ಮಕ್ಕಳು ಶಾಲೆಯಿಂದ ಬಂದ ಕೂಡಲೇ ಚೀಸ್ ಈರುಳ್ಳಿ ರಿಂಗ್ಸ್ ಮಾಡಿಕೊಡಿ: ಇಷ್ಟಪಟ್ಟು ತಿಂತಾರೆ, ಇಲ್ಲಿದೆ ರೆಸಿಪಿ
ಸಂಜೆ ಚಹಾ ಜತೆ ಏನಾದರೂ ಕುರುಕುಲು ತಿಂಡಿ ಬೇಕು ಅನಿಸಿದರೆ, ಚೀಸ್ ಈರುಳ್ಳಿ ರಿಂಗ್ಸ್ ಮಾಡಿ ಸವಿಯಬಹುದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಚೀಸೀ ಈರುಳ್ಳಿ ರಿಂಗ್ಸ್ ಅನ್ನು ಸುಲಭವಾಗಿ ಹೇಗೆ ಮಾಡಬೇಕು ಎಂಬುದು ಇಲ್ಲಿದೆ. ಈ ವಿಧಾನವನ್ನು ಅನುಸರಿಸಿದರೆ,ಅರ್ಧ ಗಂಟೆಯಲ್ಲಿ ರುಚಿಯಾದ ಈರುಳ್ಳಿ ರಿಂಗ್ಸ್ ತಯಾರಾಗುತ್ತದೆ.
ಚೀಸ್ ಆನಿಯನ್ (ಈರುಳ್ಳಿ) ರಿಂಗ್ಸ್ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರೂರುತ್ತದೆ. ಕುರುಕುಲಾದ, ಗರಿಗರಿಯಾದ ಈರುಳ್ಳಿ ರಿಂಗ್ಸ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಬಹುತೇಕರು ಬೇಕರಿಗಳಿಂದ ಖರೀದಿಸಿ ತಿನ್ನುತ್ತಾರೆ. ಆದರೆ, ಇದನ್ನು ಮನೆಯಲ್ಲಿಯೇ ಮಾಡುವುದು ತುಂಬಾ ಸರಳ. ಅದಕ್ಕೆ ಪನೀರ್ ಹಾಕಿ ಪನೀರ್ ಈರುಳ್ಳಿ ರಿಂಗ್ಸ್ ಮಾಡಿದರೆ ರುಚಿ ಇನ್ನೂ ಹೆಚ್ಚುತ್ತದೆ. ಇಲ್ಲಿ ಚೀಸೀ ಈರುಳ್ಳಿ ರಿಂಗ್ಸ್ ಅನ್ನು ಬಹಳ ಸುಲಭವಾಗಿ ಹೇಗೆ ಮಾಡಬೇಕೆಂದು ಹೇಳುತ್ತೇವೆ. ಈ ವಿಧಾನವನ್ನು ಅನುಸರಿಸಿದರೆ, ನೀವು ಅರ್ಧ ಗಂಟೆಯಲ್ಲಿ ರುಚಿಯಾದ ತಿಂಡಿಗಳನ್ನು ಬೇಯಿಸಬಹುದು.
ಚೀಸ್ ಈರುಳ್ಳಿ ರಿಂಗ್ಸ್ ಮಾಡುವ ವಿಧಾನ ಇಲ್ಲಿದೆ
ಬೇಕಾದ ಪದಾರ್ಥಗಳು: ಈರುಳ್ಳಿ ರಿಂಗ್ಸ್- ಎರಡು ಕಪ್, ಚೀಸ್ ತುಂಡು- ಹತ್ತು, ಬ್ರೆಡ್ ಪುಡಿ- ಅರ್ಧ ಕಪ್, ಎಣ್ಣೆ- ಕರಿಯಲು, ಮೈದಾ- ಅರ್ಧ ಕಪ್, ಜೋಳದ ಹಿಟ್ಟು- ಕಾಲು ಕಪ್, ಕೊತ್ತಂಬರಿ ಪುಡಿ- ಎರಡು ಚಮಚ, ಬೆಳ್ಳುಳ್ಳಿ ಪುಡಿ- ಒಂದು ಟೀ ಚಮಚ, ಚಿಲ್ಲಿ ಫ್ಲೇಕ್ಸ್- ಒಂದು ಟೀ ಚಮಚ, ಓರೆಗಾನೊ- ಒಂದು ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಈರುಳ್ಳಿ ರಿಂಗ್ಸ್ ಮಾಡಲು, ಈರುಳ್ಳಿಯನ್ನು ಅಡ್ಡಲಾಗಿ ಉಂಗುರಗಳಂತೆ ಕತ್ತರಿಸಿ. ಚೀಸ್ ಸ್ಲೈಸ್ಗಳನ್ನು ತೆಗೆದುಕೊಂಡು ಅವುಗಳನ್ನು ಲಂಬವಾಗಿ ಕತ್ತರಿಸಿ. ಈರುಳ್ಳಿ ರಿಂಗ್ಸ್ ಒಳಗೆ ಚೀಸ್ ಅನ್ನು ಲಂಬವಾಗಿ ಇರಿಸಿ. ನಂತರ ಪನೀರ್ ಅನ್ನು ಇರಿಸಿ. ಸ್ವಲ್ಪ ಗಟ್ಟಿಯಾಗಿ ಒತ್ತಿದರೆ, ಪನ್ನೀರ್ ಈರುಳ್ಳಿ ಉಂಗುರಕ್ಕೆ ಅಂಟಿಕೊಳ್ಳುತ್ತದೆ.
ಈಗ ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಫ್ಲೋರ್, ಕೊತ್ತಂಬರಿ ಪುಡಿ, ಶುಂಠಿ ಪುಡಿ, ಚಿಲ್ಲಿ ಫ್ಲೇಕ್ಸ್, ಓರೆಗಾನೊ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹಾಗೆ ತೆಳುವಾಗುವವರೆಗೆ ಕಲಸಿ ಪಕ್ಕಕ್ಕೆ ಇಡಿ. ಈಗ ಒಂದು ತಟ್ಟೆಗೆ ಬ್ರೆಡ್ ಪುಡಿ ಹಾಕಿ. ಸ್ಟೌವ್ ಮೇಲೆ ಪ್ಯಾನ್ ಇಟ್ಟು ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆ ಹಾಕಿ. ನಂತರ ಚೀಸ್ ಈರುಳ್ಳಿ ರಿಂಗ್ ಅನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ನಂತರ ಅದನ್ನು ಹೊರತೆಗೆದು ಬ್ರೆಡ್ ಪುಡಿ ಮೇಲೆ ಹಾಕಿ ನಂತರ ಅವುಗಳನ್ನು ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿ. ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ, ಅದನ್ನು ತೆಗೆದುಕೊಂಡು ಪಕ್ಕಕ್ಕೆ ಇರಿಸಿ.
ಈ ರೀತಿ ಎಲ್ಲವನ್ನೂ ಫ್ರೈ ಮಾಡಿದರೆ ಈರುಳ್ಳಿ ರಿಂಗ್ಸ್ ಸವಿಯಲು ಸಿದ್ಧ. ಇವು ತುಂಬಾ ರುಚಿಕರವಾಗಿರುತ್ತದೆ. ಹಸಿರು ಚಟ್ನಿ ಅಥವಾ ಕೆಚಪ್ ಜೊತೆ ತಿಂದರೆ ರುಚಿಕರವಾಗಿರುತ್ತದೆ. ಮಕ್ಕಳು ಖಂಡಿತವಾಗಿಯೂ ಈ ಚೀಸ್ ಈರುಳ್ಳಿ ರಿಂಗ್ಸ್ ಅನ್ನು ಇಷ್ಟಪಡುತ್ತಾರೆ. ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡು ಎಂದು ಕೇಳುತ್ತಾರೆ. ಈ ರೆಸಿಪಿ ಕೂಡ ತುಂಬಾ ಸುಲಭ. ನೀವು ಇದನ್ನು ಆಗಾಗ ಅವರಿಗೆ ಮಾಡಿ ಕೊಡಬಹುದು. ಸಂಜೆ ಸ್ನಾಕ್ಸ್‌ಗೆ ಬೆಸ್ಟ್ ತಿಂಡಿ.
ವಿಭಾಗ