Food Combination: ಮಾವಿನಹಣ್ಣಿನ ಜೊತೆ ಯಾವುದೇ ಕಾರಣಕ್ಕೂ ಈ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ!-food combination mango season according to ayurveda avoid to eat these foods along with mango rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Food Combination: ಮಾವಿನಹಣ್ಣಿನ ಜೊತೆ ಯಾವುದೇ ಕಾರಣಕ್ಕೂ ಈ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ!

Food Combination: ಮಾವಿನಹಣ್ಣಿನ ಜೊತೆ ಯಾವುದೇ ಕಾರಣಕ್ಕೂ ಈ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ!

Food Combination: ಬೇಸಿಗೆಕಾಲದ ಜೊತೆಯಲ್ಲಿ ಮಾವಿನ ಹಣ್ಣುಗಳ ಸೀಸನ್ ಕೂಡ ಆರಂಭವಾಗುತ್ತದೆ. ಮಾವಿನ ಹಣ್ಣುಗಳನ್ನು ಸೇವನೆ ಮಾಡುವ ಸಂದರ್ಭದಲ್ಲಿ ನಾವು ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಎಂದು ಆರ್ಯುವೇದ ಹೇಳಿದೆ.

ಮಾವಿನಹಣ್ಣಿನ ಜೊತೆ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಸಮಸ್ಯೆ ಉಂಟಾಗಲಿದೆ
ಮಾವಿನಹಣ್ಣಿನ ಜೊತೆ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಸಮಸ್ಯೆ ಉಂಟಾಗಲಿದೆ (PC: Pixabay)

Food Combination: ಬೇಸಿಗೆ ಆರಂಭವಾಯ್ತು ಎಂದರೆ ಮಾವಿನ ಹಣ್ಣುಗಳ ಸೀಸನ್ ಶುರುವಾಯ್ತು ಎಂದೇ ಲೆಕ್ಕ. ತರಹೇವಾರಿ ವಿಧದ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ಧಗೆಗೆ ಹೈರಾಣಾದ ಸಂದರ್ಭದಲ್ಲಿ ಮಾವಿನ ಹಣ್ಣು ಸೇವಿಸಿದ್ರೆ ಒಂದು ರೀತಿಯ ಸಮಾಧಾನ ಎನಿಸುತ್ತದೆ. ಮಾವಿನ ಹಣ್ಣುಗಳನ್ನು ಹಾಗೆಯೇ ಸೇವಿಸುವವರು ಒಂದು ಕಡೆಯಾದರೆ ಅವುಗಳಿಂದ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸುವವರೂ ಅನೇಕರಿದ್ದಾರೆ.

ಅವುಗಳೆಲ್ಲ ಹಾಗಿರಲಿ. ಮಾವಿನ ಹಣ್ಣಿನ ಜೊತೆ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವುದು ದೇಹಕ್ಕೆ ವಿಷಕಾರಿಯಾಗಿ ಬದಲಾಗುತ್ತದೆ ಎಂದು ಆರ್ಯುವೇದ ಹೇಳುತ್ತದೆ. ಆರ್ಯುವೇದದ ಪ್ರಕಾರ ಯಾವೆಲ್ಲ ಆಹಾರ ಪದಾರ್ಥಗಳನ್ನು ಮಾವಿನ ಹಣ್ಣು ಸೇವಿಸಿದ ಕೂಡಲೇ ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಮೊಸರು: ಅನೇಕರು ಮೊಸರು ಹಾಗೂ ಮಾವಿನ ಹಣ್ಣನ್ನು ಒಟ್ಟಾಗಿ ಸೇವಿಸಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಮಾವಿನ ಹಣ್ಣು ಹಾಗೂ ಮೊಸರನ್ನು ಬಳಸಿಯೇ ಆಹಾರವನ್ನು ತಯಾರಿಸುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಈ ಎರಡೂ ಪದಾರ್ಥಗಳನ್ನು ಒಟ್ಟಾಗಿ ಸೇವಿಸುವುದು ನಿಷಿದ್ಧ ಎಂದು ಹೇಳಲಾಗುತ್ತದೆ . ಮೊಸರು ಹಾಗೂ ಮಾವಿನ ಹಣ್ಣುಗಳನ್ನು ಒಟ್ಟಾಗಿ ಸೇವಿಸುವುದರಿಂದ ಉದರ ಸಂಬಂಧಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಹಾಗಲಕಾಯಿ: ಹಾಗೇ ತಿನ್ನೋಕೆ ಕಹಿ ಕಹಿ ಎನಿಸಿದರೂ ಸಹ ಇದನ್ನು ಸರಿಯಾದ ರೀತಿಯಲ್ಲಿ ಪಲ್ಯ ಮಾಡಿ ಸೇವಿಸಿದರೆ ಬಾಯಲ್ಲಿ ನೀರೂರುವುದ ಗ್ಯಾರಂಟಿ. ಬೇಸಿಗೆಯಲ್ಲಿ ಹೆಚ್ಚಾಗಿ ಬೆಳೆಯುವ ತರಕಾರಿಗಳಲ್ಲಿ ಹಾಗಲಕಾಯಿ ಕೂಡಾ ಒಂದು. ಹಾಗಲಕಾಯಿ ಹಾಗೂ ಮಾವಿನ ಹಣ್ಣು ಎರಡೂ ಬೇಸಿಗೆಗಾಲದಲ್ಲಿ ಬೆಳೆಯುವ ಪದಾರ್ಥವಾಗಿರುವುದರಿಂದ ಊಟಕ್ಕೆ ಹಾಗಲಕಾಯಿ ಪಲ್ಯ ತಿಂದು ಬಳಿಕ ಮಾವಿನ ಹಣ್ಣು ಸೇವಿಸುವವರು ಅನೇಕರು ಸಿಗಬಹುದು. ಆದರೆ ಈ ರೀತಿ ಹಾಗಲಕಾಯಿ ಹಾಗೂ ಮಾವಿನ ಹಣ್ಣುಗಳನ್ನು ಒಟ್ಟಾಗಿ ಸೇವಿಸುವುದರಿಂದ ವಾಂತಿ ಬರುತ್ತದೆ ಎಂದು ಆರ್ಯುವೇದದಲ್ಲಿ ತಿಳಿಸಲಾಗಿದೆ.

ಮಸಾಲೆಯುಕ್ತ ಆಹಾರಗಳು: ಬೇಸಿಗೆಯಲ್ಲಿ ಊಟವಾದ ಕೂಡಲೇ ಮಾವಿನ ಹಣ್ಣು ಸೇವಿಸುವ ಪದ್ಧತಿ ಬಹುತೇಕ ಕುಟುಂಬದಲ್ಲಿ ಇರುತ್ತದೆ. ಭಾರತೀಯರು ಮಸಾಲೆ ಅಂಶವಿಲ್ಲದೆ ಅಡುಗೆ ಮಾಡುವುದೇ ಕಡಿಮೆ. ಹೀಗಾಗಿ ನೀವು ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದ ಕೂಡಲೇ ಮಾವಿನ ಹಣ್ಣುಗಳನ್ನು ಸೇವನೆ ಮಾಡಿದರೆ ಜೀರ್ಣಕ್ರಿಯೆ ಸಂಬಂಧಿ ಆರೋಗ್ಯ ಸಮಸ್ಯೆಗಳು ಉಂಟಾಗಲಿವೆ. ಹೀಗಾಗಿ ಮಸಾಲೆಯಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಿದ ಬಳಿಕ ಮಾವಿನ ಹಣ್ಣುಗಳನ್ನು ತಿನ್ನಬಾರದು.

ತಂಪು ಪಾನೀಯ: ತಂಪು ಪಾನೀಯಗಳನ್ನು ಸೇವಿಸುವುದೇ ಮೊದಲನೆಯದಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತದರಲ್ಲಿ ಮಾವಿನ ಹಣ್ಣಿನ ಜೊತೆಗೆ ತಂಪು ಪಾನೀಯ ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣದಲ್ಲಿ ವಿಪರೀತ ಏರಿಕೆ ಕಂಡು ಬರಲಿದೆ. ಹೀಗಾಗಿ ಇವುಗಳನ್ನು ಎಂದಿಗೂ ಒಟ್ಟಾಗಿ ಸೇವಿಸಬಾರದು .

ನೀರು: ಇದು ನಿಮಗೆ ಆಶ್ಚರ್ಯ ಎನಿಸಬಹುದು. ಅನೇಕರಿಗೆ ಮಾವಿನ ಹಣ್ಣು ಸೇವಿಸಿದ ಬಳಿಕ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಮಾವಿನ ಹಣ್ಣನ್ನು ತಿಂದ ಕೂಡಲೇ ನೀರು ಕುಡಿದರೆ ಇದು ನೇರವಾಗಿ ನಿಮ್ಮ ದೇಹದ ಜೀರ್ಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಿಮಗೆ ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮಾವಿನ ಹಣ್ಣು ಸೇವಿಸಿದ ಅರ್ಧ ಗಂಟೆಗಳ ಕಾಲ ನೀರನ್ನು ಸೇವಿಸದೆ ಇರುವುದು ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ.