ಬೇಸಿಗೆಯ ಶಾಖದಿಂದ ಪಾರಾಗಲು ಬಯಸಿದರೆ ರುಚಿಕರ ಮೊಸರು ವಡೆ ತಯಾರಿಸಿ ತಿನ್ನಿ; ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆಯ ಶಾಖದಿಂದ ಪಾರಾಗಲು ಬಯಸಿದರೆ ರುಚಿಕರ ಮೊಸರು ವಡೆ ತಯಾರಿಸಿ ತಿನ್ನಿ; ಇಲ್ಲಿದೆ ರೆಸಿಪಿ

ಬೇಸಿಗೆಯ ಶಾಖದಿಂದ ಪಾರಾಗಲು ಬಯಸಿದರೆ ರುಚಿಕರ ಮೊಸರು ವಡೆ ತಯಾರಿಸಿ ತಿನ್ನಿ; ಇಲ್ಲಿದೆ ರೆಸಿಪಿ

ಬೇಸಿಗೆಯ ಶಾಖದಿಂದ ತ್ವರಿತ ಪರಿಹಾರ ಪಡೆಯಲುತಂಪಾದ ಆಹಾರ ತಿನ್ನಬೇಕು ಎಂದೆನಿಸಿದರೆ ರುಚಿಕರ ಮೊಸರು ವಡೆ ಪ್ರಯತ್ನಿಸಿ.ಇದನ್ನು ತಯಾರಿಸುವುದು ತುಂಬಾ ಸುಲಭ. ಇಲ್ಲಿದೆ ರೆಸಿಪಿ.

ಬೇಸಿಗೆಯ ಶಾಖದಿಂದ ಪಾರಾಗಲು ಬಯಸಿದರೆ ರುಚಿಕರ ಮೊಸರು ವಡೆ ತಯಾರಿಸಿ ತಿನ್ನಿ
ಬೇಸಿಗೆಯ ಶಾಖದಿಂದ ಪಾರಾಗಲು ಬಯಸಿದರೆ ರುಚಿಕರ ಮೊಸರು ವಡೆ ತಯಾರಿಸಿ ತಿನ್ನಿ

ಬೇಸಿಗೆಯ ಶಾಖದಿಂದ ತ್ವರಿತ ಪರಿಹಾರ ಪಡೆಯಲು ನೀವು ಬಯಸುವಿರಾ. ಈ ಸೆಖೆಗೆ ತಂಪಾದ, ರುಚಿಕರವಾದ ತಿಂಡಿಯನ್ನು ಹುಡುಕುತ್ತಿದ್ದರೆ ಮೊಸರು ವಡೆ ಪಾಕವಿಧಾನ ಪ್ರಯತ್ನಿಸಬಹುದು. ಮೃದುವಾದ ವಡೆಯನ್ನು ಮೊಸರಿನಲ್ಲಿ ನೆನೆಸಿ ತಿಂದರೆ ಅದರ ರುಚಿಯೇ ಬೇರೆ. ಸಿಹಿ-ಹುಳಿ ಮಿಶ್ರಣದ ಈ ತಿಂಡಿಯನ್ನು ತಿನ್ನುತ್ತಿದ್ದರೆ ಅದರ ರುಚಿಯನ್ನು ವರ್ಣಿಸಲು ಸಾಧ್ಯವಿಲ್ಲ. ಮೊಸರು ವಡೆ ತಯಾರಿಸುವುದು ಕೂಡ ತುಂಬಾನೇ ಸುಲಭ. ಇದನ್ನು ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮೊಸರು ವಡೆ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1 ಕಪ್, ಹಸಿ ಮೆಣಸಿನಕಾಯಿ - 1 ಅಥವಾ 2 (ಸಣ್ಣಗೆ ಕತ್ತರಿಸಿದ್ದು), ಶುಂಠಿ - 1/2 ಇಂಚು, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು, ದಪ್ಪ ಮೊಸರು - 2 ಕಪ್, ಸಕ್ಕರೆ – ಅರ್ಧ ಚಮಚ (ರುಚಿಗೆ ತಕ್ಕಷ್ಟು), ಕಾಳುಮೆಣಸು- 1/2 ಚಮಚ, ನೀರು - 1/2 ಕಪ್, ಚಿಲ್ಲಿ ಸಾಸ್ - 2 ಚಮಚ, ಟೊಮೆಟೊ ಸಾಸ್ - 2 ಚಮಚ, ಕೊತ್ತಂಬರಿ ಪುಡಿ - 1/2 ಚಮಚ, ಹುರಿದ ಜೀರಿಗೆ ಪುಡಿ - 1/2 ಚಮಚ, ಖಾರ ಮೆಣಸಿನ ಪುಡಿ- 1/2 ಚಮಚ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಪುಡಿ - 2 ಚಮಚ, ಕಡಲೆಹಿಟ್ಟಿ ಬೂಂದಿ ಸ್ವಲ್ಪ, ದಾಳಿಂಬೆ ಬೀಜ – ಸ್ವಲ್ಪ.

ತಯಾರಿಸುವ ವಿಧಾನ: ಮೊಸರು ವಡೆ ತಯಾರಿಸುವ ಮೊದಲು ಉದ್ದಿನ ಬೇಳೆಯನ್ನು 2 ರಿಂದ 3 ಬಾರಿ ಚೆನ್ನಾಗಿ ತೊಳೆದು ಕನಿಷ್ಠ 4 ರಿಂದ 5 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನೆನೆಸಿದ ಬೇಳೆಯ ನೀರನ್ನು ಸಂಪೂರ್ಣವಾಗಿ ಸೋಸಿ ಮಿಕ್ಸರ್ ಜಾರ್‌ನಲ್ಲಿ ಹಾಕಿ. ಅಗತ್ಯವಿದ್ದರೆ, ಸ್ವಲ್ಪ ನೀರನ್ನು ಹಾಕಿ ನಯವಾಗಿ ರುಬ್ಬಿ. ಹಿಟ್ಟು ತುಂಬಾ ತೆಳುವಾಗಿರಬಾರದು.

ಈಗ ಒಂದು ಪಾತ್ರೆಯಲ್ಲಿ ರುಬ್ಬಿರುವ ಹಿಟ್ಟನ್ನು ತೆಗೆದುಕೊಂಡು ನುಣ್ಣಗೆ ಕತ್ತರಿಸಿದ ಹಸಿಮೆಣಸು, ತುರಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಹಿಟ್ಟನ್ನು ಕೈಯಿಂದ 2 ರಿಂದ 3 ನಿಮಿಷಗಳ ಕಾಲ ಕಲಕಿ. ಇದರಿಂದ ವಡೆ ಮೃದುವಾಗುತ್ತವೆ.

ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಉರಿಯನ್ನು ಕಡಿಮೆ ಮಾಡಿ. ಅದರಲ್ಲಿ ಸ್ವಲ್ಪ ಹಿಟ್ಟನ್ನು ಚಮಚ ಅಥವಾ ಒದ್ದೆಯಾದ ಕೈಯಿಂದ ಸಣ್ಣ ವಡೆಯಂತೆ ಹಾಕಿ. ಒಂದೇ ಬಾರಿಗೆ ಹೆಚ್ಚು ಹಾಕದೆ ಸ್ವಲ್ಪ ಸ್ವಲ್ಪವೇ ಎಣ್ಣೆಯಲ್ಲಿ ಹಾಕಿ.

ಈ ವಡೆಯನ್ನು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಎಣ್ಣೆಯಲ್ಲಿ ಹುರಿದ ವಡೆಗಳನ್ನು ತೆಗೆದುಕೊಂಡು ಟಿಶ್ಯೂ ಪೇಪರ್ ಇರಿಸಿರುವ ತಟ್ಟೆಯಲ್ಲಿ ಇರಿಸಿ. ಎಲ್ಲಾ ವಡೆಗಳನ್ನು ಹುರಿದು ಪಕ್ಕಕ್ಕೆ ಇರಿಸಿ. ನಂತರ ಒಂದು ಬಟ್ಟಲಿನಲ್ಲಿ ದಪ್ಪ ಮೊಸರನ್ನು ತೆಗೆದುಕೊಂಡು, ಅದಕ್ಕೆ ಸಕ್ಕರೆ ಮತ್ತು ಕಪ್ಪು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಮೊಸರು ತುಂಬಾ ಗಟ್ಟಿಯಾಗಿದ್ದರೆ, ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊಸರು ಸ್ವಲ್ಪ ದಪ್ಪವಾಗಿರಬೇಕು ಮತ್ತು ತುಂಬಾ ತೆಳುವಾಗಿರಬಾರದು. ಈಗ ಒಂದು ದೊಡ್ಡ ಬಟ್ಟಲಿನಲ್ಲಿ ತಣ್ಣೀರನ್ನು ತೆಗೆದುಕೊಂಡು, ಅದರಲ್ಲಿ ಹುರಿದ ವಡೆಗಳನ್ನು ಸೇರಿಸಿ. 10 ರಿಂದ 15 ನಿಮಿಷಗಳ ಕಾಲ ನೆನೆಸಿಡಿ. ಇದು ವಡೆಗಳನ್ನು ಮೃದು ಮತ್ತು ರಸಭರಿತವಾಗಿಸುತ್ತದೆ.

ನೆನೆಸಿದ ವಡೆಗಳನ್ನು ಒಂದೊಂದಾಗಿ ತೆಗೆದುಕೊಂಡು ಅವುಗಳನ್ನು ಎರಡೂ ಅಂಗೈಗಳ ಮಧ್ಯದಲ್ಲಿ ಇರಿಸಿ. ಅವುಗಳನ್ನು ನಿಧಾನವಾಗಿ ಒತ್ತಿ, ಹೆಚ್ಚುವರಿ ಎಣ್ಣೆಯನ್ನು ತೆಗೆಯಿರಿ. ತುಂಬಾ ಗಟ್ಟಿಯಾಗಿ ಒತ್ತಿದರೆ, ವಡೆ ಒಡೆಯಬಹುದು. ಒತ್ತಿದ ಎಲ್ಲಾ ವಡೆಗಳನ್ನು ಒಂದು ತಟ್ಟೆಯಲ್ಲಿ ಹಾಕಿ, ಅದರ ಮೇಲೆ ಮೊಸರು ಹಾಕಿ.

ತದನಂತರ ಮಸಾಲೆಯುಕ್ತ ಚಟ್ನಿ ಮತ್ತು ಕೆಚಪ್ ಸಾಸ್‌ನಂತಹ ನಿಮಗೆ ಬೇಕಾದ ಸಿಹಿ ಚಟ್ನಿಗಳನ್ನು ಸೇರಿಸಿ. ಮೆಣಸಿನ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆಯನ್ನು ಅದರ ಮೇಲೆ ಸಿಂಪಡಿಸಿ. ನಂತರ ನುಣ್ಣಗೆ ಕತ್ತರಿಸಿದ ಕೊತ್ತಂಬರಿ, ಬೂಂದಿ, ಬೇಕಿದ್ದರೆ ದಾಳಿಂಬೆಯನ್ನು ಸಹ ಹಾಕಬಹುದು. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ.

ಈ ರೀತಿಯಾಗಿ, ನೀವು ಮನೆಯಲ್ಲಿ ರುಚಿಕರವಾದ ಮೊಸರು ವಡೆಯನ್ನು ಸುಲಭವಾಗಿ ತಯಾರಿಸಬಹುದು. ಇದನ್ನು ಮಕ್ಕಳಿಂದ ವಯಸ್ಕರವರೆಗೆ ಇಷ್ಟಪಡುತ್ತಾರೆ. ಇದು ಬೇಸಿಗೆಯಲ್ಲಿ ತಿನ್ನಲು ಬಹಳ ಅದ್ಭುತ ತಿಂಡಿಯಾಗಿದೆ.

Priyanka Gowda

eMail