ಆಲೂಗಡ್ಡೆ ಫ್ರೆಂಚ್ ಫ್ರೈ ಅಷ್ಟೇ ಅಲ್ಲ, ಮನೆಯಲ್ಲೇ ತಯಾರಿಸಬಹುದು ಸಿಹಿಕುಂಬಳಕಾಯಿ ಫ್ರೈಸ್: ಮಾಡುವುದು ತುಂಬಾ ಸರಳ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆಲೂಗಡ್ಡೆ ಫ್ರೆಂಚ್ ಫ್ರೈ ಅಷ್ಟೇ ಅಲ್ಲ, ಮನೆಯಲ್ಲೇ ತಯಾರಿಸಬಹುದು ಸಿಹಿಕುಂಬಳಕಾಯಿ ಫ್ರೈಸ್: ಮಾಡುವುದು ತುಂಬಾ ಸರಳ, ಇಲ್ಲಿದೆ ರೆಸಿಪಿ

ಆಲೂಗಡ್ಡೆ ಫ್ರೆಂಚ್ ಫ್ರೈ ಅಷ್ಟೇ ಅಲ್ಲ, ಮನೆಯಲ್ಲೇ ತಯಾರಿಸಬಹುದು ಸಿಹಿಕುಂಬಳಕಾಯಿ ಫ್ರೈಸ್: ಮಾಡುವುದು ತುಂಬಾ ಸರಳ, ಇಲ್ಲಿದೆ ರೆಸಿಪಿ

ಫ್ರೆಂಚ್ ಫ್ರೈಸ್ ಹೆಸರು ಕೇಳಿದರೆ ಮಕ್ಕಳು ಮಾತ್ರವಲ್ಲ ವಯಸ್ಕರು ಕೂಡ ಕಣ್ಣರಳಿಸುತ್ತಾರೆ. ಆಲೂಗಡ್ಡೆಯಿಂದ ಮಾಡಿದ ಈ ಫ್ರೈಗಳು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಕೇವಲ ಆಲೂಗಡ್ಡೆಯಿಂದ ಮಾತ್ರವಲ್ಲ ಸಿಹಿ ಕುಂಬಳಕಾಯಿಯಿಂದಲೂ ಫ್ರೈ ಮಾಡಬಹುದು. ಕುಂಬಳಕಾಯಿ ಫ್ರೈಸ್ ರೆಸಿಪಿ ಮಾಡುವುದು ಹೇಗೆ, ಇಲ್ಲಿದೆ ರೆಸಿಪಿ.

ಆಲೂಗಡ್ಡೆ ಫ್ರೆಂಚ್ ಫ್ರೈ ಅಷ್ಟೇ ಅಲ್ಲ, ಮನೆಯಲ್ಲೇ ತಯಾರಿಸಬಹುದು ಸಿಹಿಕುಂಬಳಕಾಯಿ ಫ್ರೈಸ್: ಮಾಡುವುದು ತುಂಬಾ ಸರಳ, ಇಲ್ಲಿದೆ ರೆಸಿಪಿ
ಆಲೂಗಡ್ಡೆ ಫ್ರೆಂಚ್ ಫ್ರೈ ಅಷ್ಟೇ ಅಲ್ಲ, ಮನೆಯಲ್ಲೇ ತಯಾರಿಸಬಹುದು ಸಿಹಿಕುಂಬಳಕಾಯಿ ಫ್ರೈಸ್: ಮಾಡುವುದು ತುಂಬಾ ಸರಳ, ಇಲ್ಲಿದೆ ರೆಸಿಪಿ

ಆಲೂಗಡ್ಡೆಯಿಂದ ಮಾಡಿದ ಫ್ರೆಂಚ್ ಫ್ರೈಗಳೆಂದರೆ ದೊಡ್ಡವರಿಂದ ಮಕ್ಕಳವರೆಗೆ ಎಲ್ಲರೂ ಇಷ್ಟಪಟ್ಟು ತಿಂತಾರೆ. ಫ್ರೆಂಚ್ ಫ್ರೈಗಳನ್ನು ಹೊರಗೆ ಹೋಗಿ ತಿನ್ನುವುದು ಮಾತ್ರವಲ್ಲದೆ ಮನೆಯಲ್ಲಿಯೂ ತಯಾರಿಸಿ ತಿನ್ನುವವರಿದ್ದಾರೆ. ಕೇವಲ ಆಲೂಗಡ್ಡೆಯ ಫ್ರೆಂಚ್ ಫ್ರೈ ಮಾತ್ರವಲ್ಲ, ಸಿಹಿಕುಂಬಳಕಾಯಿಯಿಂದ ಕೂಡ ಫ್ರೆಂಚ್ ಫ್ರೈಗಳಂತೆಯೇ ರೆಸಿಪಿ ಮಾಡಬಹುದು. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಏರ್ ಫ್ರೈಯರ್ ಇದ್ದರೆ ಈ ರೆಸಿಪಿ ಮಾಡುವುದು ತುಂಬಾನೇ ಸುಲಭ. ಡೀಪ್ ಫ್ರೈ ಅಥವಾ ಎಣ್ಣೆಯಲ್ಲೂ ಸಹ ಕರಿಯಬಹುದು. ಸಿಹಿಕುಂಬಳಕಾಯಿ ಫ್ರೈಗಳನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಿಹಿ ಕುಂಬಳಕಾಯಿ ಫ್ರೈಸ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಕತ್ತರಿಸಿದ ಕುಂಬಳಕಾಯಿ- ಎರಡು ಕಪ್‍ಗಳು, ಆಲಿವ್ ಎಣ್ಣೆ- ಎರಡು ಚಮಚ, ಚಿಲ್ಲಿ ಫ್ಲೇಕ್ಸ್- ಅರ್ಧ ಚಮಚ, ಬೆಳ್ಳುಳ್ಳಿ ಪುಡಿ- ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಮೆಣಸಿನಪುಡಿ- ಒಂದು ಚಮಚ, ಅರಿಶಿನ- ಅರ್ಧ ಟೀ ಚಮಚ, ಜೋಳದ ಹಿಟ್ಟು- ಒಂದು ಟೀ ಚಮಚ.

ಮಾಡುವ ವಿಧಾನ: ಮೊದಲಿಗೆ ಸಿಹಿ ಕುಂಬಳಕಾಯಿಯ ಮೇಲ್ಭಾಗವನ್ನು ಸಿಪ್ಪೆ ತೆಗೆದು ಫ್ರೆಂಚ್ ಫ್ರೈಸ್ ಆಕಾರದಲ್ಲಿ ಲಂಬವಾಗಿ ಕತ್ತರಿಸಿ. ಈ ಎಲ್ಲಾ ತುಂಡುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಆಲಿವ್ ಎಣ್ಣೆಯನ್ನು ಸೇರಿಸಿ. ಜತೆಗೆ ರುಚಿಗೆ ತಕ್ಕಷ್ಟು ಉಪ್ಪು, ಬೆಳ್ಳುಳ್ಳಿ ಪುಡಿ, ಅರಿಶಿನ ಮತ್ತು ಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ದಾಲ್ಚಿನ್ನಿ ಪುಡಿಯನ್ನು ಸಹ ಸೇರಿಸಿ.

ಒಂದು ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ. ಕರಿಯಲು ಬೇಕಾದಷ್ಟು ಎಣ್ಣೆಯನ್ನು ಸೇರಿಸಿ. ಎಣ್ಣೆ ಬಿಸಿಯಾದ ನಂತರ ಕುಂಬಳಕಾಯಿ ತುಂಡುಗಳನ್ನು ಸೇರಿಸಿ, ಗೋಲ್ಡನ್ ಬ್ರೌನ್ ಬರುವವರೆಗೆ ಫ್ರೈ ಮಾಡಿ. ಅವುಗಳನ್ನು ಹೊರತೆಗೆದು ಪಕ್ಕಕ್ಕೆ ಇರಿಸಿ. ಟಿಶ್ಯೂ ಪೇಪರ್ ಮೇಲೆ ಇಟ್ಟರೆ ಉತ್ತಮ. ಅದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇಷ್ಟು ಮಾಡಿದರೆ ಕುಂಬಳಕಾಯಿ ಫ್ರೈ ಸವಿಯಲು ಸಿದ್ಧವಾಗಿವೆ. ಕುಂಬಳಕಾಯಿ ಫ್ರೈ ಮಾಡುವುದು ಫ್ರೆಂಚ್ ಫ್ರೈಗಿಂತ ಕೂಡ ಸುಲಭ. ಮನೆಯಲ್ಲಿ ಏರ್ ಫ್ರೈಯರ್ ಇದ್ದರೆ ಅಡುಗೆ ಮಾಡುವುದು ಇನ್ನು ಸುಲಭ. ಇಲ್ಲದಿದ್ದರೆ ಸಿಹಿ ಕುಂಬಳಕಾಯಿ ಫ್ರೈಯನ್ನು ಮೇಲೆ ತಿಳಿಸಿದಂತೆ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಬಹುದು.

ಓವೆನ್‍ನಲ್ಲಿ ಅಡುಗೆ ಮಾಡುತ್ತಿದ್ದರೆ, 200° ಸೆಲ್ಸಿಯಸ್‍ಗೆ ಪೂರ್ವಭಾವಿಯಾಗಿ ಕಾಯಿಸಿ. ನಂತರ ಬೇಕಿಂಗ್ ಟ್ರೇ ಮೇಲೆ ಅಲ್ಯೂಮಿನಿಯಂ ಫಾಯಿಲ್ ಅನ್ನು ಇರಿಸಿ. ಅದರ ಮೇಲೆ ಸಿಹಿಕುಂಬಳಕಾಯಿ ತುಂಡುಗಳನ್ನು ಒಂದಕ್ಕೊಂದು ಅಂಟಿಕೊಳ್ಳದಂತೆ ಇರಿಸಿ. ಅವುಗಳು ಬೇಯುವವರೆಗೆ ಇರಿಸಿ. ಈ ರೀತಿ ಮಾಡುವುದರಿಂದಲೂ ಸಿಹಿಕುಂಬಳಕಾಯಿ ಫ್ರೈಸ್ ತುಂಬಾ ರುಚಿಕರವಾಗಿರುತ್ತದೆ.

Whats_app_banner