ರವೆ-ಹಾಲಿನಿಂದ ತಯಾರಿಸಿ ರಸಗುಲ್ಲ: ಹತ್ತಿಯಂತೆ ಮೃದು, ರಸಭರಿತ ಈ ಸಿಹಿತಿಂಡಿ ಪಾಕವಿಧಾನ ತುಂಬಾ ಸರಳ
ಕನ್ನಡ ಸುದ್ದಿ  /  ಜೀವನಶೈಲಿ  /  ರವೆ-ಹಾಲಿನಿಂದ ತಯಾರಿಸಿ ರಸಗುಲ್ಲ: ಹತ್ತಿಯಂತೆ ಮೃದು, ರಸಭರಿತ ಈ ಸಿಹಿತಿಂಡಿ ಪಾಕವಿಧಾನ ತುಂಬಾ ಸರಳ

ರವೆ-ಹಾಲಿನಿಂದ ತಯಾರಿಸಿ ರಸಗುಲ್ಲ: ಹತ್ತಿಯಂತೆ ಮೃದು, ರಸಭರಿತ ಈ ಸಿಹಿತಿಂಡಿ ಪಾಕವಿಧಾನ ತುಂಬಾ ಸರಳ

ನೀವು ಹಾಲಿನಿಂದ ತಯಾರಿಸಿದ ಅಥವಾ ಕ್ಯಾರೆಟ್ ರಸಗುಲ್ಲ ಸಿಹಿತಿಂಡಿಯನ್ನು ತಿಂದಿರಬಹುದು. ಆದರೆ, ಎಂದಾದರೂ ಹಾಲು-ರವೆ ಬೆರೆಸಿ ತಯಾರಿಸಲಾಗುವ ರಸಗುಲ್ಲರುಚಿ ನೋಡಿದ್ದೀರಾ, ಇಲ್ಲವಾದಲ್ಲಿ ಇಂದೇ ತಯಾರಿಸಿ. ಇಲ್ಲಿದೆ ಪಾಕವಿಧಾನ.

ರವೆ-ಹಾಲಿನಿಂದ ತಯಾರಿಸಿ ರಸಗುಲ್ಲ: ಹತ್ತಿಯಂತೆ ಮೃದು, ರಸಭರಿತ ಈ ಸಿಹಿತಿಂಡಿ ಪಾಕವಿಧಾನ ತುಂಬಾ ಸರಳ
ರವೆ-ಹಾಲಿನಿಂದ ತಯಾರಿಸಿ ರಸಗುಲ್ಲ: ಹತ್ತಿಯಂತೆ ಮೃದು, ರಸಭರಿತ ಈ ಸಿಹಿತಿಂಡಿ ಪಾಕವಿಧಾನ ತುಂಬಾ ಸರಳ

ರವೆ ರೊಟ್ಟಿ, ರವೆ ಲಾಡೂ, ರವೆಯಿಂದ ತಯಾರಿಸಲಾಗುವ ಕೇಸರಿಬಾತ್, ಇತ್ಯಾದಿ ಸಿಹಿ-ಮಸಾಲೆಯುಕ್ತ ಖಾದ್ಯಗಳನ್ನು ರವೆಯಿಂದ ತಯಾರಿಸಿ ತಿಂದಿರಬಹುದು. ಇವು ಆರೋಗ್ಯಕರ ಮಾತ್ರವಲ್ಲ ಬಹಳ ರುಚಿಯಾಗಿರುತ್ತದೆ. ಇಲ್ಲಿ ರವೆ ಮತ್ತು ಹಾಲಿನ ರಸಗುಲ್ಲ ಪಾಕವಿಧಾನ ನೀಡಲಾಗಿದೆ. ಕೇವಲ ಹಾಲಿನಿಂದ ತಯಾರಿಸಿಗ ರಸಗುಲ್ಲ ಅಥವಾ ಕ್ಯಾರೆಟ್ ರಸಗುಲ್ಲವನ್ನು ನೀವು ತಿಂದಿರಬಹುದು. ಆದರೆ, ರವೆ ಬೆರೆಸಿ ತಯಾರಿಸಲಾಗುವ ರಸಗುಲ್ಲವನ್ನು ಎಂದಾದರೂ ಪ್ರಯತ್ನಿಸಿದ್ದೀರಾ? ಇಲ್ಲವಾದಲ್ಲಿ ಇಂದೇ ಪ್ರಯತ್ನಿಸಿ.

ರವೆಯಿಂದ ತಯಾರಿಸಲಾಗುವ ರಸಗುಲ್ಲವು ಬಹಳ ಸರಳ ಹಾಗೂ ತ್ವರಿತ ಸಿಹಿತಿಂಡಿಯಾಗಿದ್ದು, ಇದನ್ನು ನೀವು ಯಾವಾಗ ಬೇಕಾದರೂ ತಯಾರಿಸಿ ತಿನ್ನಬಹುದು. ಹಬ್ಬಗಳು, ಶುಭ ಕಾರ್ಯಕ್ರಮಗಳು ಒಂದೊಂದಾಗಿ ಪ್ರಾರಂಭವಾಗುತ್ತಿದೆ. ಹೀಗಾಗಿ ನೀವು ಖಂಡಿತ ರಸಗುಲ್ಲ ರೆಸಿಪಿಯನ್ನು ಪ್ರಯತ್ನಿಸಲೇಬೇಕು. ರವೆ, ಹಾಲಿನಿಂದ ರಸಗುಲ್ಲ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ರವೆ-ಹಾಲಿನ ರಸಗುಲ್ಲ ರೆಸಿಪಿ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ರವೆ- ಅರ್ಧ ಕಪ್, ಸಕ್ಕರೆ- ಕಾಲು ಕಪ್, ತುಪ್ಪ- ಅಗತ್ಯಕ್ಕೆ ತಕ್ಕಷ್ಟು, ಹಾಲು- ಒಂದೂವರೆ ಕಪ್, ಸಕ್ಕರೆ (ಪಾಕ ಅಥವಾ ಸಿರಪ್‍ಗಾಗಿ)- ಎರಡು ಕಪ್, ಏಲಕ್ಕಿ ಪುಡಿ, ರೋಸ್ ವಾಟರ್.

ತಯಾರಿಸುವ ವಿಧಾನ: ರವೆ ರಸಗುಲ್ಲ ತಯಾರಿಸಲು, ಮೊದಲು ಸಕ್ಕರೆ ಪಾಕವನ್ನು ತಯಾರಿಸಿ. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ಎರಡು ಕಪ್ ಸಕ್ಕರೆಯನ್ನು ತೆಗೆದುಕೊಳ್ಳಿ. ಇದಕ್ಕೆ ಸುಮಾರು ಎರಡು ಕಪ್‌ಗಿಂತ ಹೆಚ್ಚು ನೀರು ಬೆರೆಸಿ. ರುಚಿಗಾಗಿ ಏಲಕ್ಕಿ ಪುಡಿ, ರೋಸ್ ವಾಟರ್ ಬೆರೆಸಬಹುದು. ಸಕ್ಕರೆ ಕರಗಿ ನೀರು ಕುದಿಯುವಾಗ ಗ್ಯಾಸ್ ಆಫ್ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಡಿ.

ಈಗ ರಸಗುಲ್ಲ ತಯಾರಿಸಿ. ಇದನ್ನು ತಯಾರಿಸಲು ಗ್ಯಾಸ್ ಮೇಲೆ ಬಾಣಲೆಯನ್ನು ಇರಿಸಿ. ಇದಕ್ಕೆ ಒಂದು ಚಮಚ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ, ಅದಕ್ಕೆ ಸುಮಾರು ಒಂದೂವರೆ ಕಪ್ ಹಾಲನ್ನು ಬೆರೆಸಿ. ಈಗ ಅದಕ್ಕೆ ನಿಧಾನವಾಗಿ ರವೆಯನ್ನು ಬೆರೆಸಿ. ರವೆ ಬೆರೆಸುವಾಗ ಉಂಡೆಯಾಗದಂತೆ ನೋಡಿಕೊಳ್ಳಿ. ಅದನ್ನು ಚೆನ್ನಾಗಿ ಕಲಕಿ.

ಈಗ ರುಚಿಗಾಗಿ ಕಾಲು ಕಪ್ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ. ಚಮಚದ ಸಹಾಯದಿಂದ ಇದನ್ನು ಚೆನ್ನಾಗಿ ಕಲಕುತ್ತಿರಿ. ರೊಟ್ಟಿ ಹಿಟ್ಟಿನಂತೆ ಮೃದುವಾದ ಹಿಟ್ಟು ಸಿದ್ಧವಾದಾಗ, ಗ್ಯಾಸ್‌ನಿಂದ ಹೊರತೆಗೆಯಿರಿ. ಈ ಹಿಟ್ಟನ್ನು ಹಿಸುಕಿ ಸಣ್ಣ ಉಂಡೆಗಳಾಗಿ ತಯಾರಿಸಿ.

ಈಗ ನೀವು ತಯಾರಿಸಿದ ಸಕ್ಕರೆ ಪಾಕವನ್ನು ಮತ್ತೆ ಒಲೆ ಮೇಲೆ ಬಿಸಿ ಮಾಡಲು ಇರಿಸಿ. ಅದು ಕುದಿಯಲು ಬಂದ ತಕ್ಷಣ, ತಯಾರಿಸಿದ ರಸಗುಲ್ಲಾವನ್ನು ಹಾಕಿ ಮುಚ್ಚಿಡಿ. ಸುಮಾರು ಮೂರರಿಂದ ಐದು ನಿಮಿಷಗಳ ಕಾಲ ಬೇಯಿಸಿ. ಅವು ಲಘುವಾಗಿ ಉಬ್ಬಿ ಬಂದಾಗ ಹಾಗೂ ಸಕ್ಕರೆ ಪಾಕವನ್ನು ಹೀರಿಕೊಂಡಾಗ ಗ್ಯಾಸ್ ಆಫ್ ಮಾಡಿ. ಇದನ್ನು ಸಕ್ಕರೆ ಪಾಕದಲ್ಲಿ ಹಾಗೆಯೇ ಸುಮಾರು 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಬಡಿಸಿದರೆ ರುಚಿಕರವಾದ ರಸಗುಲ್ಲ ಸವಿಯಲು ಸಿದ್ಧ.

ಹತ್ತಿಯಂತೆ ಮೃದು, ರಸಭರಿತ, ಬಾಯಲ್ಲಿಟ್ಟರೆ ಕರಗುವ ಈ ರಸಗುಲ್ಲವನ್ನು ಒಮ್ಮೆ ಮಾಡಿ ನೋಡಿ. ಖಂಡಿತ ನಿಮಗೆ ಇಷ್ಟವಾಗುತ್ತದೆ. ದಿಢೀರನೆ ಸಿದ್ಧವಾಗುವ ರಸಗುಲ್ಲ ಪಾಕವಿಧಾನ ತುಂಬಾ ಸರಳ. ಮನೆಗೆ ಅತಿಥಿಗಳು ಬಂದಾಗ ಮಾಡಿಕೊಡಬಹುದು.

Whats_app_banner