ಬೆಂಡೆಕಾಯಿ ಮೊಸರು ಹುಳಿ ಮಾಡಿ ನೋಡಿ: ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟೇ ಇಲ್ಲ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಡೆಕಾಯಿ ಮೊಸರು ಹುಳಿ ಮಾಡಿ ನೋಡಿ: ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟೇ ಇಲ್ಲ, ಇಲ್ಲಿದೆ ರೆಸಿಪಿ

ಬೆಂಡೆಕಾಯಿ ಮೊಸರು ಹುಳಿ ಮಾಡಿ ನೋಡಿ: ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟೇ ಇಲ್ಲ, ಇಲ್ಲಿದೆ ರೆಸಿಪಿ

ಬೆಂಡೆಕಾಯಿಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ನಿಮಗೆ ಬೆಂಡೆಕಾಯಿ ಇಷ್ಟವಿದ್ದರೆ ಡಿಫರೆಂಟ್ ಆಗಿಬೆಂಡೆಕಾಯಿ ಮೊಸರು ಹುಳಿ ಅಥವಾಧಹಿ ಬೆಂಡಿ ರೆಸಿಪಿ ಮಾಡಿ ನೋಡಿ. ಇಲ್ಲಿದೆ ರೆಸಿಪಿ ಮಾಡುವ ವಿಧಾನ ಹಾಗೂ ಬೆಂಡೆಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ.

ಡಿಫರೆಂಟ್ ಆಗಿ ಬೆಂಡೆಕಾಯಿ ಮೊಸರು ಹುಳಿ ಅಥವಾ ಧಹಿ ಬೆಂಡಿ ರೆಸಿಪಿ ಮಾಡಿ ನೋಡಿ. ಇಲ್ಲಿದೆ ರೆಸಿಪಿ ಮಾಡುವ ವಿಧಾನ
ಡಿಫರೆಂಟ್ ಆಗಿ ಬೆಂಡೆಕಾಯಿ ಮೊಸರು ಹುಳಿ ಅಥವಾ ಧಹಿ ಬೆಂಡಿ ರೆಸಿಪಿ ಮಾಡಿ ನೋಡಿ. ಇಲ್ಲಿದೆ ರೆಸಿಪಿ ಮಾಡುವ ವಿಧಾನ

ಬೆಂಡೆಕಾಯಿಯು ಭಾರತೀಯ ಅಡುಗೆ ಮನೆಗಳಲ್ಲಿ ಬಹಳ ಜನಪ್ರಿಯವಾದ ತರಕಾರಿಯಾಗಿದೆ. ಈ ತರಕಾರಿಯನ್ನು ವಿವಿಧ ರುಚಿಕರವಾದ ವಿಧಾನಗಳಲ್ಲಿ ತಯಾರಿಸಬಹುದು. ಚಪಾತಿ ಜೊತೆ ತಿನ್ನಲು ಪಲ್ಯವಾಗಿ, ಅನ್ನಕ್ಕೆ ರುಚಿಕರವಾದ ಸಾಂಬಾರು ತಯಾರಿಸಿ ಬೆಂಡೆಕಾಯಿಯನ್ನು ಸವಿಯಬಹುದು. ಬೆಂಡೆಕಾಯಿ ಇಷ್ಟವಿಲ್ಲದೇ ಇರುವವರು ಬಹುಶಃ ಕಡಿಮೆ. ಬೆಂಡೆಕಾಯಿಯು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಹೀಗಾಗಿ ಬಹುತೇಕರು ಬೆಂಡೆಕಾಯಿ ತಿನ್ನಲು ಒಲವು ತೋರುತ್ತಾರೆ. ಆದರೆ, ಬಹುತೇಕ ಮಂದಿ ಖಾರ-ಖಾರವಾದ ಬೆಂಡೆಕಾಯಿ ರೆಸಿಪಿ ಮಾಡಿ ಸವಿಯಲು ಇಷ್ಟಪಡುತ್ತಾರೆ. ಆದರೆ ಮೊಸರಿನ ಈ ಬೆಂಡೆಕಾಯಿ ರೆಸಿಪಿ ತಿಂದರೆ ನೀವು ಕಳೆದುಹೋಗುವಿರಿ. ಅಷ್ಟು ರುಚಿಕರವಾಗಿರುತ್ತದೆ ಈ ಖಾದ್ಯ. ಇದನ್ನು ತಯಾರಿಸುವುದು ತುಂಬಾನೇ ಸರಳ. ಇದನ್ನು ಅನ್ನ ಅಥವಾ ರೊಟ್ಟಿ ಅಥವಾ ಚಪಾತಿ ಜತೆ ಸವಿಯಬಹುದು. ಹಾಗಿದ್ದರೆ ಇದನ್ನು ಮಾಡುವುದು ಹೇಗೆ ಇಲ್ಲಿ ತಿಳಿದುಕೊಳ್ಳಿ.

ಬೆಂಡೆಕಾಯಿ ಮೊಸರು ಹುಳಿ ಮಾಡುವುದು ಹೇಗೆ

ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ- ½ ಕೆ.ಜಿ, ಮೊಸರು- 1 ಕಪ್, ಈರುಳ್ಳಿ- 1, ಕೆಂಪು ಮೆಣಸಿನ ಪುಡಿ- ಅರ್ಧ ಟೀ ಚಮಚ, ಕರಿಮೆಣಸಿನ ಪುಡಿ- ಅರ್ಧ ಟೀ ಚಮಚ.

ಮಾಡುವ ವಿಧಾನ: ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಚಾಕುವಿನ ಸಹಾಯದಿಂದ ನುಣ್ಣಗೆ ಕತ್ತರಿಸಿ. ನಂತರ ಇದನ್ನು ಸ್ಟೌವ್‍ನಲ್ಲಿ ಬಾಣಲೆ ಎಟ್ಟು ಅದಕ್ಕೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ. ಇದಕ್ಕೆ ಬೆಂಡೆಕಾಯಿಯನ್ನು ಮಿಶ್ರಣ ಮಾಡಿ ಡೀಪ್ ಫ್ರೈ ಮಾಡಲು 1-2 ನಿಮಿಷ ಮುಚ್ಚಳ ಮುಚ್ಚಿ. ನಂತರ ಚೆನ್ನಾಗಿ ಹುರಿದು, ಸಣ್ಣಗೆ ಹೆಚ್ಚಿಟ್ಟ ಈರುಳ್ಳಿಯನ್ನು ಹಾಕಿ ಬೇಯುವವರೆಗೆ ಫ್ರೈ ಮಾಡಿ.

ಇನ್ನು ಬೆಂಡೆಕಾಯಿಯನ್ನು ಚೆನ್ನಾಗಿ ಹುರಿದ ನಂತರ ಅದು ಬೆಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಂತರ ಸ್ಟೌವ್ ಆಫ್ ಮಾಡಿ. ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ಮೊಸರು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಚಮಚ ಕೆಂಪು ಮೆಣಸಿನ ಪುಡಿ, ಕರಿಮೆಣಸು ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮೊಸರಿನ ಮಿಶ್ರಣಕ್ಕೆ ಫ್ರೈ ಮಾಡಿಟ್ಟಿರುವ ಬೆಂಡೆಕಾಯಿಯನ್ನು ಸೇರಿಸಿದರೆ, ಬಾಯಲ್ಲಿ ನೀರೂರುವ ರುಚಿಕರವಾದ ಬೆಂಡೆಕಾಯಿ ಮೊಸರು ಹುಳಿ ಸವಿಯಲು ಸಿದ್ಧ. ಇದನ್ನು ಚಪಾತಿ, ರೊಟ್ಟಿ ಅಥವಾ ಅನ್ನದೊಂದಿಗೆ ಸವಿಯಬಹುದು.

ಬೆಂಡೆಕಾಯಿಯ ಆರೋಗ್ಯ ಪ್ರಯೋಜನಗಳು

ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ: ಬೆಂಡೆಕಾಯಿಯು ವಿಟಮಿನ್ ಎ, ಸಿ ಮತ್ತು ಕೆ ಮತ್ತು ಫೋಲೇಟ್‌ನಂತಹ ವಿಟಮಿನ್‌ಗಳ ಉತ್ತಮ ಮೂಲವಾಗಿದೆ. ಇದು ಪ್ರಮುಖ ಖನಿಜಗಳಾದ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಸಹ ಒಳಗೊಂಡಿದೆ.

ಮಲಬದ್ಧತೆ ತಡೆಯಲು ಸಹಕಾರಿ: ಬೆಂಡೆಕಾಯಿಯಲ್ಲಿರುವ ನಾರಿನಾಂಶವು ಮಲಬದ್ಧತೆಯನ್ನು ತಡೆಗಟ್ಟುವ ಮೂಲಕ ಮತ್ತು ನಿಯಮಿತ ಕರುಳಿನ ಚಲನೆಯನ್ನು ನಿರ್ವಹಿಸುವ ಮೂಲಕ ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ..

ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ: ಬೆಂಡೆಕಾಯಿಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಬೆಂಬಲಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ: ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಮಧುಮೇಹ ಅಥವಾ ಇನ್ಸುಲಿನ್ ನಿರೋಧಕತೆಯಿರುವವರಿಗೆ ಪ್ರಯೋಜನಕಾರಿಯಾಗಿರುವ ತರಕಾರಿಯಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೆಂಡೆಕಾಯಿಯಲ್ಲಿರುವ ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ದೇಹವು ಸೋಂಕುಗಳು ಮತ್ತು ಅನಾರೋಗ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಆರೋಗ್ಯಕರ ಚರ್ಮವನ್ನು ಉತ್ತೇಜಿಸುವಲ್ಲಿ ಸಹಕಾರಿ: ಬೆಂಡೆಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳಾದ ವಿಟಮಿನ್ ಸಿ ಮತ್ತು ಎ, ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಕಾರಿ. ಅಲ್ಲದೆ ಯೌವನದ ನೋಟವನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಚರ್ಮಕ್ಕೆ ಕೊಡುಗೆ ನೀಡುತ್ತವೆ.

ತೂಕ ನಿರ್ವಹಣೆಗೆ ಸಹಕಾರಿ: ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಅಂಶದಿಂದಾಗಿ ಬೆಂಡೆಕಾಯಿಯು ತೂಕ ನಿರ್ವಹಣೆಗೆ ಉತ್ತಮ ಸೇರ್ಪಡೆ ಎಂದರೆ ತಪ್ಪಿಲ್ಲ.

Whats_app_banner