ಚಹಾ ಕುಡಿಯುತ್ತಾ ಈ ತಿಂಡಿಗಳನ್ನು ತಿನ್ನುವ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ, ಇದರಿಂದ ಆರೋಗ್ಯ ಹಾನಿ ಖಚಿತ
ಬೆಳಗ್ಗೆ ಒಂದು ಕಪ್ ಚಹಾ ಕುಡಿಯದಿದ್ದರೆ ದಿನವೇ ಪೂರ್ಣವಾದಂತಿರುವುದಿಲ್ಲ. ಚಹಾ ಕುಡಿಯುವಾಗ ಅದರ ಜತೆಗೆ ಏನಾದ್ರೂ ತಿಂಡಿಗಳನ್ನು ತಿನ್ನುತ್ತಾರೆ. ಆದರೆ, ಚಹಾದ ಜೊತೆಗೆ ಕೆಲವು ಬಗೆಯ ತಿಂಡಿಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಕಾರಕ. ಚಹಾ ಕುಡಿಯುವಾಗ ಸೇವಿಸಬಾರದ ತಿಂಡಿಗಳು ಯಾವುವು, ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ನಮ್ಮ ದೇಶದಲ್ಲಿ ಚಹಾ ಅತ್ಯಂತ ಜನಪ್ರಿಯ ಪಾನೀಯ. ಅನೇಕ ಮಂದಿ ಕಾಫಿ, ಚಹಾ ಕುಡಿಯುತ್ತಾರೆ. ಅದರಲ್ಲೂ ಕಾಫಿಗಿಂತ ಚಹಾ ಪ್ರಿಯರೇ ಹೆಚ್ಚು ಮಂದಿ ಇದ್ದಾರೆ. ಬೆಳಗ್ಗೆ ಮತ್ತು ಸಂಜೆ ಒಂದು ಕಪ್ ಚಹಾ ಕುಡಿಯದಿದ್ದರೆ ಅನೇಕರಿಗೆ ತಾವೇನೋ ಕಳೆದುಕೊಂಡಂತ ಭಾವನೆ ಮೂಡುತ್ತದೆ. ಹಾಗಂತ ಚಹಾ ಅಷ್ಟೇ ಕುಡಿಯುವುದಿಲ್ಲ, ಅದರ ಜತೆಗೆ ಏನಾದ್ರೂ ತಿಂಡಿಗಳನ್ನು ತಿನ್ನುತ್ತಾರೆ. ಕೆಲವು ಕಡೆ ಬೆಳಗ್ಗೆ ಉಪಾಹಾರದ ಜತೆಗೆ ಟೀ ಕುಡಿಯುವ ಅಭ್ಯಾಸವೂ ಇದೆ. ತಿಂಡಿ ತಿನ್ನುತ್ತಾ ಚಹಾ ಕುಡಿದರೆ ಏನೋ ತೃಪ್ತಿ ಮೂಡಿದಂತಾಗುತ್ತದೆ. ಹೀಗಾಗಿ ಚಹಾ ಕುಡಿಯುತ್ತಾ ತಿಂಡಿ ತಿನ್ನುವವರು ಅನೇಕರಿದ್ದಾರೆ. ಆದರೆ, ಚಹಾದ ಜೊತೆಗೆ ಕೆಲವು ಬಗೆಯ ತಿಂಡಿಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಕಾರಕ. ಈ ಆಹಾರಗಳನ್ನು ಚಹಾದೊಂದಿಗೆ ಸೇವಿಸುವುದರಿಂದ, ಕೆಫೀನ್ ಹೀರಿಕೊಳ್ಳುವಿಕೆಯು ನಿಧಾನಗೊಳ್ಳುತ್ತದೆ. ಚಹಾ ಕುಡಿಯುವಾಗ ಸೇವಿಸಬಾರದ ತಿಂಡಿಗಳು ಯಾವುವು, ಎಂಬುದು ಇಲ್ಲಿದೆ.
ಚಹಾ ಕುಡಿಯುವಾಗ ತಿನ್ನಬಾರದ ತಿಂಡಿಗಳು ಇಲ್ಲಿವೆ
ಮೊಟ್ಟೆ ಭಕ್ಷ್ಯಗಳು: ಕೆಲವರು ಸಂಜೆ ಚಹಾ ಹೀರುತ್ತಾ ಮೊಟ್ಟೆಯ ಪಕೋಡ, ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ ತಿನ್ನುತ್ತಾರೆ. ಒಂದು ವೇಳೆ ನೀವು ಕೂಡ ಈ ರೀತಿ ಮಾಡುತ್ತಿದ್ದರೆ ಈ ತಪ್ಪನ್ನು ಮಾಡಬೇಡಿ. ಚಹಾದೊಂದಿಗೆ ಈ ಆಹಾರವನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ಇದನ್ನು ತಿನ್ನುವುದರಿಂದ ಜೀರ್ಣಿಸಿಕೊಳ್ಳುವುದು ತುಂಬಾನೇ ಕಷ್ಟ. ಹೊಟ್ಟೆಯ ಸಮಸ್ಯೆ ಇರುವವರಂತೂ ಚಹಾ ಕುಡಿಯುತ್ತಾ ಮೊಟ್ಟೆ ತಿನ್ನಲೇಬಾರದು.
ಡೈರಿ ಉತ್ಪನ್ನ: ಚಹಾ ತಯಾರಿಕೆಯಲ್ಲಿ ಹಾಲನ್ನು ಬಳಸಲಾಗುವುದಾದರೂ, ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಚಹಾದೊಂದಿಗೆ ಸೇವಿಸಬಾರದು. ಚಹಾದೊಂದಿಗೆ ಚೀಸ್, ಮೊಸರು, ಕೆನೆ ಮುಂತಾದ ಡೈರಿ ಉತ್ಪನ್ನಗಳನ್ನು ತಿನ್ನುವುದು ಚಹಾದಲ್ಲಿ ಕಂಡುಬರುವ ಪಾಲಿಫಿನಾಲ್‌ಗಳ ಪರಿಣಾಮವನ್ನು ತಟಸ್ಥಗೊಳಿಸುತ್ತದೆ.
ಸಿಹಿತಿಂಡಿಗಳು ಮತ್ತು ಕೇಕ್‍ಗಳು: ಚಹಾದೊಂದಿಗೆ ಬಿಸ್ಕತ್ತು, ಚಾಕೊಲೇಟ್, ಸಿಹಿತಿಂಡಿ, ಕೇಕ್ ಮುಂತಾದ ಸಿಹಿ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದಲ್ಲ. ಈ ಪದಾರ್ಥಗಳು ಚಹಾದೊಂದಿಗೆ ಸೇವಿಸಲು ರುಚಿಕರವಾಗಿ ಕಾಣಿಸಬಹುದು. ಆದರೆ, ಅವು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ, ಇವುಗಳನ್ನು ಚಹಾದೊಂದಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಏರುತ್ತದೆ ಮತ್ತು ದೇಹದಲ್ಲಿನ ಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ಇದಲ್ಲದೆ, ಇದು ಇನ್ನೂ ಅನೇಕ ಅನಾನುಕೂಲಗಳನ್ನು ಹೊಂದಿದೆ. ಚಹಾದೊಂದಿಗೆ ಸಿಹಿತಿಂಡಿಗಳನ್ನು ತಿನ್ನುವುದು ವಿಷಕ್ಕೆ ಸಮವಾಗಿರುತ್ತದೆ.
ಬಜ್ಜಿ: ಬಿಸಿ ಬಿಸಿ ಬಜ್ಜಿಗಳನ್ನು ಬಿಸಿ ಚಹಾದೊಂದಿಗೆ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಅವು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆದರೆ, ಈ ಸಂಯೋಜನೆಯು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಚಹಾ ಕುಡಿಯುವಾಗ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟ. ಚಹಾ ಸೇವಿಸಿದಾಗ ಬಜ್ಜಿ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಗಂಭೀರವಾಗಿ ಪರಿಣಾಮ ಬೀರುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope