Food: ಕುರುಕಲು ತಿಂಡಿಯನ್ನೂ ಆರೋಗ್ಯಕರ ರೀತಿಯಲ್ಲಿ ಸೇವಿಸಲು ಈ ರೀತಿಯ ಚಿಪ್ಸ್‌ಗಳನೊಮ್ಮೆ ತಯಾರಿಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Food: ಕುರುಕಲು ತಿಂಡಿಯನ್ನೂ ಆರೋಗ್ಯಕರ ರೀತಿಯಲ್ಲಿ ಸೇವಿಸಲು ಈ ರೀತಿಯ ಚಿಪ್ಸ್‌ಗಳನೊಮ್ಮೆ ತಯಾರಿಸಿ ನೋಡಿ

Food: ಕುರುಕಲು ತಿಂಡಿಯನ್ನೂ ಆರೋಗ್ಯಕರ ರೀತಿಯಲ್ಲಿ ಸೇವಿಸಲು ಈ ರೀತಿಯ ಚಿಪ್ಸ್‌ಗಳನೊಮ್ಮೆ ತಯಾರಿಸಿ ನೋಡಿ

Food: ಕುರುಕಲು ತಿಂಡಿಗಳನ್ನು ತಿನ್ನಬೇಕು ಎಂದಾಕ್ಷಣ ಮೊದಲು ತಲೆಗೆ ಬರುವುದೇ ಚಿಪ್ಸ್‌ . ಸಾಮಾನ್ಯವಾಗಿ ಚಿಪ್ಸನ್ನು ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಆದರೆ ಇವು ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಒಳ್ಳೆಯ ಆಯ್ಕೆಗಳಲ್ಲ. ಹೀಗಾಗಿ ಆರೋಗ್ಯಕರ ರೀತಿಯಲ್ಲಿ ಚಿಪ್ಸ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಕುರುಕಲು ತಿಂಡಿಯನ್ನೂ ಆರೋಗ್ಯಕರ ರೀತಿಯಲ್ಲಿ ಸೇವಿಸಲು ಈ ರೀತಿಯ ಚಿಪ್ಸ್‌ಗಳನೊಮ್ಮೆ ತಯಾರಿಸಿ ನೋಡಿ
ಕುರುಕಲು ತಿಂಡಿಯನ್ನೂ ಆರೋಗ್ಯಕರ ರೀತಿಯಲ್ಲಿ ಸೇವಿಸಲು ಈ ರೀತಿಯ ಚಿಪ್ಸ್‌ಗಳನೊಮ್ಮೆ ತಯಾರಿಸಿ ನೋಡಿ

Food: ಸಾಯಂಕಾಲ ಆಯ್ತು ಎಂದರೆ ಸಾಕು. ಕುರುಕಲು ತಿಂಡಿಗಳನ್ನು ತಿನ್ನೋಣ ಅಂತಾ ಮನಸ್ಸು ಹಪಹಪಿಸಲು ಆರಂಭಿಸುತ್ತದೆ. ಅದರಲ್ಲೂ ಚಿಪ್ಸ್ ಎಂದರೆ ಸಾಕು ಬಹುತೇಕರ ಬಾಯಲ್ಲಿ ನೀರೂರುತ್ತದೆ. ಆದರೆ ಇಂತಹ ತಿನಿಸುಗಳು ದೇಹದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು. ಹೀಗಾಗಿ ನಿಮ್ಮ ಬಾಯಿ ಚಪಲವನ್ನೂ ತೀರಿಸಿಕೊಂಡು ಆರೋಗ್ಯಕ್ಕೂ ಯಾವುದೇ ರೀತಿಯಲ್ಲಿ ಹಾನಿ ಮಾಡಿಕೊಳ್ಳದೇ ನಿಮ್ಮ ಸುಂದರ ಸಂಜೆಯನ್ನು ಚಿಪ್ಸ್‌ ಜೊತೆ ಕಳೆಯುವುದು ಹೇಗೆ ಎಂದು ಕೇಳಿದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಕೇಲ್ ಸೊಪ್ಪಿನ ಚಿಪ್ಸ್

ಆರೋಗ್ಯಕರ ರೀತಿಯಲ್ಲಿ ಚಿಪ್ಸ್ ಸೇವಿಸಬೇಕು ಎನ್ನುವವರು ಕೇಲ್ ಸೊಪ್ಪುಗಳಿಂದ ಚಿಪ್ಸ್ ತಯಾರಿಸಬಹುದು. ಇದನ್ನು ತಯಾರಿಸಲು ನಿಮಗೆ ಬೇಕಾಗಿರುವುದು ತಾಜಾ ಕೇಲ್ ಸೊಪ್ಪು, ಆಲಿವ್ ಎಣ್ಣೆ ಹಾಗೂ ಉಪ್ಪು. ಕೇಲ್ ಸೊಪ್ಪುಗಳ ಎಲೆಯನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ಬಳಿಕ ಪಾತ್ರೆಯಲ್ಲಿ ಸ್ವಲ್ಪೇ ಸ್ವಲ್ಪ ಆಲಿವ್ ಎಣೆಯನ್ನು ತೆಗೆದುಕೊಂಡು ಇದರಲ್ಲಿ ಕೇಲ್ ಎಲೆಗಳನ್ನು ಫ್ರೈ ಮಾಡಿ. ಬಳಿಕ ಫ್ರೈ ಮಾಡಲಾದ ಕೇಲ್ ಎಲೆಗಳಿಗೆ ಉಪ್ಪು ಸಿಂಪಡಿಸಿ ತಿನ್ನಬಹುದು. ನೆನಪಿಡಿ ನೀವು ಕೇಲ್ ಎಲೆಗಳನ್ನು ತೊಳೆದು ಚೆನ್ನಾಗಿ ಒಣಗಿಸಿಕೊಂಡರೆ ಮಾತ್ರೆ ಚಿಪ್ಸ್ ಗರಿಗರಿಯಾಗಿ ಬರುತ್ತದೆ.

ಸಿಹಿ ಗೆಣಸಿನ ಚಿಪ್ಸ್

ಇದು ಕೂಡ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಹಾಗೂ ರುಚಿಕರವಾಗಿ ಕೂಡ ಇರುತ್ತದೆ. ಇದಕ್ಕಾಗಿ ನೀವು ಹೆಚ್ಚೇನು ಮಾಡಬೇಕಿಲ್ಲ. ಸಿಹಿ ಗೆಣಸುಗಳನ್ನು ವೃತ್ತಾಕಾರದಲ್ಲಿ ಕತ್ತರಿಸಿ. ಬಳಿಕ ಓವನ್‌ಲ್ಲಿ ಬೇಕ್ ಮಾಡಿದರೆ ನಿಮ್ಮ ಗರಿಗರಿ ಗೆಣಸಿನ ಚಿಪ್ಸ್ ತಯಾರಾಗುತ್ತದೆ.

ಬ್ರೊಕೊಲಿ ಚಿಪ್ಸ್

ಬ್ರೊಕೊಲಿಗಳಿಂದಲೂ ಚಿಪ್ಸ್ ತಯಾರಿಸಿ ತಿನ್ನಬಹುದಾಗಿದೆ. ಸಣ್ಣ ಸಣ್ಣ ತುಂಡುಗಳಾಗಿ ಬ್ರೊಕೊಲಿಯನ್ನು ಕತ್ತರಿಸಿ. ಬಳಿಕ ಇದನ್ನು ಸ್ವಲ್ಪ ಆಲಿವ್ ಎಣ್ಣೆ ಬಳಸಿ ಫ್ರೈ ಮಾಡಿಕೊಳ್ಳಿ. ಗರಿಗರಿಯಾದ ಬ್ರೊಕೊಲಿ ಚಿಪ್ಸ್‌ ಚಪ್ಪರಿಸಿ.

ಬೀಟ್‌ ರೂಟ್‌ ಚಿಪ್ಸ್‌

ಬೀಟ್‌ರೂಟ್‌ ಹೆಚ್ಚಿನ ಆರೋಗ್ಯಕರ ಪ್ರಯೋಜನವನ್ನು ನೀಡಬಲ್ಲ ತರಕಾರಿ. ಇದರಿಂದ ಗರಿ ಗರಿಯಾದ ಚಿಪ್ಸ್‌ ಕೂಡಾ ತಯಾರಿಸಬಹುದು. ಬೀಟ್‌ರೂಟನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ. ಇದನ್ನು ಫ್ರೈ ಮಾಡಿ ಬಳಿಕ ಎಂಜಾಯ್‌ ಮಾಡಿ.

ಬೆಳ್ಳುಳ್ಳಿ ಚಿಪ್ಸ್

ಈಗಂತೂ ಬೆಳ್ಳುಳ್ಳಿ ಕಬಾಬ್ ಟ್ರೆಂಡಿಂಗ್‌ನಲ್ಲಿದೆ. ನೀವು ಬೆಳ್ಳುಳ್ಳಿ ಕಬಾಬ್ ಮಾತ್ರವಲ್ಲ ಆರೋಗ್ಯಕರ ಬೆಳ್ಳುಳ್ಳಿ ಚಿಪ್ಸ್‌ ಕೂಡಾ ತಯಾರಿಸಬಹುದು. ಬೆಳ್ಳುಳ್ಳಿ ಗರಿಗರಿಯಾಗುವವರೆಗೂ ಆಲಿವ್ ಎಣ್ಣೆಯಲ್ಲಿ ಫ್ರೈ ಮಾಡಿ. ಬಳಿಕ ಇದಕ್ಕೆ ಕಾಳುಮೆಣಸಿನ ಪುಡಿ ಹಾಗೂ ಉಪ್ಪನ್ನು ಹಾಕಿ ಮಿಕ್ಸ್‌ ಮಾಡಿ. ಇದನ್ನು ತರಕಾರಿ ಸಲಾಡ್, ನ್ಯೂಡಲ್ಸ್ ಸೇರಿದಂತೆ ಬೇರೆ ಬೇರೆ ಆಹಾರ ಪದಾರ್ಥಗಳಿಗೆ ಮೇಲೆ ಸಿಂಪಡಿಸಿದರೂ ಸಹ ಆ ಅಡುಗೆಗೆ ಒಳ್ಳೆಯ ರುಚಿ ಬರಲಿದೆ.

ಜುಕಿನಿ ಚಿಪ್ಸ್

ಇದನ್ನು ಮಾಡುವುದು ಕೂಡಾ ತುಂಬಾನೇ ಸುಲಭ, ಜುಕಿನಿ ನೋಡಲು ಸೌತೆಕಾಯಿಯಂತೆ ಇದ್ದರೂ ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುವುದಿಲ್ಲ. ಜುಕಿನಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಳಿಕ ಇದನ್ನು ಆಲಿವ್ ಎಣ್ಣೆಯಲ್ಲಿ ಫ್ರೈ ಮಾಡಿ. ಇದಕ್ಕೆ ಸ್ವಲ್ಪ ಚಾಟ್ ಮಸಾಲಾ ಸಿಂಪಡಿಸಿದರೆ ಜುಕಿನಿ ಚಿಪ್ಸ್‌ ತಿನ್ನಲು ರೆಡಿ.

Whats_app_banner