Worst Morning Foods: ದಿನವಿಡೀ ಆಕ್ಟಿವ್‌ ಆಗಿರಬೇಕು ಅಂದ್ರೆ ಬೆಳಗೆದ್ದು ಈ 5 ಬ್ರೇಕ್‌ಫಾಸ್ಟ್‌ ಐಟಂಗಳನ್ನು ಎಂದಿಗೂ ಸೇವಿಸದಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Worst Morning Foods: ದಿನವಿಡೀ ಆಕ್ಟಿವ್‌ ಆಗಿರಬೇಕು ಅಂದ್ರೆ ಬೆಳಗೆದ್ದು ಈ 5 ಬ್ರೇಕ್‌ಫಾಸ್ಟ್‌ ಐಟಂಗಳನ್ನು ಎಂದಿಗೂ ಸೇವಿಸದಿರಿ

Worst Morning Foods: ದಿನವಿಡೀ ಆಕ್ಟಿವ್‌ ಆಗಿರಬೇಕು ಅಂದ್ರೆ ಬೆಳಗೆದ್ದು ಈ 5 ಬ್ರೇಕ್‌ಫಾಸ್ಟ್‌ ಐಟಂಗಳನ್ನು ಎಂದಿಗೂ ಸೇವಿಸದಿರಿ

ಬೆಳಿಗ್ಗೆ ಎದ್ದು ನಾವು ಏನನ್ನು ಸೇವಿಸುತ್ತೇವೆ ಅಂದು ನಮ್ಮ ದಿನಚರಿಯನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ಬೆಳಗಿನ ಹೊತ್ತು ನಾವು ಸೇವಿಸುವ ಈ ಕೆಲವು ಬ್ರೇಕ್‌ಫಾಸ್ಟ್‌ ಐಟಂಗಳು ಖಂಡಿತ ಒಳ್ಳೆಯದಲ್ಲ ಎನ್ನುತ್ತಾರೆ ಪೌಷ್ಟಿಕ ತಜ್ಞ ಲೋವ್ನೀತ್‌ ಬಾತ್ರ. ಹಾಗಾದರೆ ಬೆಳಗಿನ ಹೊತ್ತು ಯಾವೆಲ್ಲಾ ಆಹಾರ ಸೇವಿಸಲು ಯೋಗ್ಯವಲ್ಲ ನೋಡಿ.

ಬೆಳಗೆದ್ದು ಈ ಬ್ರೇಕ್‌ಫಾಸ್ಟ್‌ ಐಟಂಗಳನ್ನು ಎಂದಿಗೂ ಸೇವಿಸದಿರಿ
ಬೆಳಗೆದ್ದು ಈ ಬ್ರೇಕ್‌ಫಾಸ್ಟ್‌ ಐಟಂಗಳನ್ನು ಎಂದಿಗೂ ಸೇವಿಸದಿರಿ

ಬೆಳಿಗ್ಗೆ ಎನ್ನುವುದು ದಿನದ ಮಹತ್ತರ ಘಟ್ಟ. ಬೆಳಗೆದ್ದು ನಿತ್ಯಕರ್ಮಗಳನ್ನು ಮುಗಿಸಿ, ಸರಿಯಾದ ಕ್ರಮದಲ್ಲಿ ಆಹಾರ ಸೇವಿಸಿ ನಂತರ ನಮ್ಮ ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಯೋಚಿಸುತ್ತೇವೆ. ಬೆಳಗಿನ ಸಮಯ ಎಂಬುದು ಕ್ವಾಲಿಟಿ ಟೈಮ್‌ ಇದ್ದ ಹಾಗೆ. ಬೆಳಗಿನ ಹೊತ್ತು ಹೇಗಿರುತ್ತೇವೋ ಅದು ನಮ್ಮ ಇಡೀ ದಿನದ ಮೇಲೆ ಅವಲಂಬಿತವಾಗಿರುತ್ತದೆ. ದಿನದ ನಮ್ಮ ಮೂಡ್‌ ಎನ್ನುವುದು ನಾವು ಸೇವಿಸುವ ಆಹಾರದ ಮೇಲೂ ಅವಲಂಬಿತವಾಗಿರುತ್ತದೆ. ಪೌಷ್ಟಿಕಾಂಶ ರಹಿತ, ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳು, ಕೊಬ್ಬಿನಾಂಶ, ಸಕ್ಕರೆ ಅಂಶ ತುಂಬಿರುವ ಆಹಾರ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಶಕ್ತಿ ಮಟ್ಟ ಕಡಿಮೆ ಇರುತ್ತದೆ ಮತ್ತು ಇದರಿಂದ ಇಡೀ ದಿನ ನಿಮ್ಮನ್ನು ಮಂದಗೊಳಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇದು ಮಧುಮೇಹಿಗಳಲ್ಲಿ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆಗೆ ಕಾರಣವಾಗಬಹುದು ಮತ್ತು ಕೆಲವರಲ್ಲಿ ರಕ್ತದೊತ್ತಡವು ಹೆಚ್ಚಬಹುದು.

ಆ ಕಾರಣಕ್ಕೆ ಮನಃಸ್ಫೂರ್ತಿಯಾಗಿ ಬೆಳಗಿನ ಉಪಾಹಾರ ಸೇವಿಸುವುದು ಮುಖ್ಯ. ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್‌, ವಿಟಮಿನ್‌, ಮಿನರಲ್ಸ್‌ನಿಂದ ಕೂಡಿರುವ ಸಮತೋಲಿತ ಬ್ರೇಕ್‌ಫಾಸ್ಟ್‌ ಸೇವಿಸುವುದರಿಂದ ನಮ್ಮ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಬೆಳಗಿನ ಹೊತ್ತು ಪೋಷಕಾಂಶ ಸಮೃದ್ಧ ಉಪಾಹಾರ ಸೇವಿಸಿದರೆ ಮಧ್ಯಾಹ್ನ ಊಟದವರೆಗೂ ಹಸಿವಿನ ಸಂಕಟವನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ.

ʼಬೆಳಿಗ್ಗೆ ಎದ್ದಾಗ ಕಚೇರಿ ಹೊರಡುವ ಗಡಿಬಿಡಿ ಕಾಡುವುದು ಸಹಜ. ಹಾಗಾಗಿ ಸುಲಭಕ್ಕೆ ತಯಾರಿಸಬಹುದಾದ ತಿನಿಸನ್ನು ತಯಾರಿಸಿ ತಿನ್ನುವುದನ್ನು ರೂಢಿಸಿಕೊಂಡಿರುತ್ತೇವೆ. ಇವು ತಕ್ಷಣಕ್ಕೆ ಹೊಟ್ಟೆ ತುಂಬಿಸಬಹುದು, ಆದರೆ ದೇಹಕ್ಕೆ ಅಗತ್ಯ ಎನ್ನಿಸುವ ಶಕ್ತಿ ನೀಡಲು ಇವುಗಳಿಂದ ಸಾಧ್ಯವಿಲ್ಲ. ಆ ಕಾರಣಕ್ಕೆ ಸಮತೋಲಿತ ಆಹಾರ ಸೇವಿಸಬೇಕು ಎನ್ನುತ್ತಾರೆ ತಜ್ಞರು. ಒಣಹಣ್ಣುಗಳು ಹಾಗೂ ಬೀಜಗಳಿಂದ ತಯಾರಿಸಿದ ಓಟ್ಸ್‌ ತಿನ್ನಬಹುದು, ವಿವಿಧ ತರಕಾರಿಗಳಿಂದ ತಯಾರಿಸಿದ ಸ್ಟ್ರ್ಯಾಂಬಲ್ಡ್‌ ಎಗ್‌ ಟ್ರೈ ಮಾಡಬಹುದು. ಇದರಲ್ಲಿ ಮೆಗ್ನೀಶಿಯಂ, ಪೊಟ್ಯಾಶಿಯಂ, ಆರೋಗ್ಯಕ್ಕೆ ಉತ್ತಮವಾದ ಮೊನೊಸ್ಯಾಚುರೇಟೆಡ್‌ ಕೊಬ್ಬಿನಾಂಶ, ಉತ್ಕರ್ಷಣ ನಿರೋಧಕ ಅಂಶಗಳು ಇರುತ್ತವೆ. ಬೆಳಗಿನ ಹೊತ್ತು ನಾವು ಸೇವಿಸುವ ಆಹಾರವು ನಮ್ಮ ಇಡೀ ದಿನ ಧನಾತ್ಮಕವಾಗಿರುವಂತೆ ನೋಡಿಕೊಳ್ಳುತ್ತದೆʼ ಎಂದು ಪೌಷ್ಟಿಕ ತಜ್ಞ ಲೋವ್ನೀತ್‌ ಬಾತ್ರ ತಮ್ಮ ಇತ್ತೀಚಿಗಿನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ದಿನವಿಡೀ ನೀವು ಸೂಪರ್‌ ಏನರ್ಜಿಟಿಕ್‌ ಆಗಿರಬೇಕು ಅಂದ್ರೆ ಬೆಳಗಿನ ಹೊತ್ತು ಯಾವುದೇ ಕಾರಣಕ್ಕೂ ಈ ಕೆಲವು ಆಹಾರಗಳನ್ನು ಸೇವಿಸದಿರಿ ಎನ್ನುತ್ತಾರೆ ಬಾತ್ರಾ.

ಕಾಫಿ

ಬೆಳಿಗ್ಗೆ ಕಾಫಿ ಕುಡಿಯುವುದರಿಂದ ದೇಹದಲ್ಲಿ ಕಾರ್ಟಿಸೋಲ್‌ ಮಟ್ಟದಲ್ಲಿ ಏರಿಕೆಯಾಗಬಹುದು. ಬೆಳಗಿನ ಹೊತ್ತು ನಮ್ಮ ದೇಹದಲ್ಲಿ ಕಾರ್ಟಿಸೋಲ್‌ ಹಾರ್ಮೋನ್‌ ಮಟ್ಟ ಹೆಚ್ಚಿರುತ್ತದೆ. ಕಾರ್ಟಿಸೋಲ್‌ ಹಾರ್ಮೋನ್‌ ದೇಹವನ್ನು ಕ್ರಿಯಾಶೀಲವಾಗಿರಿಸಲು ಸಹಾಯ ಮಾಡುತ್ತದೆ. ಆದರೆ ಕಾಫಿ ಕುಡಿಯುವುದರಿಂದ ಕಾರ್ಟಿಸೋಲ್‌ ಮಟ್ಟದಲ್ಲಿ ಇನ್ನಷ್ಟು ಏರಿಕೆಯಾಗುತ್ತದೆ. ಇದು ಹಾರ್ಮೋನ್‌ ಸಮತೋಲನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ರಕ್ತದೊತ್ತಡ ಸೇರಿದಂತೆ ಇತರ, ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಿಮಗೆ ಕಾಫಿ ಕುಡಿಯದೇ ಇರಲು ಸಾಧ್ಯವಿಲ್ಲ ಎಂದಾದರೆ ತಿಂಡಿ ತಿಂದ ನಂತರ ಕಾಫಿ ಕುಡಿಯುವುದು ಉತ್ತಮ.

ಹಣ್ಣಿನ ಜ್ಯೂಸ್‌

ಹಣ್ಣಿನ ರಸ ಅಥವಾ ಜ್ಯೂಸ್‌ನಲ್ಲಿ ನಾರಿನಾಂಶವಿರುವುದಿಲ್ಲ. ಬೆಳಗೆದ್ದು ಇದನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆಯಾಗುತ್ತದೆ. ಮಧುಮೇಹ ಸೇರಿದಂತೆ ಇತರ ಚಯಾಪಚಯಕ್ಕೆ ಸಂಬಂಧಿಸಿದ ತೊಂದರೆ ಇರುವವರು ಹಣ್ಣಿನ ರಸದ ಬದಲು ಹಣ್ಣು ಸೇವಿಸಬಹುದು. ನಿಂಬೆರಸ, ಸೌತೆಕಾಯಿ ರಸ, ಸತ್ತು ಇವುಗಳನ್ನು ಹಣ್ಣಿನ ಜ್ಯೂಸ್‌ ಬದಲಿಗೆ ಸೇವಿಸಬಹುದು.

ಬ್ರೇಕ್‌ಫಾಸ್ಟ್‌ ಸಿರಲ್ಸ್‌

ಬೆಳಗಿನ ಉಪಾಹಾರದಲ್ಲಿ ಸಿರಲ್ಸ್‌ಗಳ ಸೇವನೆ ಉತ್ತಮವಲ್ಲ ಎನ್ನುತ್ತಾರೆ ಭಾತ್ರಾ, ಅವು ಮೇಲ್ನೋಟಕ್ಕೆ ಆರೋಗ್ಯಕರವಾಗಿ ಕಂಡರೂ ಇವು ನಿಜವಾಗಿಯೂ ಹೆಚ್ಚು ಸಂಸ್ಕರಿಸಲ್ಪಡುತ್ತದೆ ಮತ್ತು ಅವುಗಳಲ್ಲಿ ಧಾನ್ಯಗಳ ಪ್ರಮಾಣ ಕಡಿಮೆ ಇರುತ್ತದೆ. ಅಧಿಕ ಸಕ್ಕರೆ ಅಂಶ ಹಾಗೂ ಕಡಿಮೆ ನಾರಿನಾಂಶ ಇರುವ ಕಾರಣದಿಂದ ಇವುಗಳ ಸೇವನೆ ಉತ್ತಮವಲ್ಲ.

ಪ್ಯಾನ್‌ಕೇಕ್‌, ವೇಫಲ್ಸ್‌

ಬೆಳಗಿನ ಗಡಿಬಿಡಿಯಲ್ಲಿ ಸುಲಭವಾಗಿ ತಿನ್ನಬಹುದು ಎನ್ನುವ ಕಾರಣಕ್ಕೆ ಹಲವರು ಪ್ಯಾನ್‌ಕೇಕ್‌ ಅಥವಾ ವೇಫಲ್ಸ್‌ ತಿನ್ನುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಇದು ಖಂಡಿತ ಒಳ್ಳೆಯ ಅಭ್ಯಾಸವಲ್ಲ. ಇದು ನಮ್ಮ ಇಡೀ ದಿನವನ್ನು ಕೊಲ್ಲುತ್ತದೆ. ಅಲ್ಲದೆ ದಿನವಿಡೀ ಅನಾರೋಗ್ಯಕರ ಆಹಾರ ಸೇವನೆಯ ಕಡುಬಯಕೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಶಕ್ತಿ ಹಾಗೂ ಉತ್ಪಾದಕತೆಯ ಕೊರತೆಗೂ ಕಾರಣವಾಗುತ್ತದೆ.

ಟೀ

ಕಾಫಿಯಂತೆ ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದ್ದನ್ನು ಮಾಡುವುದಕ್ಕಿಂತ ಕೆಟ್ಟದ್ದು ಮಾಡುವುದೇ ಹೆಚ್ಚು. ಹೆಚ್ಚಿದ ಸಕ್ಕರೆ ಪ್ರಮಾಣ, ಕೆಫೀನ್‌ ಅಂಶ, ನಿಕೋಟಿನ್‌ ಅಂಶದ ಸೇವನೆಯಿಂದ ಆಸಿಡಿಟಿ, ಹೊಟ್ಟೆ ಉರಿ ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗಬಹುದು.

Whats_app_banner