ಚಳಿಗಾಲದ ಸಂಜೆ ವೇಳೆಗೆ ಬಿಸಿ ಬಿಸಿ ತಿಂಡಿ ತಿನ್ನುವ ಆಸೆಯಾ: ಕೊತ್ತಂಬರಿ ಸೊಪ್ಪಿನ ವಡೆ ರೆಸಿಪಿ ಟ್ರೈ ಮಾಡಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದ ಸಂಜೆ ವೇಳೆಗೆ ಬಿಸಿ ಬಿಸಿ ತಿಂಡಿ ತಿನ್ನುವ ಆಸೆಯಾ: ಕೊತ್ತಂಬರಿ ಸೊಪ್ಪಿನ ವಡೆ ರೆಸಿಪಿ ಟ್ರೈ ಮಾಡಿ ನೋಡಿ

ಚಳಿಗಾಲದ ಸಂಜೆ ವೇಳೆಗೆ ಬಿಸಿ ಬಿಸಿ ತಿಂಡಿ ತಿನ್ನುವ ಆಸೆಯಾ: ಕೊತ್ತಂಬರಿ ಸೊಪ್ಪಿನ ವಡೆ ರೆಸಿಪಿ ಟ್ರೈ ಮಾಡಿ ನೋಡಿ

ಕೊತ್ತಂಬರಿ ಸೊಪ್ಪಿನಿಂದ ಮಾಡಿದ ಯಾವುದೇ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಕೊತ್ತಂಬರಿ ಸೊಪ್ಪನ್ನು ಸಾಮಾನ್ಯವಾಗಿ ಪಲಾವ್, ಬಿರಿಯಾನಿ, ವಿವಿಧ ಮಾಂಸಾಹಾರ ಮಾತ್ರವಲ್ಲದೆ ಸಸ್ಯಾಹಾರಿ ಅಡುಗೆಗಳಿಗೂ ಬಳಸಲಾಗುತ್ತದೆ. ಆದರೆ, ಇದರ ವಡೆಯನ್ನು ಎಂದಾದರೂ ತಿಂದಿದ್ದೀರಾ. ಚಳಿಗಾಲದಲ್ಲಿ ನೀವು ಪ್ರಯತ್ನಿಸಲೇಬೇಕಾದ ರೆಸಿಪಿಯಿದು.

ಚಳಿಗಾಲದ ಸಂಜೆ ವೇಳೆಗೆ ಬಿಸಿ ಬಿಸಿ ತಿಂಡಿ ತಿನ್ನುವ ಆಸೆಯಾ: ಕೊತ್ತಂಬರಿ ಸೊಪ್ಪಿನ ವಡೆ ರೆಸಿಪಿ ಟ್ರೈ ಮಾಡಿ ನೋಡಿ
ಚಳಿಗಾಲದ ಸಂಜೆ ವೇಳೆಗೆ ಬಿಸಿ ಬಿಸಿ ತಿಂಡಿ ತಿನ್ನುವ ಆಸೆಯಾ: ಕೊತ್ತಂಬರಿ ಸೊಪ್ಪಿನ ವಡೆ ರೆಸಿಪಿ ಟ್ರೈ ಮಾಡಿ ನೋಡಿ

ಕೊತ್ತಂಬರಿಯು ಯಾವುದೇ ಋತುವಿನಲ್ಲಿ ಸೇವಿಸಬಹುದಾದ ಪ್ರಮುಖ ಪೋಷಕಾಂಶವಾಗಿದೆ. ಇದು ನಮ್ಮ ದೇಹಕ್ಕೆ ಬೇಕಾದ ಉತ್ತಮವಾದ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಕೊತ್ತಂಬರಿ ಸೊಪ್ಪನ್ನು ಬಿರಿಯಾನಿ ಹಾಗೆಯೇ ವಿವಿಧ ಬಗೆಯ ಗ್ರೇವಿ, ಸಾಂಬಾರ್‌ಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಆದರೆ, ಕೊತ್ತಂಬರಿ ವಡೆ ರೆಸಿಪಿಯನ್ನು ಎಂದಾದರೂ ಕೇಳಿದ್ದೀರಾ. ಬಹಳ ಸರಳವಾಗಿ ಮಾಡಬಹುದಾದ ರೆಸಿಪಿಯಿದು. ನೀವು ಒಮ್ಮೆ ಪ್ರಯತ್ನಿಸಿ ನೋಡಬಹುದು. ಅದರಲ್ಲೂ ಚಳಿಗಾಲದ ಸಂಜೆ ವೇಳೆಗೆ ತಿನ್ನಲು ಈ ರೆಸಿಪಿ ಬೆಸ್ಟ್. ಇಲ್ಲಿದೆ ಕೊತ್ತಂಬರಿ ಸೊಪ್ಪಿನ ವಡೆ ಮಾಡುವ ವಿಧಾನ.

ಕೊತ್ತಂಬರಿ ಸೊಪ್ಪು ವಡೆ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಕೊತ್ತಂಬರಿ ಸೊಪ್ಪು- ಎರಡು ಕಪ್, ಕಡಲೆಬೇಳೆ ಹಿಟ್ಟು- ಒಂದು ಕಪ್, ಅಕ್ಕಿ ಹಿಟ್ಟು- ಕಾಲು ಕಪ್, ಹಸಿರು ಮೆಣಸಿನಕಾಯಿ ಪೇಸ್ಟ್- ಒಂದು ಟೀ ಚಮಚ, ಶುಂಠಿ ಪೇಸ್ಟ್- ಒಂದು ಟೀ ಚಮಚ, ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಹುಣಸೆ ಹಣ್ಣು- ಒಂದು ಟೀ ಚಮಚ, ಅರಿಶಿನ- ಅರ್ಧ ಟೀ ಚಮಚ, ಮೆಣಸಿನಪುಡಿ- ಒಂದೂವರೆ ಟೀ ಚಮಚ, ಜೀರಿಗೆ ಪುಡಿ- ಒಂದು ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ಗರಂ ಮಸಾಲೆ- ಅರ್ಧ ಟೀ ಚಮಚ, ಎಳ್ಳು- ಒಂದು ಟೀ ಚಮಚ, ಅಡುಗೆ ಸೋಡಾ- ಪಿಂಚ್, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಮೊದಲಿಗೆ ಕೊತ್ತಂಬರಿ ಸೊಪ್ಪನ್ನು ಒಂದು ಪಾತ್ರೆಯಲ್ಲಿ ತೊಳೆದು ಪಕ್ಕಕ್ಕೆ ಇಡಿ.

- ನಂತರ ಕೊತ್ತಂಬರಿ ಸೊಪ್ಪಿನಲ್ಲಿ ಕಡಲೆಬೇಳೆ ಹಿಟ್ಟು, ಅಕ್ಕಿಹಿಟ್ಟು, ಹಸಿಮೆಣಸಿನಕಾಯಿ ಪೇಸ್ಟ್ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕಲಸಿ.

- ನಂತರ ಅರಿಶಿನ, ಮೆಣಸಿನಕಾಯಿ, ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್, ಹುಣಸೆಹಣ್ಣು, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಇದನ್ನು ತುಂಬಾ ಗಟ್ಟಿಯಾದ ಚಪಾತಿ ಹಿಟ್ಟಿನ ಹಾಗೆ ಕಲಸಬೇಕು.

- ನಂತರ ಈ ಸಂಪೂರ್ಣ ಮಿಶ್ರಣವನ್ನು ರೋಲ್ ಮಾಡಿ, ಅದನ್ನು ಕೈಯಿಂದ ದಪ್ಪ ಆಕಾರಕ್ಕೆ ಪ್ಯಾಕ್ ಮಾಡಿ ತಟ್ಟೆಯಲ್ಲಿ ಹಾಕಿ.

- ಸ್ಟೌವ್ ಮೇಲೆ ಇಡ್ಲಿ ಪಾತ್ರೆಯನ್ನಿಡಿ.

- ಕಡುಬು ಬೇಯಿಸುವಂತೆ ಕೊತ್ತಂಬರಿ ಸೊಪ್ಪಿನ ಈ ಮಿಶ್ರಣವನ್ನು ಹಾಕಿ ಅದರ ಮೇಲೆ ಮುಚ್ಚಳವನ್ನು ಹಾಕಿ ಹತ್ತು ನಿಮಿಷ ಹಬೆಯಲ್ಲಿ ಬೇಯಿಸಿ.

- ಮುಚ್ಚಳವನ್ನು ತೆಗೆದು ಕೊತ್ತಂಬರಿ ಮಿಶ್ರಣವನ್ನು ತೆಗೆದುಕೊಂಡು ಅದನ್ನು ಪ್ಯಾನ್ ಕೇಕ್‍ಗಳಂತೆ ಕತ್ತರಿಸಿ.

- ನಂತರ ಸ್ಟೌವ್ ಮೇಲೆ ಕಡಾಯಿ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾಯಲು ಬಿಡಿ.

- ಪ್ಯಾನ್ ಕೇಕ್‍ನಂತೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನ ಮಿಶ್ರಣ ಕಾದ ಎಣ್ಣೆಯಲ್ಲಿ ಫ್ರೈ ಮಾಡಿ.

- ಗರಿಗರಿಯಾಗುವವರೆಗೆ ಇಟ್ಟು ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಅಷ್ಟೇ, ರುಚಿಯಾದ ಕೊತ್ತಂಬರಿ ಸೊಪ್ಪಿನ ವಡಾ ರೆಡಿ.

- ಇದನ್ನು ಕೆಚಪ್‍ನೊಂದಿಗೆ ತಿನ್ನಬಹುದು. ಈ ರೆಸಿಪಿಯ ರುಚಿ ಅದ್ಭುತವಾಗಿರುತ್ತದೆ. ಪುದೀನಾ ಚಟ್ನಿಯೊಂದಿಗೆ ತಿನ್ನಲು ಸಹ ರುಚಿಕರವಾಗಿರುತ್ತದೆ. ಇವುಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ. ನೀವು ಕೂಡ ಖಂಡಿತ ಇಷ್ಟಪಡುತ್ತೀರಿ. ಅಲ್ಲದೆ, ಮಕ್ಕಳಿಗೆ ಇದನ್ನು ನೀಡುವುದರಿಂದಲೂ ತುಂಬಾ ಆರೋಗ್ಯಕರ.

ಈ ರೀತಿ ಹಬೆಯಲ್ಲಿ ಬೇಯಿಸಿ ಬಳಿಕ ಎಣ್ಣೆಯಲ್ಲಿ ಫ್ರೈ ಮಾಡಬೇಕಾ ಎಂದಾದರೆ, ಚಿಕ್ಕ ಚಿಕ್ಕ ಉಂಡೆಗಳನ್ನು ತೆಗೆದುಕೊಂಡು ಎಣ್ಣೆಯಲ್ಲಿ ಕರಿಯಬಹುದು. ಮೇಲೆ ಎಳ್ಳು ಹಾಕಿ ತಿಂದರೆ ಅವು ರುಚಿಯಾಗಿರುತ್ತವೆ. ಮನೆಗೆ ಬರುವ ಅತಿಥಿಗಳಿಗೆ ಈ ವಿಶೇಶ ರೆಸಿಪಿಯನ್ನು ಬಡಿಸಲು ಪ್ರಯತ್ನಿಸಬಹುದು. ಖಂಡಿತ ಅವರು ಕೂಡ ಇಷ್ಟಪಟ್ಟು ತಿಂತಾರೆ.

Whats_app_banner