ನೀವು ಉಪ್ಪಿನಕಾಯಿ ಪ್ರಿಯರಾ: ವಿಭಿನ್ನ ರುಚಿ ಹೊಂದಿರುವ ಕ್ಯಾರೆಟ್ ಉಪ್ಪಿನಕಾಯಿ ಸವಿದು ನೋಡಿ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಉಪ್ಪಿನಕಾಯಿ ಪ್ರಿಯರಾ: ವಿಭಿನ್ನ ರುಚಿ ಹೊಂದಿರುವ ಕ್ಯಾರೆಟ್ ಉಪ್ಪಿನಕಾಯಿ ಸವಿದು ನೋಡಿ, ಇಲ್ಲಿದೆ ರೆಸಿಪಿ

ನೀವು ಉಪ್ಪಿನಕಾಯಿ ಪ್ರಿಯರಾ: ವಿಭಿನ್ನ ರುಚಿ ಹೊಂದಿರುವ ಕ್ಯಾರೆಟ್ ಉಪ್ಪಿನಕಾಯಿ ಸವಿದು ನೋಡಿ, ಇಲ್ಲಿದೆ ರೆಸಿಪಿ

ಕ್ಯಾರೆಟ್‍ನಿಂದ ರುಚಿಕರವಾದ ಉಪ್ಪಿನಕಾಯಿ ತಯಾರಿಸಬಹುದು. ಮಸಾಲೆಯುಕ್ತ ಕೊಂಚ ಸಿಹಿ ರುಚಿ ಹೊಂದಿರುವ ಈ ಉಪ್ಪಿನಕಾಯಿ ರೆಸಿಪಿ ನಿಮಗೆ ಖಂಡಿತ ಇಷ್ಟವಾಗಬಹುದು. ಬಹುತೇಕರು ಉಪ್ಪಿನಕಾಯಿ ಅಂದ್ರೆ ಇಷ್ಟಪಡುತ್ತಾರೆ. ಅನ್ನಕ್ಕೆ ಎಷ್ಟೇ ವೆರೈಟಿ ಸಾಂಬಾರ್, ಪಲ್ಯಗಳಿದ್ದರೂ ಉಪ್ಪಿನಕಾಯಿ ಬೇಕೇ ಬೇಕು. ಇಲ್ಲಿದೆ ಕ್ಯಾರೆಟ್ ಉಪ್ಪಿನಕಾಯಿ ರೆಸಿಪಿ.

ನೀವು ಉಪ್ಪಿನಕಾಯಿ ಪ್ರಿಯರಾ: ವಿಭಿನ್ನ ರುಚಿ ಹೊಂದಿರುವ ಕ್ಯಾರೆಟ್ ಉಪ್ಪಿನಕಾಯಿ ಸವಿದು ನೋಡಿ
ನೀವು ಉಪ್ಪಿನಕಾಯಿ ಪ್ರಿಯರಾ: ವಿಭಿನ್ನ ರುಚಿ ಹೊಂದಿರುವ ಕ್ಯಾರೆಟ್ ಉಪ್ಪಿನಕಾಯಿ ಸವಿದು ನೋಡಿ

ಕೆಲವರಿಗೆ ಉಪ್ಪಿನಕಾಯಿ ಅಂದ್ರೆ ಪಂಚಪ್ರಾಣ. ಊಟಕ್ಕೆ ಉಪ್ಪಿನಕಾಯಿ ಇಲ್ಲಿದಿದ್ದರೆ ಅನ್ನ ಗಂಟಲಿನಿಂದ ಇಳಿಯುವುದೇ ಇಲ್ಲವೇನೋ ಎಂಬಂತೆ ಮಾಡುತ್ತಾರೆ. ಅದರಲ್ಲೂ ಪಲ್ಯ ತಿನ್ನುವ ಹಾಗೆ ಉಪ್ಪಿನಕಾಯಿ ತಿನ್ನುತ್ತಾರೆ. ಮಾವಿನಕಾಯಿ, ನಿಂಬೆ, ಹುಣಸೆಹುಳಿ ಉಪ್ಪಿನಕಾಯಿಯನ್ನು ಸಾಮಾನ್ಯವಾಗಿ ಬಹುತೇಕರು ಸವಿಯುತ್ತಾರೆ. ನೀವು ಉಪ್ಪಿನಕಾಯಿ ಪ್ರಿಯರಾಗಿದ್ದರೆ ಕ್ಯಾರೆಟ್ ಉಪ್ಪಿನಕಾಯಿ ರೆಸಿಪಿಯನ್ನು ಪ್ರಯತ್ನಿಸಬಹುದು. ಮಸಾಲೆಯುಕ್ತ ಸಿಹಿ ಹಾಗೂ ಖಾರ ರುಚಿಯನ್ನು ಹೊಂದಿರುವ ಈ ಉಪ್ಪಿನಕಾಯಿ ನಾಲಿಗೆಗೆ ವಿಭಿನ್ನ ರುಚಿಯನ್ನು ನೀಡುತ್ತದೆ. ಇದನ್ನು ಮಾಡುವುದು ತುಂಬಾನೇ ಸುಲಭ. ಇಲ್ಲಿದೆ ಕ್ಯಾರೆಟ್ ಉಪ್ಪಿನಕಾಯಿ ರೆಸಿಪಿ ಮಾಡುವ ವಿಧಾನ.

ಕ್ಯಾರೆಟ್ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಕ್ಯಾರೆಟ್ (ಸಿಪ್ಪೆ ಸುಲಿದ ಮತ್ತು ತುಂಡುಗಳಾಗಿ ಕತ್ತರಿಸಿ ಸ್ವಲ್ಪ ಸಮಯದವರೆಗೆ ಒಣಗಿಸಿರಬೇಕು)- 250 ಗ್ರಾಂ, ಎಣ್ಣೆ (ಅರ್ಧ ಕಪ್‌ಗಿಂತ ಸ್ವಲ್ಪ ಹೆಚ್ಚು)- 130 ಮಿಲಿಲೀಟರ್, ಕಾಳುಮೆಣಸು- 6, ಶುಂಠಿ (ನುಣ್ಣಗೆ ತುರಿದ)- 1 ಇಂಚು, ಮೆಣಸಿನಪುಡಿ- ಎರಡು ಚಮಚ, ಮೆಂತ್ಯ- ಒಂದು ಟೀ ಚಮಚ, ಜೀರಿಗೆ- ಒಂದು ಟೀ ಚಮಚ, ಸಾಸಿವೆ- ಒಂದು ಟೀಚಮಚ, ಕರಿಬೇವು- ಎರಡು (15 ರಿಂದ 18 ಎಲೆ), ಅರಿಶಿನ- ಅರ್ಧ ಟೀ ಚಮಚ, ಸಾಸಿವೆ- 1 ಟೀ ಚಮಚ, ಮೆಂತ್ಯ ಕಾಳು- ಅರ್ಧ ಟೀ ಚಮಚ, ನಿಂಬೆ ರಸ- ಎರಡೂವರೆ ಟೀ ಚಮಚ.

ಕ್ಯಾರೆಟ್ ಉಪ್ಪಿನಕಾಯಿ ತಯಾರಿಕೆಯ ವಿಧಾನ

- ಮೊದಲು ಕ್ಯಾರೆಟ್‌ನಿಂದ ಸಿಪ್ಪೆಯನ್ನು ತೆಗೆದುಹಾಕಿ. ಅದರ ಮೇಲಿನ ತೇವಾಂಶವನ್ನು ಬಟ್ಟೆಯಿಂದ ಒರೆಸಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ. 6 ರಿಂದ 10 ನಿಮಿಷಗಳ ಕಾಲ ಗಾಳಿಯಲ್ಲಿ ಒಣಗಿಸಿ. ಶುಂಠಿಯನ್ನು ಸಹ ನುಣ್ಣಗೆ ಕತ್ತರಿಸಿ ಒಣಗಿಸಬೇಕು.

- ಸ್ಟೌವ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಮೆಂತ್ಯ, ಕಾಳುಮೆಣಸು ಮತ್ತು ಶುಂಠಿ ತುಂಡುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.

- ಕಾಳುಮೆಣಸು, ಜೀರಿಗೆ, ಸಾಸಿವೆ, ಕರಿಬೇವಿನ ಸೊಪ್ಪು ಮತ್ತು ಅರಿಶಿನ ಸೇರಿಸಿ ಹುರಿಯಿರಿ.

- ಒಂದು ಬೌಲ್‍ನಲ್ಲಿ ಕ್ಯಾರೆಟ್ ತುಂಡುಗಳನ್ನು ಹಾಕಿ. ಉಪ್ಪು, ಕಾಳುಮೆಣಸು, ಹುರಿದ ಮೆಂತ್ಯ ಪುಡಿ, ಹುರಿದ ಸಾಸಿವೆ ಪುಡಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಕೊನೆಯಲ್ಲಿ ನಿಂಬೆ ರಸವನ್ನು ಸೇರಿಸಿ. ಎಲ್ಲಾ ಕ್ಯಾರೆಟ್ ತುಂಡುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

- ನಂತರ ಈ ಮಿಶ್ರಣವನ್ನು ಗಾಳಿಯಾಡದ ಪಾತ್ರೆಯಲ್ಲಿ ಅಥವಾ ಜಾರ್‌ನಲ್ಲಿ ಹಾಕಿ. ಎರಡು ದಿನಗಳ ನಂತರ ಚೆನ್ನಾಗಿ ಬೆರೆತಿರುತ್ತದೆ. ಇಷ್ಟು ಮಾಡಿದರೆ ರುಚಿಕರವಾದ ಕ್ಯಾರೆಟ್ ಉಪ್ಪಿನಕಾಯಿ ಸವಿಯಲು ಸಿದ್ಧ.

ಈ ರೀತಿ ಮಾಡಿದ ಕ್ಯಾರೆಟ್ ಉಪ್ಪಿನಕಾಯಿಯನ್ನು 45 ದಿನಗಳಿಂದ 60 ದಿನಗಳವರೆಗೆ ತಾಜಾವಾಗಿ ಸಂಗ್ರಹಿಸಬಹುದು. ಇದನ್ನು ಬಿಸಿ ಬಿಸಿ ಅನ್ನದಲ್ಲಿ ತಿಂದರೆ ಅದ್ಭುತವಾಗಿರುತ್ತದೆ. ನೀವು ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟಪಡುವಿರಿ. ಮಸಾಲೆಯುಕ್ತ ಮತ್ತು ಸಿಹಿಯ ವಿಶಿಷ್ಟ ರುಚಿ ದೊರಕುತ್ತದೆ.

Whats_app_banner