ತ್ವರಿತವಾಗಿ ತಯಾರಾಗುವ ಆಲೂಗಡ್ಡೆ-ರವೆ ದೋಸೆ ಮಾಡಿ ನೋಡಿ; ರುಚಿಯಂತೂ ಸೂಪರ್, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ತ್ವರಿತವಾಗಿ ತಯಾರಾಗುವ ಆಲೂಗಡ್ಡೆ-ರವೆ ದೋಸೆ ಮಾಡಿ ನೋಡಿ; ರುಚಿಯಂತೂ ಸೂಪರ್, ಇಲ್ಲಿದೆ ರೆಸಿಪಿ

ತ್ವರಿತವಾಗಿ ತಯಾರಾಗುವ ಆಲೂಗಡ್ಡೆ-ರವೆ ದೋಸೆ ಮಾಡಿ ನೋಡಿ; ರುಚಿಯಂತೂ ಸೂಪರ್, ಇಲ್ಲಿದೆ ರೆಸಿಪಿ

ಬೆಳಗ್ಗೆ ಎದ್ದಾಗ ತಡವಾಯಿತಾ. ಏನು ತಿಂಡಿ ತಯಾರಿಸುವುದು ಎಂದು ಯೋಚಿಸುತ್ತಿರಬಹುದು. ಇಂತಹ ಸಮಯದಲ್ಲಿ ದಿಢೀರನೇ ತಯಾರಾಗುವ ಉಪಾಹಾರ ಖಾದ್ಯವನ್ನು ತಯಾರಿಸಬೇಕು. ಅತ್ಯಂತ ಕಡಿಮೆ ಸಮಯದಲ್ಲಿ ಸಿದ್ಧವಾಗುವ ಆಲೂಗಡ್ಡೆ-ರವೆ ದೋಸೆ ತಯಾರಿಸಿ. ಇದನ್ನು ಮಾಡುವುದು ತುಂಬಾ ಸುಲಭ. ಇಲ್ಲಿದೆ ರೆಸಿಪಿ.

ತ್ವರಿತವಾಗಿ ತಯಾರಾಗುವ ಆಲೂಗಡ್ಡೆ-ರವೆ ದೋಸೆ ಮಾಡಿ ನೋಡಿ
ತ್ವರಿತವಾಗಿ ತಯಾರಾಗುವ ಆಲೂಗಡ್ಡೆ-ರವೆ ದೋಸೆ ಮಾಡಿ ನೋಡಿ (Shutterstock)

ಬೆಳಗ್ಗೆ ಎದ್ದಾಗ ತಡವಾಯಿತಾ. ಏನು ತಿಂಡಿ ತಯಾರಿಸುವುದು ಎಂದು ಯೋಚಿಸುತ್ತಿರಬಹುದು. ಉಪಾಹಾರದ ಜೊತೆಗೆ ಮಕ್ಕಳ ಲಂಚ್ ಬಾಕ್ಸ್‌ಗೂ ಏನಾದರೂ ಹಾಕಿ ಕಳುಹಿಸಬೇಕಿರುವುದರಿಂದ ಚಿಂತೆ ಇನ್ನೂ ಹೆಚ್ಚುತ್ತದೆ. ಮಕ್ಕಳಂತೂ ತಿಂಡಿ ರುಚಿಯಾಗಿಲ್ಲದಿದ್ದರೆ ತಿನ್ನುವುದೇ ಇಲ್ಲ. ಹೀಗಾಗಿ ಅತ್ಯಂತ ಕಡಿಮೆ ಸಮಯ ನಿಮ್ಮಲ್ಲಿರುವುದರಿಂದ ದಿಢೀರನೆ ಆಲೂಗಡ್ಡೆ-ರವೆ ದೋಸೆ ತಯಾರಿಸಬಹುದು. ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ಇದು ಬಹಳ ರುಚಿಕರವಾಗಿರುತ್ತದೆ. ಆಲೂಗಡ್ಡೆ ಮತ್ತು ರವೆಯಿಂದ ತಯಾರಿಸಿದ ಗರಿಗರಿಯಾದ ದೋಸೆಯನ್ನು ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಆಲೂಗಡ್ಡೆ-ರವೆ ದೋಸೆ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಆಲೂಗಡ್ಡೆ- 2, ಹಸಿ ಮೆಣಸಿನಕಾಯಿ- 2, ಉಪ್ಪು ರುಚಿಗೆ ತಕ್ಕಷ್ಟು, ರವೆ- ಅರ್ಧ ಕಪ್, ನೀರು- ಎರಡೂವರೆ ಕಪ್, ಅಕ್ಕಿ ಹಿಟ್ಟು- ಅರ್ಧ ಕಪ್, ಈರುಳ್ಳಿ- ಒಂದು, ಕೊತ್ತಂಬರಿ ಸೊಪ್ಪು- ಒಂದು ಚಮಚ, ಜೀರಿಗೆ- ½ ಟೀ ಚಮಚ, ಕಾಳುಮೆಣಸು- ½ ಚಮಚ.

ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆ ಬೇಯಿಸಬೇಕು. ಬೆಂದ ನಂತರ ಅದರ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸರ್ ಜಾರ್‌ಗೆ ಹಾಕಿ. ಇದಕ್ಕೆ ಉಪ್ಪು, ಕಾಳುಮೆಣಸು ಮತ್ತು ಸ್ವಲ್ಪ ನೀರು ಬೆರಿಸಿ ನಿಧಾನವಾಗಿ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ರವೆ ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಜೀರಿಗೆ ಹಾಕಿ ಮಿಶ್ರಣ ಮಾಡಿ. ಜೊತೆಗೆ ರುಬ್ಬಿರುವ ಮಿಶ್ರಣವನ್ನು ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಮಿಶ್ರಣ ಮಾಡಿ.

ನಿಮಗೆ ಇಷ್ಟವಿದ್ದರೆ ನುಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಟೊಮೆಟೊ ಸಹ ಬೆರೆಸಬಹುದು. ಈಗ ಬಾಣಲೆಯನ್ನು ಒಲೆಯ ಮೇಲೆ ಇರಿಸಿ ಸ್ವಲ್ಪ ಎಣ್ಣೆ ಹಾಕಿ. ದೋಸೆ ಹಿಟ್ಟು ತುಂಬಾ ತೆಳುವಾಗಿ ಅಥವಾ ದಪ್ಪವಾಗಿಯೂ ಇರಬಾರದು. ಈಗ ಬಾಣಲೆ ಬಿಸಿಯಾಗಿದ್ದರೆ ಅದರಲ್ಲಿ ತೆಳುವಾಗಿ ದೋಸೆ ಹುಯ್ಯಿರಿ. ತೆಳುವಾಗಿ ಹುಯ್ದರೆ ದೋಸೆ ಗರಿಗರಿಯಾಗಿ ಬರುತ್ತದೆ. ಎರಡೂ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿದರೆ ರುಚಿಕರವಾದ ಆಲೂಗಡ್ಡೆ-ರವೆ ದೋಸೆ ಸವಿಯಲು ಸಿದ್ಧ.

ಈ ದೋಸೆ ತುಂಬಾ ರುಚಿಕರವಾಗಿರುತ್ತದೆ. ಪ್ರತಿದಿನ ಏನಾದರೂ ವಿಭಿನ್ನ ಪಾಕವಿಧಾನ ಪ್ರಯತ್ನಿಸಬೇಕು ಅಂತಿದ್ದರೆ ಈ ದೋಸೆ ಮಾಡಿ ನೋಡಿ. ಖಂಡಿತ ಇಷ್ಟವಾಗುತ್ತದೆ. ಇದನ್ನು ಟೊಮೆಟೊ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಬಹುದು. ಒಮ್ಮೆ ಮಾಡಿ ನೋಡಿ, ಖಂಡಿತ ಮತ್ತೆ ಮತ್ತೆ ಮಾಡುವಿರಿ.

Whats_app_banner