ಪುಡಿ ಇಲ್ಲದೆ ಮನೆಯಲ್ಲೇ ಸರಳವಾಗಿ ತಯಾರಿಸಿ ಹೋಟೆಲ್ ಶೈಲಿಯ ಚಿಕನ್ ಕಬಾಬ್: ಇಲ್ಲಿದೆ ರೆಸಿಪಿ
ನೀವು ಚಿಕನ್ ಕಬಾಬ್ ತಯಾರಿಸಲು ಅಂಗಡಿಯಿಂದ ತಂದ ಕಬಾಬ್ ಪುಡಿಯನ್ನು ಉಪಯೋಗಿಸುತ್ತೀರಾ. ಕಬಾಬ್ ಪುಡಿ ಇಲ್ಲದೆ ಮನೆಯಲ್ಲೇ ಇದನ್ನು ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಮನೆಯಲ್ಲೇಗರಿಗರಿಯಾದಚಿಕನ್ ಕಬಾಬ್ ತಯಾರಿಸುವುದು ತುಂಬಾನೇ ಸುಲಭ. ಇಲ್ಲಿದೆ ರೆಸಿಪಿ.

ಚಿಕನ್‌ನಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ನೀವು ಚಿಕನ್ ಕಬಾಬ್ ತಯಾರಿಸಲು ಅಂಗಡಿಯಿಂದ ತಂದ ಕಬಾಬ್ ಪುಡಿಯನ್ನು ಉಪಯೋಗಿಸುತ್ತೀರಾ. ಕಬಾಬ್ ಪುಡಿ ಇಲ್ಲದೆ ಮನೆಯಲ್ಲೇ ಇದನ್ನು ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಮನೆಯಲ್ಲೇ ಚಿಕನ್ ಕಬಾಬ್ ತಯಾರಿಸುವುದು ತುಂಬಾನೇ ಸುಲಭ. ಇಲ್ಲಿ ತಿಳಿಸಿರುವ ಪದಾರ್ಥಗಳಿಂದ ಬಹಳ ಸರಳವಾಗಿ ಕಬಾಬ್ ಅನ್ನು ತಯಾರಿಸಬಹುದು. ಹಾಗಿದ್ದರೆ ಚಿಕನ್ ಕಬಾಬ್ ತಯಾರಿಸುವುದು ಹೇಗೆ ಅನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಕಬಾಬ್ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಕೋಳಿ ಮಾಂಸ- 1 ಕೆಜಿ, ಉಪ್ಪು, ಅರಿಶಿನ- ಅರ್ಧ ಚಮಚ, ಧನಿಯಾ ಪುಡಿ- 1 ಚಮಚ, ಉಪ್ಪು, ಕಾಳುಮೆಣಸಿನ ಪುಡಿ- ಅರ್ಧ ಚಮಚ, ಮೆಣಸಿನ ಪುಡಿ- 1 ಚಮಚ, ಚಿಕನ್ ಮಸಾಲೆ ಪುಡಿ- 2 ಚಮಚ, ಗರಂ ಮಸಾಲೆ- 1 ಚಮಚ, ನಿಂಬೆ ಹಣ್ಣಿನ ರಸ- 2 ಚಮಚ, ಮೊಸರು- 2 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಕಾರ್ನ್ ಫ್ಲೋರ್- 3 ಚಮಚ, ಮೈದಾ ಹಿಟ್ಟು- 2 ಚಮಚ, ಅಕ್ಕಿ ಹಿಟ್ಟು- 1 ಚಮಚ, ಎಣ್ಣೆ- ಕರಿಯಲು.
ಮಾಡುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ ಇದಕ್ಕೆ ಅರಿಶಿನ, ಧನಿಯಾ ಪುಡಿ, ಉಪ್ಪು, ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ, ಚಿಕನ್ ಮಸಾಲೆ ಪುಡಿ, ಗರಂ ಮಸಾಲೆ, ನಿಂಬೆ ಹಣ್ಣಿನ ರಸ, ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಇವೆಲ್ಲವನ್ನೂ ಒಂದೊದಾಗಿ ಹಾಕಿ ಮಿಶ್ರಣ ಮಾಡಿ. ನಂತರ ಕಾರ್ನ್ ಫ್ಲೋರ್, ಮೈದಾ ಹಾಗೂ ಅಕ್ಕಿ ಹಿಟ್ಟು ಬೆರೆಸಿ ಚೆನ್ನಾಗಿ ಕಲಸಿ. ಮಿಶ್ರಣ ದಪ್ಪಗಾಗಿದ್ದರೆ ಸ್ವಲ್ಪ ನೀರು ಹಾಕಬಹುದು.
ಈ ಮಿಶ್ರಣವನ್ನು ಅರ್ಧ ಗಂಟೆಯಿಂದ ಒಂದು ಗಂಟೆ ಕಾಲ ಮ್ಯಾರಿನೇಟ್ ಮಾಡಲು ಇಡಿ. ನಂತರ ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಚಿಕನ್ ಕಬಾಬ್ ಅನ್ನು ಒಂದೊಂದಾಗಿ ಕರಿಯಿರಿ. ಎಣ್ಣೆ ಬಿಸಿಯಾಗುವ ವೇಳೆಗೆ ಅದನ್ನು ಪೂರ್ಣ ಉರಿಯಲ್ಲಿಡಿ. ಚಿಕನ್ ತುಂಡುಗಳನ್ನು ಕರಿಯುವ ವೇಳೆ ಮಧ್ಯಮ ಉರಿಯಲ್ಲಿರಲಿ. ಇದನ್ನು ಎರಡೂ ಬದಿಗೂ ಚೆನ್ನಾಗಿ ಕರಿಯಿರಿ. ನಂತರ ಒಂದು ತಟ್ಟೆಗೆ ಎತ್ತಿಡಿ. ಮಿಶ್ರಣ ಮಾಡಿರುವ ಎಲ್ಲಾ ಕೋಳಿಮಾಂಸವನ್ನು ಈ ರೀತಿ ಕರಿದು ತಟ್ಟೆಗೆ ಹಾಕಿದರೆ ರುಚಿಕರವಾದ ಚಿಕನ್ ಕಬಾಬ್ ತಿನ್ನಲು ಸಿದ್ಧ.
ಸಾಮಾನ್ಯವಾಗಿ ಚಿಕನ್ ಕಬಾಬ್ ಮಾಡಲು ಅಂಗಡಿಯಿಂದ ಕಬಾಬ್ ಪುಡಿಯನ್ನು ತರುವವರೇ ಹೆಚ್ಚು. ಆದರೆ, ಸರಳವಾಗಿ ಮನೆಯಲ್ಲೇ ಇದನ್ನು ತಯಾರಿಸಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು. ಇದನ್ನು ಸೈಡ್ ಡಿಶ್ ಆಗಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಅಥವಾ ಊಟಕ್ಕಿಂತ ಮುಂಚೆಯೂ ತಿನ್ನಬಹುದು.
