ಕನ್ನಡ ಸುದ್ದಿ  /  ಜೀವನಶೈಲಿ  /  Food: ಭಾರತದ ಈ ರಾಜ್ಯಗಳಲ್ಲಿ ಗೋಭಿ ಮಂಚೂರಿಯನ್‌,ಮೊಲದ ಮಾಂಸ ನಿಷೇಧ;ಆ ದೇಶದಲ್ಲಿ ಚೀಸ್‌ ಬಳಸುವುದಿಲ್ಲ

Food: ಭಾರತದ ಈ ರಾಜ್ಯಗಳಲ್ಲಿ ಗೋಭಿ ಮಂಚೂರಿಯನ್‌,ಮೊಲದ ಮಾಂಸ ನಿಷೇಧ;ಆ ದೇಶದಲ್ಲಿ ಚೀಸ್‌ ಬಳಸುವುದಿಲ್ಲ

Food: ಗೋವಾದಲ್ಲಿ ಗೋಬಿ ಮಂಚೂರಿಯನ್‌ ಹಾಗೂ ಕೇರಳದಲ್ಲಿ ಮೊಲದ ಮಾಂಸ ನಿಷೇಧಿಸಲಾಗಿದೆ. ನಾರ್ವೆ ಮತ್ತು ಆಸ್ಟ್ರೇಲಿಯಾದಲ್ಲಿ ಮ್ಯಾಕರೋನಿ ಮತ್ತು ಚೀಸ್ ಎರಡನ್ನೂ ನಿಷೇಧಿಸಲಾಗಿದೆ. ಈ ಆಹಾರಗಳು ವಿಷ ಎಂಬ ಕಾರಣಕ್ಕೆ ಈ ಆಹಾರಗಳನ್ನು ಬಳಸಲಾಗುತ್ತಿಲ್ಲ.

ಭಾರತದ ಈ ರಾಜ್ಯಗಳಲ್ಲಿ ಗೋಭಿ ಮಂಚೂರಿಯನ್‌,ಮೊಲದ ಮಾಂಸ ನಿಷೇಧ
ಭಾರತದ ಈ ರಾಜ್ಯಗಳಲ್ಲಿ ಗೋಭಿ ಮಂಚೂರಿಯನ್‌,ಮೊಲದ ಮಾಂಸ ನಿಷೇಧ

Gobi Manchurian: ಮನೆಯಲ್ಲಿ ತಯಾರಿಸುವ ಆಹಾರದ ಜೊತೆಗೆ ನಾವು ಹೊರಗೆ ಹೋದಾಗ ಹೋಟೆಲ್‌ಗಳಲ್ಲಿ ನಮಗಿಷ್ಟವಾದ ಫುಡ್‌ ಆರ್ಡರ್‌ ಮಾಡಿ ತಿನ್ನುತ್ತೇವೆ. ಅದರಲ್ಲಿ ಜಂಕ್‌ ಫುಡ್‌ಗಳೇ ಹೆಚ್ಚು. ಬಹುತೇಕ ಎಲ್ಲಾ ಕಡೆ ಬೀದಿ ಬದಿ ತಿಂಡಿಗಳು ಭೋಜನಪ್ರಿಯರನ್ನು ಆಕರ್ಷಿಸುತ್ತದೆ. ಆದರೆ ಅವುಗಳಲ್ಲಿ ನಮ್ಮ ಆರೋಗ್ಯಕ್ಕೆ ಸಮಸ್ಯೆ ತರುವ ಎಷ್ಟೋ ಆಹಾರಗಳಿವೆ. ಅಂಥ ಆಹಾರಗಳನ್ನು ಕೆಲವೊಂದು ಕಡೆ ನಿಷೇಧಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಗೋವಾದಲ್ಲಿ ಗೋಬಿ ಮಂಚೂರಿಯನ್‌ ನಿಷೇಧ

ಗೋವಾದ ಮಪೂಸಾ ಪ್ರಾಂತ್ಯದಲ್ಲಿ ಗೋಬಿ ಮಂಚೂರಿಯನ್‌ ಚಾಟನ್ನು ಬಹಳ ಜನರು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಅದರಲ್ಲಿ ಬಳಸುವ ಕೆಂಪು ಬಣ್ಣ ಆರೋಗ್ಯಕ್ಕೆ ಬಹಳ ಹಾನಿಕಾರಕ. ಆದ್ದರಿಂದ ಕೌನ್ಸಿಲರ್ ತಾರಕ್ ಅರೋಲ್ಕರ್ ಗೋವಾದಲ್ಲಿ ಗೋಬಿ ಮಂಚೂರಿಯನ್‌ ನಿಷೇಧಿಸಿದ್ದಾರೆ.

ಸಂಪೂರ್ಣ ಸಸ್ಯಾಹಾರಿ ಪಟ್ಟಣ

ಗುಜರಾತ್‌ನ ಪಾಲಿತಾನಾ ಜೈನರ ಪವಿತ್ರ ಸ್ಥಳವಾಗಿದೆ. ಜೈನರು ಸಸ್ಯಾಹಾರಿಗಳಾಗಿರುವುದರಿಂದ ಸ್ಥಳೀಯ ಆಡಳಿತವು ಪಟ್ಟಣದಲ್ಲಿ ಮಾಂಸ, ಮೀನು, ಮೊಟ್ಟೆ ಸೇರಿದಂತೆ ಮುಂತಾದ ಮಾಂಸಾಹಾರಿ ಆಹಾರ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ನಗರವನ್ನು ಸಂಪೂರ್ಣ ಸಸ್ಯಾಹಾರಿ ವಲಯ ಎಂದು ಘೋಷಿಸಿದೆ.

ಜಂಕ್ ಫುಡ್ ನಿಷೇಧ

ಜಂಕ್‌ ಫುಡ್‌ಗಳು ಅನಾರೋಗ್ಯಕರವೆಂದು ಎಲ್ಲರಿಗೂ ತಿಳಿದಿದೆ. ಆದರೂ ಪಿಜ್ಜಾ, ಬರ್ಗರ್, ತಂಪು ಪಾನೀಯಗಳನ್ನು ಸೇವಿಸುವವರ ಸಂಖ್ಯೆಯೇ ಹೆಚ್ಚು. ಈ ಜಂಕ್ ಫುಡ್ ಮಾರಾಟವನ್ನು ಕಡಿಮೆ ಮಾಡಲು, ಪಂಜಾಬ್ ಮತ್ತು ರಾಜಸ್ಥಾನದ ಕೆಲವು ಶಾಲೆ ಮತ್ತು ಕಾಲೇಜುಗಳು ಪಿಜ್ಜಾ, ಬರ್ಗರ್ ಮತ್ತು ತಂಪು ಪಾನೀಯಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಆ ಕಾಲೇಜು ಮತ್ತು ಶಾಲೆಗಳ ಸುತ್ತಮುತ್ತ ಯಾವುದೇ ಅಂಗಡಿಗಳಲ್ಲಿ ಈ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಆ ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ನಿಷೇಧ ಹೇರಿದೆ.

ಮೊಲದ ಮಾಂಸ

ಕೇರಳದಲ್ಲಿ ಮೊಲಗಳನ್ನು ಕೊಂದು ಅಡುಗೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಈ ನಿಷೇಧವನ್ನು ಹೊರಡಿಸಿದೆ. ಆಂಧ್ರ, ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಕಡೆ ಮೊಲವನ್ನು ಬೇಟೆ ಆಡುವುದು, ಮಾಂಸ ಮಾರಾಟ, ತಿನ್ನುವುದನ್ನು ನಿಷೇಧಿಸಲಾಗಿದೆ.

ಹಾಗೇ ನಮ್ಮ ದೇಶದಲ್ಲಿ ಅತಿಯಾಗಿ ಸೇವಿಸುವ ಅಥವಾ ಸೇವಿಸುವ ಆಹಾರಗಳನ್ನು ಕೆಲವು ದೇಶಗಳಲ್ಲಿ ನಿಷೇಧಿಸಲಾಗಿದೆ.

ಭಾರತದಲ್ಲಿ ಬಹಳಷ್ಟು ಜನರು ರೆಡ್‌ ಬುಲ್‌ ಕುಡಿಯುತ್ತಾರೆ. ಆದರೆ ಇದನ್ನು ಫ್ರಾನ್ಸ್, ಡೆನ್ಮಾರ್ಕ್ ಮತ್ತು ಲಿಥುವೇನಿಯಾದಲ್ಲಿ ನಿಷೇಧಿಸಲಾಗಿದೆ. ಲಿಥುವೇನಿಯಾದಲ್ಲಿ 18 ವರ್ಷದೊಳಗಿನ ಮಕ್ಕಳು ಇದನ್ನು ಕುಡಿಯಬಾರದು. ವಯಸ್ಕರು ಇದನ್ನು ಕುಡಿಯಬಹುದು. ಫ್ರಾನ್ಸ್ ಮತ್ತು ಡೆನ್ಮಾರ್ಕ್‌ನಲ್ಲಿ ಯಾರೂ ರೆಡ್ ಬುಲ್ ಕುಡಿಯಬಾರದು. ಹೃದ್ರೋಗ, ಖಿನ್ನತೆ ಮತ್ತು ಅಧಿಕ ರಕ್ತದೊತ್ತಡವನ್ನು ಉಂಟುಮಾಡಬಹುದು ಎಂಬ ಕಾರಣಕ್ಕೆ ಅಲ್ಲಿನ ಸರ್ಕಾರಗಳು ಇದನ್ನು ನಿಷೇಧಿಸಿವೆ.

ಕಿಂಡರ್ ಜಾಯ್

ಕಿಂಡರ್‌ ಜಾಯ್‌ ಚಾಕೊಲೇಟನ್ನು ಇಲ್ಲಿ ಮಕ್ಕಳು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಅದನ್ನು ಅಮೆರಿಕದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಕ್ಕಳಲ್ಲಿ ಉಸಿರಾಟಕ್ಕೆ ತೊಂದರೆಯಾಗುವ ಸಾಧ್ಯತೆ ಇರುವ ಕಾರಣ ಅದರಲ್ಲಿರುವ ಚಾಕೊಲೇಟ್ ಬಾಲ್‌ಗಳನ್ನು ಸರ್ಕಾರ ನಿಷೇಧಿಸಿದೆ.

ಚೀಸ್ ಮ್ಯಾಕರೋನಿ

ಮ್ಯಾಕರೋನಿ ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ದೋಸೆಯಿಂದ ಪಿಜ್ಜಾವರೆಗೂ ಎಲ್ಲದಕ್ಕೂ ಚೀಸ್‌ ಬಳಸಲಾಗುತ್ತದೆ. ನಾರ್ವೆ ಮತ್ತು ಆಸ್ಟ್ರೇಲಿಯಾದಲ್ಲಿ ಮ್ಯಾಕರೋನಿ ಮತ್ತು ಚೀಸ್ ಎರಡನ್ನೂ ನಿಷೇಧಿಸಲಾಗಿದೆ.

ಒಟ್ಟಿನಲ್ಲಿ ನಮ್ಮ ದೇಶದಲ್ಲೂ ಆರೋಗ್ಯಕ್ಕೆ ಸಮಸ್ಯೆ ತರುವ ಅನೇಕ ಆಹಾರ ಪದಾರ್ಥಗಳಿದ್ದು ಅವುಗಳ ಕಡೆಗೆ ಆರೋಗ್ಯ ಇಲಾಖೆ ಗಮನ ನೀಡಬೇಕಿದೆ.

ವಿಭಾಗ