ಮಕ್ಕಳು ಮ್ಯಾಗಿ ಬೇಕು ಅಂತಾ ಹಿಡಿದರೆ ಅವರಿಗಾಗಿ ತಯಾರಿಸಿ ಈ ಖಾದ್ಯ; ಇಲ್ಲಿದೆ ರುಚಿಕರ ಮ್ಯಾಗಿ ಕಟ್ಲೇಟ್ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳು ಮ್ಯಾಗಿ ಬೇಕು ಅಂತಾ ಹಿಡಿದರೆ ಅವರಿಗಾಗಿ ತಯಾರಿಸಿ ಈ ಖಾದ್ಯ; ಇಲ್ಲಿದೆ ರುಚಿಕರ ಮ್ಯಾಗಿ ಕಟ್ಲೇಟ್ ರೆಸಿಪಿ

ಮಕ್ಕಳು ಮ್ಯಾಗಿ ಬೇಕು ಅಂತಾ ಹಿಡಿದರೆ ಅವರಿಗಾಗಿ ತಯಾರಿಸಿ ಈ ಖಾದ್ಯ; ಇಲ್ಲಿದೆ ರುಚಿಕರ ಮ್ಯಾಗಿ ಕಟ್ಲೇಟ್ ರೆಸಿಪಿ

ಮ್ಯಾಗಿಅಂದ್ರೆ ಬಹುತೇಕ ಮಕ್ಕಳಿಗೆ ಅಚ್ಚುಮೆಚ್ಚು.ಮ್ಯಾಗಿಯಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಅದರಲ್ಲೂ ಬ್ಯಾಚುಲರ್‌ಗಳ ನೆಚ್ಚಿನ ಆಹಾರವಿದು. ಮ್ಯಾಗಿಯಿಂದ ವಿವಿಧ ಪಾಕವಿಧಾನ ಸಿದ್ಧವಾಗುತ್ತದೆ. ಇದರಿಂದ ರುಚಿಕರ ಕಟ್ಲೇಟ್ ಕೂಡ ತಯಾರಿಸಬಹುದು. ಹಾಗಿದ್ದರೆ ಮ್ಯಾಗಿ ಕಟ್ಲೇಟ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ರುಚಿಕರ ಮ್ಯಾಗಿ ಕಟ್ಲೇಟ್ ರೆಸಿಪಿ
ರುಚಿಕರ ಮ್ಯಾಗಿ ಕಟ್ಲೇಟ್ ರೆಸಿಪಿ (YouTube )

ಮ್ಯಾಗಿ ಅಂದ್ರೆ ಬಹುತೇಕ ಮಕ್ಕಳಿಗೆ ಅಚ್ಚುಮೆಚ್ಚು. ಮ್ಯಾಗಿಯಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಮ್ಯಾಗಿ ಮಕ್ಕಳಿಗೆ ಮಾತ್ರವಲ್ಲ ವಯಸ್ಕರೂ ಕೂಡ ಇಷ್ಟಪಡುತ್ತಾರೆ. ಅದರಲ್ಲೂ ಬ್ಯಾಚುಲರ್‌ಗಳ ನೆಚ್ಚಿನ ಆಹಾರವಿದು. ಕೇವಲ 2 ನಿಮಿಷದಲ್ಲಿ ಸಿದ್ಧವಾಗುವ ಈ ರೆಸಿಪಿಯು ಬ್ಯಾಚುಲರ್‌ಗಳಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ ಅಥವಾ ರಾತ್ರಿಯ ಊಟವೂ ಆಗಿರಬಹುದು. ಮೊಟ್ಟೆ ಮ್ಯಾಗಿ, ಚಿಕನ್ ಮ್ಯಾಗಿ ಇತ್ಯಾದಿ ಭಕ್ಷ್ಯ ತಯಾರಿಸಬಹುದು. ಅಷ್ಟೇ ಅಲ್ಲ ಇದರಿಂದ ರುಚಿಕರ ಕಟ್ಲೇಟ್ ಕೂಡ ತಯಾರಿಸಬಹುದು. ಇದರ ರೆಸಿಪಿ ತುಂಬಾನೇ ಸುಲಭ. ಹಾಗಿದ್ದರೆ ಮ್ಯಾಗಿ ಕಟ್ಲೇಟ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮ್ಯಾಗಿ ಕಟ್ಲೇಟ್ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಮ್ಯಾಗಿ- ಒಂದು ಪ್ಯಾಕೆಟ್, ಈರುಳ್ಳಿ- ಒಂದು, ಮೆಣಸಿನ ಪುಡಿ- ಒಂದು ಚಮಚ, ಕಾರ್ನ್ ಫ್ಲೋರ್- ಒಂದು ಕಪ್, ಕೊತ್ತಂಬರಿ ಸೊಪ್ಪು- ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ನೀರು- ಅಗತ್ಯಕ್ಕೆ ತಕ್ಕಷ್ಟು, ಅರಿಶಿನ- ¼ ಟೀ ಚಮಚ, ಕಾಳುಮೆಣಸಿನ ಪುಡಿ- ಒಂದು ಚಮಚ, ಈರುಳ್ಳಿ- 1, ಸಣ್ಣ ಆಲೂಗಡ್ಡೆ- 1, ಮ್ಯಾಗಿ ಮಸಾಲ ಪುಡಿ- ಒಂದು ಚಮಚ.

ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಅದರ ಮೇಲ್ಭಾಗವನ್ನು ಸಿಪ್ಪೆ ಸುಲಿದು ಜಜ್ಜಿ ಪಕ್ಕಕ್ಕೆ ಇರಿಸಿ. ಈಗ ಒಂದು ಕಡಾಯಿಯನ್ನು ಒಲೆಯ ಮೇಲೆ ಇರಿಸಿ. ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿದ ಒಂದು ಈರುಳ್ಳಿ, ಹಸಿ ಮೆಣಸಿನಕಾಯಿ, ಕ್ಯಾರೆಟ್, ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಹುರಿಯಿರಿ. ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಸೊಪ್ಪು, ಮ್ಯಾಗಿ ಮಸಾಲೆಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಜಜ್ಜಿದ ಆಲೂಗಡ್ಡೆಯನ್ನು ಮಿಶ್ರಣಕ್ಕೆ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಲೆ ಆಫ್ ಮಾಡಿ. ಈಗ ಒಂದು ತಟ್ಟೆಯಲ್ಲಿ ಮ್ಯಾಗಿಯನ್ನು ಸಣ್ಣದಾಗಿ ಪುಡಿ ಮಾಡಿ, ಹುರಿದಿಟ್ಟಿರುವ ಮಿಶ್ರಣಕ್ಕೆ ಬೆರೆಸಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣವನ್ನು ಕಟ್ಲೇಟ್ ಆಕಾರ ಮಾಡಿಕೊಳ್ಳಿ. ನಂತರ ಒಂದು ಕಪ್ ಜೋಳದ ಹಿಟ್ಟು (ಕಾರ್ನ್ ಫ್ಲೋರ್) ಬೆರೆಸಿ, ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ.

ನಂತರ ಒಲೆ ಮೇಲೆ ಬಾಣಲೆಯಿಟ್ಟು ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಕಟ್ಲೇಟ್ ಮಿಶ್ರಣವನ್ನು ಜೋಳದ ಹಿಟ್ಟಿನಿಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯಿರಿ. ಎರಡೂ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಕರಿಯಿರಿ. ಕರಿದ ಮ್ಯಾಗಿ ಕಟ್ಲೇಟ್ ಅನ್ನು ಟಿಶ್ಯೂ ಪೇಪರ್ ಹಾಕಿರುವ ತಟ್ಟೆಯಲ್ಲಿ ಹಾಕಿ. ಇಷ್ಟು ಮಾಡಿದರೆ ರುಚಿಕರ ಮ್ಯಾಗಿ ಕಟ್ಲೇಟ್ ಸಿದ್ಧ. ಇದನ್ನು ಮಕ್ಕಳು ಇಷ್ಟಪಟ್ಟು ತಿಂತಾರೆ. ಸಂಜೆ ಸ್ನಾಕ್ಸ್‌ಗೆ ಮಾಡಿ ಕೊಡಬಹುದು. ಮಕ್ಕಳು ಮಾತ್ರವಲ್ಲ ವಯಸ್ಕರು ಕೂಡ ಈ ರೆಸಿಪಿಯನ್ನು ತುಂಬಾ ಇಷ್ಟಪಡುತ್ತಾರೆ.

Whats_app_banner