Ganesh Chaturthi: ಮೋದಕ ಪ್ರಿಯ ಗಜಾನನ, ಗೌರಿ ಗಣೇಶ ಹಬ್ಬಕ್ಕೆ ಸವಿಯಾದ ಮೋದಕ ರೆಸಿಪಿ ಹೀಗೆ ಮಾಡಿ, ಇಲ್ಲಿದೆ 2 ಬಗೆಯ ಮೋದಕ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  Ganesh Chaturthi: ಮೋದಕ ಪ್ರಿಯ ಗಜಾನನ, ಗೌರಿ ಗಣೇಶ ಹಬ್ಬಕ್ಕೆ ಸವಿಯಾದ ಮೋದಕ ರೆಸಿಪಿ ಹೀಗೆ ಮಾಡಿ, ಇಲ್ಲಿದೆ 2 ಬಗೆಯ ಮೋದಕ ಪಾಕವಿಧಾನ

Ganesh Chaturthi: ಮೋದಕ ಪ್ರಿಯ ಗಜಾನನ, ಗೌರಿ ಗಣೇಶ ಹಬ್ಬಕ್ಕೆ ಸವಿಯಾದ ಮೋದಕ ರೆಸಿಪಿ ಹೀಗೆ ಮಾಡಿ, ಇಲ್ಲಿದೆ 2 ಬಗೆಯ ಮೋದಕ ಪಾಕವಿಧಾನ

Ganesh Chaturthi Modak Recipe: ಗೌರಿ ಗಣೇಶ ಹಬ್ಬಕ್ಕೆ ಮೋದಕ ಮಾಡಲು ಬಯಸಿದರೆ ಇಲ್ಲಿ ಮೋದಕ ರೆಸಿಪಿ ನೀಡಲಾಗಿದೆ. ಗಣೇಶನಿಗೆ ಮೋದಕ ಎಂದರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಗಣಪತಿಯನ್ನು ಮೋದಕ ಪ್ರಿಯ ಗಜಾನನ ಎಂದು ಕರೆಯಲಾಗುತ್ತದೆ.

ಮೋದಕ ರೆಸಿಪಿ
ಮೋದಕ ರೆಸಿಪಿ

ಗಣೇಶನ ಜನ್ಮದಿನವನ್ನು ಎಲ್ಲೆಡೆ ಗಣೇಶ ಚತುರ್ಥಿಯಾಗಿ ಆಚರಿಸುತ್ತಿದ್ದು, ಚೌತಿಗೆ ಬಗೆಬಗೆಯ ಸಿಹಿತಿಂಡಿ ಮಾಡುತ್ತಾರೆ. ಗಣೇಶ ಚತುರ್ಥಿ ಅಥವಾ ಚೌತಿ ಹಬ್ಬಕ್ಕೆ ಮೋದಕ ಇಲ್ಲದೆ ಇದ್ದರೆ ಹೇಗೆ? ಮೋದಕ ಪ್ರಿಯ ಗಜಾನನ ಖುಷಿ ಪಡಿಸಲು ಹಬ್ಬಕ್ಕೆ ಮೋದಕವನ್ನು ಮನೆಯಲ್ಲಿ ನೀವೇ ತಯಾರಿಸಬಹುದು. "ಮೋದಕದ ಒಳಗಿನ ಹೂರಣವು ತಾಜಾ ತುರಿದ ತೆಂಗಿನಕಾಯಿ ಮತ್ತು ಬೆಲ್ಲ ಒಳಗೊಂಡಿರುತ್ತದೆ. ಮೋದಕದ ಹೊರಗಿನ ಪದರವನ್ನು ಅಕ್ಕಿ ಹಿಟ್ಟು ಅಥವಾ ಗೋದಿ ಹಿಟ್ಟಿನಿಂದ ಸಿದ್ಧಪಡಿಸಲಾಗುತ್ತದೆ. ಯಾವುದೇ ಕೃತಕ ಬಣ್ಣ ಬಳಸದೆ ತಯಾರಿಸಬೇಕು. ಮೋದಕಕ್ಕೆ ತುಪ್ಪ ಬಳಸಲಾಗುತ್ತದೆ. ತೆಂಗಿನಕಾಯಿ ಮೋದಕದಲ್ಲಿ ಸ್ಟೆರಾಲ್‌ ಇದ್ದು, ಎಲ್‌ಡಿಎಲ್‌ ಕಡಿಮೆ ಮಾಡಲು ಸಹಕರಿಸುತ್ತದೆ" ಎಂದು ಶೆಫ್‌ ಲಲಿತ್‌ ಚುನಾರಾ ಹೇಳಿದ್ದಾರೆ.

1. ಮಾವಾ ಮತ್ತು ಬಿಸ್ಚಫ್ ಮೋದಕ

ಇದು ಸ್ಟೀಮ್ಡ್‌ ಮೋದಕವಾಗಿದ್ದು, ತಣ್ಣಗೆ ಅಥವಾ ಬಿಸಿಯಾಗಿ ಸರ್ವ್‌ ಮಾಡಬಹುದು.

ಮೋದಕ ತಯಾರಿಸಲು ಬೇಕಾದ ಪದಾರ್ಥಗಳು

ಕೋಟಿಂಗ್‌ಗೆ

  • ಮೋದಕ ಹಿಟ್ಟು - 1 ಕಪ್
  • ನೀಲಿ ಬಟಾಣಿ ನೀರು (ಬ್ಲೂ ಪಿಯಾ ವಾಟರ್‌) - 1 ಕಪ್
  • ಎಳ್ಳೆಣ್ಣೆ: ಒಂದು ಟೇಬಲ್‌ ಚಮಸ
  • ರುಚಿಗೆ ತಕ್ಕಷ್ಟು ಉಪ್ಪು
  • ಮೋದಕ ತಯಾರಿಸುವ ವಿಧಾನ
  • ಬ್ಲೂ ಪಿಯಾ ವಾಟರ್‌ ಅನ್ನು ಕುದಿಸಿ
  • ಹಿಟ್ಟು ಸೇರಿಸಿ ಬೆರೆಸಿ, ಸ್ಟವ್‌ ಆಫ್‌ ಮಾಡಿ
  • ಮೇಲಿನ ಮಿಶ್ರಣವನ್ನು ಐದು ನಿಮಿಷಗಳ ಕಾಲ ಮುಚ್ಚಿಡಿ
  • ಹಿಟ್ಟುನ್ನು ಉತ್ತಮ ಹದಕ್ಕೆ ಬರುವವರೆಗೆ ಐದು ನಿಮಿಷ ಮಿಕ್ಸ್‌ ಮಾಡಿ.
  • ಬಳಿಕ ಆಕಾರ ಮಾಡಿ ಮಿಶ್ರಣ ತುಂಬಿಸಿ.

ಮಾವಾ ಕಪ್‌

  • ಪುಡಿಮಾಡಿದ ಬಿಸ್ಕಾಫ್ ಕುಕೀಸ್ 1 ಕಪ್
  • ಎಲ್ಲವನ್ನೂ ಒಟ್ಟಿಗೆ ಕಡಿಮೆ ಉರಿಯಲ್ಲಿ ಇಡಿ ಮತ್ತು ಏಲಕ್ಕಿ ಪುಡಿ ಮತ್ತು ಬಿಸ್ಕಫ್ ಸ್ಪ್ರೆಡ್ ಸೇರಿಸಿ
  • ಅಕ್ಕಿ ಲೇಪನದೊಂದಿಗೆ ಫಿಲ್‌ ಮಾಡಿ
  • 8 ರಿಂದ 10 ನಿಮಿಷಗಳ ಕಾಲ ಕಡಿಮೆ ತಾಪಮಾನದಲ್ಲಿ ಸ್ಟೀಮರ್‌ನಲ್ಲಿ ಇಡಿ
  • ದೇಸಿ ತುಪ್ಪ ಸವರಿ

2. ತೆಂಗಿನಕಾಯಿ ಮತ್ತು ಏಪ್ರಿಕಾಟ್ ಮೋದಕ

ಬೇಕಾಗುವ ಪದಾರ್ಥಗಳು

  • 220 ಗ್ರಾಂ ನೀರು
  • 1/2 ಟೀಸ್ಪೂನ್ ಉಪ್ಪು
  • 1 ಟೀಸ್ಪೂನ್ ತುಪ್ಪ
  • 200 ಗ್ರಾಂ ನಾಚ್ನಿ ಅಟ್ಟಾ (ಗೋಧಿ ಹಿಟ್ಟು) ಸಿದ್ಧವಾಗಿರಲಿ

ಮೋದಕ ತಯಾರಿಸುವ ವಿಧಾನ

  • ನೀರು ಬಿಸಿ ಮಾಡಿ. ಉಪ್ಪು ಮತ್ತು ತುಪ್ಪ ಹಾಕಿ
  • ಬಿಸಿಯಾದ ಬಳಿಕ ಗೋಧಿ ಹಿಟ್ಟು ಹಾಕಿ. ಒಂದು ನಿಮಿಷ ಕುದಿಸಿ. ಮರದ ಸೌಟ್‌ನಲ್ಲಿ ಒಂದು ನಿಮಿಷ ಮಗುಚುತ್ತ ಇರಿ. ಸ್ಟವ್‌ ಆಫ್‌ ಮಾಡಿ.
  • ಪುಡಿಯು ಎಲ್ಲಾ ನೀರನ್ನು ಹೀರಿದಾಗ ಮುಚ್ಚಳ ಹಾಕಿ. ಐದು ನಿಮಿಷ ಶಾಖದಲ್ಲಿ ಇರಲಿ.
  • ಇದರಿಂದ ಗೋಧಿ ಹಿಟ್ಟು ಹದವಾಗುತ್ತದೆ.
  • ಬೌಲ್‌ನಲ್ಲಿ ಈ ಹಿಟ್ಟನ್ನು ಹಾಕಿ. ಐದು ನಿಮಿಷಗಳ ಕಾಲ ಹದ ಮಾಡಿ
  • ಅಗತ್ಯವಿದ್ದರೆ ಕೊಂಚ ನೀರು ಬಳಸಿ.

ಹೂರಣ

  • 250 ಗ್ರಾಂ ತಾಜಾ ತೆಂಗಿನ ತುರಿ
  • 100 ಗ್ರಾಂ ತೆಂಗಿನ ಸಕ್ಕರೆ
  • 1 ಗ್ರಾಂ ಏಲಕ್ಕಿ ಪುಡಿ
  • 1 ಗ್ರಾಂ ಒಣಗಿದ ಗುಲಾಬಿ ದಳಗಳು

ವಿಧಾನ

  • 10 ಹಸಿರು ಏಲಕ್ಕಿ ಬೀಜಗಳನ್ನು ಪುಡಿಮಾಡಿ.
  • ಒಣಗಿದ ಗುಲಾಬಿ ದಳಗಳನ್ನು ಟೋಸ್ಟ್ ಮಾಡಿ ಮತ್ತು ಅದನ್ನು ಪುಡಿಮಾಡಿ.
  • ಸ್ಟಫಿಂಗ್‌ಗಾಗಿ, ತೆಂಗಿನ ಸಕ್ಕರೆ ಕರಗುವ ತನಕ ಬಿಸಿ ಮಾಡಿ, ಕರಗಿದ ನಂತರ, ತುರಿದ ತೆಂಗಿನಕಾಯಿ ಮತ್ತು ಮಸಾಲೆ ಸೇರಿಸಿ. ಸಂಪೂರ್ಣವಾಗಿ ಮಿಶ್ರಣವಾಗುವವರೆಗೆ ಮಿಶ್ರಣ ಮಾಡಿ.

Whats_app_banner