ದಿನಾ ಬೆಳಗ್ಗೆ ಉಪ್ಪಿಟ್ಟು ಮಾಡಿದ್ರೆ ಯಾರು ತಿಂತಾರೆ; ತೆಂಗಿನತುರಿ ಉಪ್ಪಿಟ್ಟು ಮಾಡಿ ನೋಡಿ, ಎಲ್ಲರೂ ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ದಿನಾ ಬೆಳಗ್ಗೆ ಉಪ್ಪಿಟ್ಟು ಮಾಡಿದ್ರೆ ಯಾರು ತಿಂತಾರೆ; ತೆಂಗಿನತುರಿ ಉಪ್ಪಿಟ್ಟು ಮಾಡಿ ನೋಡಿ, ಎಲ್ಲರೂ ಇಷ್ಟಪಟ್ಟು ತಿಂತಾರೆ

ದಿನಾ ಬೆಳಗ್ಗೆ ಉಪ್ಪಿಟ್ಟು ಮಾಡಿದ್ರೆ ಯಾರು ತಿಂತಾರೆ; ತೆಂಗಿನತುರಿ ಉಪ್ಪಿಟ್ಟು ಮಾಡಿ ನೋಡಿ, ಎಲ್ಲರೂ ಇಷ್ಟಪಟ್ಟು ತಿಂತಾರೆ

ದಿನಾ ಬೆಳಗ್ಗೆ ಉಪ್ಪಿಟ್ಟು ಮಾಡಿದ್ರೆ ಯಾರು ತಾನೆ ತಿಂತಾರೆ. ಒಂದೇ ರೀತಿಯ ಉಪ್ಪಿಟ್ಟು ಮಾಡುವ ಬದಲು ತೆಂಗಿನತುರಿ ಉಪ್ಪಿಟ್ಟು ಮಾಡಿ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಇಲ್ಲಿದೆ ಪಾಕವಿಧಾನ.

ತೆಂಗಿನತುರಿ ಉಪ್ಪಿಟ್ಟು ಮಾಡಿ ನೋಡಿ, ಎಲ್ಲರೂ ಇಷ್ಟಪಟ್ಟು ತಿಂತಾರೆ
ತೆಂಗಿನತುರಿ ಉಪ್ಪಿಟ್ಟು ಮಾಡಿ ನೋಡಿ, ಎಲ್ಲರೂ ಇಷ್ಟಪಟ್ಟು ತಿಂತಾರೆ (PC: Fejnaem/Youtube)

ಉಪ್ಪಿಟ್ಟು ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ದಿನಾ ಬೆಳಗ್ಗೆ ಉಪ್ಪಿಟ್ಟು ಮಾಡಿದ್ರೆ ಯಾರು ತಾನೆ ತಿಂತಾರೆ. ಒಂದೇ ರೀತಿಯ ಉಪ್ಪಿಟ್ಟು ಮಾಡುವ ಬದಲು ತೆಂಗಿನತುರಿ ಉಪ್ಪಿಟ್ಟು ಮಾಡಿ. ಎಲ್ಲರೂ ಇಷ್ಟಪಟ್ಟು ತಿಂತಾರೆ. ತಮಿಳುನಾಡಿನಲ್ಲಿ ಬಹಳ ಜನಪ್ರಿಯವಾಗಿರುವ ಖಾದ್ಯವಿದು. ಇದು ತುಂಬಾ ರುಚಿಕರವಾಗಿರುತ್ತದೆ. ಗೋಧಿ ರವೆಯಿಂದ ಮಾಡುವ ಈ ತೆಂಗಿನಕಾಯಿ ಉಪ್ಪಿಟ್ಟು ನಿಮಗೂ ಇಷ್ಟವಾಗುತ್ತದೆ. ಒಮ್ಮೆ ಈ ಪಾಕವಿಧಾನವನ್ನು ಪ್ರಯತ್ನಿಸಿ. ತೆಂಗಿನಕಾಯಿ ಉಪ್ಪಿಟ್ಟು ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ತೆಂಗಿನಕಾಯಿ ಉಪ್ಪಿಟ್ಟು ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಗೋಧಿ ರವೆ - ಒಂದು ಕಪ್, ಕೊಬ್ಬರಿ ತುರಿ - ಎರಡು ಚಮಚ, ಉದ್ದಿನ ಬೇಳೆ - ಒಂದು ಚಮಚ, ಕಡಲೆಬೇಳೆ - ಒಂದು ಚಮಚ, ಒಣಮೆಣಸಿನಕಾಯಿ – ಎರಡು, ಕರಿಬೇವು - ಒಂದು ಹಿಡಿ, ಈರುಳ್ಳಿ – ಒಂದು, ಹಸಿಮೆಣಸಿನಕಾಯಿ – ಎರಡು, ತುಪ್ಪ - ಎರಡು ಚಮಚ, ಸಾಸಿವೆ - ಅರ್ಧ ಚಮಚ, ನೀರು – ಅಗತ್ಯಕ್ಕೆ ತಕ್ಕಷ್ಟು, ಎಣ್ಣೆ - ಎರಡು ಚಮಚ, ಕ್ಯಾರೆಟ್ – ಒಂದು, ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ, ಹಸಿ ತೆಂಗಿನತುರಿ - ಕಾಲು ಕಪ್, ಉಪ್ಪು - ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಒಲೆಯ ಮೇಲೆ ಪ್ಯಾನ್ ಇಟ್ಟು ಗೋಧಿ ರವೆಯನ್ನು ಹಾಕಿ ಹುರಿಯಿರಿ. ಇದಕ್ಕೆ ಒಂದು ಚಮಚ ತುಪ್ಪವನ್ನು ಒಳ್ಳೆಯ ಪರಿಮಳ ಬರುತ್ತದೆ. ರವೆ ಬಣ್ಣ ಬದಲಾದಾಗ ಒಲೆ ಆಫ್ ಮಾಡಿ. ಈ ರವೆಯನ್ನು ತೆಗೆದು ಪಕ್ಕಕ್ಕೆ ಇಡಿ.

ಈಗ ಅದೇ ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್, ಕ್ಯಾರೆಟ್, ಸ್ವಲ್ಪ ತೆಂಗಿನಕಾಯಿ ತುಂಡು ಹಾಕಿ ಚೆನ್ನಾಗಿ ಹುರಿಯಿರಿ. ಇವೆಲ್ಲವೂ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಸಾಕಷ್ಟು ನೀರು ಹಾಕಿ.

ನೀರು ಕುದಿಯುವಾಗ ಹುರಿದು ಇಟ್ಟಿರುವ ಗೋಧಿ ರವೆಯನ್ನು ಹಾಕಿ ಬೆರೆಸುತ್ತಿರಿ. ಯಾವುದೇ ಗಂಟುಗಳಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಜೊತೆಗೆ ತುರಿದ ತೆಂಗಿನತುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಮಿಶ್ರಣ ಸ್ವಲ್ಪ ದಪ್ಪವಾದ ನಂತರ ಮೇಲೆ ತುಪ್ಪ ಹಾಕಿ ಮತ್ತೆ ಚೆನ್ನಾಗಿ ಬೆರೆಸಿ. ಗೋಧಿ ರವೆ ಹಾಕಿದ ನಂತರ ಒಲೆಯನ್ನು ಕಡಿಮೆ ಉರಿಯಲ್ಲಿಟ್ಟು ನಿಧಾನವಾಗಿ ಇಟ್ಟು ಬೇಯಿಸಿ. ನಂತರ ಮುಚ್ಚಳವನ್ನು ಮುಚ್ಚಿ ಒಲೆ ಆರಿಸಿ. ಹತ್ತು ನಿಮಿಷಗಳ ಕಾಲ ಮುಚ್ಚಳ ತೆರೆಯದೆ ಹಾಗೆಯೇ ಇಡಿ.

ನಂತರ ಮುಚ್ಚಳ ತೆರೆದು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ. ಇದನ್ನು ಯಾವುದೇ ಬಗೆಯ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಸಾಮಾನ್ಯ ಉಪ್ಪಿಟ್ಟಿಗೆ ಹೋಲಿಸಿದರೆ ಈ ತೆಂಗಿನತುರಿ ಉಪ್ಪಿಟ್ಟು ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಒಮ್ಮೆ ಪ್ರಯತ್ನಿಸಿ ನೋಡಿ.