ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರವಾದ ಆಲೂಗಡ್ಡೆ ಫ್ರೈ: ಇದನ್ನು ತಯಾರಿಸುವುದು ತುಂಬಾನೇ ಸುಲಭ, ಮಕ್ಕಳು ಇಷ್ಟಪಟ್ಟು ತಿಂತಾರೆ; ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರವಾದ ಆಲೂಗಡ್ಡೆ ಫ್ರೈ: ಇದನ್ನು ತಯಾರಿಸುವುದು ತುಂಬಾನೇ ಸುಲಭ, ಮಕ್ಕಳು ಇಷ್ಟಪಟ್ಟು ತಿಂತಾರೆ; ಇಲ್ಲಿದೆ ರೆಸಿಪಿ

ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರವಾದ ಆಲೂಗಡ್ಡೆ ಫ್ರೈ: ಇದನ್ನು ತಯಾರಿಸುವುದು ತುಂಬಾನೇ ಸುಲಭ, ಮಕ್ಕಳು ಇಷ್ಟಪಟ್ಟು ತಿಂತಾರೆ; ಇಲ್ಲಿದೆ ರೆಸಿಪಿ

ಸಂಜೆ ಚಹಾ ಹೀರುತ್ತಾ ಏನಾದರೂ ತಿಂಡಿ ತಿನ್ನಬೇಕು ಎಂದೆನಿಸಿದರೆ ತಯಾರಿಸಿ ರುಚಿಕರ ಹಾಗೂ ಗರಿಗರಿಯಾದ ಆಲೂಗಡ್ಡೆ ಫ್ರೈ. ಮಕ್ಕಳು ಕೂಡ ಖಂಡಿತ ಇಷ್ಟಪಟ್ಟು ತಿಂತಾರೆ. ಈ ಆರೋಗ್ಯಕರ ತಿಂಡಿಯನ್ನು ಮನೆಯಲ್ಲೇ ಮಾಡಿ ಕೊಡಬಹುದು. ತಯಾರಿಸುವುದು ತುಂಬಾನೇ ಸಿಂಪಲ್. ಹಾಗಿದ್ದರೆ ಗರಿಗರಿಯಾದ ಆಲೂಗಡ್ಡೆ ಫ್ರೈ ತಯಾರಿಸುವುದು ಹೇಗೆ ಅನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.

ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರವಾದ ಆಲೂಗಡ್ಡೆ ಫ್ರೈ
ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರವಾದ ಆಲೂಗಡ್ಡೆ ಫ್ರೈ (Hebbars Kitchen/Youtube)

ಸಂಜೆ ಸ್ನಾಕ್ಸ್‌ಗೆ ಏನನ್ನಾದರೂ ಮಾಡಬೇಕು ಎಂದು ಅನಿಸಿದರೆ ಗರಿಗರಿಯಾದ ಹಾಗೂ ರುಚಿಕರವಾದ ಆಲೂಗಡ್ಡೆ ಫ್ರೈ ತಯಾರಿಸಬಹುದು. ಮಕ್ಕಳು ಕೂಡ ಖಂಡಿತ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಮಕ್ಕಳಿಗೆ ಬೇಕರಿ ತಿಂಡಿ ಕೊಡುವ ಬದಲು ಇಂತಹ ಆರೋಗ್ಯಕರ ತಿಂಡಿಯನ್ನು ಮನೆಯಲ್ಲೇ ಮಾಡಿ ಕೊಡಬಹುದು. ಇದನ್ನು ತಯಾರಿಸುವುದು ತುಂಬಾನೇ ಸುಲಭ. ಹಾಗಿದ್ದರೆ ಗರಿಗರಿಯಾದ ಆಲೂಗಡ್ಡೆ ಫ್ರೈ ತಯಾರಿಸುವುದು ಹೇಗೆ ಅನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.

ಗರಿಗರಿಯಾದ ಆಲೂಗಡ್ಡೆ ಫ್ರೈ ಪಾಕವಿಧಾನ

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ- ನಾಲ್ಕು, ಒಣಮೆಣಸಿನಕಾಯಿ– ಆರು, ಕೊತ್ತಂಬರಿ ಬೀಜ- ಒಂದು ಚಮಚ, ಜೀರಿಗೆ- ಒಂದು ಚಮಚ, ಕಪ್ಪು ಬೇಳೆ - ಎರಡು ಚಮಚ, ನೀರು- ಅಗತ್ಯಕ್ಕೆ ತಕ್ಕಷ್ಟು, ಸಾಸಿವೆ- ಅರ್ಧ ಚಮಚ, ಬೆಳ್ಳುಳ್ಳಿ ಎಸಳು- ನಾಲ್ಕು, ಕರಿಬೇವು- ಒಂದು ಹಿಡಿ, ಇಂಗು- ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ- ¼ ಟೀ ಚಮಚ, ಮೆಣಸಿನ ಪುಡಿ- ಅರ್ಧ ಚಮಚ, ಮ್ಯಾಗಿ ಮಸಾಲೆ- ಒಂದು ಚಮಚ.

ಮಾಡುವ ವಿಧಾನ: ಮಕ್ಕಳು ಗರಿಗರಿಯಾದ ತಿಂಡಿ ತಿನ್ನಲು ಇಷ್ಟಪಡುತ್ತಾರೆ. ಇದನ್ನು ಮಾಡುವುದು ತುಂಬಾನೇ ಸುಲಭ. ಮೊದಲಿಗೆ, ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ಸಣ್ಣ ತುಂಡುಗಳಾಗಿ ಕತ್ತರಿಸಿ. ಅವುಗಳನ್ನು ನೀರಿನಲ್ಲಿ ಹಾಕಿ ಸ್ವಲ್ಪ ಸಮಯ ಬಿಡಿ. ಈಗ, ಕಡಾಯಿಯನ್ನು ಒಲೆಯ ಮೇಲೆ ಇರಿಸಿ ಅದಕ್ಕೆ ಕಪ್ಪು ಬೇಳೆ, ಒಣಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜವನ್ನು ಹಾಕಿ ಹುರಿದು ಪುಡಿ ಮಾಡಿ.

ಈಗ ಒಂದು ಪಾತ್ರೆಯಲ್ಲಿ ಆಲೂಗಡ್ಡೆ ಹಾಗೂ ನೀರು ಹಾಕಿ ಒಲೆಯ ಮೇಲಿಟ್ಟು 10 ನಿಮಿಷಗಳ ಕಾಲ ಬೇಯಿಸಿ. ಬೆಂದ ನಂತರ ನೀರಿನಿಂದ ಆಲೂಗಡ್ಡೆಯನ್ನು ಹೊರತೆಗೆಯಿರಿ. ಈಗ ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಬೆರಳೆಣಿಕೆಯಷ್ಟು ಕರಿಬೇವಿನ ಎಲೆಗಳನ್ನು ಸೇರಿಸಿ. ನಂತರ ಕತ್ತರಿಸಿ ಬೇಯಿಸಿಟ್ಟ ಆಲೂಗಡ್ಡೆಯನ್ನು ಬೆರೆಸಿ ಸ್ವಲ್ಪ ಸಮಯ ಹುರಿಯಿರಿ.

ಆಲೂಗಡ್ಡೆ ಹುರಿಯುವಾಗ ಮುಚ್ಚಳವನ್ನು ಮುಚ್ಚಬೇಡಿ. ಸಣ್ಣ ಉರಿಯಲ್ಲಿ ಮಿಶ್ರಣ ಮಾಡುತ್ತಿರಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನವನ್ನು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೆಣಸಿನ ಪುಡಿಯನ್ನು ಬೆರಿಸಿ ಮಿಶ್ರಣ ಮಾಡಿ. ಆಲೂಗಡ್ಡೆ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಪುಡಿ ಮಾಡಿದ ಕಪ್ಪುಬೇಳೆ, ಕೊತ್ತಂಬರಿ ಪುಡಿಯ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಬಳಿಕ ಒಂದು ಚಮಚ ಮ್ಯಾಗಿ ಮಸಾಲೆ ಪುಡಿಯನ್ನು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿದರೆ ರುಚಿಕರವಾದ ಆಲೂ ಫ್ರೈ ಸಿದ್ಧ.

ಇದನ್ನು ಮಾಡುವಾಗ ತಾಳ್ಮೆ ಬಹಳ ಮುಖ್ಯ. ಆಲೂಗಡ್ಡೆ ಫ್ರೈ ತಯಾರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಸಂಜೆ ವೇಳೆ ಏನಾದರೂ ಸ್ನಾಕ್ಸ್ ತಿನ್ನಬೇಕು ಅಂತಾ ಅನಿಸಿದರೆ ರುಚಿಕರವಾದ ಈ ಆಲೂಗಡ್ಡೆ ಫ್ರೈ ಅನ್ನು ಪ್ರಯತ್ನಿಸಬಹುದು. ಮಕ್ಕಳು ಕೂಡ ಇದನ್ನು ಖಂಡಿತ ಇಷ್ಟಪಡುತ್ತಾರೆ. ಒಮ್ಮೆ ಪ್ರಯತ್ನಿಸಿ ನೋಡಿ ಖಂಡಿತ ಇಷ್ಟವಾಗಬಹುದು.

Whats_app_banner