ನೀವು ದೋಸೆ ಪ್ರಿಯರಾಗಿದ್ದರೆ ಬ್ರೊಕೊಲಿ-ಪಾಲಕ್ ಸೊಪ್ಪಿನ ಪಾಕವಿಧಾನ ಟ್ರೈ ಮಾಡಿ; ಮಧುಮೇಹಿಗಳಿಗೆ ಬೆಸ್ಟ್ ಈ ಉಪಾಹಾರ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ದೋಸೆ ಪ್ರಿಯರಾಗಿದ್ದರೆ ಬ್ರೊಕೊಲಿ-ಪಾಲಕ್ ಸೊಪ್ಪಿನ ಪಾಕವಿಧಾನ ಟ್ರೈ ಮಾಡಿ; ಮಧುಮೇಹಿಗಳಿಗೆ ಬೆಸ್ಟ್ ಈ ಉಪಾಹಾರ

ನೀವು ದೋಸೆ ಪ್ರಿಯರಾಗಿದ್ದರೆ ಬ್ರೊಕೊಲಿ-ಪಾಲಕ್ ಸೊಪ್ಪಿನ ಪಾಕವಿಧಾನ ಟ್ರೈ ಮಾಡಿ; ಮಧುಮೇಹಿಗಳಿಗೆ ಬೆಸ್ಟ್ ಈ ಉಪಾಹಾರ

ಬ್ರೊಕೊಲಿಹಾಗೂ ಪಾಲಕ್ ಸೊಪ್ಪು ಇವೆರಡೂ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇವೆರಡರಿಂದ ಖಾದ್ಯ ಮಾತ್ರವಲ್ಲ ದೋಸೆಯನ್ನು ಕೂಡ ತಯಾರಿಸಬಹುದು. ನೀವು ದೋಸೆ ಪ್ರಿಯರಾಗಿದ್ದರೆ ಈ ರೆಸಿಪಿಯನ್ನು ಖಂಡಿತ ಪ್ರಯತ್ನಿಸಲೇಬೇಕು. ಇಲ್ಲಿದೆ ರುಚಿಕರವಾದ ಬ್ರೊಕೊಲಿ-ಪಾಲಕ್ ದೋಸೆ ಪಾಕವಿಧಾನ.

ನೀವು ದೋಸೆ ಪ್ರಿಯರಾಗಿದ್ದರೆ ಬ್ರೊಕೊಲಿ-ಪಾಲಕ್ ಸೊಪ್ಪಿನ ಪಾಕವಿಧಾನ ಟ್ರೈ ಮಾಡಿ; ಮಧುಮೇಹಿಗಳಿಗೆ ಬೆಸ್ಟ್ ಈ ಉಪಹಾರ
ನೀವು ದೋಸೆ ಪ್ರಿಯರಾಗಿದ್ದರೆ ಬ್ರೊಕೊಲಿ-ಪಾಲಕ್ ಸೊಪ್ಪಿನ ಪಾಕವಿಧಾನ ಟ್ರೈ ಮಾಡಿ; ಮಧುಮೇಹಿಗಳಿಗೆ ಬೆಸ್ಟ್ ಈ ಉಪಹಾರ

ಬ್ರೊಕೊಲಿ ಹಾಗೂ ಪಾಲಕ್ ಸೊಪ್ಪು ಇವೆರಡೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇವೆರಡೂ ಕೂಡ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಬ್ರೊಕೊಲಿ ಹಾಗೂ ಪಾಲಕ್ ಸೊಪ್ಪಿನಿಂದ ಕೇವಲ ಖಾದ್ಯವನ್ನಷ್ಟೇ ಅಲ್ಲ ದೋಸೆಯನ್ನು ಕೂಡ ಮಾಡಬಹುದು. ದಕ್ಷಿಣ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದೋಸೆಯನ್ನು ಹಲವಾರು ವಿಧದಲ್ಲಿ ಮಾಡಬಹುದು. ಬ್ರೊಕೊಲಿ ಹಾಗೂ ಪಾಲಕ್ ಸೊಪ್ಪಿನಿಂದಲೂ ದೋಸೆ ಮಾಡಬಹುದು. ಮಧುಮೇಹಿಗಳಿಗೆ ಈ ರೆಸಿಪಿ ಬಹಳ ಪ್ರಯೋಜನಕಾರಿಯಾಗಿದೆ. ಇದನ್ನು ಮಾಡುವುದು ತುಂಬಾನೇ ಸುಲಭ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಪಾಕವಿಧಾನ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಬ್ರೊಕೊಲಿ ಪಾಲಕ್ ಸೊಪ್ಪು ದೋಸೆ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಬ್ರೊಕೊಲಿ (ಕತ್ತರಿಸಿದ)- ಒಂದು ಕಪ್, ಪಾಲಕ್ ಸೊಪ್ಪು- ಒಂದು ಕಪ್, ಬೆಳ್ಳುಳ್ಳಿ- 3, ಲವಂಗ- 2, ಜೀರಿಗೆ ಪುಡಿ- ಒಂದು ಟೀ ಚಮಚ, ಗರಂ ಮಸಾಲೆ- ಕಾಲು ಟೀ ಚಮಚ, ಕಾಳುಮೆಣಸಿನ ಪುಡಿ- ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕಡಲೆಬೇಳೆ ಹಿಟ್ಟು- ಒಂದು ಕಪ್, ಹಸಿಮೆಣಸಿನಕಾಯಿ- ಎರಡು.

ಮಾಡುವ ವಿಧಾನ: ಬ್ರೊಕೋಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸ್ವಚ್ಛವಾಗಿಡಿ.

- ಪಾಲಕ್ ಸೊಪ್ಪನ್ನು ನುಣ್ಣಗೆ ಕತ್ತರಿಸಿ ಅದನ್ನು ಸ್ವಚ್ಛವಾಗಿ ತೊಳೆದು ಪಕ್ಕಕ್ಕೆ ಇರಿಸಿ.

- ಮಿಕ್ಸಿನಲ್ಲಿ ಬ್ರೊಕೊಲಿ, ಪಾಲಕ್ ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಎರಡು ಚಮಚ ನೀರನ್ನು ಸೇರಿಸಿ .

- ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿಕೊಳ್ಳಿ. ಈ ಸಂಪೂರ್ಣ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ.

- ಆ ಪದಾರ್ಥಕ್ಕೆ ಕಡಲೆಬೇಳೆ ಹಿಟ್ಟು, ಜೀರಿಗೆ, ಗರಂ ಮಸಾಲೆ, ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಹಿಟ್ಟನ್ನು ನಯವಾಗಿಸಲು ಬೇಕಾದಷ್ಟು ನೀರನ್ನು ಸೇರಿಸಬೇಕು.

- ಸ್ಟೌವ್ ಮೇಲೆ ಪ್ಯಾನ್ ಇಟ್ಟು ಎಣ್ಣೆ ಸವರಿ. ತವಾ ಬಿಸಿಯಾದಾಗ ದೋಸೆ ಹುಯ್ಯಿರಿ.

- ತೆಂಗಿನಕಾಯಿ ಚಟ್ನಿ ಸೇರಿದಂತೆ ಇದು ಯಾವುದೇ ಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ. ತೆಂಗಿನಕಾಯಿ ಚಟ್ನಿಯೊಂದಿಗೆ ಇದನ್ನು ಪ್ರಯತ್ನಿಸಿ, ಖಂಡಿತಾ ಈ ರೆಸಿಪಿಯನ್ನು ನೀವು ಇಷ್ಟಪಡುವಿರಿ.

ಕೋಸುಗಡ್ಡೆ (ಬ್ರೊಕೋಲಿ) ಮತ್ತು ಪಾಲಕ್ ಸೊಪ್ಪು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬ್ರೊಕೊಲಿಯು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಬ್ರೊಕೊಲಿಯಲ್ಲಿ ಕಿತ್ತಳೆಯಲ್ಲಿರುವಷ್ಟು ವಿಟಮಿನ್ ಸಿ ಇದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ನಮ್ಮ ದೇಹಕ್ಕೆ ಅತ್ಯಗತ್ಯ. ಬ್ರೊಕೊಲಿಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್, ಥಯಾಮಿನ್, ಫೋಲೇಟ್, ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ ಸಮೃದ್ಧವಾಗಿದೆ. ಮಧುಮೇಹ ಇರುವವರು ಕೋಸುಗಡ್ಡೆ ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಸ್ಥೂಲಕಾಯತೆಯಿಂದ ಬಳಲುತ್ತಿರುವವರು ಸಹ ತಮ್ಮ ಆಹಾರದಲ್ಲಿ ಬ್ರೊಕೊಲಿಯನ್ನು ಸೇರಿಸಿಕೊಳ್ಳಬಹುದು.

ಪಾಲಕ್ ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿರುತ್ತದೆ. ಉಸಿರಾಟ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವ ಶಕ್ತಿ ಈ ಸೊಪ್ಪಿಗೆ ಇದೆ. ಮಹಿಳೆಯರು ಪಾಲಕ್ ಸೊಪ್ಪನ್ನು ತಿಂದರೆ ತ್ವಚೆಯ ಆರೋಗ್ಯ ಚೆನ್ನಾಗಿರುತ್ತದೆ. ಚರ್ಮಕ್ಕೆ ಹೊಳಪನ್ನು ನೀಡುವಲ್ಲಿ ಇದು ಸಹಕಾರಿಯಾಗಿದೆ.

Whats_app_banner