Rava aloo Rolls: ಭಾನುವಾರ ಸಂಜೆ ಮಕ್ಕಳಿಗೆ ವಿಶೇಷವಾದ ತಿಂಡಿ ಮಾಡ್ಬೇಕು ಅಂತಿದ್ರೆ ಆಲೂಗಡ್ಡೆ-ರವೆ ರೋಲ್ ಮಾಡಿ, ಸಖತ್ ಆಗಿರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Rava Aloo Rolls: ಭಾನುವಾರ ಸಂಜೆ ಮಕ್ಕಳಿಗೆ ವಿಶೇಷವಾದ ತಿಂಡಿ ಮಾಡ್ಬೇಕು ಅಂತಿದ್ರೆ ಆಲೂಗಡ್ಡೆ-ರವೆ ರೋಲ್ ಮಾಡಿ, ಸಖತ್ ಆಗಿರುತ್ತೆ

Rava aloo Rolls: ಭಾನುವಾರ ಸಂಜೆ ಮಕ್ಕಳಿಗೆ ವಿಶೇಷವಾದ ತಿಂಡಿ ಮಾಡ್ಬೇಕು ಅಂತಿದ್ರೆ ಆಲೂಗಡ್ಡೆ-ರವೆ ರೋಲ್ ಮಾಡಿ, ಸಖತ್ ಆಗಿರುತ್ತೆ

ಭಾನುವಾರದ ಹೊತ್ತು ಮಕ್ಕಳಿಗೆ ಏನಾದ್ರೂ ಸ್ಪೆಷಲ್ ಮಾಡಿಕೊಡಬೇಕು ಅಂತ ತಾಯಿಗೆ ಅನ್ನಿಸುವುದು ಸಹಜ. ಹೊರಗಡೆ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು, ಮನೆಯಲ್ಲೇ ವೆರೈಟಿ ತಿಂಡಿ ಮಾಡಿ ಮಕ್ಕಳನ್ನು ಖುಷಿ ಪಡಿಸಬಹುದು. ಅಂತಹ ಸ್ಪೆಷಲ್ ತಿನಿಸುಗಳಲ್ಲಿ ಆಲೂಗಡ್ಡೆ–ರವಾ ರೋಲ್ ಕೂಡ ಒಂದು. ಇದನ್ನು ಮಾಡೋದು ಸುಲಭ. ಖಂಡಿತ ಇದು ಮನೆಮಂದಿಗೆಲ್ಲಾ ಇಷ್ಟವಾಗುತ್ತೆ.

ಆಲೂಗೆಡ್ಡೆ ರವಾ ರೋಲ್ ರೆಸಿಪಿ
ಆಲೂಗೆಡ್ಡೆ ರವಾ ರೋಲ್ ರೆಸಿಪಿ

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಏನು ತಿಂಡಿ ಕೊಟ್ರು ತಿನ್ನುವುದಿಲ್ಲ. ಯಾವುದೇ ರುಚಿಕರ ತಿಂಡಿ ಮಾಡಿದ್ರು ಮುಖ ಸಿಂಡರಿಸಿಕೊಳ್ಳುತ್ತಾರೆ. ಮಾತ್ರವಲ್ಲ ಸಂಜೆ ಹೊತ್ತು ಹೊಸ ಹೊಸ ರುಚಿಯ ಸ್ನ್ಯಾಕ್ಸ್‌ಗಾಗಿ ಪೀಡಿಸುತ್ತಾರೆ. ಕೊಟ್ಟಿಲ್ಲ ಅಂದರೆ ಹೊರಗಡೆ ಕರೆದುಕೊಂಡು ಹೋಗಿ ಕೊಡಿಸುವಂತೆ ಹಟ ಮಾಡುತ್ತಾರೆ. ಹೊರಗಡೆಯ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳ ಆರೋಗ್ಯ ಹಾಳಾಗುತ್ತೆ ಅಂತ ಚಿಂತೆ ಮಾಡೋದು ಮನೆಯಲ್ಲಿ ಬಗೆ ಬಗೆಯ ತಿಂಡಿ ಮಾಡುತ್ತಾರೆ.

ಭಾನುವಾರ ಹೊತ್ತಂತು ಮಕ್ಕಳು ಮನೆಯಲ್ಲೇ ಇರುವ ಕಾರಣ ವಿಶೇಷ ತಿನಿಸುಗಳು ಬೇಕು ಎಂಬ ಆಸೆ ವ್ಯಕ್ತಪಡಿಸುತ್ತಾರೆ. ಈ ದಿನ ನೀವು ಮಕ್ಕಳಿಗಾಗಿ ವಿಶೇಷವಾಗಿ ಏನಾದ್ರೂ ಮಾಡಿಕೊಡಬೇಕು ಅಂತ ಅಂದುಕೊಳ್ಳುತ್ತಿದ್ದರೆ, ಆಲೂ ರವಾ ರೋಲ್ ಮಾಡಬಹುದು. ಇದು ನಿಜಕ್ಕೂ ತುಂಬಾನೇ ರುಚಿಯಾಗಿರುತ್ತೆ, ಇದರ ಹೆಸರು ಕೂಡ ಮಕ್ಕಳು ಕೇಳಿರುವುದಿಲ್ಲ. ಇದರಿಂದ ಅವರಿಗೆ ಹೊಸ ತಿಂಡಿ ಅಂತ ಅನ್ನಿಸಬಹುದು. ಇದು ದೊಡ್ಡವರಿಗೂ ಇಷ್ಟವಾಗುತ್ತೆ.

ಆಲೂ ರವಾ ರೋಲ್ ರೆಸಿಪಿ

ರೋಲ್‌ಗೆ ಬೇಕಾದ ಸಾಮಗ್ರಿಗಳು: ಉಪ್ಪಿಟ್ಟು ರವೆ – ಒಂದೂವರೆ ಕಪ್, ಮೊಸರು – ಒಂದೂವರೆ ಕಪ್, ನೀರು – ಕಾಲು ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಇನೋ ಪುಡಿ - ಒಂದೂವರೆ ಟೀ ಚಮಚ

ರೋಲ್ ಒಳಗೆ ತುಂಬಲು: ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ – 2 ಕಪ್, ಎಣ್ಣೆ – 1 ಚಮಚ, ಈರುಳ್ಳಿ – 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು), ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ, ಸಾಸಿವೆ – 1 ಟೀ ಚಮಚ, ಜೀರಿಗೆ – 1 ಟೀ ಚಮಚ, ಅರಿಶಿನ ಪುಡಿ – 1/2 ಟೀ ಚಮಚ, ಖಾರದ ಪುಡಿ – 1 ಟೀ ಚಮಚ, ಕೊತ್ತಂಬರಿ ಪುಡಿ – 1 ಟೀ ಚಮಚ, ಕೊತ್ತಂಬರಿ ಸೊಪ್ಪು - ಸ್ವಲ್ಪ

ಒಗ್ಗರಣೆಗೆ: ಎಣ್ಣೆ – 1 ಟೀ ಚಮಚ, ಸಾಸಿವೆ – ಅರ್ಧ ಚಮಚ, ಅರಿಶಿನ ಪುಡಿ – ಅರ್ಧ ಟೀ ಚಮಚ, ಖಾರದ ಪುಡಿ – 1 ಟೀ ಚಮಚ, ಕೊತ್ತಂಬರಿ ಸೊಪ್ಪು, ನೀರು– ಕಾಲು ಕಪ್‌.

ರವಾ ಆಲೂ ರೋಲ್ ತಯಾರಿಸುವ ವಿಧಾನ

ಮೊದಲು ಪಾತ್ರೆಯಲ್ಲಿ ಉಪ್ಪಿಟ್ಟು ರವೆ ಹಾಕಿ ಅದಕ್ಕೆ ಮೊಸರು, ಉಪ್ಪು, ನೀರು ಸೇರಿಸಿ ಚೆನ್ನಾಗಿ ಕಲೆಸಿ ಪಕ್ಕಕ್ಕೆ ಇಡಿ. ಈಗ ಪ್ಯಾನ್‌ವೊಂದರಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜಿರಿಗೆ, ಹಸಿಮೆಣಸು, ಈರುಳ್ಳಿ, ಹಸಿಮೆಣಸು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಅದನ್ನು ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿದ ನಂತರ ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ ಜೊತೆ ಸೇರಿಸಿ. ನಂತರ ಮೇಲೆ ರೋಲ್ ಒಳಗೆ ತುಂಬಲು ತಿಳಿಸಿದ ಎಲ್ಲಾ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಎಲ್ಲವೂ ಬೆಂದಿದೆ ಅನ್ನಿಸಿದಾಗ ತಣ್ಣಗಾಗಲು ಬಿಡಿ. ನಂತರ ಇದನ್ನು ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.

ಈಗ ಮೊದಲೇ ಮಾಡಿಟ್ಟುಕೊಂಡ ರವೆ ಮಿಶ್ರಣಕ್ಕೆ ಇನೋ ಪುಡಿ ಸೇರಿಸಿ. ಈಗ ಈ ಮಿಶ್ರಣವನ್ನು ಉದ್ದನೆಯ ಸಪೂರ ಲೋಟಕ್ಕೆ ಸೇರಿಸಿ. ಚಿಕ್ಕ ಟೀ ಲೋಟವಾದರೆ ಬೆಸ್ಟ್‌. ಅದರ ಮೇಲೆ ಆಲೂಗಡ್ಡೆ ಮಿಶ್ರಣದ ಉಂಡೆ ಇರಿಸಿ. ನಂತರ ರವೆಯ ಹಿಟ್ಟಿನಲ್ಲಿ ಆಲೂಗಡ್ಡೆಯನ್ನು ಮುಚ್ಚಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಇಡ್ಲಿ ಬೇಯಿಸುವಂತೆ ಸ್ವಲ್ಪ ಹೊತ್ತು ಬೇಯಿಸಿ. ನಂತರ ಇದನ್ನು ಲೋಟದಿಂದ ಹೊರ ತೆಗೆದು ದುಂಡಗೆ ಕತ್ತರಿಸಿಕೊಳ್ಳಿ. 

ಈಗ ಒಂದು ಬಾಣಲಿ ತೆಗೆದುಕೊಂಡು ಅದರಲ್ಲಿ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಸಾಸಿವೆ, ಅರಿಸಿನ, ಖಾರದಪುಡಿ ಸೇರಿಸಿ/ ಈ ಒಗ್ಗರಣೆಗೆ ಸ್ವಲ್ಪ ನೀರು ಸೇರಿಸಿ. ನೀರು ಚೆನ್ನಾಗಿ ಕುದಿಸಿ ಒಗ್ಗರಣೆ ಜೊತೆ ಮಿಶ್ರಣವಾದಾಗ ಕೊತ್ತಂಬರಿ ಸೊಪ್ಪು ಉದುರಿಸಿ, ಬೇಕಿದ್ದರೆ ಇದಕ್ಕೆ ಚಾಟ್ ಮಸಾಲ್ ಸೇರಿಸಿ. ಇದಕ್ಕೆ ಕತ್ತರಿಸಿ ರವಾ ಆಲೂ ಸೇರಿಸಿ ಫ್ರೈ ಮಾಡಿ. ಈ ರವಾ ರೋಲ್ ಖಂಡಿತ ಮಕ್ಕಳಿಗೆ ಇಷ್ಟವಾಗುತ್ತದೆ. ಇದು ದೊಡ್ಡವರಿಗೂ ಸಂಜೆ ಚಹಾ ಜೊತೆ ನೆಂಜಿಕೊಂಡು ತಿನ್ನಲು ಚೆನ್ನಾಗಿರುತ್ತದೆ.

–––‌

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner