ರುಚಿಕರವಾದ ಸೀತಾಫಲ ಹಣ್ಣಿನ ಪಾಯಸ ಸವಿಯಿರಿ: ಒಮ್ಮೆ ರುಚಿ ಸವಿದರೆ, ಮತ್ತೆ ಮತ್ತೆ ಮಾಡುವಿರಿ- ಇಲ್ಲಿದೆ ಪಾಕವಿಧಾನ
ಚಳಿಗಾಲದಲ್ಲಿ ಸೀತಾಫಲ ಹಣ್ಣುಗಳು ಹೇರಳವಾಗಿ ಸಿಗುತ್ತವೆ. ತುಂಬಾ ರುಚಿಕರವಾಗಿರುವ ಈ ಹಣ್ಣಿನಿಂದ ಪಾಯಸ ಮಾಡಿ ಕೂಡ ಸವಿಯಬಹುದು. ಈ ಹಣ್ಣಿನ ಪಾಯಸ ಸವಿಯಲು ಬಹಳ ರುಚಿಕರವಾಗಿರುತ್ತದೆ. ತುಂಬಾ ಸರಳವಾಗಿ ಮಾಡಬಹುದಾದ ಸೀತಾಫಲದ ಪಾಯಸದ ಪಾಕವಿಧಾನ ಇಲ್ಲಿದೆ.
ಸೀತಾಫಲ ಹಣ್ಣಿನ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರೂರಬಹುದು. ಬಹುತೇಕರಿಗೆ ಈ ಹಣ್ಣು ಬಹಳ ಪ್ರಿಯವಾಗಿರಬಹುದು. ಮೃದುವಾದ ತಿರುಳಿರುವ ಈ ಹಣ್ಣನ್ನು ಎಷ್ಟು ಬಾರಿ ತಿಂದರೂ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ಸೀತಾಫಲ ಹಣ್ಣುಗಳು ಚಳಿಗಾಲದಲ್ಲಿ ಹೆಚ್ಚಾಗಿ ದೊರೆಯುತ್ತವೆ. ಇವುಗಳನ್ನು ಋತುಮಾನದ ಹಣ್ಣುಗಳೆಂದೂ ಹೇಳಬಹುದು. ಆಯಾ ಋತುವಿನಲ್ಲಿ ಋತುಮಾನದ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ಚಳಿಗಾಲದಲ್ಲಿ ಸಿಗುವ ಸೀತಾಫಲ ಹಣ್ಣನ್ನು ತಿನ್ನುವುದು ಉತ್ತಮ. ಇದನ್ನು ಪಾಯಸ ಮಾಡಿಯೂ ಸೇವಿಸಬಹುದು. ತುಂಬಾ ಸರಳವಾಗಿ ಮಾಡಬಹುದಾದ ಸೀತಾಫಲದ ಪಾಯಸವು ಬಹಳ ರುಚಿಕರವಾಗಿರುತ್ತದೆ.
ಸೀತಾಫಲ ಪಾಯಸ ರೆಸಿಪಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು: ಸೀತಾಫಲ- ಎರಡು, ಹಾಲು - ಅರ್ಧ ಲೀಟರ್, ಸಕ್ಕರೆ- 4 ಟೀ ಚಮಚ, ಕೇಸರಿ- ನಾಲ್ಕು ದಳಗಳು, ಬಾದಾಮಿ ಪುಡಿ/ಪೇಸ್ಟ್- ಎರಡು ಟೀ ಚಮಚ, ಏಲಕ್ಕಿ ಪುಡಿ- ಚಿಟಿಕೆ, ಸಬ್ಬಕ್ಕಿ- ಅರ್ಧ ಕಪ್, ತುಪ್ಪ- ಒಂದು ಟೀ ಚಮಚ.
ಮಾಡುವ ವಿಧಾನ: ಮೊದಲಿಗೆ ಸೀತಾಫಲದ ಬಿಳಿ ತಿರುಳನ್ನು ಬೇರ್ಪಡಿಸಿ ಪಕ್ಕಕ್ಕೆ ಇಡಿ. ಬೀಜಗಳನ್ನು ತೆಗೆದುಹಾಕಿ.
- ಹಾಗೆಯೇ ಸಬ್ಬಕ್ಕಿಯನ್ನು ಬಿಸಿ ನೀರಿನಲ್ಲಿ ಹಾಕಿ ಅರ್ಧ ಗಂಟೆ ನೆನೆಸಿಡಿ.
- ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಒಂದು ಚಮಚ ತುಪ್ಪವನ್ನು ಹಾಕಿ.
- ತುಪ್ಪಕ್ಕೆ ಬಾದಾಮಿ ಪೇಸ್ಟ್ ಸೇರಿಸಿ, ಬಣ್ಣ ಬದಲಾಗುವವರೆಗೆ ಹುರಿಯಿರಿ.
- ಈಗ ಬಿಸಿ ನೀರಿನಲ್ಲಿ ನೆನೆಸಿದ ಸಬ್ಬಕ್ಕಿಯನ್ನು ಸೋಸಿ ಮಿಶ್ರಣ ಮಾಡಿ.
- ಇದನ್ನು ಮಿಶ್ರಣ ಮಾಡಿದ ನಂತರ, ಅರ್ಧ ಲೀಟರ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಸಂಪೂರ್ಣ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬೇಯಿಸಿ.
- ಈ ಮಿಶ್ರಣವು ಸ್ವಲ್ಪ ದಪ್ಪಗಾದಾಗ ಸಕ್ಕರೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಇದಕ್ಕೆ ಏಲಕ್ಕಿ ಪುಡಿ ಮತ್ತು ಕೇಸರಿ ಹೂವುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಸೀತಾಫಲದ ತಿರುಳನ್ನು ಸೇರಿಸಿ, ಅದು ಮೃದುವಾಗುವವರೆಗೆ ಮಿಶ್ರಣ ಮಾಡಿ.
- ನಂತರ ಸ್ಟೌವ್ ಆಫ್ ಮಾಡಿ. ತಣ್ಣಗಾದ ನಂತರ ತಿಂದರೆ ರುಚಿ ತುಂಬಾ ಚೆನ್ನಾಗಿರುತ್ತದೆ.
ಒಮ್ಮೆ ತಿಂದು ನೋಡಿದರೆ, ಮತ್ತೆ ಮತ್ತೆ ಈ ಪಾಯಸ ಮಾಡುವಿರಿ. ಖಂಡಿತ ನಿಮಗೆ ಇಷ್ಟವಾಗುವುದರಲ್ಲಿ ಸಂಶಯಿಲ್ಲ. ಅತಿಥಿಗಳು ಬಂದಾಗ ಅಡುಗೆ ಮಾಡಿ ಬಡಿಸಬಹುದು. ಇದು ಅವರಿಗೆ ಹೊಸ ರುಚಿಯನ್ನು ನೀಡುತ್ತದೆ.
ಸೀತಾಫಲವು ಹೆಚ್ಚಾಗಿ ಚಳಿಗಾಲದಲ್ಲಿ ಹಣ್ಣಾಗುತ್ತದೆ. ಹಾಗಾಗಿ ಈ ಚಳಿಗಾಲದಲ್ಲಿ ಈ ಹಣ್ಣನ್ನು ಅಥವಾ ಅದರ ಪಾಯಸ ಮಾಡಿ ತಿನ್ನುವುದನ್ನು ಮರೆಯದಿರಿ. ಇದು ಚಳಿಗಾಲದಲ್ಲಿ ನಮ್ಮನ್ನು ರಕ್ಷಿಸುವ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಚಳಿಗಾಲದಲ್ಲಿ ಯಾವುದೇ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿಯೇ ಋತುಮಾನದ ಅಥವಾ ಸೀಸನ್ ಹಣ್ಣಾದರೂ ಸೀತಾಫಲ ಹಣ್ಣನ್ನು ತಿಂದರೆ ಬೇಗ ಜೀರ್ಣವಾಗಲು ಸಾಧ್ಯ. ಇದು ಹೊಟ್ಟೆಯಲ್ಲಿನ ಕರುಳಿನ ಬ್ಯಾಕ್ಟೀರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಸೇವಿಸುವ ಯಾವುದೇ ಆಹಾರದಲ್ಲಿರುವ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಸೀತಾಫಲ ಹಣ್ಣನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಬಹುದು.