Potato Snacks: ಮಳೆಗಾಲದ ಸಂಜೆಗೆ ಪರ್ಫೆಕ್ಟ್‌ ಸ್ನ್ಯಾಕ್ಸ್‌ ಬೇಕು ಅಂದ್ರೆ ಈ ಆಲೂಗೆಡ್ಡೆ ರೆಸಿಪಿ ಟ್ರೈ ಮಾಡಿ, ಸಖತ್‌ ಆಗಿರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Potato Snacks: ಮಳೆಗಾಲದ ಸಂಜೆಗೆ ಪರ್ಫೆಕ್ಟ್‌ ಸ್ನ್ಯಾಕ್ಸ್‌ ಬೇಕು ಅಂದ್ರೆ ಈ ಆಲೂಗೆಡ್ಡೆ ರೆಸಿಪಿ ಟ್ರೈ ಮಾಡಿ, ಸಖತ್‌ ಆಗಿರುತ್ತೆ

Potato Snacks: ಮಳೆಗಾಲದ ಸಂಜೆಗೆ ಪರ್ಫೆಕ್ಟ್‌ ಸ್ನ್ಯಾಕ್ಸ್‌ ಬೇಕು ಅಂದ್ರೆ ಈ ಆಲೂಗೆಡ್ಡೆ ರೆಸಿಪಿ ಟ್ರೈ ಮಾಡಿ, ಸಖತ್‌ ಆಗಿರುತ್ತೆ

ಮಳೆಗಾಲದಲ್ಲಿ ಕುರುಕಲು ತಿಂಡಿ ತಿನ್ನುವ ಬಯಕೆ ಹೆಚ್ಚುವುದು ಸಹಜ. ಹಾಗಂತ ಹೊರಗಡೆ ತಿಂದ್ರೆ ಆರೋಗ್ಯ ಕೆಡುತ್ತೆ. ಅದಕ್ಕಾಗಿ ನೀವು ಮನೆಯಲ್ಲೇ ಆಲೂಗೆಡ್ಡೆಯಿಂದ ತಯಾರಿಸಬಹುದಾದ ಈ ರೆಸಿಪಿ ಟ್ರೈ ಮಾಡಿ. ಇದನ್ನು ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಇದನ್ನು ಮಾಡೋದು ಹೇಗೆ, ಏನೆಲ್ಲಾ ಸಾಮಗ್ರಿಗಳು ಬೇಕು ನೋಡಿ.

ಮಳೆಗಾಲದ ಸಂಜೆಗೆ ಪರ್ಫೆಕ್ಟ್‌ ಸ್ನ್ಯಾಕ್ಸ್‌ ಬೇಕು ಅಂದ್ರೆ ಈ ಆಲೂಗೆಡ್ಡೆ ರೆಸಿಪಿ ಟ್ರೈ ಮಾಡಿ, ಸಖತ್‌ ಆಗಿರುತ್ತೆ
ಮಳೆಗಾಲದ ಸಂಜೆಗೆ ಪರ್ಫೆಕ್ಟ್‌ ಸ್ನ್ಯಾಕ್ಸ್‌ ಬೇಕು ಅಂದ್ರೆ ಈ ಆಲೂಗೆಡ್ಡೆ ರೆಸಿಪಿ ಟ್ರೈ ಮಾಡಿ, ಸಖತ್‌ ಆಗಿರುತ್ತೆ

ಆಲೂಗೆಡ್ಡೆ ಸಖತ್‌ ಟೇಸ್ಟಿ ರುಚಿಯನ್ನು ಹೊಂದಿರುತ್ತದೆ. ಇದರಿಂದ ತಯಾರಿಸುವ ಖಾದ್ಯಗಳು ಹಲವರಿಗೆ ಫೇವರಿಟ್‌. ಆಲೂಗೆಡ್ಡೆ ರೆಸಿಪಿಗಳು ಮಕ್ಕಳಿಗೂ ಹೆಚ್ಚು ಇಷ್ಟವಾಗುತ್ತದೆ. ಮಳೆಗಾಲದ ಸಂಜೆಗಾಗಿ ನೀವು ಫರ್ಫೆಕ್ಟ್‌ ಸ್ನ್ಯಾಕ್ಸ್‌ ತಯಾರಿಸಲು ಎದುರು ನೋಡುತ್ತಿದ್ದರೆ ನಿಮಗಾಗಿ ಇಲ್ಲಿದೆ ವಿಶೇಷವಾದ ತಿಂಡಿ. ಇದನ್ನು ಆಲೂಗೆಡ್ಡೆ ತಿರುಳಿನಿಂದ ತಯಾರಿಸಲಾಗುತ್ತದೆ. ಸಂಜೆ ಹೊತ್ತಿಗೆ ಬಿಸಿಬಿಸಿಯಾಗಿ ಈ ಸ್ನ್ಯಾಕ್ಸ್‌ ತಯಾರಿಸಿದ್ರೆ ಮನೆಮಂದಿಯೆಲ್ಲಾ ಮತ್ತೆ ಬೇಕು ಅನ್ನುತ್ತಾರೆ. ಕಡಿಮೆ ಸಾಮಗ್ರಿ ಬಳಸಿ, ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಈ ತಿನಿಸು ಸಖತ್‌ ಟೇಸ್ಟಿ ಆಗಿರುತ್ತದೆ.

ಆಲೂಗೆಡ್ಡೆ ಸ್ನ್ಯಾಕ್ಸ್‌

ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ - ನಾಲ್ಕು, ಹಸಿಮೆಣಸು - ಮೂರು, ಶುಂಠಿ - ಸಣ್ಣ ತುಂಡು, ಜೀರಿಗೆ - ಒಂದು ಚಮಚ, ಅರಿಸಿನ - ಕಾಲು ಚಮಚ, ನೀರು - ಅಗತ್ಯ ತಕ್ಕಷ್ಟು, ರವೆ - ಒಂದೂವರೆ ಕಪ್‌, ಟೊಮೆಟೊ - ಒಂದು, ಅಡುಗೆ ಸೋಡಾ - ಕಾಲು ಚಮಚ, ಎಣ್ಣೆ - ಕರಿಯಲು, ಕರಿಬೇವು- ಎರಡು ಎಸಳು.

ಆಲೂಗೆಡ್ಡೆ ಸ್ನ್ಯಾಕ್ಸ್‌ ತಯಾರಿಸುವ ವಿಧಾನ

ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಮಿಕ್ಸಿ ಜಾರ್‌ನಲ್ಲಿ ಹಸಿಮೆಣಸು, ಶುಂಠಿ, ಜೀರಿಗೆ, ಅರಿಸಿನ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯ ಎನ್ನಿಸಿದರೆ ಮಾತ್ರ ರುಬ್ಬುವಾಗ ಸ್ವಲ್ಪ ನೀರು ಸೇರಿಸಿ. ಈ ಮಿಶ್ರಣವನ್ನು ಒಂದು ಪಾತ್ರಗೆ ಹಾಕಿ. ಅದರಲ್ಲಿ ರವೆ, ಹೆಚ್ಚಿಕೊಂಡ ಟೊಮೆಟೊ, ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಬೇಯಿಸಿಕೊಂಡ ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಸ್ಮ್ಯಾಶ್‌ ಮಾಡಿ ಸೇರಿಸಿ. ಈ ಮಿಶ್ರಣ ಗಟ್ಟಿಯಾಗಿ ಇರಬೇಕು. ಕೊನೆಯಲ್ಲಿ ಕರಿಬೇವು ಹಾಗೂ ಜೀರಿಗೆ ಸೇರಿಸಿ ಮಿಶ್ರಣ ಮಾಡಿ. ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಆಲೂಗೆಡ್ಡೆ ಮಿಶ್ರಣವನ್ನು ಉಂಡೆ ತಯಾರಿಸಿ ಎಣ್ಣೆಗೆ ಬಿಟ್ಟು ಗೋಲ್ಡನ್‌ ಬ್ರೌನ್‌ ಬರುವವರೆಗೂ ಹುರಿದುಕೊಳ್ಳಿ. ನಂತರ ಟಿಶ್ಯೂ ಪೇಪರ್‌ ಮೇಲೆ ಹರಡಿ.

ಈ ರೆಸಿಪಿ ಗರಿಗರಿಯಾಗಿ, ಖಾರ ಖಾರವಾಗಿ ರುಚಿಯಾಗಿರುವ ಕಾರಣ ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳಿಗೆ ಟೊಮೆಟೊ ಕೆಚಪ್‌ ಜೊತೆ ಇದನ್ನು ತಿನ್ನಲು ಕೊಟ್ಟರೆ ಅವರು ಖುಷಿಯಿಂದ ತಿನ್ನುತ್ತಾರೆ.

Whats_app_banner