳೆ ಚಟ್ನಿ ಇದ್ರೆ ಆ ಊಟದ ಘಮ್ಮತ್ತೇ ಬೇರೆ. ಹಾಗಾದರೆ ತೊಗರಿಬೇಳೆ ಚಟ್ನಿ ತಯಾರಿಸುವುದು ಹೇಗೆ ನೋಡಿ.

ತೊಗರಿಬೇಳೆ ಚಟ್ನಿ ರೆಸಿಪಿ

ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ – ಅರ್ಧ ಕಪ್‌, ಉಪ್ಪು – ರುಚಿಗೆ ತಕ್ಕಷ್ಟು, ಜೀರಿಗೆ - ಎರಡು ಚಮಚ, ಮೆಣಸಿನಕಾಯಿ - ಹತ್ತು, ಬೆಳ್ಳುಳ್ಳಿ ಎಸಳು - ಹತ್ತು, ಕರಿಬೇವು - ಒಂದು ಹಿಡಿ, ಹುಣಸೆಹಣ್ಣು - ಒಂದು ನಿಂಬೆ ಗಾತ್ರದ್ದು, ನೀರು - ಸಾಕಷ್ಟು, ಎಣ್ಣೆ - ಎರಡು ಚಮಚ, ಸಾಸಿವೆ - ಅರ್ಧ ಚಮಚ

ತೊಗರಿಬೇಳೆ ಚಟ್ನಿ ತಯಾರಿಸುವ ವಿಧಾನ

ಒಲೆಯ ಮೇಲೆ ಪ್ಯಾನ್ ಇರಿಸಿ, ಒಂದು ಚಮಚ ಎಣ್ಣೆ ಸೇರಿಸಿ. ಎಣ್ಣೆ ಬಿಸಿಯಾದ ಮೇಲೆ ಒಣ ಮೆಣಸು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಕರಿಬೇವು ಮತ್ತು ಜೀರಿಗೆ ಸೇರಿಸಿ. ಇದರ ನಡುವೆ ಸ್ವಲ್ಪ ಹೊತ್ತು ಬೇಳೆಯನ್ನು ನೆನೆಸಿಡಿ. ಹುಣಸೆಹಣ್ಣನ್ನು ಕೂಡ ನೀರಿನಲ್ಲಿ ನೆನೆಯಲು ಬಿಡಬೇಕು. ಈಗ ಹುರಿದುಕೊಂಡ ಒಣ ಮೆಣಸಿನಕಾಯಿ, ಕರಿಬೇವು, ಜೀರಿಗೆ ಮತ್ತು ಮೆಂತ್ಯವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹುಣಸೆಹಣ್ಣನ್ನು ಚೆನ್ನಾಗಿ ಕಿವುಚಿಕೊಳ್ಳಿ ರಸವನ್ನು ಸೇರಿಸಿ. ಅಗತ್ಯ ಇರುವಷ್ಟು ಉಪ್ಪನ್ನು ಸೇರಿಸಿ. ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ತೆಗೆದಿಡಿ. ಈ ಪ್ಯಾನ್ ಒಂದನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಎಸಳು ಮತ್ತು ಎರಡು ಒಣ ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ, ನಂತರ ಚಟ್ನಿಯ ಮೇಲೆ ಹರಡಿ. ಈಗ ನಿಮ್ಮ ಮುಂದೆ ರುಚಿಯಾದ ತೊಗರಿಬೇಳೆ ಚಟ್ನಿ ಸವಿಯಲು ಸಿದ್ಧ. ಈ ಚಟ್ನಿಯನ್ನು ದೋಸೆ ಹಾಗೂ ಇಡ್ಲಿ ಜೊತೆ, ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತೆ.

ನಾವು ಪ್ರಾಚೀನ ಕಾಲದಿಂದಲೂ ಭಾರತೀಯ ಆಹಾರ ಪದ್ಧತಿಯ ಭಾಗವಾಗಿದೆ ತೊಗರಿಬೇಳೆ. ಬಹುತೇಕ ಪ್ರತಿದಿನ ತಯಾರಿಸುವ ಆಹಾರ ಖಾದ್ಯಗಳಿಗೆ ಬೇರೆ ಇರಲೇಬೇಕು. ಇದು ಸಾಕಷ್ಟು ಪ್ರೊಟೀನ್ ಹೊಂದಿರುವ ಕಾರಣ ಆರೋಗ್ಯಕ್ಕೂ ಉತ್ತಮ. ಪ್ರಾಚೀನ ಕಾಲದಲ್ಲಿ, ಅಜ್ಜಿಯರು ಮತ್ತು ಮುತ್ತಜ್ಜಿಯರು ಮಾಡುತ್ತಿದ್ದ ಈ ಬೇಳೆ ಚಟ್ನಿಯನ್ನು ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ, ರುಚಿಗೆ ಕಳೆದು ಹೋಗ್ತೀರಾ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner